Skip to main content

Posts

Showing posts with the label Keladi kingdom research work really usefull? Budi BASAPPA nayaka and Swami Aparampara same person or not?

Blog number 1067. ಅಮರ ಸುಳ್ಯ 1837 ಬ್ರಿಟಿಷ್ ವಸಾಹತುಶಾಹಿ ವಿರುದ್ದದ ಸಶಸ್ತ್ರ ಹೋರಾಟ ಎಂಬ ವಿದ್ಯಾದರ ಕುಡೇಕಲ್ಲು ಬರೆದ ಇತಿಹಾಸದ ಪುಸ್ತಕ,150 ವಷ೯ದಿಂದ ಇತಿಹಾಸದ ಗರ್ಭದಲ್ಲಿ ಹುದುಗಿ ಹೋದ ಸ್ವಾಭಿಮಾನಿ ಕೊಡಗಿನ ಜನರ ಸ್ವಾತಂತ್ರ್ಯದ ಹೋರಾಟ, ಕೆಳದಿ ವ೦ಶಸ್ಥ ಬೂದಿ ಬಸಪ್ಪ ನಾಯಕರು ನಗರ ರೈತ ದಂಗೆ ನಂತರ ಕೊಡಗಿಗೆ ಹೋಗುತ್ತಾರಾ? ಕೆಳದಿ ಇತಿಹಾಸ ಸಂಶೋದನೆ ನಿಂತ ನೀರಾಗಿದೆ.

#ಕೊಡಗಿನ_ಜನರ_ಸ್ವಾಭಿಮಾನಿ_ಕಥನ_ಒಂದೂವರೆ_ಶತಮಾನ_ಕಾಲಗಭ೯ದಲ್ಲಿ_ಹೂತು_ಹೋಗಿತ್ತು. #ಅಮರ_ಸುಳ್ಯ_1837_ಬ್ರಿಟೀಶ್_ವಸಾಹುತಶಾಹಿ_ವಿರುದ್ದದ_ಸಶಸ್ತ್ರ_ಹೋರಾಟ. #ಸಾಹಿತಿ_ಕೆ_ಆರ್_ತೇಜಕುಮಾರ್_ಬಡ್ಡಡ್ಕರ_ಸಹೋದರ_ವಿದ್ಯಾದರ_ಕುಡೆಕಲ್_ಪ್ರಕಟಿಸಿದ_ಪುಸ್ತಕ #ಇದೇ_ನವೆಂಬರ್_19ಕ್ಕೆ_ಅಮರ_ಸುಳ್ಯ_ಹೋರಾಟದ_ನೇತಾರ_ಕೆದಂಬಾಡಿ_ರಾಮಯ್ಯಗೌಡರ_ಪ್ರತಿಮೆ_ಅನಾವರಣ.   #ಈ_ಪುಸ್ತಕದ_ಅಧ್ಯಾಯ_4ರಲ್ಲಿ_ಪುಟ_ಸಂಖ್ಯೆ_50ರಿಂದ_70ರವರೆಗೆ_ಸ್ವಾಮಿ_ಅಪರಂಪಾರ_ಚರಿತ್ರೆ_ದಾಖಲಾಗಿದೆ #ಇವರೇ_ನಗರ_ರೈತ_ದಂಗೆಯ_ಬೂದಿಬಸಪ್ಪ_ಕೆಳದಿ_ಕೊನೆಯ_ರಾಜ_ಚೆನ್ನಬಸಪ್ಪನಾಯಕರ_ಪುತ್ರರೇ? #ಕೆಳದಿ_ಇತಿಹಾಸ_ಸಂಶೋದನೆ_ಏಕೆ_ನಿಂತ_ನೀರಾಗಿದೆ ?   ಸ್ಟಾತಂತ್ರ್ಯ ಪೂರ್ವ ಭಾರತದಲ್ಲಿ ಬ್ರಿಟಿಷರ ದಾಸ್ಯದ ವಿರುದ್ದದ ಎಲ್ಲಾ ಹೋರಾಟಗಾರರನ್ನು ದಂಗೆಕೋರರು, ದರೋಡೆಕೋರರೆಂದೇ ದಾಖಲಿಸಲಾಗಿದೆ, ಸ್ವಾತಂತ್ರ್ಯ ನಂತರವೂ ಜನಪರ ಹೋರಾಟ ಮಾಡಿದವರನ್ನು ಆಡಳಿತಕ್ಕೆ ತಡೆ ಮಾಡಿದವರೆಂದು ಬಂದಿಸಿ ಜೈಲಿಗೆ ಕಳಿಸಿ ರವಡಿ ಲಿಸ್ಟ್ ಒಪನ್ ಮಾಡಿದಂತೆ.    ಆದ್ದರಿಂದ ಬ್ರಿಟೀಷ್ ವಸಾಹತುಶಾಹಿಯ ವಿರುದ್ಧ ನಡೆದ ಸಶಸ್ತ್ರ ಹೋರಾಟವಾದ ಅಮರ ಸುಳ್ಯ ಹೋರಾಟ ದರೋಡೆ ಅನ್ನುವಂತೆ ದಾಖಲಾಗಿದೆ.    ಯಾವ ಕಥನವು ಕೊಡಗಿನ ಜನರ ಸ್ವಾಭಿಮಾನ, ಆತ್ಮಸ್ಥೆರ್ಯಕ್ಕೆ ಸಾಕ್ಷಿಯಾಗಿತ್ತೋ ಆ ಕಥನವು ಚರಿತ್ರೆಯ ಕಾಲಗರ್ಭದಲ್ಲಿ ಒಂದೂವರೆ ಶತಮಾನದಿಂದ ಕಾಲಗರ್ಭದಲ್ಲಿ ಹೂತು...