Skip to main content

Posts

Showing posts from May, 2026

3591 ಡಾ ಸಿರಾಜ್ ಅಹಮದ್ ಸಹ್ಯಾದ್ರಿ ಕಾಲೇಜು ಪ್ರಾಂಶುಪಾಲರು

#ಡಾಕ್ಟರ್_ಸಿರಾಜ್_ಅಹಮದ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು. ಶಿವಮೊಗ್ಗದ ಪ್ರತಿಷ್ಠಿತ ಸಹ್ಯಾದ್ರಿ ಕಾಲೇಜಿನ ಪ್ರಾಂಶುಪಾಲರು.  ಲಂಕೇಶ್, DSS ಕೃಷ್ಣಪ್ಪ, ರಹಮತ್ ತರೀಕೆರೆ ಅಂತಹ ಅನೇಕರು ವ್ಯಾಸಂಗ ಮಾಡಿ ನಂತರ ಅಲ್ಲೇ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿದ್ದ ಕಾಲೇಜು ಶಿವಮೊಗ್ಗದ ಸಹ್ಯಾದ್ರಿ ಕಾಲೇಜು.    ಕವಿ ನಿಸಾರ್ ಅಹಮದ್ ರು ಸಹ್ಯಾದ್ರಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ #ಜೋಗದ_ಸಿರಿ_ಬೆಳಕಿನ ಕವಿತೆ ರಚಿಸಿದ ಸ್ಥಳವಿದು.    1984-85 ರಲ್ಲಿ ನಮ್ಮೂರ ರೈತ ಬಂದು ಗ್ರಾಮೋದ್ಯೋಗದ ನಾಲ್ಕು ಕಾರ್ಮಿಕರ ಕೊಲೆ ತನಿಖೆಗೆ ಒತ್ತಾಯಿಸಿ ನಾವು ನೂರಕ್ಕೂ ಹೆಚ್ಚು ಸೈಕಲ್ ಗಳಲ್ಲಿ ಶಿವಮೊಗ್ಗ ಜಿಲ್ಲಾದಿಕಾರಿ ಕಛೇರಿ ಎದುರು ಧರಣಿ ಮಾಡಲು ಸೈಕಲ್ ಯಾತ್ರೆ ಮಾಡಿದ್ದೆವು.   ಆಗ ದಲಿತ ಸಂಘರ್ಷ ಸಮಿತಿ ಸಂಸ್ಥಾಪಕ #ಬಿ_ಕೃಷ್ಣಪ್ಪ ನಮ್ಮ ಮಾರ್ಗದರ್ಶಕರು ಅವರು ಅವತ್ತು ಸಂಜೆ ನಮಗೆಲ್ಲ ಸಹ್ಯಾದ್ರಿ ಕಾಲೇಜು ಪಕ್ಕದ ಹಾಸ್ಟೆಲ್ ನಲ್ಲಿ ಅನ್ನ ತಿಳಿಸಾರು ಮತ್ತು ಉಪ್ಪಿನ ಕಾಯಿ ಊಟದ ವ್ಯವಸ್ಥೆ ಮಾಡಿದ್ದರು.   ಅದರ ಜವಾಬ್ದಾರಿ ಆಗಿನ ವಿದ್ಯಾರ್ಥಿ ಮುಖಂಡ #ಲೋಕೇಶ್_ಈಸೂರು ಮತ್ತು ಉಪನ್ಯಾಸಕರಾಗಿದ್ದ #ಕುಂಸಿ_ನಾಗರಾಜ್ ಅವರದ್ದಾಗಿತ್ತು.    ಅವತ್ತೇ ಅಲ್ಲಿಂದ ಆ ಬೃಹತ್ ಸಹ್ಯಾದ್ರಿ ಕಾಲೇಜ್ ಕ್ಯಾಂಪಸ್ ನೋಡಿ ರೋಮಾಂಚಿತನಾಗಿದ್ದೆ ಅಲ್ಲಿ ನಾನು ವ್ಯಾಸಂಗ ಮಾಡಲು ಸಾಧ್ಯವಾದರೆ ... ಎಂದು ಯೋಚಿಸಿದ...