Skip to main content

ಭಾಗ- 39,ಆನಂದಪುರಂ ಇತಿಹಾಸ, 1983 ರಲ್ಲಿ ಆನಂದಪುರಂ ರೈತ ಬಂಧು ಗ್ರಾಮೋದ್ಯೋಗದ ನಾಲ್ಕು ಕಾಮಿ೯ಕರ ಕೊಲೆ ರಾಜ್ಯದಲ್ಲೇ ಸೆನ್ಸೇಷನಲ್ ಸುದ್ದಿ ಮತ್ತು ಆತಂಕಕ್ಕೆ ಕಾರಣ ಆಗಿತ್ತು.

#ಭಾಗ_39.
#ಆನಂದಪುರಂ_ಇತಿಹಾಸ

#ಆ_ಕರಾಳ_ರಾತ್ರಿ_ನಡೆದ_ನಾಲ್ಕು_ಕೊಲೆಗಳು.

#ರೈತ_ಬಂದು_ಗ್ರಾಮೋದ್ಯೋಗಕ್ಕೆ_ಕಪ್ಪು_ಚುಕ್ಕೆ_ಆದ_ಘಟನೆ

#ಕೊನೆ_ಕ್ಷಣದಲ್ಲಿನ_ಪೋನ್_ಕರೆ_ರಾಮಭಟ್ಟರ_ಜೀವಉಳಿಸಿತು.

#ಹಣದಾಸೆಗೆ_ಕೊಲೆಮಾಡಿದವರು_ಗ್ರಾಮೋದ್ಯೋಗದ_ಮಾಜಿ_ಕಾರ್ಮಿಕರೆ .

    ತೀರ್ಥಹಳ್ಳಿಯ ಪೋಲಿಸ್ ಠಾಣೆಗೆ ಬೆಳ್ಳ೦ಬೆಳಗೆ ಆ ದಿನ (ದಿನಾಂಕ 28- ಆಗಸ್ಟ್ - 1983) ಬಂದ ಮಾಹಿತಿ ತೀರ್ಥಹಳ್ಳಿ  ಆನಂದಪುರಂ ರಸ್ತೆಯ ಸಂಕದ ಹೊಳೆ ಹತ್ತಿರ ಲಾರಿ ಅಪಘಾತವಾಗಿ ಇಬ್ಬರು ಮೃತರಾಗಿದ್ದಾರೆಂಬುದು.
  ಪೋಲಿಸ್ ಸಬ್ ಇನ್ಸ್ಪೆಕ್ಟರ್ ಮತ್ತು ಸಿಬ್ಬಂದಿ ಸ್ಥಳಕ್ಕೆ ದಾವಿಸಿದ ಮೇಲೆ ಅವರು ಗಮನಿಸಿದ್ದು ಇದು ಅಪಘಾತವಲ್ಲ ಕೊಲೆ! ಅಂತ ಮತ್ತು ಈ ಲಾರಿ ಆನಂದಪುರಂನ ರೈತ ಬಂದು ಗ್ರಾಮೋದ್ಯೋಗದ ಸುಬ್ಬಣ್ಣ ನಾಯ್ಕರಿಗೆ ಸೇರಿದ್ದು ಅಂತ.
   ಮೇಲು ನೋಟಕ್ಕೆ ಹಣಕ್ಕಾಗಿ ಅಥವ ದ್ವೇಷವೋ ಜಗಳವೋ ಆಗಿ ಲಾರಿ ಒಳಗಿನ ಮರದ ಕಟ್ಟೆಯಿಂದ ತಲೆಗೆ ಹೊಡೆದು ಕೊಂದ ಕೊಲೆ ಎಂದು ಅಂದಾಜಿಸುತ್ತಾರೆ ಮತ್ತು ತಕ್ಷಣ ಆನಂದಪುರಂ ರೈತ ಬಂದು ಗ್ರಾಮೋದ್ಯೋಗಕ್ಕೆ ಮಾಹಿತಿ ನೀಡಿ ಸಂಬಂದಪಟ್ಟವರಿಗೆ ಬರುವಂತೆ ತಿಳಿಸುತ್ತಾರೆ.
  ತಕ್ಷಣ ಆನಂದಪುರಂನಿಂದ ರೈತ ಬಂದು ಗಾಮೋದ್ಯೋಗ ದ(ಅಕ್ಕಿ ಗಿರಣಿ ) ವ್ಯವಸ್ಥಾಪಕರಾದ ಶಂಕರ್ ನಾಯಕ್ ಎಂಬುವವರು ಬಂದು ತಮ್ಮ ಸಂಸ್ಥೆಯ ಲಾರಿ ಎಂದು ಕೊಲೆಯಾದ ಇಬ್ಬರಲ್ಲಿ ಒಬ್ಬ ತಮ್ಮ ಸಂಸ್ಥೆಯ ಲಾರಿ ಡ್ರೈವರ್ ಇನ್ನೊಬ್ಬರು ರೈಟರ್ ಅಂತ ಗುರುತಿಸುತ್ತಾರೆ.
  ಮಹಜರ್ ಮುಂತಾದದ್ದು ಮುಗಿಸಿ ತೀರ್ಥಹಳ್ಳಿ ಠಾಣಿಗೆ ಸಬ್ ಇನ್ಸ್ಪೆಕ್ಟರ್ ತಲುಪಿ ಸ್ವಲ್ಪ ಸಮಯದಲ್ಲಿ ಬಂದ ಇನ್ನೊಂದು ಮಾಹಿತಿ ಸಬ್ ಇನ್ಸ್ ಸ್ಪೆಕ್ಟರ್ ಗೆ ನಿಜಕ್ಕೂ ಆತಂಕವಾಗುತ್ತದೆ ಅದೇನೆಂದರೆ ಆರಗದಿಂದ ಮುಂದೆ ವಾರಂಬಳ್ಳಿಯಲ್ಲಿ ರೈತ ಬಂದು ಗ್ರಾಮೋದ್ಯೋಗದ ಇನ್ನೊಂದು ಲಾರಿ ಅಪಘಾತವಾಗಿ ಇಬ್ಬರು ಮೃತರಾಗಿದ್ದಾರೆ ಅಂತ ಆದರೆ ಅಪರಾದ ಶಾಸ್ತ್ರ ಓದಿ ತರಬೇತಿ ಪಡೆದ ಸಬ್ ಇನ್ಸ್ಪೆಕ್ಟರ್ ಗೆ ಇದೂ ಕೊಲೆ ಇರಬಹುದು ಅನ್ನಿಸಿದರೂ ಇಲ್ಲಿ ಕೊಲೆ ಮಾಡಿದವರು ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಅಪಘಾತ ಆಗಿರಬಾರದೇಕೆ ಅನ್ನಿಸುತ್ತದೆ ಮತ್ತು ಈ ಘಟನೆ ನಡೆದ ಸ್ಥಳ ಹೊಸ ನಗರ ಠಾಣೆ ವ್ಯಾಪ್ತಿಗೆ ಬರುವುದರಿಂದ ಅಲ್ಲಿನ ಠಾಣಾಧಿಕಾರಿಗೆ ಮಾಹಿತಿ ನೀಡಿ ಆನಂದಪುರಂನ ಅಕ್ಕಿ ಗಿರಣಿ ಮ್ಯಾನೇಜರ್ ಶಂಕರ್ ನಾಯಕರನ್ನು ಬರಲು ತಿಳಿಸಿ ಹೋಗುತ್ತಾರೆ.
  ವಾರಂಬಳ್ಳಿಯಲ್ಲಿಯೂ ಸಂಕದಹೊಳೆಯಲ್ಲಿಯ ಜೋಡಿ ಕೊಲೆ ಇಲ್ಲಿ ಪುನಾರವರ್ತನೆ ಆಗಿದ್ದು ಗೊತ್ತಾಗುತ್ತದೆ ಕೊಲೆ ಆದ ಡ್ರೈವರ್ ಮತ್ತು ರೈಟರ್ ಮತ್ತು ಲಾರಿ ಆನಂದಪುರಂ ರೈತ ಬಂದು ಗ್ರಾಮೋದ್ಯೋಗದ ಮಾಲಿಕರಾದ ಸುಬ್ಬಣ್ಣ ನಾಯಕರಿಗೆ ಸೇರಿದ್ದೆಂದು ಮ್ಯಾನೇಜರ್ ಶಂಕರ್ ನಾಯಕರು ದೃಡಪಡಿಸುತ್ತಾರೆ.
  ಈಗಿನ ಹಾಗೆ ಸೆಲ್ ಫೋನ್ ಟಿವಿ ಇರದಿದ್ದರೂ ಸುದ್ದಿ ಜನರಿಂದ ಜನರಿಗೆ ಹರಡಿ ಸುಬ್ಬಣ್ಣ ನಾಯಕರಿಗೆ ಸೇರಿದ ಎರೆಡು ಲಾರಿ ಅಕ್ಕಿ ಮಾರಾಟ ಮಾಡಿ ಆಗುಂಬೆ ಮಾರ್ಗದಲ್ಲಿ ಬರುವಾಗ ತೀರ್ಥಹಳ್ಳಿ ದಾಟಿದ ಮೇಲೆ ರಾತ್ರಿ 2 ರಿಂದ ಬೆಳಗಿನ ಜಾವ 6ರ ಒಳಗೆ ನಾಲ್ಕು ಜನ ಕಾರ್ಮಿಕರನ್ನು ಕೊಲೆ ಮಾಡಿ ಲಕ್ಷಾಂತರ ರೂಪಾಯಿ ದರೋಡೆ ಮಾಡಿದ್ದಾರೆ ಎಂಬ ಸುದ್ದಿ ರಾಜ್ಯದಾದ್ಯಂತ ಸನ್ಸೇಷನಲ್ ಸುದ್ದಿ ಆಗುತ್ತದೆ.
  ರೈತ ಬಂದು ಗ್ರಾಮೋದ್ಯೋಗ ಮಿನಿ ಲಾರಿ ನೊಂದಾವಣಿ ಸಂಖ್ಯೆ CNS 4477 ಮತ್ತು MEG 6999 ಲಾರಿ ಚಲಾಯಿಸುತ್ತಿದ್ದ ಡ್ರೈವರ್ ಗಳಾದ  ಎ.ಎಸ್. ಲೋಕೇಶ್ ಮತ್ತು ಶಿವಪ್ಪ ಹಾಗೂ ರೈಟರ್ ಗಳಾದ ಮಂಜುನಾಥ ಮತ್ತು ವಿಶ್ವನಾಥ ರೈ ಕೊಲೆಯಾದವರು, ಕೊಲೆ ಮಾಡಲು ಬಳಸಿದ್ದು ಲಾರಿಗೆ ಆಕಾಲದಲ್ಲಿ ನಿಂತಾಗ ಚಕ್ರಕ್ಕೆ ತಡೆಗಾಗಿ ನೀಡುತ್ತಿದ್ದ ಮರದ ಕಟ್ಟೆ ಎಂಬ ಮರದ ತುಂಡಿನಿಂದ ತಲೆಗೆ ಹೊಡೆದು ಕೊಲೆ ಮಾಡಿರುತ್ತಾರೆ.
  ನಂತರ ಪೋಲಿಸರು ಇದನ್ನು ಹೈ ಪ್ರೊಪೈಲ್ ಕೇಸಾಗಿ ಪರಿಗಣಿಸಿ ತನಿಖೆ ನಡೆಸಿದಾಗ ಸಿಕ್ಕಿಬಿದ್ದ ಕೊಲೆಗಾರರು ಇಬ್ಬರು ಇವರಿಬ್ಬರೂ ಈ ಮೊದಲು ಈ ಸಂಸ್ಥೆಯಲ್ಲೇ ಡ್ರೈವರ್ ಆಗಿದ್ದವರು ನಂತರ ಇಬ್ಬರು ಪಾಲುದಾರರಾಗಿ ದೊಡ್ಡ ಲಾರಿ ಖರೀದಿಸಿದ್ದರು ಇವರಿಗೆ ಹಣದ ಅಡಚಣೆ ಇದ್ದಿತ್ತು ಅದಕ್ಕಾಗಿ ಹಣಕ್ಕಾಗಿ ಈ ಕೊಲೆ ನಡೆಸುತ್ತಾರೆ.
  ಶಿವಮೊಗ್ಗ ನ್ಯಾಯಾಲಯದಲ್ಲಿ ಜೀವಾವದಿ ಶಿಕ್ಷೆಗೆ ಒಳಗಾದ ಕೆ.ಟಿ. ಮೊಹಮದ್ ಮತ್ತು ಟಿ.ಎಸ್.ಚಂದ್ರಶೇಖರ್ ಆಲಿಯಾಸ್ ಚಂದ್ರ ಶಿಕ್ಷೆ ಮುಗಿಸಿ ಈಗ ಸಜ್ಜನರಾಗಿ ಜೀವನ ಮಾಡುತ್ತಿದ್ದಾರೆ.
   ನ್ಯಾಯಾಲಯದ ಆದೇಶದಲ್ಲಿ ಅಡಕ ಆಗಿರುವ ಪೋಲಿಸರ ತನಿಖೆ ಮಹಜರ್ ಪ್ರಕಾರ ಹಿಂದಿನ ದಿನ ಈ ಎರೆಡೂ ಲಾರಿಗಳು ಕೇರಳದಲ್ಲಿ ಅಕ್ಕಿ ಮಾರಾಟದ ಲೈನ್ ಸೇಲ್ ಮಾಡಿ ತಂದ ಹಣ ರೈಟರ್ ಗಳು ಮಂಗಳೂರಿನ ಈ ಸಂಸ್ಥೆಯ ಕಚೇರಿಯಲ್ಲಿ ಮುಖ್ಯ ಗುಮಸ್ಥರಾಗಿದ್ದ (ಈಗ ಸುಬ್ಬಣ್ಣ ನಾಯಕರ ಶಿವಪುರದ ಅಕ್ಕಿ ಗಿರಣಿ ಖರೀದಿಸಿ ನಡೆಸುತ್ತಿರುವ) ರಾಮ ಭಟ್ಟರಿಗೆ ತಲುಪಿಸಿ ಲೆಖ್ಖ ಪರೀಶಿಲಿಸಿ ನಂತರ ರೂಪಾಯಿ ಬಂಡಲ್ ಗಳನ್ನು ಮಾಡುವ ಸಂದರ್ಭದಲ್ಲಿ ಈ ಮಾಜಿ ಕೆಲಸಗಾರರು ಬರುತ್ತಾರೆ ಅವರ ಲಾರಿ ಕೂಡ ಮಂಗಳೂರಿಗೆ ಬಾಡಿಗೆ ಬಂದಿರುವುದಾಗಿ ತಿಳಿಸುತ್ತಾರೆ.
  ನಂತರ ಎರೆಡೂ ಲಾರಿ ಶಿವಪುರದ ಸುಬ್ಬಣ್ಣ ನಾಯ್ಕರ ಮಿಲ್ ಗೆ ಹೋಗಿ ಅಲ್ಲಿಂದ ಆಗುಂಬೆ ಘಾಟಿಯ ಮುಖಾಂತರ ಆನಂದಪುರಂಗೆ ಹೋಗುವುದು (ಮಿನಿ ಲಾರಿ) ಶಿವಪುರಕ್ಕೆ ಹೋಗಿ ಅಲ್ಲಿಂದ ಆನಂದಪುರಂಗೆ ಹೊರಡುವ ಕೊನೆ ಕ್ಷಣದಲ್ಲಿ ಆನಂದಪುರಂ ಗ್ರಾಮೋದ್ಯೋಗದಿಂದ ಬಂದ ಪೋನ್ ಕರೆ ರಾಮ ಭಟ್ಟರು ಶಿವಪುರದಲ್ಲೇ ಉಳಿಯಬೇಕು, ಆನಂದಪುರಂ ನಿಂದ ಅಕ್ಕಿ ತುಂಬಿದ ಇನ್ನೆರೆಡು ಲಾರಿ ಕೇರಳಕ್ಕಾಗಿ ಹೊರಟಿದೆ ಅದರಲ್ಲಿ ರಾಮ ಭಟ್ಟರು ಕೇರಳಕ್ಕೆ ಹೋಗಿ ಅಕ್ಕಿ ಮಾರಾಟ ಮಾಡಿ ಬರಬೇಕೆಂದು ಸ್ವತಃ ಸುಬ್ಬಣ್ಣ ನಾಯಕರೇ ತಿಳಿಸಿದ್ದರಿಂದ ರಾಮ ಭಟ್ಟರು ಈ ಆನಂದವುರಂಗೆ ಹಣದ ಜೊತೆ ಹೊರಟವರು ಒಂದು ಲಾರಿಯವರ ಹತ್ತಿರ 65 ಸಾವಿರ ಇನ್ನೊಂದು ಲಾರಿ ಹತ್ತಿರ 50 ಸಾವಿರ ನೀಡಿ ಶಿವಪುರದಲ್ಲೇ ಆನಂದಪುರಂನಿಂದ ಬರುವ ಲಾರಿಗೆ ಕಾಯುತ್ತಾ ಉಳಿಯುತ್ತಾರೆ.
  ಎರೆಡೂ ಲಾರಿ ಹೆಬ್ರಿ ದಾಟುವಾಗ ಈ ಇಬ್ಬರು ಈ ಲಾರಿಗೆ ಕೈ ಮಾಡುತ್ತಾರೆ ಮತ್ತು ತಮ್ಮ ದೊಡ್ಡ ಲಾರಿ ಆಗುಂಬೆ ದಾರಿಯಲ್ಲಿ ಬರಲಾಗದು ಅದಕ್ಕೆ ಹುಲಿಕಲ್ ಮಾರ್ಗದಲ್ಲಿ ಕಳಿಸಿದ್ದು ಸ್ವಲ್ಪ ರಿಪೇರಿ ಇರುವುದರಿಂದ ಡ್ರೈವರ್ ನಿಧಾನವಾಗಿ ಬರುತ್ತಾನೆ ನಮಗೆ ಸ್ವಲ್ಪ ಅರ್ಜೆಂಟ್ ಇರುವುದರಿಂದ ನಿಮ್ಮ ಜೊತೆ ಅಗುಂಬೆ ಮೇಲೆ ಬರುವುದಾಗಿ ಹೇಳುತ್ತಾರೆ, ತಮ್ಮ ಸಂಸ್ಥೆಯ ಪರಿಚಿತ ಡ್ರೈವರ್ ಗಳೇ ಈಗ ಲಾರಿ ಖರೀದಿಸಿ ಮಾಲಿಕರೂ ಆಗಿರುವುದರಿಂದ ವಿಶೇಷ ಗೌರವದಿಂದ ಜೊತೆಗೆ ಕರೆ ತರುತ್ತಾರೆ ನಂತರ ತೀರ್ಥಹಳ್ಳಿ ದಾಟಿದ ಮೇಲೆ ಇವರ ಸಂಚಿಗೆ ಕೊಲೆಯಾಗಿ ಜೀವ ಕಳೆದುಕೊಳ್ಳುತ್ತಾರೆ.
  ಕೊಲೆ ಮಾಡಿದವರು ಬೆಳ್ಳಂಬೆಳಗೆ ನಗರ ತಲುಪಿ ಅಲ್ಲಿಂದ ಕುಂದಾಪುರ ತಲುಪಿ ತಮ್ಮ ಲಾರಿಯಲ್ಲಿ ಹುಲಿಕಲ್ ಘಾಟಿ ಮೂಲಕ ಬರುವುದರಿಂದ ರಾತ್ರಿ ಇವರು ಮಾಡಿದ ಕೊಲೆ ಗೊತ್ತಾಗುವುದಿಲ್ಲ ಮತ್ತು ಇವರನ್ನು ನೋಡಿದ್ದ ನಾಲ್ಕು ಜನರನ್ನು ಮುಗಿಸಿರುವುದರಿಂದ ಸಾಕ್ಷಿ ಸಬೂತು ಇಲ್ಲ ಅಂತ ಬಾವಿಸಿರುತ್ತಾರೆ.
  ಆದರೆ ಪೋಲಿಸ್ ತನಿಖೆಯಲ್ಲಿ ಕೊಲೆ ಮಾಡಿದ್ದು ಒಪ್ಪಿಕೊಳ್ಳುತ್ತಾರೆ.
ಅವತ್ತು ಮಂಗಳೂರು ಆಫೀಸಿನಲ್ಲಿ ಕೇರಳದಿಂದ ಅಕ್ಕಿ ಮಾರಾಟದ ಹಣ ಎಣಿಸುವಾಗಲೇ ಅದನ್ನು ಎಗುರಿಸುವ ನಿರ್ಧಾರ ಮಾಡುತ್ತಾರೆ, ಶಿವಪುರದಿಂದ ಬಂದ ಲಾರಿಯಲ್ಲಿ ರಾಮ ಭಟ್ಟರು ಇರುವುದಿಲ್ಲ ಪ್ರತಿ ಲಾರಿಯಲ್ಲಿ ಒಬ್ಬ ಡ್ರೈವರ್ ಮತ್ತು ಒಬೃ ರೈಟರ್ ಮಾತ್ರ ಆದರೆ ಎರೆಡೂ ಲಾರಿಯನ್ನು ದೋಚಲೇ ಬೇಕಾಗಿತ್ತು, ಹೆಬ್ರಿಯಿಂದ ತೀರ್ಥಹಳ್ಳಿ ಪಡಿಯಾರರ ರಾತ್ರಿ ಕ್ಯಾಂಟೀನ್ ತನಕ ಇವರೇ ಲಾರಿ ಚಲಾಯಿಸುತ್ತಾರೆ.
  ಪಡಿಯಾರ್ ಕ್ಯಾಂಟೀನ್ ನಲ್ಲಿ ಚಹಾ ಕುಡಿದು ಹೊರಟಾಗ ಒ0ದು ಲಾರಿಯವರು ಸ್ವಲ್ಪ ನಿದ್ದೆ ಮಾಡಿ ಬರುವುದಾಗಿ ಅಲ್ಲೇ ಲಾರಿ ನಿಲ್ಲಿಸುತ್ತಾರೆ. ಮೊದಲ ಲಾರಿಯನ್ನು ಇವರೇ ಚಲಾಯಿಸುತ್ತಾರೆ ಲಾರಿಯಲ್ಲಿದ್ದ ಡ್ರೈವರ್ ಮತ್ತು ರೈಟರ್ ಗೆ ವಿಪರೀತ ನಿದ್ದೆ ಸ೦ಕದ ಹೊಳೆಗೆ ಬರುವುದರಲ್ಲಿ ನಿದ್ದೆಯಲ್ಲಿದ್ದ ಇಬ್ಬರ ತಲೆ ಮರದ ಕಟ್ಟೆಯಿಂದ ಬಡಿದು ಸಾಯಿಸಿ ಬೆಡ್ ಶೀಟ್ ಹೊದಿಸಿ ಲಾರಿ ರಸ್ತೆ ಬದಿಗೆ ನಿಲ್ಲಿಸಿ ಹಿಂದಿನ ಲಾರಿಗೆ ಕಾಯುತ್ತಾರೆ ಸ್ವಲ್ಪ ತಡವಾಗಿ ಬಂದ ಆ ಲಾರಿಗೆ ಕೈ ಮಾಡಿ ಹತ್ತುತ್ತಾರೆ, ಅವರಿಗೆ ಈ ಲಾರಿಯವರು ಸ್ವಲ್ಪ ನಿದ್ದೆ ಮಾಡಿ ಬರ್ತಾರಂತೆ ಅನ್ನುತ್ತಾರೆ ಮತ್ತು ಇವರೇ ಲಾರಿ ಒಡಿಸುತ್ತಾರೆ, ಲಾರಿ ಚಾಲಕ ಮತ್ತು ರೈಟರ್ ನಿದ್ದೆ ಮಾಡುತ್ತಾರೆ ನಿದ್ದೆಯಲ್ಲೇ ಅವರ ತಲೆ ಮೊದಲ ಲಾರಿಯವರನ್ನ ಕೊಂದಂತೆ ಮರದ ಕಟ್ಟೆಯಿಂದ ಹೊಡೆದು ಕೊಂದು ಹಣದೊಂದಿಗೆ ಪರಾರಿ ಅಗುತ್ತಾರೆ.
 ಇಡೀ ನ್ಯಾಯಾಲಯದ ಕಲಾಪ ಮುಖ್ಯ ಸಾಕ್ಷಿ ರಾಮ ಭಟ್ಟರ ಹೇಳಿಕೆಯಿಂದ ಇವರಿಬ್ಬರಿಗೆ ಶಿಕ್ಷೆ ಆಗುತ್ತದೆ.
  ಕೊನೆಯ ಕ್ಷಣದ ಆ ಟೆಲಿಫೋನ್ ಕರೆ ಬರದೇ ಇದ್ದರೆ ರಾಮ ಭಟ್ಟರನ್ನು ಕೊಲ್ಲದೇ ಇರುತ್ತಿರಲಿಲ್ಲ ಈ ದುಷ್ಟ ಕೊಲೆಗಾರರು.
  (ಶಿವಮೊಗ್ಗದ ಸೆಷೆನ್ ನ್ಯಾಯಾಲಯದಲ್ಲಿ ಪ್ರಕರಣ ಸಂಖ್ಯೆ 37/83 ಮತ್ತು 11/ 84 ರ ತೀರ್ಪು ಆದರಿಸಿ)

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂ...

ಶ್ರೀಧರ ಸ್ವಾಮಿ ವರದಳ್ಳಿ ಪವಾಡ ಪುರುಷರು.

   ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ವರದಳ್ಳಿಯ ತಪಸ್ವಿ ಶ್ರೀಧರ ಸ್ವಾಮಿಗಳು.   ವರದಳ್ಳಿ ಶ್ರೀಧರ ಸ್ವಾಮಿಗಳ ಬಗ್ಗೆ ಕೇಳಿದ್ದು, ಓದಿದ್ದು ಮತ್ತು ಅವರ ಒಡನಾಡಿಗಳನ್ನ ಭೇಟಿ ಮಾಡಿದ್ದು ಬಿಟ್ಟರೆ ಅವರನ್ನ ಪ್ರತ್ಯಕ್ಷವಾಗಿ ನೋಡಿಲ್ಲ.     ನಾವು ಚಿಕ್ಕವರಿದ್ದಾಗ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುವಾಗ ಆಗಿನ ಕಾಲದ ಖ್ಯಾತ ಚಲನಚಿತ್ರ ನಟ ಉದಯ ಕುಮಾರ್ ಅರಳಿ ಮರದ ಗ್ಯಾರೇಜ್ ಹತ್ತಿರ ಬಂದಿದ್ದಾರೆ ಅಂತ ಊರಿನ ಜನರೆಲ್ಲ ಗುಂಪು ಗುಂಪಾಗಿ ಓಡುತ್ತಿದ್ದರು, ನಾವು ಚಿಕ್ಕ ಮಕ್ಕಳೆಲ್ಲ ಅವರನ್ನ ಹಿಂಬಾಲಿಸಿದೆವು.       ಅಲ್ಲಿ ಒಂದು ಬಿಳಿ ಅಂಬಾಸಡರ್ ಕಾರು ನಿಂತಿದ್ದು ಅದರ ಅಡಿಯಲ್ಲಿ ಮಲಗಿ ಮೆಕ್ಯಾನಿಕ್ ದುರಸ್ತಿ ಮಾಡುತ್ತಿದ್ದರೆ ಎತ್ತರದ ಮಣ್ಣು ದಿಬ್ಬದ ಮೇಲೆ ನಮ್ಮ ನಟ ಉದಯ ಕುಮಾರ್ ಸಿಗರೇಟು ಸೇದಿ ಹೊಗೆ ಬಿಡುತ್ತಿದ್ದರು. ಯಾರೂ ಅವರ ಹತ್ತಿರ ಮಾತಾಡುವ ದೈಯ೯ ವಹಿಸಲಿಲ್ಲ ಆದರೆ ನೆರೆದ ಜನ ಮಾತಾಡಿಕೊಳ್ಳುತ್ತಿದ್ದ ಮಾತಿನ ಸಾರಾಂಶವೆಂದರೆ ವರದಳ್ಳಿಯಲ್ಲಿ ತಪಸ್ಸು ಮಾಡುತ್ತಿದ್ದ ಶ್ರೀಧರ ಸ್ವಾಮಿಗಳು ದೇಹತ್ಯಾಗ ಮಾಡಿದ್ದಾರೆ ಅದನ್ನ ಕೇಳಿ ಅವರ ಭಕ್ತ ಮತ್ತು ಶಿಷ್ಯರಾದ ಖ್ಯಾತ ಚಿತ್ರ ನಟ ಉದಯ ಕುಮಾರ್ ಬರುವಾಗ ಕಾರು ಹಾಳಾಗಿ ದುರಸ್ತಿಗಾಗಿ ನಿಂತಿದ್ದಾರೆ, ದುಃಖದಲ್ಲಿ ಇರೋದರಿಂದ ಆ ರೀತಿ ಸಿಗರೇಟು ಸೇದಿ ಬೂದಿ ಮಾಡುತ್ತಿದ್ದಾರೆ ಅವರ ಹತ್ತಿರ ಯಾರೂ ಮಾತಾಡ ಬೇಡಿ ಅಂತ ...