#ದೇವರ_ಮಹಿಮೆಯಾ? #ಮನೋವಿಜ್ಞಾನವಾ? #ಹಾಗಾದರೆ_ದೇವಾಲಯಗಳು_ಭಕ್ತಿ_ಜ್ಞಾನ_ವಿಜ್ಞಾನಗಳ_ಸಂಗಮವೆ?. #ದೇವರ_ಗುಡ್ಡದ_ಈ_ಮ್ಯಾಜಿಕ್_ಕಲ್ಲು_ಗುಂಡುಗಳು. ರಾಣಿಬೆನ್ನೂರು ಸಮೀಪದ ದೇವರ ಗುಡ್ಡದ ಮೈಲಾರೇಶ್ವರ ದೇವರಿಗೆ ಭಕ್ತರು ನಾಡಿನಾದ್ಯಂತ ಲಕ್ಷಾಂತರ ಜನರಿದ್ದಾರೆ ಅಲ್ಲಿನ ಕಾರಣಿಕರ ಹೇಳಿಕೆ ವರ್ಷದ ಮಳೆ-ಬೆಳೆಯ ಭವಿಷ್ಯವಾಣಿ ಅಂತಲೇ ಭಕ್ತರು ಬಾವಿಸಿದ್ದಾರೆ. ಸುಮಾರು 16 ವರ್ಷದ ಹಿಂದೆ ಇಲ್ಲಿಗೆ ಹೋಗಿದ್ದೆ ದೇವಾಲಯದ ಒಳ ಹೋಗುವ ಮೊದಲು ಮರದ ಕಟ್ಟೆಯ ಮೇಲೆ ಸಾಲಾಗಿ ಜೋಡಿಸಿಟ್ಟಿದ್ದ ವಿವಿಧ ಗಾತ್ರದ ಕಲ್ಲು ಗುಂಡುಗಳನ್ನು ನೋಡಿದೆ ಬಹಶಃ ಪೂಜೆಗಾಗಿ ಇಟ್ಟಿರುವ ಕಲ್ಲು ಗುಂಡುಗಳಂತ ಬಾವಿಸಿಕೊಂಡಿದ್ದೆ. ದೇವರ ಪೂಜೆ ದರ್ಶನದ ನಂತರ ಹೊರ ಬಂದಾಗ ಈ ಕಲ್ಲು ಗುಂಡುಗಳ ಸಮೀಪ ಕುಳಿತ ಮಹಿಳೆಗೆ ಕೇಳಿದೆ ಇದಾವ ದೇವರುಗಳು? ಅಂತ ಆಗ ಆಕೆ ಹೇಳಿದ್ದು "ಇವು ದೇವರ ಪವಾಡದ ಕಲ್ಲುಗಳು, ನಿಮ್ಮ ಮನಸ್ಸಲ್ಲಿ ಯಾವುದಾದರೂ ಪ್ರಶ್ನೆ ಇದ್ದರೆ ಅದು ಈಡೇರುವುದಾದರೆ ಸುಲಭವಾಗಿ ಎದ್ದು ಬಾ ಅಂದುಕೊಳ್ಳಿ ಈ ಸಣ್ಣ ಕಲ್ಲು ಗುಂಡನ್ನು ನಮಸ್ಕರಿಸಿ ಎತ್ತಿ, ನಿಮ್ಮ ಕೆಲಸ ಈಡೇರುವುದಾದರೆ ನೀವು ಈ ಕಲ್ಲು ಎತ್ತುತ್ತೀರಿ ಅದೇ ನಿಮ್ಮ ಬಯಕೆ ಈಡೇರುವುದಿಲ್ಲವಾದರೆ ಈ ಸಣ್ಣ ಗುಂಡುಕಲ್ಲು ನಿಮಗೆ ಎತ್ತಲು ಸಾಧ್ಯವಿಲ್ಲ.ಇದೇ ರೀತಿ ಈ ದೊಡ್ಡ ಗುಂಡುಕಲ್ಲು ನೀವು ಬಯಸಿದ್ದು ಈಡೇರುವುದಾದರೆ ಹೂವು ಎತ್ತಿದ೦ಗೆ ಎದ್ದು ಬರುತ್ತೆ ಬೇಕಾದರೆ ...