#ಉಡುಪಿ_ಹೋಟೆಲ್_ಕಥೆ_ವ್ಯಥೆ
#ಸುರೇಶ್_ಕುಮಾರ್_ಎಸ್
ನಮ್ಮ ಕನ್ನಡದ ಹುಡುಗರು ಎಲ್ಲಿ? ಈ ಪ್ರಶ್ನೆ ಎಲ್ಲರನ್ನೂ ಕಾಡುತ್ತಿರಬಹುದು....
ಮಾಜಿ ಮಂತ್ರಿಗಳು ತಮ್ಮ ಪೇಸ್ ಬುಕ್ ನಲ್ಲಿ ಇವತ್ತು ಬರೆದ ಲೇಖನ ತುಂಬಾ ಪ್ರಸ್ತುತ ವಿಷಯ ಆಗಿದೆ....
ಅವರು ಈ ಬಗ್ಗೆ ಒಂದು ಚರ್ಚೆ ಹುಟ್ಟು ಹಾಕಿದ್ದಾರೆ ನಾನು 2012 ರಿಂದ ಈ ಉದ್ಯೋಗದಲ್ಲಿ ಇರುವುದರಿಂದ ಇವರ ಪೋಸ್ಟ್ ಗೆ ಬಂದ ಎಲ್ಲಾ ಪ್ರತಿಕ್ರಿಯೆ ನೋಡಿದೆ.
#ಮಾಜಿ_ಸಚಿವರ_ಪೋಸ್ಟ್...
ಶಿರಸಿ ಗೆ ಕಾರ್ಯನಿಮಿತ್ತ ಗೆಳೆಯರೊಂದಿಗೆ ಹೋಗುತ್ತಿದ್ದಾಗ ಇಂದು ಬೆಳಗ್ಗೆ ನನ್ನಲ್ಲಿ ಪ್ರಶ್ನೆ ಮೂಡಿಸಿದ ಅನುಭವ.
ಸಿರಾ ದಾಟಿದ ನಂತರ, ಕಾಫಿ ಕುಡಿಯಲು ಒಂದು ದಕ್ಷಿಣ ಭಾರತೀಯ ಸಸ್ಯಾಹಾರಿ ಆಹಾರಕ್ಕೆ ಹೆಸರುವಾಸಿ ಎಂದು ಘೋಷಿಸಿಕೊಂಡಿರುವ ಹೋಟೆಲ್ ಗೆ ಪ್ರವೇಶಿಸಿದೆವು.
ನಮ್ಮ ಟೇಬಲ್ ಬಳಿ ಬಂದ ಎಲ್ಲ ಸಿಬ್ಬಂದಿ, ಉತ್ತರ ಭಾರತದ ರಾಜ್ಯದವರು. ಎಲ್ಲರ ವಿವರ ಕೇಳಿದ ನಂತರ, ಯಾರಾದರೂ ಒಬ್ಬರಾದರೂ ಕನ್ನಡ ಬಲ್ಲವರನ್ನು ಕರೆತನ್ನಿ ಎಂದು ನಾನು ಕೇಳಿದಾಗ ಬಹಳ ಹೊತ್ತು ಯಾರನ್ನೂ ಕರೆತರಲಿಲ್ಲ. ಕೊನೆಗೆ ಸಿಕ್ಕ ಉತ್ತರ, ಈ ಶಿಫ್ಟ್ ನಲ್ಲಿ ಯಾರೂ ಇಲ್ಲವೆಂದು.
ಬಹುತೇಕ ಹೋಟೆಲ್ ಗಳಲ್ಲಿ ಎಲ್ಲರದೂ ಇದೇ ಅನುಭವ.
ನಮ್ಮ ಕನ್ನಡದ ಹುಡುಗರು ಎಲ್ಲಿ? ಈ ಪ್ರಶ್ನೆ ಎಲ್ಲರನ್ನೂ ಕಾಡುತ್ತಿರಬಹುದು.
ಇದಕ್ಕೆ ಬಂದ ನೂರಾರು ಪ್ರತಿಕ್ರಿಯೆಯಲ್ಲಿ #ಆಯ್ದ_ಕೆಲ_ಪ್ರತಿಕ್ರಿಯೆ ನೋಡಿ...
1.ಕನ್ನಡದ ಹುಡುಗರು ಇದ್ದರೂ ಅವರಿಗೆ ದುಡಿಮೆಯ ಹಸಿವು ಇಲ್ಲಾ... ಗುಟ್ಕಾ, ಗಾಂಜ, ಸಿಗರೇಟ್, ಕುಡಿತ ಇಂಥಾ ಮೋಜು ಮಸ್ತಿ ಗೆ ಹೋಗ್ತಾರೆ... ಇನ್ನರ್ಧ ಗತ್ತು ಬಿಲ್ಡ್ ಅಪ್ ಗೆ ರಾಜಕೀಯ ಪುಡಾರಿ ಗಳು ಆಗ್ತಾರೆ... ದುಡಿಮೆ ಬೇಕಿಲ್ಲ ಇವರಿಗೆ.
2.ನಿಮ್ಮ ಪ್ರಕಾರ ಕನ್ನಡದ ಹುಡುಗರು ಬರೆ ಟೀ ಕಾಯಿಸೋದು ಹೋಟೆಲ್ ನಲ್ಲಿ ಅಡುಗೆ ಭಟ್ರು ಕೆಲಸ ಮಾಡ್ಕೊಂಡು ಇರಬೇಕಿತ ಅವರು ಬೇರೆ ಬೇರೆ ಕೆಲಸಕ್ಕೆ ಸೇರಿಕೊಂಡಿರ ಬೇಕಿತ್ತಾ..
3.ಬಹುತೇಕ ಉತ್ತರಭಾರತದವರು, ಈಶಾನ್ಯ ರಾಜ್ಯಗಳವರೇ ಹೆಚ್ಚು.. ಕಡಿಮೆ ಸಂಬಳಕ್ಕೆ ದೀರ್ಘಕಾಲ ಕೆಲಸ ಮಾಡುತ್ತಾರೆ..
4.ಕೆಲಸಗಾರರ ಸಮಸ್ಯೆ ತುಂಬಾ ಇದೆ ,,, ಎಲ್ಲರಿಗೂ ಕುಳಿತಲ್ಲೆ ಕೆಲಸ ಮಾಡಿ ಹೆಚ್ಚು ಹಣ ಸಿಗುವಂತಾ ಕೆಲಸವೇ ಬೇಕು .. ಹಳ್ಳಿಗಳಲ್ಲಿ ಕೃಷಿ ಕೆಲಸಕ್ಕೂ ಸಮಸ್ಯೆ ಇದೆ..
5.ನಮ್ ಕನ್ನಡದ ಹುಡುಗರು ಕಡಿಮೆ ಸಂಬಳಕ್ಕೆ ಕೆಲಸ ಮಾಡೋದಿಲ್ಲ, ಮತ್ತು ಕೆಲಸದಲ್ಲಿ ಗಟ್ಟಿಯಾಗಿ ನಿಲ್ಲೋದಿಲ್ಲ,,ಉತ್ತರಭಾರತೀಯ ಯುವಕರು ಕಡಿಮೆ ಸಂಬಳಕ್ಕೆ ಬರ್ತಾರೆ ಊರಿಗೆ ಹೋಗೋದು ವರ್ಷಕ್ಕೊ ಎರಡು ವರ್ಷಕ್ಕೆ ಒಂದು ಬಾರಿ,,ಅಷ್ಟ ದಿನ ಕೆಲಸ ಬಿಟ್ಟು ಬೇರೆ ಯೋಚನೆ ಇರೋದಿಲ್ಲ,,ನಮ್ಮವರಿಗೆ ಐಟಿಬಿಟಿ ರೇಂಜ್ ಗೆ ಸಂಬಳ ಬೇಕು ಕೆಲಸ ಅಷ್ಟಕ್ಕಷ್ಟೆ ಚಿಕ್ಕಪ್ಪ ಮಗಳ ಮದುವೆ,ನಾಮಕರಣ,ಬೀಗರ ಊಟ,ಅಂತ ಸುಳ್ಳು ಕಾರಣ ಹೇಳ್ಕೊಂಡು ವಾ
ತಿಂಗಳಿಗೆ ಪೇಮೆಂಟ್ ತಗೊಂಡು ಊರಿಗೆ ಓಡ್ತಾರೆ..ಇಲ್ಲಿ ಕೆಲಸಕ್ಕೆ ಮತ್ತೊಬ್ಬರು ತಕ್ಷಣಕ್ಕೆ ಸಿಗದೆ ಮಾಲಿಕ ಕಂಗಾಲಾಗ್ತಾನೆ,,ಇದೆಲ್ಲ ಕಾರಣಕ್ಕೆ ಉತ್ತರದವರನ್ನು ಇಡುವ ಪರಿಸ್ಥಿತಿ ಇದೆ.
#ಉಡುಪಿ_ಹೋಟೆಲ್_ಕಥೆ_ವ್ಯಥೆ
70 ರ ದಶಕದ ತನಕ ಕರ್ನಾಟಕದ ಉಡುಪಿ ಬ್ರಾಹ್ಮಣರ ಹೋಟೆಲ್ ಎಲ್ಲಾ ಕಡೆ ಪ್ರಸಿದ್ಧಿ ಪಡೆದಿತ್ತು.
ಕರಾವಳಿಯ ಶೆಟ್ಟರು - ಪೂಜಾರರು- ರಾಮಕ್ಷತ್ರಿಯರು - ಜಿ ಎಸ್ ಬಿ ಸಮಾಜ ಹೀಗೆ ಹೋಟೆಲ್ ಉದ್ಯಮ ನಡೆಸಲು ಶಕ್ತರಾಗಿದ್ದವರೆಲ್ಲರ ಇದು ಬ್ರಾಂಡ್ ನೇಮ್ ಆಗಿತ್ತು.
ಈಗೆಲ್ಲ ಕರ್ನಾಟಕದ ಇಡ್ಲಿ-ವಡೆ - ದೋಸೆ - ಮದ್ದೂರು ವಡೆ - ಮೈಸೂರು ಫಾಕ್ ಮುಂತಾದದ್ದು ಜಗತ್ ಪ್ರಸಿದ್ಧಿ ಪಡೆದಿದೆ ಅದರೆ ಇದರ ಹಿಂದೆ ದೊಡ್ಡ ಚರಿತ್ರೆ ಇದೆ.
ಸ್ವಾತಂತ್ರ್ಯ ಪೂರ್ವದಿಂದ ಕರಾವಳಿಯವ ಕಾರ್ಮಿಕರು ಮುಂಬೈಗೆ ಹೋದರೆ ಮಾತ್ರ ತಮ್ಮ ಭವಿಷ್ಯ ಎಂಬ ಕಾಲವಾಗಿತ್ತು.
ಆಗ ಈಗಿನಂತೆ ಭರ್ ಅಂತ ಬಸ್ಸು - ರೈಲಿನಲ್ಲಿ ಮುಂಬೈನಿಂದ ಮಂಗಳೂರು ತಲುಪಲು ಸಾಧ್ಯವೇ ಇರಲಿಲ್ಲ ನೂರಾರು ನದಿಗಳು ಅದರ ಕವಲುಗಳು ಸಮುದ್ರ ಸೇರುವಲ್ಲಿ ಸಂಪಕ೯ ಸೇತುವೆಗಳೇ ನಿರ್ಮಾಣವಾಗಿರಲಿಲ್ಲ.
ಆಗೆಲ್ಲ ಒಂದೇ ಘಟ್ಟ ಪ್ರದೇಶಕ್ಕೆ ಹೋಗಿ ತೋಟದ ಕೆಲಸ ಮಾಡಬೇಕು ಅಥವ ಮುಂಬೈಗೆ ಹೋಗಿ ಹೋಟೆಲ್ ಉದ್ಯೋಗ ಮಾಡಬೇಕು ಇದರಿಂದ ಕೈ ತುಂಬಾ ಕೆಲಸ-ಜೇಬಿನ ತುಂಬಾ ಹಣ ಸಿಗುತ್ತಿತ್ತು ಈ ಸಂದರ್ಭದಲ್ಲೇ ಅಲ್ಲಿನ ಸಂಜೆ ಶಾಲೆ ಕಾಲೇಜುಗಳು ಪ್ರತಿಭಾವಂತ ಕನ್ನಡಿಗರಿಗೆ ವಿದ್ಯೆ ನೀಡಿತ್ತು.
ಈ ವಿದ್ಯಾವಂತರು ಉನ್ನತ ಹುದ್ದೆ ಪಡೆದರು, ಸ್ವಯಂ ಉದ್ಯೋಗಿಗಳಾದರು, ಕನ್ನಡ ಸಂಘಟನೆಗಳು, ಸಹಕಾರಿ ಬ್ಯಾಂಕ್ ಗಳ ಹುಟ್ಟಿಗೆ ಕಾರಣ ಆಯಿತು ಈ ಮೂಲಕ ಉದ್ಯೋಗಕ್ಕಾಗಿ ಮುಂಬೈ ಸೇರಿದ ಕನ್ನಡಿಗರ ರಕ್ಷಣೆಗೆ ಅವರ ಭವಿಷ್ಯಕ್ಕೆ ದೊಡ್ಡ ಅಡಿಪಾಯ ಹಾಕಿದರು.
ಮರಾಠಿ ಭಾಷಿಕರ ಮಧ್ಯೆ ಕನ್ನಡ ಮತ್ತು ತುಳು ಅಲ್ಲಿ ವಿಜೃಂಬಿಸಿತು, ಕನ್ನಡ - ತುಳು ನಾಟಕೋತ್ಸವ, ಯಕ್ಷಗಾನಗಳು ಅಲ್ಲಿಗೆ ಪಸರಿತು.
ಕನ್ನಡಿಗ / ತುಳು ಹೋಟೆಲ್ ಮಾಲಿಕರು ಮುಂಬೈ ಶಹರದಲ್ಲಿ ಹೋಟೆಲ್ ಉದ್ಯಮ ಮಾಡುವಾಗ ಸ್ಥಳೀಯ ಮರಾಠಿಗರು ಹೋಟೆಲ್ ವೃತ್ತಿ ಕನಿಷ್ಟ ಎಂದು ಭಾವಿಸಿ ಹೋಟೆಲ್ ಉದ್ಯೋಗದ ಕಡೆ ಬರುತ್ತಿರಲಿಲ್ಲ.
ಹೋಟೆಲ್ ನಲ್ಲಿ ಮುಸುರೆ ತೊಳೆಯುವುದು ಅಂತ ಕೀಳಾಗಿ ಮಾತಾಡುವ ಕಾಲ ಅದು ಆದ್ದರಿಂದ ಕನ್ನಡಿಗ ಹೋಟೆಲ್ ಮಾಲಿಕರು ತಮ್ಮ ಕರಾವಳಿ ಊರುಗಳಿಂದ ಯುವಕರನ್ನ ಕರೆ ತರುತ್ತಿದ್ದರು.
ಈ ರೀತಿ ಕನ್ನಡಿಗರು ಹೋಟೆಲ್ ಉದ್ಯಮದಲ್ಲಿ ಆರ್ಥಿಕ ಅಭಿವೃದ್ದಿ ಆಗಿದ್ದರಿಂದ ಸ್ಥಳೀಯ ಮರಾಠಿಗರಲ್ಲಿ ತಮ್ಮ ಮರಾಠಿ ನೆಲದಲ್ಲಿ ಎಲ್ಲಿಂದಲೋ ಬಂದ ಕನ್ನಡಿಗರು ತಮ್ಮ ಉದ್ಯೋಗ ಕಸಿದುಕೊಂಡರೆಂಬ ವದಂತಿ ದೊಡ್ಡದಾಗಿ ಮುಂಬೈನಲ್ಲಿ ಕನ್ನಡಿಗರ ಮೇಲೆ ದೊಡ್ಡ ಪ್ರಮಾಣದಲ್ಲಿ ಮಾಡಿದ ಅಸಹನೆ ಮುಂದೆ ಹುಡುಕಿ ಹುಡುಕಿ ಕನ್ನಡಿಗರ ಮೇಲೆ ಹಲ್ಲೆ ಮಾಡುವುದು, ಹೋಟೆಲ್ ಗಳ ಪುಡಿ ಮಾಡುವ ಮಟ್ಟಕ್ಕೆ ಬೆಳೆಯಿತು.
ಈ ಬಗ್ಗೆ ಸ್ವಾತಂತ್ರ್ಯದ ನಂತರ ಬಂದ ನಮ್ಮ ಸರ್ಕಾರಗಳು ಮರಾಠಿ ನೆಲದಲ್ಲಿ ಕನ್ನಡಿಗರ ರಕ್ಷಣೆಗೆ ನಿಲ್ಲಲೇ ಇಲ್ಲ, ಭಾರತೀಯರೆಲ್ಲ ಒಂದೇ ಭಾಷಾವಾರು ರಾಜ್ಯ ರಚನೆ ಸುಗಮವಾಗಿ ಸ್ಥಳೀಯ ಭಾಷೆಯಿಂದ ಆಡಳಿತ ಮಾಡಲು ಎನ್ನುವುದು ಕನ್ನಡಿಗರಿಗೆ ಅನ್ವಯಿಸಲಿಲ್ಲ.
ಬಾಳಾ ಠಾಕ್ರೆಯಂತ ಮರಾಠಿ ನಾಯಕರು ತಮ್ಮ ಭಾಷಾ ಸಂಘಟನೆಗಳನ್ನ ಹೊಟ್ಟೆ ಪಾಡಿಗೆ ಬಂದ ಕನ್ನಡಿಗರ ಮೇಲಿನ ದೌರ್ಜನ್ಯಕ್ಕೆ ತಿರುಗಿಸಿದರು.
ಸ್ಥಳೀಯ ಸರ್ಕಾರಗಳು ಸ್ಥಳೀಯರಿಗೆ ಬೆಂಬಲಿಸಿತು ಒಂದು ಹಂತದಲ್ಲಿ ಕನ್ನಡಿಗರ ಸಂಘಟನೆಗಳು ಬಹಿಷ್ಕಾರಕ್ಕೆ ಒಳಗಾಯಿತು, ಕನ್ನಡ ನಾಟಕಗಳನ್ನ ಸರ್ಕಾರ ನಿಶೇದ ಮಾಡಿತು ಇದು ಕನ್ನಡಿಗರ ನೋವು ಹತಾಷೆಗಳಿಗೆ ಕಾರಣ ಆಯಿತು.
ಇದೇ ರೀತಿ ಕನ್ನಡಿಗರ ಜೊತೆ ತಮಿಳು ಜನರೂ ಮರಾಠ ಭಾಷಾ ಜನರ ಆಕ್ರೋಷಕ್ಕೆ ಬಲಿ ಆದರು, ಆಗಲೇ ಕರಾವಳಿ ಕನ್ನಡಿಗರು ತಮ್ಮ ಸ್ವಯಂ ರಕ್ಷಣೆಗೆ ಮುಂಬೈ ಅಂಡರ್ ವರ್ಲ್ಡ್ ಗಳ ಮೊರೆ ಹೋದರು ನಂತರ ಮುಂಬೈ ಶೆಟ್ಟಿ ಗ್ಯಾಂಗ್ ಉದಯ ಆಯಿತು ಅದು ಕರಾವಳಿ ಕನ್ನಡಿಗ ಹೋಟೆಲ್ ಗಳಿಗೆ ರಕ್ಷಣೆ ನೀಡಿತು,ಮುಂದೆ ಕೊಂಕಣದ ದಾವೂದ್ ಡಿ ಗ್ಯಾಂಗ್ ಮತ್ತು ಮೊದಲಿಯಾರ್ ನಾಯಗನ್ ತನಕ ಕರಾವಳಿ ಕನ್ನಡಿಗರಿಗೆ ರಕ್ಷಣೆ ಮತ್ತು ನೈತಿಕ ಬೆಂಬಲ ಸಿಗುವಂತಾಯಿತು. ( ಈ ಗ್ಯಾಂಗ್ ಗಳು ತಮ್ಮ ದುಡಿಮೆಗೆ ವಾಮಮಾರ್ಗ ಬಳಸಿದ್ದು, ದೇಶ ವಿರೋಧಿ ಕೃತ್ಯಗಳು ಕರಾವಳಿ ಹೋಟೆಲ್ ಉದ್ಯಮಕ್ಕೆ ಸಂಬಂಧವಿಲ್ಲ)
ಇದೇ ಈಗಿನ ಕರ್ನಾಟಕದ ಹೋಟಲ್ ಉದ್ಯಮದಲ್ಲಿ ಪುನಾರಾವರ್ತನೆ ಆದ ಕಥೆ.
ಕನ್ನಡಿಗರು ಹೋಟೆಲ್ ಉದ್ಯಮ ಕನಿಷ್ಟ ಎಂಬ ಪ್ರಚಾರ ಹೆಚ್ಚು ಮಾಡುತ್ತಿದ್ದಾರೆ ಇದರಿಂದ ಸ್ಥಳೀಯರು ಈ ಉದ್ಯೋಗಕ್ಕೆ ಬರುವುದಿಲ್ಲ, ಬರುವವರನ್ನೂ ಈ ರೀತಿ ಗೇಲಿಗಳು ಬರದಂತೆ ತಡೆಯುತ್ತದೆ.
ಈಗ ಬೇರೆ ಬಾಷೆಯ ಮತ್ತು ಹೊರ ರಾಜ್ಯದ ಜನರು ಸ್ಥಳೀಯರು ಕೆಲಸ ಮಾಡದೆ ಖಾಲೀ ಬಿದ್ದ ಉದ್ಯೋಗಕ್ಕೆ ಸೇರುವುದನ್ನ ಸಹಿಸದಂತೆ ಕನ್ನಡ ಸಂಘಟನೆಗಳು ಬೀದಿಗಿಳಿದು ಹೋರಾಟ ಮಾಡುತ್ತಿದೆ ಇದನ್ನು ರಾಜಕೀಯ ಪಕ್ಷಗಳು ತಮ್ಮ ಮತ ಗಳಿಕೆಗಾಗಿ ಬೆಂಬಲಿಸುತ್ತಿದೆ.
ಇದರಿಂದ ಏನಾಯಿತು? ಎಂದರೆ ಮಹಾ ಭಾರತ ಯುದ್ಧದಲ್ಲಿ ಪಾಂಡವರ ಅಡುಗೆ ಮನೆ ನಿರ್ವಹಿಸಿದ ಉಡುಪಿ ಮಹಾರಾಜನ ಊರಿನ ಉಡುಪಿ ಬ್ರಾಂಡ್ ಉಳಿಯಲು ಸಾಧ್ಯವಿಲ್ಲವಾಗಿದೆ.
ಹೊಟೆಲ್ ಉದ್ಯಮದವರಿಗೆ ಸ್ಥಳೀಯ ಕೆಲಸಗಾರರು ಸಿಗುತ್ತಿಲ್ಲ, ಹೊಟ್ಟೆ ಪಾಡಿಗೆ ಬಂದವರನ್ನ ಅವರ ಭಾಷೆ ರಾಜ್ಯ ಕಾರಣದಿಂದ ದಮ್ಕಿ ಹಾಕುವ ಕಾರಣಗಳಿಂದ ವಿಶ್ವದಲ್ಲೇ ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಸುವ ಹೋಟೆಲ್ ಉದ್ಯಮವನ್ನು ಕನ್ನಡಿಗರೇ ಹಾಳು ಮಾಡುತ್ತಾರೇನೊ ಅನ್ನಿಸುತ್ತದೆ.
ಕನ್ನಡಿಗ ಸರ್ಕಾರಗಳು ಹೋಟೆಲ್ ಉದ್ಯಮಕ್ಕೆ ಉತ್ತೇಜನ ಪ್ರೋತ್ಸಾಹ ನೀಡುವ ಬದಲು ಅಸಹಕಾರ ನೀಡುತ್ತಿದೆ, ಗಗನಕ್ಕೆ ಏರುತ್ತಿರುವ ವಿದ್ಯುತ್ ಬಿಲ್ ಬೆಲೆ - ಗ್ಯಾಸ್ ಬೆಲೆ -ರೇಷನ್ ಬೆಲೆಗಳು - ಬಾಡಿಗೆಗಳ ಜೊತೆ ಹೊರ ರಾಜ್ಯದ ಪರ ಭಾಷಾ ಕಾರ್ಮಿಕರ ಮೇಲಿನ ನಿರ್ಬಂದಗಳು ಮುಂದಿನ ದಿನಗಳಲ್ಲಿ ಈ ಉದ್ಯಮದ ಬಾಗಿಲು ಮುಚ್ಚಸುತ್ತದೆ.
ಸೆಲ್ಟ್ ಸರ್ವಿಸ್ ಇತ್ಯಾದಿ ಹೊಸ ಅನ್ವೇಷಣೆಗಳ ನಂತರವೂ ಈ ಉದ್ಯಮ ನಷ್ಟದಲ್ಲಿದೆ, ಹೆಚ್ಚು ದಿನ ಉಳಿಯುವುದಿಲ್ಲ.
ಮುಂದಿನ ದಿನಗಳಲ್ಲಿ ಅಂತರಾಷ್ಟ್ರೀಯ ಬ್ರಾಂಡ್ ಗಳು ಈ ಉದ್ಯಮದಲ್ಲಿ ನೆಲೆ ನಿಂತು ಬೆಳೆಯುವ ಸಾಧ್ಯತೆ ಇದೆ.
ಈಗ ಭಾಷೆ ಕಾರಣದ ಜಗಳ ಹಲ್ಲೆಗಳಿಂದ ಉತ್ತರ ಭಾರತೀಯ ಹೋಟೆಲ್ ಕಾರ್ಮಿಕರು ಕರ್ನಾಟಕಕ್ಕೆ ಬರುತ್ತಿಲ್ಲ.
ಸರ್ಕಾರ ಪೋಲಿಸ್ ವ್ಯವಸ್ಥೆಗಳು ಭಾರತೀಯರೆಲ್ಲರಿಗೂ ಸಮಾನ ಅವಕಾಶ ರಕ್ಷಣೆ ಕಲ್ಪಿಸಿಕೊಡ ಬೇಕು, ಭಾಷೆ ಕಾರಣದಿಂದ ಹಲ್ಲೆ ಮಾಡುವವರ ವಿರುದ್ದ ಕ್ರಮ ಕೈಗೊಳ್ಳಲಾಗುವುದೆಂಬ ಎಚ್ಚರಿಕೆ ನೀಡಬೇಕು.
ಆಹಾರ ಉದ್ಯಮ ಉಳಿಸಿ ಬೆಳೆಸಲು ಶಾಲಾ ಕಾಲೇಜುಗಳಲ್ಲಿ ತರಬೇತಿ ನೀಡಿ ಉದ್ಯೋಗ ಅವಕಾಶದ ಅನೇಕ ಸುಧಾರಣೆ ತರಬೇಕು ಈ ಮೂಲಕ ಆಹಾರ ಉದ್ಯಮದ ಘನತೆ ಮತ್ತು ಉದ್ಯೋಗ ಖಾತ್ರಿಯ ಬಗ್ಗೆ ಮಾಹಿತಿ ನೀಡಬೇಕು.
ಇಲ್ಲವಾದರೆ .... ನಷ್ಟದಲ್ಲಿ ನಡೆಯುತ್ತಿರುವ ದೇಸಿ ಹೊಟೆಲ್ ಗಳು ಬಾಗಿಲು ಮುಚ್ಚಲಿದೆ,ವಿದೇಶಿ ಬ್ರಾಂಡ್ ಪಿಜ್ಜಾ ಬರ್ಗರ್ ಅಂಗಡಿಗಳು ದೇಸಿ ಹೋಟೆಲ್ ಜಾಗ ಅಕ್ರಮಿಸಲಿದೆ, ಪ್ರೆಶ್ ಆಗಿ ತಯಾರಾಗುತ್ತಿದ್ದ ಆರೋಗ್ಯಕರ ದಕ್ಷಿಣ ಭಾರತೀಯ ಊಟ ಉಪಹಾರ ಮಾಯವಾಗಲಿದೆ.
#hotel #restaurantjobs #udupi #desi
#pizza #burger #ssureshkumar #mumbai
Comments
Post a Comment