Skip to main content

Posts

Showing posts with the label Very shortly opening star catagory stay- food-shirodhara treatment in vaidyo Narayana Hari Ayurveda clinic.

Blog number 871.ಹೆಲ್ತ್ ಟೂರಿಸಂ ಭಾಗವಾಗಿ ನನ್ನ ಕನಸಿನ ಆಯುರ್ವೇದ ಚಿಕಿತ್ಸಾಲಯ ಪ್ರಾರಂಭ ಆಗಲಿದೆ ಇದು ಸುಸಜ್ಜಿತವಾದ ಸ್ಟಾರ್ ಕೆಟಗರಿಯ ವಸತಿ - ಊಟ ಸೌಲಭ್ಯದ ಜೊತೆ ಚಿಕಿತ್ಸೆಯನ್ನು ಸುಲಭವಾಗಿ ಅವರವರ ಬಜೆಟ್ ನಲ್ಲಿ ಪಡೆಯುವಂತೆ ಯೋಜಿಸಲಾಗುತ್ತದೆ.

#ಹೆಲ್ತ್_ಟೂರಿಸಂ #ಪ್ರವಾಸೋದ್ಯಮದ_ಅಂಗವಾಗಿ #ನನ್ನ_ಬಹುದಿನದ_ಕನಸು. #ಸದ್ಯದಲ್ಲೇ_ಪ್ರಾರಂಭವಾಗುವ_ಹಂತದಲ್ಲಿ #ಶಿವಮೊಗ್ಗ_ಜಿಲ್ಲೆಯಲ್ಲಿ_ಸುಂದರ_ಪರಿಸರದಲ್ಲಿ_ಎಲ್ಲಾ_ಸೌಕಯ೯_ಹೊಂದಿದ_ಮೊದಲ_ಚಿಕಿತ್ಸಾಕೇಂದ್ರವಿದು.      ಜೀವನದ ಕನಸುಗಳು ಕೆಲವು ಅದು ನನಸಾದರೆ ಏನಾದೀತು? ಗೊತ್ತಿಲ್ಲ ಆದರೆ ಅದು ನನಸಾಗುವ ತನಕ ಮನಸ್ಸಿಗೆ ವಿಶ್ರಾಂತಿ ಇಲ್ಲ.   ನನ್ನ ತಂದೆ ಆನಂದಪುರಂನ ಕನಕಮ್ಮಾಳ್ ಆಸ್ಪತ್ರೆ ಸೇರಿದ್ದರು, ಅವರ ಕುಶಲತೆ ಜ್ಞಾನವನ್ನು ನೋಡಿ ಆಗಿನ ಪ್ರಸಿದ್ದ ವೈದ್ಯರಾದ ಡಾಕ್ಟರ್ ಕೃಷ್ಣನ್ ನಮ್ಮ ತಂದೆಗೆ ಬೆಂಗಳೂರಿಗೆ  ಹೋಮಿಯೋಪತಿ ವೈದ್ಯ ಕಾಲೇಜಿಗೆ ಸೇರಿಸಿ ವೈದ್ಯರನ್ನಾಗಿಸಿ ಅವರು ಸ್ಥಳಿಯವಾಗಿ ಮತ್ತು ಬಟ್ಟೆ ಮಲ್ಲಪ್ಪದಲ್ಲಿ ಕ್ಲೀನಿಕ್ ಮಾಡಿ ಜನರ ಆರೋಗ್ಯ ಸೇವೆ ಮಾಡುವಂತೆ ಮಾಡುತ್ತಾರೆ.     1960-70 ರ ದಶಕದಲ್ಲಿ ಆನಂದಪುರಂ ಆಸ್ಪತ್ರೆಗೆ ಹೊಸನಗರ ತಾಲ್ಲೂಕಿನಿಂದ - ಶಿವಮೊಗ್ಗ ತಾಲ್ಲೂಕಿನ ಕುಂಸಿಯಿಂದ,ಶಿಕಾರಿಪುರ ತಾಲ್ಲೂಕಿನ ಸಾಲೂರಿನ ತನಕ ರೋಗಿಗಳು ಬರುತ್ತಿದ್ದರು.   ಆಪರೇಷನ್ ಕೂಡ ಮಾಡುತ್ತಿದ್ದರು, ಡಾಕ್ಟರ್ ಕೃಷ್ಣನ್ ಶ್ರೀಮಂತರು, ಕನಕಮ್ಮಳ್ ಆಸ್ಪತ್ರೆ ನಿರ್ಮಿಸಿದ ಅಯ್ಯಂಗಾರ್ ಕುಟುಂಬದ ವೆಂಕಟಾಚಲ ಅಯ್ಯಂಗಾರರು ಅಂಬಾಸಡರ್ ಕಾರು ಹೊಂದಿದ್ದರು ಹಾಗೆ ಡಾಕ್ಟರ್ ಕೃಷ್ಣನ್ ಕೂಡ ಅಂಬಾಸಡರ್ ಕಾರು ಹೊಂದಿದ್ದರು.   ಮಧ್ಯರಾತ್ರಿಯಲ್ಲಿ ...