Skip to main content

ಭಾಗ -32,ಕರಾವಳಿ ಮತ್ತು ಕೇರಳದಲ್ಲಿ ಆನಂದಪುರಂನ ಕುಚುಲಕ್ಕಿ ಮತ್ತು ಅವಲಕ್ಕಿಗೆ ಬ್ರಾಂಡ್ ನೇಮ್ ಬಂದಿದ್ದು ಗಾಂದೀ ಚಿಂತನೆಯ ಶಿವಪುರ ಸುಬ್ಬಣ್ಣ ನಾಯಕರಿಂದ

#ಭಾಗ_32

#ಕಡು_ಬಡತನದಿಂದ_ಸಾಗಿ_ಯಶಸ್ವಿ_ಉದ್ದಿಮೆದಾರರಾದ_ಶಿವಪುರ_ಸುಬ್ಬಣ್ಣ_ನಾಯಕರು

#ಆನಂದಪುರಂ_ಹೆಸರು_ಉತ್ಕೃಷ್ಟ_ಅಕ್ಕಿ_ಅವಲಕ್ಕಿ_ತಯಾರಿಯಲ್ಲಿ_ಪ್ರಸಿದ್ಧಿ_ಪಡೆಯಲು_ಇವರ_ಶ್ರಮವಿದೆ.

#ಸ್ಥಳಿಯ_ಗ್ರಾಮೀಣ_ಹೆಣ್ಣು_ಮಕ್ಕಳಲ್ಲಿ_ಆತ್ಮವಿಶ್ವಾಸದ_ತರಬೇತಿ_ನೀಡಿದವರು

#ಗಾಂಧೀಜಿ_ಸ್ವದೇಶಿ_ಚಿಂತನೆಯ_ಜಾರಿ_ಮಾಡಿದ_ಗಾಂದೀ_ಅಭಿಮಾನಿ

#ಅಯ್ಯಂಗಾರರ_ಅಕ್ಕಿಗಿರಣಿ_ಖರೀದಿಸಿದವರು

       ಆನಂದಪುರಂ ಕುಚಲಕ್ಕಿ ಮತ್ತು ಅವಲಕ್ಕಿಯಲ್ಲಿ ಗುಣಮಟ್ಟದ ಪ್ರಶಂಸೆ ಮತ್ತು ಬ್ರಾಂಡಿಂಗ್ ಆಗಲು ಇಲ್ಲಿನ ರೈತ ಬಂದು ಗ್ರಾಮೋದ್ಯೋಗದ ಶಿವಪುರ ಸುಬ್ಬಣ್ಣ ನಾಯಕರು ಕಾರಣಕರ್ತರು.
       1970 ರ ದಶಕದಲ್ಲಿ ಆನಂದಪುರಂನ ಬದರಿನಾರಾಯಣ್ ಅಯ್ಯಂಗಾರ್ ಮತ್ತು ವೆಂಕಟಾಚಲ ಆಯ್ಯಂಗಾರರ ಅವರ ತಂದೆ ಹೆಸರಿನ ರಾಮಕೃಷ್ಣ ಆಯ್ಯಂಗಾರ್ ಅಕ್ಕಿ ಗಿರಣಿ ಆ ಕಾಲದಲ್ಲಿ ದೊಡ್ಡ ಮಟ್ಟದಲ್ಲೇ ವ್ಯವಹರಿಸುತ್ತಿತ್ತು.
  ಆನಂದಪುರಂ ಆಸ್ಪತ್ರೆ ಪಕ್ಕದ ರೈಲ್ವೆ ಸ್ಟೇಷನ್ ರಸ್ತೆಯಿಂದ ಮಾರಿಕಾಂಬ ದೇವಾಲಯದವರೆಗೆ ಸುಮಾರು ಮೂರು ಎಕರೆ ಪ್ರದೇಶದಲ್ಲಿ ಅಕ್ಕಿ ಗಿರಣಿ, ಗೋದಾಮು ಹೊರಭಾಗದಲ್ಲಿ ಸುಮಾರು 50 ಕಾರ್ಮಿಕರ ಕ್ವಾರ್ಟಸ್೯ಗಳು ಇತ್ತು, ಆ ಕಾಲದಲ್ಲಿ ಸರ್ಕಾರ ಲೇವಿ ಭತ್ತ ರೈತರಿಂದ ಸಂಗ್ರಹಿಸುವ ಕಾನೂನು ಇದ್ದಿದ್ದರಿಂದ ಇದು ಈ ಭಾಗದ ಲೇವಿ ಭತ್ತ ಸಂಗ್ರಹ. ಕೇಂದ್ರವೂ ಆಗಿತ್ತು.
  1970 ರ ದಶಕದಲ್ಲಿ ಉಡುಪಿ ಜಿಲ್ಲೆಯ ಹೆಬ್ರಿ ಸಮೀಪದ ಶಿವಪುರದ ಸುಬ್ಬಣ್ಣ ನಾಯ್ಕರು ಆಗ ಸುಮಾರು ನಲವತ್ತು ವರ್ಷ ಪ್ರಾಯದ ಉದೋಯೊನ್ಮುಖ ಭತ್ತದ ವ್ಯಾಪಾರಿಗಳು ಇವರನ್ನು ಆನಂದಪುರಂ ಮಿಲ್ಲಿನಿಂದ ಭತ್ತ ಖರೀದಿಸಲು ಮತ್ತು ಭೂಮಾಲಿಕರು, ಶ್ರೀಮಂತರು ಹಾಗೂ ರಾಜಕಾರಣಿ ಕುಟುಂಬವಾಗಿದ್ದ ವೆಂಕಟಾಚಲ ಆಯ್ಯಂಗಾರ್ ಮತ್ತು ಬದರಿನಾರಾಯಣ ಆಯ್ಯಂಗಾರರ ಒಡನಾಟ ಹೆಚ್ಚಿಸಲು ಕಾರಣರಾದವರು ಆಗ ಈ ಅಕ್ಕಿ ಗಿರಣಿ ವ್ಯವಸ್ಥಾಪಕರಾಗಿದ್ದ ಶಿವಪುರ ಸಮೀಪದ ಪರ್ಕಳದ ರಾಮರಾವ್ ಇವರು ಅಯ್ಯಂಗಾರ್ ಕುಟುಂಬದ ಎಲ್ಲಾ ಆಸ್ತಿಗಳ ನಿರ್ವಹಣೆಗೆ ಜಿಪಿಎ ಹೊಂದಿದ್ದರು.
   ಈ ವಿಶ್ವಾಸದಿಂದಲೇ ಅಯ್ಯಂಗಾರರರು ಮುಂದಿನ ದಿನದಲ್ಲಿ ರೈಸ್ ಮಿಲ್, ಎರೆಡೂ ಕೆರೆ ಕೆಳಗಿನ ನೀರಾವರಿ ಜಮೀನುಗಳನ್ನು ಸುಬ್ಬಣ್ಣ ನಾಯ್ಕರಿಗೆ ಮಾರಾಟ ಮಾಡುತ್ತಾರೆ.
  ಆ ಕಾಲದಲ್ಲಿ ಎರೆಡು ಲಕ್ಷ ರೂಪಾಯಿಗೆ ಆನಂದಪುರಂ ಹೃದಯ ಭಾಗದ ಅಕ್ಕಿ ಗಿರಣಿ ಮತ್ತು ಅದಕ್ಕೆ ಸಂಬಂದ ಪಟ್ಟ ಸುಮಾರು ಮೂರು ಎಕರೆ ಜಾಗ ಮಾರಾಟ ಮಾಡುತ್ತಾರೆ ಮತ್ತು ನೀರಾವರಿ ಜಮೀನು ಎಕರೆಗೆ ತಲಾ ಮೂರು ಸಾವಿರದಂತೆ ಮಾರಾಟ ಆಗುತ್ತದೆ ಈಗಿನ ಕಾಲದಲ್ಲಿ ಇದು ಸಣ್ಣ ಮೊತ್ತವಾಗಿ ಕಾಣುತ್ತದೆ ಆದರೆ ಆ ಕಾಲದಲ್ಲಿ ಇದು ದೊಡ್ಡ ಮೊತ್ತ.
  ನಂತರ ರೈತ ಬಂದು ಗ್ರಾಮೋದ್ಯೋಗದ ಹೆಸರಲ್ಲಿ ಖಾದಿ ಗ್ರಾಮೋದ್ಯೋಗದ ಆರ್ಥಿಕ ಸಹಕಾರದಿಂದ ಅಕ್ಕಿಗಿರಣಿ, ಅವಲಕ್ಕಿ ಗಿರಣಿ ಯತ್ರೋಪಕರಣಗಳ ನವೀಕರಣ ಮಾಡಿ, ಸ್ಥಳಿಯ ಗ್ರಾಮೀಣ ಹೆಣ್ಣು ಮಕ್ಕಳಿಗೆ ತರಬೇತಿ ನೀಡಿ ಇಲ್ಲೇ ಅವರಿಗೆ ಊಟ ವಸತಿ ವ್ಯವಸ್ಥೆ ಮಾಡಿ ಭತ್ತ ತೂಕ,ಖರೀದಿ ಮತ್ತು ಹಣ ಪಾವತಿಯಿಂದ ಕುಚುಲಕ್ಕಿ ಅವಲಕ್ಕಿ ತಯಾರಿಸಿ ಮಾರುಕಟ್ಟೆಗೆ ಕಳಿಸಿ ವ್ಯಾಪಾರ ಮಾಡಿ ಹಣ ಪಡೆಯುವುದರಿಂದ ಹಿಡಿದು, ಕೃಷಿ ಕೆಲಸ, ವಾಹನ ಚಲಾಯಿಸುವ ತನಕ ಸುಮಾರು ಮೂನ್ನುರಕ್ಕೂ ಹೆಚ್ಚು ಸಮವಸ್ತ್ರ ಧರಿಸಿದ ಹೆಣ್ಣು ಮಕ್ಕಳು ಇಲ್ಲಿ ಆತ್ಮವಿಶ್ವಾಸದಿಂದ ಕಾರ್ಯನಿರ್ವಹಿಸುವಂತ ವ್ಯವಸ್ಥೆ ಸುಬ್ಬಣ್ಣ ನಾಯಕರು ಮಾಡಿದ್ದು ಪವಾಡವೆ ಆಗಿತ್ತು.
   ಕರಾವಳಿ ಮತ್ತು ಕೇರಳದಲ್ಲಿ ಇವತ್ತಿಗೂ ಆನಂದಪುರಂ, ರೈತ ಬಂದು, ಸುಬ್ಬಣ್ಣ ನಾಯ್ಕರು ಅಂದರೆ ಉತ್ಕೃಷ್ಟ ಗುಣಮಟ್ಟದ ಕುಚಲಕ್ಕಿ ಮತ್ತು ಅವಲಕ್ಕಿ ಎಂಬ ಬ್ರಾಂಡ್ ಸೃಷ್ಟಿ ಆಗಿದೆ.
  ಹಾಗಂತ ಶಿವಪುರ ಸುಬ್ಬಣ್ಣ ನಾಯ್ಕರ ಜೀವನದ ಹಾದಿ ಸುಖದ ಸುಪ್ಪತ್ತಿಗೆ ಆಗಿರಲಿಲ್ಲ, ಉಡುಪಿ ತಾಲ್ಲೂಕಿನ ಬೆಳ್ಳೆ ಗ್ರಾಮದ ಸಡಂಬೈಲಿನ ಕೃಷ್ಣ ನಾಯಕ್ ಮತ್ತು ಕಾರ್ಕಳದ ಶಿವಪುರದ ಮುಸಾ೯ಲಿನ ತುಂಗಮ್ಮ ದಂಪತಿಗೆ ದಿನಾಂಕ 5-10-1929 ರಲ್ಲಿ ಜನಿಸುವ ಗಂಡು ಮಗುವಿಗೆ ಪ್ರೀತಿಯಿಂದ ಸುಬ್ಬಣ್ಣ ಎ೦ದು ನಾಮಕರಣ ಮಾಡುತ್ತಾರೆ ಈ ಸಂದರ್ಭದಲ್ಲೇ ತಂದೆ ಕೃಷ್ಣ ನಾಯಕರ ಅಕಾಲ ಮೃತ್ಯುವಿನಿಂದ ತಾಯಿ ತುಂಗಮ್ಮ ತವರಿನ ಅಣ್ಣ ನಾರಾಯಣರ ಆಶ್ರಯದಲ್ಲಿ ಮಗ ಸುಬ್ಬಣ್ಣ ನಾಯಕರಿಗೆ ನಾಲ್ಕನೇ ತರಗತಿ ತನಕ ಸಮೀಪದ ಮುಳ್ಳುಗುಡ್ಡೆ ಶಾಲೆಯಲ್ಲಿ ಓದಿಸುತ್ತಾರೆ ಆಗಲೇ ಮಾವ ನಾರಾಯಣ ನಾಯಕರು ಓದಿದ್ದು ಸಾಕು ಉದ್ಯೋಗ ಮಾಡು ಅನ್ನುತ್ತಾರೆ.
  ತಾಯಿ ಮಗ ಸುತ್ತಲಿನ ಹಳ್ಳಿಗಳಲ್ಲಿ ನಡೆಯುವ ಜಾತ್ರೆ, ದೈವ ಕೋಲಾ ಇತ್ಯಾದಿ ಸಮಾರಂಭದಲ್ಲಿ ಜನ ಸೇರುವ ಸಂತೆಗಳಲ್ಲಿ ಮಂಡಕ್ಕಿ, ಹುರಿಕಡಲೆ, ಚಕ್ಕುಲಿ ಮತ್ತು ಬೇಯಿಸಿದ ಸಿಹಿ ಗೆಣಸು ಮಾರಾಟದ ಸಣ್ಣ ಅಂಗಡಿ ಹಾಕುತ್ತಿದ್ದರು.
  ನಂತರ ತಾಯಿಯ ಪ್ರಬಾವದಿಂದ ಸಣ್ಣ ಹೋಟೆಲ್ ನಿಂದ ಅಕ್ಕಿ ಉದ್ಯಮದ ತನಕ ಬೆಳೆಸಿ ನಂತರ ಶಿವಮೊಗ್ಗ ಜಿಲ್ಲೆಯ ಆನಂದಪುರಂ, ಉಡುಪಿ ಜಿಲ್ಲೆಯ ಶಿವಪುರ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಮಾರುತಿಪುರಗಳಲ್ಲಿ ದಿನಕ್ಕೆ ನೂರಾರು ಲಾರಿ ಲೋಡಿನಷ್ಟು ಕುಚಲಕ್ಕಿ ಮತ್ತು ಅವಲಕ್ಕಿ ತಯಾರಿಸುವ ಮಟ್ಟಿಗೆ ಬೆಳೆಸಿದ್ದು ಸಣ್ಣ ಸಾದನೆ ಅಲ್ಲ.
  ಸುಬ್ಬಣ್ಣ ನಾಯಕ ಮತ್ತು ಗುಲಾಬಿ ದಂಪತಿಗೆ ಜಯಲಕ್ಷ್ಮಿ, ಸರಸ್ವತಿ, ಕಸ್ತೂರಿ, ಪೂರ್ಣಿಮಾ ಮತ್ತು ವಿಶಾಲಕ್ಷಿ ಎಂಬ ಐವರು ಪುತ್ರಿಯರು ಮತ್ತು ಜಗದೀಶ ಹಾಗೂ ಶಿವಶ೦ಕರ್ ಎಂಬ ಇಬ್ಬರು ಪುತ್ರರು. ಪ್ರತಿ ವರ್ಷ ವಾರ್ಷಿಕೊತ್ಸವ ಸತ್ಯನಾರಾಯಣ ಪೂಜೆ ಮತ್ತು ಸಾರ್ವಜನಿಕ ಅನ್ನಸಂತರ್ಪಣೆಯೊಂದಿಗೆ ನಡೆಸುವುದು ಅವತ್ತು ನಾಡಿನ ಹೆಸರಾಂತ ವ್ಯಕ್ತಿಗಳನ್ನು ಕರೆಸಿ ಸನ್ಮಾನಿಸುವುದು ಇವರ ಕ್ರಮ ಆಗಿತ್ತು. ದರ್ಮಸ್ಥಳದ ವೀರೇಂದ್ರ ಹೆಗ್ಗಡೆ, ವೀರಪ್ಪ ಮೊಯ್ಲಿ, ಟಿ.ಎ.ಪೈ ಮುಂತಾದ ಖ್ಯಾತ ನಾಮರು ಇವರ ಕಾರ್ಯಕ್ರಮದಲ್ಲಿ ಬಾಗವಹಿಸುತ್ತಿದ್ದರು. ಇವರಿಗೆ ಅಕ್ಕಿ ಗಿರಣಿ, ಕೃಷಿ ಭೂಮಿ ಮಾರಾಟ ಮಾಡಿ ಬೆಂಬಲಿಸಿದ ಅಯ್ಯಂಗಾರ್ ಸಹೋದರರನ್ನು ಮಾತ್ರ ಯಾವ ಕಾರ್ಯಕ್ರಮದಲ್ಲೂ ಬಿಟ್ಟಿರುತ್ತಿರಲಿಲ್ಲ.
   ಇವರ ಹತ್ತಿರ ಇದ್ದವರೆಲ್ಲ ಈಗ ಯಶಸ್ವಿ ಉದ್ದಿಮೆದಾರರಾಗಿದ್ದಾರೆ, ಆನಂದಪುರಂನ ಅಕ್ಕಿ ಗಿರಣಿ ಇವರಲ್ಲಿದ್ದ ಇಲ್ಲಿಗೆ ಸಮೀಪದ ಬಳ್ಳಿ ಬೈಲಿನ ಸುಬ್ಬರಾಯರೇ ಖರೀದಿಸಿದ್ದಾರೆ, ಶಿವಪುರದ ಅಕ್ಕಿ ಗಿರಣಿ ಯಡೇಹಳ್ಳಿ ನಾಗರಾಜ ಭಟ್ಟರ ಪುತ್ರ ರಾಮ ಭಟ್ಟರು ಖರೀದಿಸಿದ್ದಾರೆ ಇವರಿಂದಲೇ ತಾವುಗಳು ವ್ಯವಹಾರ ಕಲಿತು ಮೇಲೆ ಬಂದು ಯಶಸ್ವಿ ಆದೇವೆಂದು ಇವರಲ್ಲಿದ್ದ ಲಕ್ಷ್ಮಣ ಭಟ್ಟರು, ವಿಷ್ಣು ಮೂತಿ೯ ನಾಯಕ್, ಸುಬ್ಬರಾವ್, ಸುದಾಕರ್ ಮುಂತಾದ ಈಗಿನ ಯಶಸ್ವಿ ರೈಸ್ ಮಿಲ್ ಮಾಲಿಕರು ಹೇಳುತ್ತಾರೆ.
  ಇವರ ಎರೆಡು ಲಾರಿಗಳಲ್ಲಿ ಅಕ್ಕಿ ಅವಲಕ್ಕಿ ಮಾರಾಟದ ಹಣ ತರುತ್ತಿದ್ದಾಗ ತೀರ್ಥಹಳ್ಳಿ ಸಮೀಪದ  ಅರಳಸುರಳಿ ಮಾಗ೯ದ ಸಂಕದ ಹೊಳೆ ಮತ್ತು ವಾರಂಬಳ್ಳಿಯಲ್ಲಿ ನಾಲ್ಕು ಕಾಮಿ೯ಕರನ್ನು 1.ಮಂಜುನಾಥ, 2. A.S. ಲೋಕೇಶ, 3. ವಿಶ್ವನಾಥ ರೈ, 4. ಶಿವಪ್ಪರನ್ನು ಬೀಕರವಾಗಿ ಕೊಲೆ ಮಾಡಿ ದರೋಡೆ ಮಾಡಿದ ಪ್ರಕರಣ (28-8-1983 ರಲ್ಲಿ) ರಾಜ್ಯದಲ್ಲೇ ಆಗ ದೊಡ್ಡ ಸುದ್ದಿ. ಕೊಲೆ ಆದ ನತದೃಷ್ಟರಲ್ಲಿ ಒಬ್ಬರು ಹಾಲಿ ಆನಂದಪುರಂನ ಪೆಟ್ರೋಲ್ ಬಂಕ್ ಮಾಲಿಕ ಗಿರಿಯಪ್ಪರ ಸಹೋದರ ಆಗಿದ್ದರು.
  ಕೊಲೆ ಮಾಡಿದವರನ್ನು ಪತ್ತೆ ಮಾಡಿ 10 ವರ್ಷ ಸಜೆ ಶಿಕ್ಷೆ ನೀಡಿ ಶಿವಮೊಗ್ಗ ಸೆಷನ್ ನ್ಯಾಯಾಲಯ ತೀರ್ಪು ನೀಡಿತು ಕೊಲೆ ಮಾಡಿದವರು ರೈತ ಬಂದು ಗ್ರಾಮೋದ್ಯೊಗದ ಮಾಜಿ ಕಾರ್ಮಿಕರೇ ಆಗಿದ್ದರು (ಗುನ್ನೆ ನಂ 11/84 ಮತ್ತು 37/83).
  ಇದರಿಂದ ನೊಂದ ಕಾರ್ಮಿಕರು ಆನಂದಪುರಂ ನಲ್ಲಿ ಮೌನ ಮೆರವಣಿಗೆ ಮಾಡಿದ್ದು ಮತ್ತು ಮೃತರಾದವರಿಗೆ ಪರಿಹಾರ ಕೇಳಿದ್ದು ಸುಬ್ಬಣ್ಣ ನಾಯಕರಿಗೆ ಅಸಮದಾನ ಉಂಟಾಗಿ ಕಾರ್ಮಿಕರನ್ನು ಕೆಲಸದಿಂದ ತೆಗೆದದ್ದು ಅದರಿಂದ ಸಂಸ್ಥೆ ಲಾಕ್ ಡೌನ್ ಮಾಡಿದ್ದು, ಕಾರ್ಮಿಕ ನ್ಯಾಯಾಲಯಕ್ಕೆ ಹೋಗಿದ್ದು ನಂತರ ಕಾಮಿ೯ಕರ ಮೇಲೆ ಲಾಠಿ ಚಾರ್ಜ್ ಮಾಡಿದ್ದರಿಂದ ಇಡೀ ಆನಂದಪುರಂ ಪ್ರಕ್ಷುಬ್ದವಾಗಿತ್ತು ಅನೇಕ ಕಾಮಿ೯ಕರ ಮೇಲೆ ಕೇಸ್ ಹಾಕಲಾಗಿತ್ತು.
  ಇದೇ ಕಾರಣಕ್ಕಾಗಿ ಹಾಲಿ ಮಾರುತಿ ಇಂಡಸ್ಟ್ರೀಸ್ ಪೂವಪ್ಪ ಮತ್ತು ಯಡೇಹಳ್ಳಿಯ ಸ್ಯೆಮನ್ ಡಿಸೋಜರಿಗೆ ಪೋಲಿಸರಿಂದ ದೈಹಿಕ ದೌರ್ಜನ್ಯ ನಡೆಸಿದ್ದು ಸುಬ್ಬಣ್ಣ ನಾಯಕರ ತಪ್ಪು ನಡೆ ಆಗಿದ್ದ, ವಿಷಾದನೀಯ ಘಟನೆ.
   ಗಾಂಧೀಜಿ ಅಭಿಮಾನಿ ಆಗಿ ಅವರ ದೇಶಿ ಚಿಂತನೆಯ ಪ್ರಬಾವದಲ್ಲಿ ದೂರದ ಶಿವಪುರದಿಂದ ಬಂದು ಆನಂದಪುರಂನವರೇ ಆಗಿ ಆನಂದಪುರಂ ಹೆಸರು ಅಕ್ಕಿ ಅವಲಕ್ಕಿ ತಯಾರಿಕೆಯಲ್ಲಿ ಉತ್ತುಂಗಕ್ಕೆ ಏರಿಸಿದ ಶಿವಪುರ ಸುಬ್ಬಣ್ಣ ನಾಯಕರು ಒಬ್ಬ ಯಶಸ್ವಿ ದೇಶಿ ಚಿಂತನೆಯ ಬ್ರಾಂಡ್ ಅಂಬಾಸಡರ್ ಎಂದರೆ ಅತಿಶೋಯೊಕ್ತಿಯಲ್ಲ.
  ತಮ್ಮ 83ನೇ ವಯಸ್ಸಲ್ಲಿ (13 - 11 - 2012)ರಲ್ಲಿ ಆನಂದಪುರಂ ನಲ್ಲೇ ತಮ್ಮ ಇಹಲೋಕ ಯಾತ್ರೆ ಮುಗಿಸಿದ್ದಾರೆ.
  ಕಡು ಬಡತನದಿಂದ ಯಶಸ್ವಿ ಉದ್ಯಮಿ ಆದ ರೈತ ಬಂದು ಗ್ರಾಮೋದ್ಯೋಗದ ಶಿವಪುರ ಸುಬ್ಬಣ್ಣ ನಾಯಕರು ಒ0ದು ದಂತ ಕಥೆ ಆಗಿದ್ದಾರೆ.
(ನಾಳೆ ಭಾಗ-33)

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂ...

ಶ್ರೀಧರ ಸ್ವಾಮಿ ವರದಳ್ಳಿ ಪವಾಡ ಪುರುಷರು.

   ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ವರದಳ್ಳಿಯ ತಪಸ್ವಿ ಶ್ರೀಧರ ಸ್ವಾಮಿಗಳು.   ವರದಳ್ಳಿ ಶ್ರೀಧರ ಸ್ವಾಮಿಗಳ ಬಗ್ಗೆ ಕೇಳಿದ್ದು, ಓದಿದ್ದು ಮತ್ತು ಅವರ ಒಡನಾಡಿಗಳನ್ನ ಭೇಟಿ ಮಾಡಿದ್ದು ಬಿಟ್ಟರೆ ಅವರನ್ನ ಪ್ರತ್ಯಕ್ಷವಾಗಿ ನೋಡಿಲ್ಲ.     ನಾವು ಚಿಕ್ಕವರಿದ್ದಾಗ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುವಾಗ ಆಗಿನ ಕಾಲದ ಖ್ಯಾತ ಚಲನಚಿತ್ರ ನಟ ಉದಯ ಕುಮಾರ್ ಅರಳಿ ಮರದ ಗ್ಯಾರೇಜ್ ಹತ್ತಿರ ಬಂದಿದ್ದಾರೆ ಅಂತ ಊರಿನ ಜನರೆಲ್ಲ ಗುಂಪು ಗುಂಪಾಗಿ ಓಡುತ್ತಿದ್ದರು, ನಾವು ಚಿಕ್ಕ ಮಕ್ಕಳೆಲ್ಲ ಅವರನ್ನ ಹಿಂಬಾಲಿಸಿದೆವು.       ಅಲ್ಲಿ ಒಂದು ಬಿಳಿ ಅಂಬಾಸಡರ್ ಕಾರು ನಿಂತಿದ್ದು ಅದರ ಅಡಿಯಲ್ಲಿ ಮಲಗಿ ಮೆಕ್ಯಾನಿಕ್ ದುರಸ್ತಿ ಮಾಡುತ್ತಿದ್ದರೆ ಎತ್ತರದ ಮಣ್ಣು ದಿಬ್ಬದ ಮೇಲೆ ನಮ್ಮ ನಟ ಉದಯ ಕುಮಾರ್ ಸಿಗರೇಟು ಸೇದಿ ಹೊಗೆ ಬಿಡುತ್ತಿದ್ದರು. ಯಾರೂ ಅವರ ಹತ್ತಿರ ಮಾತಾಡುವ ದೈಯ೯ ವಹಿಸಲಿಲ್ಲ ಆದರೆ ನೆರೆದ ಜನ ಮಾತಾಡಿಕೊಳ್ಳುತ್ತಿದ್ದ ಮಾತಿನ ಸಾರಾಂಶವೆಂದರೆ ವರದಳ್ಳಿಯಲ್ಲಿ ತಪಸ್ಸು ಮಾಡುತ್ತಿದ್ದ ಶ್ರೀಧರ ಸ್ವಾಮಿಗಳು ದೇಹತ್ಯಾಗ ಮಾಡಿದ್ದಾರೆ ಅದನ್ನ ಕೇಳಿ ಅವರ ಭಕ್ತ ಮತ್ತು ಶಿಷ್ಯರಾದ ಖ್ಯಾತ ಚಿತ್ರ ನಟ ಉದಯ ಕುಮಾರ್ ಬರುವಾಗ ಕಾರು ಹಾಳಾಗಿ ದುರಸ್ತಿಗಾಗಿ ನಿಂತಿದ್ದಾರೆ, ದುಃಖದಲ್ಲಿ ಇರೋದರಿಂದ ಆ ರೀತಿ ಸಿಗರೇಟು ಸೇದಿ ಬೂದಿ ಮಾಡುತ್ತಿದ್ದಾರೆ ಅವರ ಹತ್ತಿರ ಯಾರೂ ಮಾತಾಡ ಬೇಡಿ ಅಂತ ...