#ಕಾಳು_ಮೆಣಸಿನ_ರಾಣಿ_ಚೆನ್ನಬೈರಾದೇವಿ_ಸಮಾದಿ #ಶಿವಮೊಗ್ಗ_ಜಿಲ್ಲೆಯ_ಸಾಗರ_ತಾಲ್ಲೂಕಿನ_ಆವಿನಹಳ್ಳಿಯಲ್ಲಿದೆ #ಎರಡು_ಶತಮಾನದ_ಹಿಂದೆ_ಕರ್ನಲ್_ಕಾಲಿನ್_ಮೆಕೆಂಜಿ_ಇಲ್ಲಿಗೆ_ಬೇಟಿ_ನೀಡಿ_ದಾಖಲೆ_ಮಾಡಿದ್ದಾರೆ #ಆರು_ವರ್ಷದ_ಹಿಂದೆ_ಇತಿಹಾಸಕಾರರು_ಆ_ನಕ್ಷೆ_ಆದರಿಸಿ_ಸ್ಥಳ_ಸಂಶೋಧನೆ_ಮಾಡಿದ್ದಾರೆ. #ಇದು_ರಾಷ್ಟ್ರೀಯ_ಸ್ಮಾರಕ_ಇದನ್ನು_ಸಂರಕ್ಷಿಸ_ಬೇಕು #pepperqueen #gerusoppe #saluvdynasty #chennabyaradevi ಗೇರುಸೊಪ್ಪೆಯ ಪ್ರಸಿದ್ಧ ಜೈನ ರಾಣಿ ಚೆನ್ನಬೈರಾದೇವಿ ದೀರ್ಘಕಾಲ ರಾಜ್ಯವಾಳಿದವರು. ಯುರೋಪಿನ ಆ ಕಾಲದ ಅನೇಕ ದೇಶಗಳಿಗೆ ಪಶ್ಚಿಮ ಘಟ್ಟದ ಮಲೆನಾಡಿನಿಂದ ಕಾಳುಮೆಣಸು ಸಂಗ್ರಹಿಸಿ ಅರಬೀ ಸಮುದ್ರದ ಮೂಲಕ ರಪ್ತು ವ್ಯಾಪಾರ ಮಾಡುತ್ತಿದ್ದ ಏಕೈಕ ರಾಣಿ. ಪೋರ್ಚುಗೀಸರು ಈ ಕಾರಣದಿಂದಲೇ #ಕಾಳು_ಮೆಣಸಿನ_ರಾಣಿ ಎಂದು ಬಿರುದು ನೀಡಿದ್ದರು. ಚೆನ್ನಭೈರಾದೇವಿಯು ಸಾಳುವ ವಂಶಕ್ಕೆ ಸೇರಿದ ರಾಣಿ 16ನೇ ಶತಮಾನದಲ್ಲಿ ಆಳ್ವಿಕೆ ನಡೆಸಿದ ಈ ರಾಣಿಯು 54 ವರ್ಷಗಳ ಕಾಲ ರಾಜ್ಯಭಾರ ಮಾಡಿದ್ದಳು. ಪ್ರಸ್ತುತ ಭಟ್ಕಳ ತಾಲೂಕಿನಲ್ಲಿರುವ ಹಾಡವಳ್ಳಿ (ಸಂಗೀತಪುರ) ಮತ್ತು ಗೇರುಸೊಪ್ಪ ಪ್ರಾಂತ್ಯವನ್ನು ಆಳುತ್ತಿದ್ದ ಈಕೆಯನ್ನು ಗೇರುಸೊಪ್ಪೆಯ ರಾಣಿ ಎಂದು ವರ್ಣಿಸಲಾಗಿದೆ. ಕರಾವಳಿ ಮತ್ತು ಮಲೆನಾಡಿನ ಪ್ರದೇಶದಲ್ಲಿ ವ್ಯಾಪಕವಾಗಿ ಬೆಳೆಯುತ್ತಿದ್ದ...