Skip to main content

Posts

Showing posts with the label Bad experience of English medium education of my high school days

Blog number 844. ಇಂಗ್ಲೀಷ್ ವಿಶ್ವ ದಿನ ಪ್ರತಿ ವರ್ಷ ಏಪ್ರಿಲ್ 23 ರಂದು ಆಚರಿಸುತ್ತಾರೆ ಇದು ಪ್ರಖ್ಯಾತ ಇಂಗ್ಲೀಷ್ ನಾಟಕಕಾರ ಶೇಕ್ಸ್ ಪಿಯರ್ ರ ಹುಟ್ಟಿದ ಮತ್ತು ಕಾಲವಾದ ದಿನ ಮತ್ತು ನನ್ನ ಇಂಗ್ಲೀಷ್ ಮೀಡಿಯಂ ಪ್ರೌಡ ಶಾಲಾ ಅನುಭವ.

#ಶೇಕ್ಸ್ಪಿಯರ್_ಹುಟ್ಟಿದ_ಮತ್ತು_ಕಾಲವಾದ_ಏಪ್ರಿಲ್_23_ವಿಶ್ವ_ಇಂಗ್ಲೀಷ್_ದಿನ. #ಮಕ್ಕಳು_ಇಂಗ್ಲೀಷ್_ಕಲಿಯಲಿ_ಎಂಬ_ಪೋಷಕರ_ಆಸೆ. #ಉತ್ತಮ_ಅಂಕ_ಪಡೆದು_ಶಿವಲಿಂಗಪ್ಪ_ಶಾಲೆಗೆ_ಸೇರುವ_ಅಹ೯ತೆ_ಇದ್ದರೂ_ಅದನ್ನು_ತಪ್ಪಿಸಿದ_ಶಿಕ್ಷಕರು. #ಅವರ_ಮಗನನ್ನ_ಮಾತ್ರ_ಅಲ್ಲಿಗೆ_ಸೇರಿಸಿದ_ಅವರ_ಮನೋಭಾವ. #ಹಳ್ಳಿಯಿಂದ_ಬಂದವರನ್ನು_ಗಮಾರರಂತೆ_ಅವಮಾನಿಸುತ್ತಿದ್ದ_ಶಿಕ್ಷಕರು_ಪೇಟೆ_ವಿದ್ಯಾರ್ಥಿಗಳು. #ಕನ್ನಡ_ಹೋರಾಟಗಾರರ_ಮಕ್ಕಳನ್ನು_ಕಾನ್ವೆಂಟ್_ಸೇರಿಸುವ_ಪರಿ    ಏಳನೆ ತರಗತಿಯಲ್ಲಿ ನಾನು ಅತ್ಯಂತ ಹೆಚ್ಚು ಮಾರ್ಕ್ಸ್ ಪಡೆದಿದ್ದೆ, ಮೆರಿಟ್ ಸ್ಕಾಲರ್ ಶಿಪ್ ಪರೀಕ್ಷೆಯಲ್ಲೂ ಪಾಸಾಗಿದ್ದೆ ಆಗ ನಮ್ಮ ತಂದೆ ನನ್ನನ್ನು ಸಾಗರದ ಮುನ್ಸಿಪಲ್ ಹೈಸ್ಕೂಲ್ ಗೆ 8ನೇ ತರಗತಿಗೆ ಇಂಗ್ಲೀಷ್ ಮೀಡಿಯಂ ಗೆ ಸೇರಿಸಿದ್ದರು.   ಆಗ ಸಾಗರದಲ್ಲಿ ಎಲ್ಲಾ ಕಾನ್ವೆಂಟ್ ಗಳು ಗಂಡು ಮಕ್ಕಳಿಗೆ 7 ನೇ ತರಗತಿ ತನಕ ಮಾತ್ರ ಇಂಗ್ಲೀಷ್ ಮೀಡಿಯಂ ಕ್ಲಾಸ್ ಮಾಡುತ್ತಿದ್ದರು ನಂತರ 8ನೇ ತರಗತಿಗೆ ಶಿವಲಿಂಗಪ್ಪ ಪ್ರೌಡ ಶಾಲೆಗೆ ಅಥವ ಸರ್ಕಾರದ ಮುನ್ಸಿಪಲ್ ಹೈಸ್ಕೂಲ್ ಗೆ ಸೇರಬೇಕಿತ್ತು.   ಶಿವಲಿಂಗಪ್ಪ ಪ್ರೌಡ ಶಾಲೆಯಲ್ಲಿ ಮೆರಿಟ್ ಇದ್ದವರಿಗೆ ಮಾತ್ರ ಸೀಟು ಸಿಗುತ್ತಿತ್ತು, ನಾನು ಪಡೆದ 7ನೇ ತರಗತಿ ಅಂಕಗಳು ನನಗೆ ಅಲ್ಲಿ ಸೇರಲು ಸುಲಭ ಇತ್ತು.   ನಮ್ಮ ಊರಿನ ಪ್ರೌಡ ಶಾಲೆಯ ಹಿಂದಿ ಪಂಡಿತರು ನಮ್ಮ ತಂದೆಗೆ ನನ್ನನ್ನು ಮುನ್ಸಿಪಲ...