Skip to main content

Posts

Showing posts with the label In 2000 Our Dehli chalo for Shimoga Talaguppa broadguage

Blog number 1052. ಶಿವಮೊಗ್ಗ ತಾಳಗುಪ್ಪ ರೈಲು ಮಾರ್ಗ ನಷ್ಟದ ಮಾರ್ಗ ಎಂದು ರದ್ದು ಮಾಡುವ ಸಂದರ್ಭದಲ್ಲಿ ಈ ರೈಲು ಮಾರ್ಗ ಉಳಿಸಿಕೊಳ್ಳುವ ತಂತ್ರವಾಗಿ ಸಾಗರ ರೈಲು ನಿಲ್ದಾಣಕ್ಕೆ ಡಾ.ರಾಮಮನೋಹರ ಲೋಹಿಯಾ ಎಂದು ನಾಮಕರಣ ಮಾಡಿಸಲು ಶಿವಮೊಗ್ಗದಿಂದ ದೆಹಲಿ ಚಲೋ 22 ವರ್ಷದ ಹಿಂದಿನ ನೆನಪು.

#ನಿನ್ನೆ_ನನ್ನ_ಡಿಸ್ಪ್ಲೇ_ಪೋಟೊ_ಪ್ರೊಪೈಲ್_ಪೋಟೋ_ಜಾರ್ಜ್_ಪರ್ನಾಂಡೀಸ್ #ಶಿವಮೊಗ್ಗ_ತಾಳಗುಪ್ಪ_ಬ್ರಾಡ್_ಗೇಜ್_ಒತ್ತಾಯಿಸಿ_35_ಜನರ_ನಿಯೋಗದ_ದೆಹಲಿ_ಚಲೋ #ನಿಯೋಗ_ನೇತೃತ್ವದ_ಕಾಗೋಡು_ಹೋರಾಟದ_ನೇತಾರ_ಗಣಪತಿಯಪ್ಪನವರು. #ದೆಹಲಿಯಲ್ಲಿ_ಜಾರ್ಜ್_ಪರ್ನಾಂಡೀಸ್_ಶ್ರೀನಿವಾಸಪ್ರಸಾದ್_ರಾಜ್ಯಸಭಾ_ಸದಸ್ಯರಾದ_ಜವರೇಗೌಡರು #ಎರೆಡು_ಸಾವಿರ_ಇಸವಿಯ_ದೆಹಲಿ_ಚಲೋ_ನೆನಪು      ಷರೀಪರು ರೈಲ್ವೇ ಮಂತ್ರಿಗಳಾಗಿದ್ದಾಗ ಆನಂದಪುರಂನ ಮಾಜಿ ಸಂಸದರು, ವಿದ್ಯಾ ಮಂತ್ರಿಗಳೂ ಆಗಿದ್ದ ವಯೋವೃದ್ದ ಬದರೀನಾರಾಯಣ ಅಯ್ಯಂಗಾರ್ ರನ್ನು ಹೆಲಿಕಾಪ್ಟರ್ ನಲ್ಲಿ ಕರೆತಂದು ಶಿವಮೊಗ್ಗ ತಾಳಗುಪ್ಪ ರೈಲು ಮಾರ್ಗ ಮೀಟರ್ ಗೇಜ್ ಪರಿವರ್ತನೆ ಭೂಮಿ ಪೂಜೆ ನೆರವೇರಿಸಿದ್ದರು ಇದೇ ಬದರೀನಾರಾಯಣ ಅಯ್ಯಂಗಾರರ ಶಿವಮೊಗ್ಗ ಜಿಲ್ಲೆಯ ಕೊನೆಯ ಬೇಟಿ.    ಬ್ರಾಡ್ ಗೇಜ್ ಪರಿವರ್ತನೆ ಮಾಡಲು ಆಗಿನ ಮೀಟರ್ ಗೇಜ್ ರೈಲು ನಿಲ್ಲಿಸಿದರು ನಂತರ ಬೀರೂರು ಶಿವಮೊಗ್ಗ ಬ್ರಾಡ್ ಗೇಜ್ ಆದರೂ ಶಿವಮೊಗ ತಾಳಗುಪ್ಪ ಬ್ರಾಡ್ ಗೇಜ್ ಪರಿವರ್ತನೆ ಪ್ರಾರಂಭವಾಗಲೇ ಇಲ್ಲ.   ಇದರ ಮಧ್ಯದಲ್ಲೆ ದೆಹಲಿ ರೈಲ್ವೇ ಅಧಿಕಾರಿಗಳು ಶಿವಮೊಗ್ಗ - ತಾಳಗುಪ್ಪ ರೈಲು ಮಾರ್ಗ ನಷ್ಟದ ಮಾರ್ಗ ಎಂದು ಘೋಷಿಸಿ ಬಿಟ್ಟರು ಆದ್ದರಿಂದ ಈ ಮಾರ್ಗ ಬ್ರಾಡ್ ಗೇಜ್ ಮಾಡುವ ಅವಶ್ಯಕತೆಯೇ ಇಲ್ಲ ಎಂದು ನಿರ್ದರಿಸಿ ಬಿಟ್ಟರು.   ಈ ವೇಳೆಯಲ...