#ಮಲೆನಾಡಿನಲ್ಲಿ ರಿಯಲ್ ಎಸ್ಟೇಟ್ ಪಾತಾಳಕ್ಕೆ ಇಳಿಯಲಿದೆ, ಜಮೀನು ಖರೀದಿಸುವವರು ಬರಲಿಕ್ಕಿಲ್ಲ, ಕಸ್ತೂರಿ ರಂಗನ್ ವರದಿ ಪ್ರದೇಶದ ವ್ಯಾಪ್ತಿಯ ಜನರ ಜೀವನ ಮಟ್ಟ ಕುಸಿಯಲಿದೆ ಆದರೆ ಇದರಿ೦ದ ಪರಿಸರ ಉಳಿದು ಬೇರೆ ಪ್ರದೇಶದ ಜನ ಜೀವನಕ್ಕೆ ಅನುಕೂಲ ಆಗಲಿದೆ ಕ್ರಮೇಣ ಈ ಭಾಗದ ಜನ ಈ ಪ್ರದೇಶ ತೆರವು ಗೊಳಿಸಿ ಬೇರೆಲ್ಲೊ ಬದುಕು ಕಾಣಬೇಕಾಗುವುದು ಸತ್ಯ, ಯಾರೆಷ್ಟೆ ಸಮಥ೯ನೆ ನೀಡಲಿ ಭೂಮಿ ಉಳಿಸುವ ಈ ಅತ್ಯುತ್ತಮ ಕ್ರಮದಿಂದ ಈ ಭಾಗದ ಜನ ನೆಲೆ ಕಳೆದು ಕೊಳ್ಳಲೇಬೇಕು, ಕೆಲವರು ತ್ಯಾಗಕ್ಕೆ ತಯಾರಿರಬಹುದು, ರಾಜ್ಯದ ಬೆಳಕಿಗಾಗಿ ಶರಾವತಿ ಆಣೆಕಟ್ಟಿನಿಂದ ನಿರಾಶ್ರಿತರಾದ ಮಲೆನಾಡಿಗರಿ೦ದ ರಾಜ್ಯಕ್ಕೆ ಬೆಳಕಾಗಿದ್ದು ಸತ್ಯ ಆದರೆ ನಿರಾಶ್ರಿತರ ನಾಲ್ಕು ತಲೆಮಾರು ಅನುಭವಿಸುತ್ತಿರುವ ನಷ್ಟ ವೇದನೆ ಕಣ್ಣ ಎದುರು ಇದೆ, ಪರಿಸರ ಉಳಿಸಲು ಎಲ್ಲವನ್ನು ಕಳೆದುಕೊಳ್ಳುವವರಿಗೆ ಪರಿಹಾರ ಏನು? ಈ ಬಗ್ಗೆ ಎಲ್ಲೂ ಚಕಾರವಿಲ್ಲ, ಕಸ್ತೂರಿ ರಂಗನ್ ವರದಿ ವಿರೋದಿಸುವ ಕಾಲ ಮಿತಿ ಮೀರಿದೆ ಅದು ಅಲ್ಪ ಸ್ವಲ್ಪ ಮಾಪಾ೯ಡಿನೋಂದಿಗೆ ಜಾರಿ ಅಂತು ಆಗೇ ಆಗುತ್ತದೆ ಈ ಪ್ರದೇಶದ ವಾಸಿಗಳಾದ ನಮ್ಮ ಭವಿಷ್ಯದ ಭದ್ರತೆ ಚಚೆ೯ ಆಗಲೇಬೇಕು. #