Skip to main content

3591 ಡಾ ಸಿರಾಜ್ ಅಹಮದ್ ಸಹ್ಯಾದ್ರಿ ಕಾಲೇಜು ಪ್ರಾಂಶುಪಾಲರು

#ಡಾಕ್ಟರ್_ಸಿರಾಜ್_ಅಹಮದ್

ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು.

ಶಿವಮೊಗ್ಗದ ಪ್ರತಿಷ್ಠಿತ ಸಹ್ಯಾದ್ರಿ ಕಾಲೇಜಿನ ಪ್ರಾಂಶುಪಾಲರು.

 ಲಂಕೇಶ್, DSS ಕೃಷ್ಣಪ್ಪ, ರಹಮತ್ ತರೀಕೆರೆ ಅಂತಹ ಅನೇಕರು ವ್ಯಾಸಂಗ ಮಾಡಿ ನಂತರ ಅಲ್ಲೇ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿದ್ದ ಕಾಲೇಜು ಶಿವಮೊಗ್ಗದ ಸಹ್ಯಾದ್ರಿ ಕಾಲೇಜು.

   ಕವಿ ನಿಸಾರ್ ಅಹಮದ್ ರು ಸಹ್ಯಾದ್ರಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ #ಜೋಗದ_ಸಿರಿ_ಬೆಳಕಿನ ಕವಿತೆ ರಚಿಸಿದ ಸ್ಥಳವಿದು.

   1984-85 ರಲ್ಲಿ ನಮ್ಮೂರ ರೈತ ಬಂದು ಗ್ರಾಮೋದ್ಯೋಗದ ನಾಲ್ಕು ಕಾರ್ಮಿಕರ ಕೊಲೆ ತನಿಖೆಗೆ ಒತ್ತಾಯಿಸಿ ನಾವು ನೂರಕ್ಕೂ ಹೆಚ್ಚು ಸೈಕಲ್ ಗಳಲ್ಲಿ ಶಿವಮೊಗ್ಗ ಜಿಲ್ಲಾದಿಕಾರಿ ಕಛೇರಿ ಎದುರು ಧರಣಿ ಮಾಡಲು ಸೈಕಲ್ ಯಾತ್ರೆ ಮಾಡಿದ್ದೆವು.

  ಆಗ ದಲಿತ ಸಂಘರ್ಷ ಸಮಿತಿ ಸಂಸ್ಥಾಪಕ #ಬಿ_ಕೃಷ್ಣಪ್ಪ ನಮ್ಮ ಮಾರ್ಗದರ್ಶಕರು ಅವರು ಅವತ್ತು ಸಂಜೆ ನಮಗೆಲ್ಲ ಸಹ್ಯಾದ್ರಿ ಕಾಲೇಜು ಪಕ್ಕದ ಹಾಸ್ಟೆಲ್ ನಲ್ಲಿ ಅನ್ನ ತಿಳಿಸಾರು ಮತ್ತು ಉಪ್ಪಿನ ಕಾಯಿ ಊಟದ ವ್ಯವಸ್ಥೆ ಮಾಡಿದ್ದರು.

  ಅದರ ಜವಾಬ್ದಾರಿ ಆಗಿನ ವಿದ್ಯಾರ್ಥಿ ಮುಖಂಡ #ಲೋಕೇಶ್_ಈಸೂರು ಮತ್ತು ಉಪನ್ಯಾಸಕರಾಗಿದ್ದ #ಕುಂಸಿ_ನಾಗರಾಜ್ ಅವರದ್ದಾಗಿತ್ತು.

   ಅವತ್ತೇ ಅಲ್ಲಿಂದ ಆ ಬೃಹತ್ ಸಹ್ಯಾದ್ರಿ ಕಾಲೇಜ್ ಕ್ಯಾಂಪಸ್ ನೋಡಿ ರೋಮಾಂಚಿತನಾಗಿದ್ದೆ ಅಲ್ಲಿ ನಾನು ವ್ಯಾಸಂಗ ಮಾಡಲು ಸಾಧ್ಯವಾದರೆ ... ಎಂದು ಯೋಚಿಸಿದ್ದೆ,
 ಆ ಕ್ಯಾಂಪಸ್ ಒಳಗೆ ಒಮ್ಮೆ ಹೋಗಿ ಬರಬೇಕು ಅನ್ನಿಸಿದ್ದು ಕೂಡ ಈವರೆಗೂ ಈಡೇರಲಿಲ್ಲ.

  ಶಿವಮೊಗ್ಗ ಜಿಲ್ಲಾ ಕೇಂದ್ರದಲ್ಲಿರುವ ಸಹ್ಯಾದ್ರಿ ಕಾಲೇಜು ರಾಜ್ಯದಲ್ಲಿನ ಅನೇಕ ಪ್ರಸಿದ್ದ ಸಾಹಿತಿಗಳ-ಪತ್ರಕರ್ತರ_ರಾಜಕಾರಣಿಗಳ_ಹೋರಾಟಗಾರರನ್ನ ಸೃಷ್ಟಿಸಿದ ನಮ್ಮ ರಾಜ್ಯದ JNU (ದೆಹಲಿ JNU ಪ್ರಸಿದ್ದಿ ಪಡೆದಂತೆ) ಇದ್ದಂತೆ, ಸಂಸದರಾದ ಅಯನೂರು ಮಂಜುನಾಥ್ ಇಲ್ಲಿನ ವಿದ್ಯಾರ್ಥಿ ನಾಯಕರಾಗಿದ್ದರು.

  ಹೀಗೇ ಸಾವಿರಾರು ಸಾದಕರು ಇಲ್ಲಿ ರೂಪುಗೊಂಡಿದ್ದಾರೆ,
1995 ರವರೆಗೆ ಸಹ್ಯಾದ್ರಿ ಕಾಲೇಜ್ ಕ್ಯಾಂಪಸ್ ಗೆ ಕಂಪೌಂಡ್ ಇರಲೇ ಇಲ್ಲ ಯಾರು ಬೇಕಾದರೂ ಅಲ್ಲಿ ಓಡಾಡುತ್ತಿದ್ದರು, ಇಡೀ ಸಹ್ಯಾದ್ರಿ ಕಾಲೇಜ್ ಕ್ಯಾಂಪಸ್ ಸುತ್ತಲೂ ಕಂಪೌಂಡ್ ನಿರ್ಮಾಣ ಆಗಿದ್ದು ಮಲೆನಾಡು ಅಭಿವೃದ್ಧಿ ಮಂಡಳಿಯಿಂದ ಇಲ್ಲಿನ ಹಳೇ ವಿದ್ಯಾರ್ಥಿನಿ ಆಗಿದ್ದ ತೀರ್ಥಹಳ್ಳಿ ಮೂಲದ ಶ್ರೀಮತಿ #ಸ್ವರ್ಣಾಪ್ರಭಾಕರ್ ಆಗ ಮಲೆನಾಡು ಅಭಿವೃದ್ಧಿ ಮಂಡಳಿ ಅದ್ಯಕ್ಷರಾಗಿದ್ದಾಗ ಮಾಡಿಸಿದ್ದು ನಾನು ಅವರಿಗೆ ಈ ಅವರ ಕೆಲಸಕ್ಕೆ ಆ ಸಂದರ್ಭದಲ್ಲಿಯೇ ವೈಯಕ್ತಿಕವಾಗಿ ಅಭಿನಂದನೆಸಲ್ಲಿಸಿದ್ದೆ.

   ಇಂತಹ ಶೈಕ್ಷಣಿಕ - ಸಾಹಿತ್ಯ - ಪತ್ರಿಕೆ - ಸಿನಿಮಾ -ರಾಜಕಾರಣ - ಜನಪರ ಹೋರಾಟಗಳ ಹಿನ್ನೆಲೆಯ ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಈಗ ಪ್ರಾಂಶುಪಾಲರಾಗಿರುವ ಡಾಕ್ಟರ್ ಸಿರಾಜ್ ಅಹಮದ್ ಅವರ ಹುಟ್ಟುಹಬ್ಬ ಇವತ್ತು ಅವರ ಜನ್ಮ ದಿನ 7- ಮೇ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನ ಬೆಳಿಗ್ಗೆ ಫೋನ್ ಮುಖಾಂತರ ತಿಳಿಸಿದೆ.


ನನ್ನ ಮತ್ತು ಡಾ. ಸಿರಾಜ್ ಅಹಮದ್ ಅವರ ಭೇಟಿ ಅನಿರಿಕ್ಷಿತವಾಗಿ ಎರೆಡು ವರ್ಷದ ಹಿಂದೆ 16 - ಮೇ-2024 ರಂದು ಆಗಿತ್ತು ಇದಕ್ಕೆ ಕಾರಣ ಸಾಮಾಜಿಕ ಜಾಲ ತಾಣ #ಪೇಸ್_ಬುಕ್ .
  
  ಸಿರಾಜ್ ಅಹಮದ್ ಮತ್ತು ನನ್ನ ಗೆಳೆತನ ಸಾಮಾಜಿಕ ಜಾಲತಾಣದಿಂದಲೇ, ನನ್ನ ಎಲ್ಲಾ ಲೇಖನ ಓದುವ ಪ್ರತಿಕ್ರಿಯಿಸಿ ಬೆನ್ನುತಟ್ಟುವ ದೊಡ್ಡತನ ಹೊಂದಿದವರು ಅವರು ಆಗ ಅವರು ಸಹ್ಯಾದ್ರಿ ಕಾಲೇಜಿನಲ್ಲಿ ಇಂಗ್ಲೀಷ್ ಉಪನ್ಯಾಸಕರಾಗಿದ್ದರು.

  ಅವರನ್ನ ಮುಖತಃ ಭೇಟಿ ಆಗಿರಲಿಲ್ಲ ಅವತ್ತು ಬುಧವಾರ ನನ್ನ ಕಛೇರಿಯಿಂದ ರಾತ್ರಿ 9ಕ್ಕೆ ಮನೆಗೆ ಹೋಗಲು ತಯಾರಾಗುತ್ತಿರುವಾಗ ಸಿರಾಜ್ ಆಹಮದರ ಪೋನ್ ಬಂತು ... ನೋಡಿದರೆ ಆಫೀಸಿನ ಬಾಗಿಲಿನಲ್ಲಿ ಹಸನ್ಮುಖರಾಗಿ ನಿಂತಿದ್ದಾರೆ, ಅವರ ಜೊತೆ ಅವರ ಪತ್ನಿ ಶ್ರೀಮತಿ ಲತಾ, ನಿವೃತ್ತ ಹೆಲ್ತ್ ಎಜುಕೇಷನ್ ಆಫೀಸರ್ ನಿಸಾರ್ ಆಹಮದ್ ಮತ್ತು ಅವರ ಪುತ್ರಿ ಹಾಗೂ ನಮ್ಮ ಊರಿನ ಶಿವಪ್ಪನಾಯಕ ಕೃಷಿ ವಿಶ್ವವಿದ್ಯಾಲಯದ ಉಪನ್ಯಾಸಕಿ ಡಾಕ್ಟರ್ ಪ್ರಿಯಾಂಕ ಬಂದಿದ್ದರು.

   ಇವರೆಲ್ಲ ಆ ಬುಧವಾರ ಸಂಜೆ ಹೆಗ್ಗೋಡಿನ #ನಿನಾಸಂನಲ್ಲಿ ಒಡಲಾಳ ನಾಟಕ ನೋಡಿ ವಾಪಾಸಾಗುವಾಗ ಬಂದಿದ್ದರು
 ಇದೆಲ್ಲ ಸಾಧ್ಯವಾಗಿದ್ದು ಸಾಮಾಜಿಕ ಜಾಲತಾಣದಿಂದ ಎಂಬುದು ವಿಶೇಷ ಇದು ನನ್ನ ಅವರ ಮೊದಲ ಬೇಟಿ.

  ಎರಡನೆ ಭೇಟಿ 29- ಸೆಪ್ಟೆಂಬರ್-2024 ರಂದು ಸಾಗರ ತಾಲೂಕಿನ #ತುಮರಿಯ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ನಡೆಯುತ್ತಿರುವ ಕರ್ನಾಟಕ ಸಾಹಿತ್ಯ ಅಕಾಡೆಮಿ ಮತ್ತು ತುಮರಿ ಅಭಿವ್ಯಕ್ತಿ ಬಳಗದ ಕಾರ್ಯಕ್ರಮವಾದ ಹ ಮ ಭಟ್ಟ  ನೆನಪಿನ ಹಬ್ಬದಲ್ಲಿ ಭಾಗವಹಿಸಿ ಶಿವಮೊಗ್ಗಕ್ಕೆ ವಾಪಾಸಾಗುತ್ತಿದ್ದ ಮಾಗ೯ದಲ್ಲಿ ಇವತ್ತಿನ ನನ್ನ ಅತಿಥಿಗಳಾದ ಡಾ.ಸಿರಾಜ್ ಅಹಮದ್ ದಂಪತಿಗಳು, ಡಾ.ಸಬೀತಾ ಬನ್ನಾಡಿ ಮತ್ತು ಪ್ರಸನ್ನ ಸಾಗರ ನನ್ನ ಆಫೀಸಿಗೆ ಬಂದಿದ್ದರು.

  ಡಾಕ್ಟರ್ ಸಬೀತಾ ಬನ್ನಾಡಿ ತರೀಕೆರೆ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರಾಗಿದ್ದಾರೆ, ಇವರು ಖ್ಯಾತ ಅಂಕಣಕಾರರು -ಕವಿತೆ -ವಿಮರ್ಶೆಯಲ್ಲಿ ದೊಡ್ಡ ಹೆಸರು, ಇವರ ಅನೇಕ ಬರಹಗಳು ಪಠ್ಯವಾಗಿದೆ,ಕನ್ನಡ ಎಂ ಎ ಯಲ್ಲಿ ಮಂಗಳೂರು ವಿಶ್ವವಿದ್ಯಾಲಯದಲ್ಲಿ  ಚಿನ್ನದ ಪದಕ ಪಡೆದವರು.

   ಪ್ರಸನ್ನ ಡಿ.ಸಾಗರ ಇವರು ಶಿವಮೊಗ್ಗದ ರಂಗಾಯಣದ ಹಾಲಿ ನಿರ್ದೇಶಕರಾಗಿದ್ದಾರೆ, ಮೂಲತ ಸಾಗರದವರೇ ಆದ ಪ್ರಸನ್ನ ಸಾಗರದ ಎಲ್ ಬಿ ಕಾಲೇಜಿನಲ್ಲಿ ಪದವಿ ಪಡೆದವರು, ಹೆಗ್ಗೋಡಿನ ನೀನಾಸಂನಲ್ಲಿ ರಂಗಕಲೆಯಲ್ಲಿ ಡಿಪ್ಲೋಮೋ ಮಾಡಿದ್ದಾರೆ, ದೆಹಲಿಯ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮ NSDಯಲ್ಲಿ  ಪದವಿ  ಪಡೆದಿದ್ದಾರೆ (ಇವರ ಪತ್ನಿ ಖ್ಯಾತ ಅಭಿನೇತ್ರಿ ಅಕ್ಷತಾ ಪಾಂಡವಪುರ) ಇವರಿಬ್ಬರ ಪರಿಚಯ ಡಾ. ಸಿರಾಜ್ ಅಹಮದ್ ರಿಂದ ಆಯಿತು


#ಡಾ_ಸಿರಾಜ್_ಆಹಮದ್_ಪರಿಚಯ_ಮತ್ತು_ಸಾದನೆಗಳು

   ಅವರ ಹುಟ್ಟೂರು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ #ರಾಮಜೋಗಿಹಳ್ಳಿ ಅಲ್ಲಿ ಅವರ ತಂದೆ ಎಂ. #ಸತ್ತಾರ್_ಸಾಬ್ ಹೈಸ್ಕೂಲ್ ಶಿಕ್ಷಕರಾಗಿ ಮುಖ್ಯೋಪಾಧ್ಯಾಯರಾಗಿ ಮುವತ್ತು ವರ್ಷ ಸೇವೆ ಸಲ್ಲಿಸಿದ್ದಾರೆ ಇವರ ತಂದೆ ಸ್ವಂತ  ಊರು ಚಿತ್ರದುರ್ಗ ಜಿಲ್ಲೆಯ ಜೋಡಿಚಿಕ್ಕೇನಳ್ಳಿ .

   ಇವರ ತಾಯಿ ಶ್ರೀಮತಿ ಇಕ್ಬಾಲ್ ಉನ್ನೀಸ ಇವರ ಕುಟುಂಬ ಚಿತ್ರದುರ್ಗದಲ್ಲಿ ಈಗ ನೆಲೆಸಿದ್ದಾರೆ, ಇವರ ಸಹೋದರ ನಿಸಾರ್ ಅಹಮದ್ ಹಂಪೆ ಕಮಲಾಪುರದಲ್ಲಿ ಇಂಗ್ಲೀಷ್ ಉಪನ್ಯಾಸಕರಾಗಿದ್ದಾರೆ, ಇವರ ಪತ್ನಿ ಶ್ರೀಮತಿ ಲತಾ ಶಿವಮೊಗ್ಗದವರು.
 
  ಡಾಕ್ಟರ್ ಸಿರಾಜ್ ಅಹಮದ್ ರಾಮಜೋಗಿಹಳ್ಳಿ, ಚಿತ್ರದುರ್ಗ ಮತ್ತು ಮೈಸೂರಿನಲ್ಲಿ ವ್ಯಾಸಂಗ ಮಾಡಿ ಸಂಶೋದನೆಗಾಗಿ ಕುವೆಂಪು ವಿಶ್ವವಿದ್ಯಾಲಯಕ್ಕೆ ಬಂದವರು ಇಲ್ಲೇ ಉದ್ಯೋಗಿ ಆಗಿ ಸೇರಲ್ಪಟ್ಟಿದ್ದಾರೆ.

    ಎಸ್. ಸಿರಾಜ್ ಅಹ್ಮದ್ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಬರೆಯುವ ದ್ವಿಭಾಷಾ ವಿಮರ್ಶಕ ಮತ್ತು ಅನುವಾದಕರಾಗಿದ್ದಾರೆ,ಕನ್ನಡ ಸಾಹಿತ್ಯದಲ್ಲಿ ಸಾಹಿತ್ಯ ವಿಮರ್ಶಕರಾಗಿ ಪ್ರಸಿದ್ಧರಾಗಿದ್ದಾರೆ, ಕನ್ನಡ ಸಾಹಿತ್ಯ, ಸಂಸ್ಕೃತಿ ಮತ್ತು ರಾಜಕೀಯದ ಕುರಿತು ಹಲವಾರು ಪ್ರಬಂಧಗಳನ್ನು ಪ್ರಕಟಿಸಿದ್ದಾರೆ.

   ಅವರು ಕರ್ನಾಟಕದ ಕುವೆಂಪು ವಿಶ್ವವಿದ್ಯಾಲಯದ ಸಹ್ಯಾದ್ರಿ ಕಲಾ ಕಾಲೇಜಿನ ಇಂಗ್ಲಿಷ್‌ನಲ್ಲಿ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ವಿಭಾಗದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿ ಈಗ ಪ್ರಾಂಶುಪಾಲರಾಗಿದ್ದಾರೆ.

   ಅವರು ಕರ್ನಾಟಕ ಸರ್ಕಾರದ ಕುವೆಂಪು ಭಾಷಾ ಭಾರತಿ ಪ್ರಾಧಿಕಾರಕ್ಕಾಗಿ ಮರಾಠಿ, ಗುಜರಾತಿ, ತೆಲುಗು ಮತ್ತು ಕೊಂಕಣಿ ಭಾಷೆಗಳಿಂದ ಅನುವಾದಗಳ ಸರಣಿಯನ್ನು ಸಂಪಾದಿಸಿದ್ದಾರೆ, ಜೊತೆಗೆ ಸಂತ ಕನಕದಾಸರ ಕೃತಿಗಳನ್ನು ಎಲ್ಲಾ ಭಾರತೀಯ ಭಾಷೆಗಳಿಗೆ ಭಾಷಾಂತರಿಸುವ ಯೋಜನೆಯ ಸಂಪಾದಕರಲ್ಲಿ ಒಬ್ಬರಾಗಿ ಕೆಲಸ ಮಾಡಿದ್ದಾರೆ. 

   ಅವರು ಕನ್ನಡದಲ್ಲಿ ದಾಮೋದರ್ ಮಾವ್ಜೋ ಅವರ ಆಯ್ದ ಬರಹಗಳ ಬಗ್ಗೆ ಮತ್ತು ಇಂಗ್ಲಿಷ್ ಮತ್ತು ಕನ್ನಡ ಎರಡರಲ್ಲೂ ಬಹುಭಾಷಾ ಮತ್ತು ಅನುವಾದದ ಬಗ್ಗೆ ಒಂದು ಪುಸ್ತಕವನ್ನು ಪ್ರಕಟಿಸಿದ್ದಾರೆ. ಅವರು ಪ್ರಸ್ತುತ ಕನ್ನಡದಲ್ಲಿ ದ್ವೈಮಾಸಿಕ ಜರ್ನಲ್ ಬಹುವಚನದ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ, ಇದು ವಿಮರ್ಶೆಗೆ ಮಾತ್ರ ಮೀಸಲಾಗಿರುತ್ತದೆ,ಇದು ಕನ್ನಡದಲ್ಲಿ ಇತ್ತೀಚಿನ ಪ್ರಕಟಣೆಗಳ ಕುರಿತು ವಿಮರ್ಶಾತ್ಮಕ ಪ್ರಬಂಧಗಳನ್ನು ಪ್ರಕಟಿಸುತ್ತದೆ.

  ಅವರು ಕಳೆದ 15 ವರ್ಷಗಳಿಗೂ ಹೆಚ್ಚು ಕಾಲದಿಂದ ಸಹ್ಯಾದ್ರಿ ಕಲಾ ಕಾಲೇಜಿನ ಇಂಗ್ಲಿಷ್ ವಿಭಾಗದಲ್ಲಿ ಪ್ರಮುಖ ವ್ಯಕ್ತಿಯಾಗಿ ಕಾರ್ಯನಿರ್ವಹಿಸಿದ್ದಾರೆ, 2010ರ ವೇಳೆಗಾಗಲೇ ಅವರು ಹಿರಿಯ ಅಧ್ಯಾಪಕರಾಗಿ ಗುರುತಿಸಿಕೊಂಡಿದ್ದರು.

​ 2026ರ ವೇಳೆಗೆ ಅವರು ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ,ಅವರು ಕನ್ನಡದ ಖ್ಯಾತ ಸಾಹಿತಿ ಪೂರ್ಣಚಂದ್ರ ತೇಜಸ್ವಿ ಅವರ ಸಾಹಿತ್ಯದ ಬಗ್ಗೆ ಆಳವಾದ ಅಧ್ಯಯನ ನಡೆಸಿದವರು,ತೇಜಸ್ವಿಯವರ ನೆಲೆ ಹಾಗೂ ಮಲೆನಾಡಿನ ಸಂಸ್ಕೃತಿಯೊಂದಿಗೆ ಅವರು ನಿಕಟ ಸಂಬಂಧ ಹೊಂದಿದ್ದಾರೆ.

   ಡಾ. ಎಸ್. ಸಿರಾಜ್ ಅಹಮದ್ ಅವರು ಶಿವಮೊಗ್ಗದ ಸಹ್ಯಾದ್ರಿ ಕಲಾ ಕಾಲೇಜಿನ (ಕುವೆಂಪು ವಿಶ್ವವಿದ್ಯಾಲಯದ ಘಟಕ ಕಾಲೇಜು) ಪ್ರಸ್ತುತ ಪ್ರಾಂಶುಪಾಲರಾಗಿದ್ದಾರೆ. 

  ಅವರು ಈ ಭಾಗದ ಪ್ರಸಿದ್ಧ ಶಿಕ್ಷಣ ತಜ್ಞರಾಗಿದ್ದು, ಇಂಗ್ಲಿಷ್ ಸಾಹಿತ್ಯ ಮತ್ತು ಭಾಷಾಶಾಸ್ತ್ರದಲ್ಲಿ ಪರಿಣತಿ ಹೊಂದಿದ್ದಾರೆ.

  ​ಶೈಕ್ಷಣಿಕ ಮತ್ತು ವೃತ್ತಿಪರ ಹಿನ್ನೆಲೆಯಲ್ಲಿ ಪ್ರಾಂಶುಪಾಲರರಾದ ಇವರು ಸಹ್ಯಾದ್ರಿ ಕಲಾ ಕಾಲೇಜು, ಶಿವಮೊಗ್ಗದ ಇಂಗ್ಲಿಷ್ ವಿಭಾಗದ ಪ್ರಾಧ್ಯಾಪಕರು ಮತ್ತು ಸಂಯೋಜಕರು ಕೂಡ ಆಗಿ ಕಾರ್ಯನಿರ್ವಹಿಸಿದ್ದರು,
ಇವರು ಎಂ.ಎ. (M.A.) ಮತ್ತು ಪಿಎಚ್.ಡಿ. (Ph.D.) ಪದವಿಗಳನ್ನು ಪಡೆದಿದ್ದಾರೆ.
 
​   ಇಂಗ್ಲಿಷ್ ಸಾಹಿತ್ಯ, ಚೋಮ್ಸ್ಕಿ ಮತ್ತು ಉತ್ತರ-ಆಧುನಿಕತಾವಾದ ಇವರ ಆಸಕ್ತಿಯ ಕ್ಷೇತ್ರಗಳಾಗಿವೆ,
ಕುವೆಂಪು ವಿಶ್ವವಿದ್ಯಾಲಯದ ಇಂಗ್ಲಿಷ್ ಪಠ್ಯಕ್ರಮವನ್ನು ಮರುವಿನ್ಯಾಸಗೊಳಿಸುವಲ್ಲಿ ಇವರು ತೊಡಗಿಸಿಕೊಂಡಿದ್ದಾರೆ.

  ಶಿವಮೊಗ್ಗದ ಸಹ್ಯಾದ್ರಿ ಕಲಾ ಕಾಲೇಜಿನ ಪ್ರಾಂಶುಪಾಲರಾದ ಡಾ. ಸಿರಾಜ್ ಅಹಮದ್ ಅವರು ನಾಡಿನ ಖ್ಯಾತ ವಿದ್ವಾಂಸರು, ವಿಮರ್ಶಕರು ಮತ್ತು ದಕ್ಷ ಆಡಳಿತಗಾರರು. ಅವರ ಹುಟ್ಟುಹಬ್ಬದ ವಿಶೇಷತೆಯನ್ನು ಸಾಹಿತ್ಯಿಕ ಮತ್ತು ಶೈಕ್ಷಣಿಕ ದೃಷ್ಟಿಕೋನದಿಂದ ಹೀಗೆ ಗುರುತಿಸಬಹುದು:

​1. #ಸಾಹಿತ್ಯಿಕ_ದಿಗ್ಗಜ
​ಡಾ. ಸಿರಾಜ್ ಅಹಮದ್ ಅವರು ಕನ್ನಡ ಸಾಹಿತ್ಯ ಲೋಕದಲ್ಲಿ ಅದರಲ್ಲೂ ವಿಶೇಷವಾಗಿ ವಿಮರ್ಶೆ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಆಳವಾದ ಛಾಪು ಮೂಡಿಸಿದವರು. ಅವರ ಲೇಖನಗಳು ಮತ್ತು ಪುಸ್ತಕಗಳು ಕೇವಲ ಮಾಹಿತಿಯನ್ನಷ್ಟೇ ನೀಡದೆ, ಸಮಾಜವನ್ನು ನೋಡುವ ಹೊಸ ದೃಷ್ಟಿಕೋನವನ್ನು ಒದಗಿಸುತ್ತವೆ.

​2.#ಆದರ್ಶ_ಶಿಕ್ಷಕ ಮತ್ತು ಮಾರ್ಗದರ್ಶಿ
​ಪ್ರಾಂಶುಪಾಲರಾಗಿ ಅವರು ಕೇವಲ ಆಡಳಿತಕ್ಕೆ ಸೀಮಿತವಾಗದೆ, ವಿದ್ಯಾರ್ಥಿಗಳೊಂದಿಗೆ ನೇರ ಸಂಪರ್ಕ ಇಟ್ಟುಕೊಳ್ಳುವ ಅಪರೂಪದ ವ್ಯಕ್ತಿತ್ವ. "ಸಹ್ಯಾದ್ರಿ" ಎಂಬ ಐತಿಹಾಸಿಕ ಕಾಲೇಜಿನ ಘನತೆಯನ್ನು ಎತ್ತಿ ಹಿಡಿಯುವಲ್ಲಿ ಮತ್ತು ವಿದ್ಯಾರ್ಥಿಗಳಲ್ಲಿ ಸಾಹಿತ್ಯಿಕ ಅಭಿರುಚಿ ಮೂಡಿಸುವಲ್ಲಿ ಅವರ ಪಾತ್ರ ದೊಡ್ಡದಿದೆ.

​3.#ಮಲೆನಾಡಿನ_ಸಾಂಸ್ಕೃತಿಕ_ಕೊಂಡಿ
​ಕುವೆಂಪು ಅವರಂತಹ ದಿಗ್ಗಜರು ನಡೆದಾಡಿದ ಮಣ್ಣಿನಲ್ಲಿ, ಅದೇ ಪರಂಪರೆಯನ್ನು ಮುಂದುವರಿಸುತ್ತಿರುವ ಅವರು ಮಲೆನಾಡಿನ ಸಾಂಸ್ಕೃತಿಕ ಚಟುವಟಿಕೆಗಳಿಗೆ ದೊಡ್ಡ ಶಕ್ತಿಯಾಗಿದ್ದಾರೆ. ಅವರ ಜನ್ಮದಿನವು ಅವರ ಅಭಿಮಾನಿಗಳು, ವಿದ್ಯಾರ್ಥಿಗಳು ಮತ್ತು ಸಾಹಿತ್ಯಾಸಕ್ತರಿಗೆ ಒಂದು ಹಬ್ಬದಂತೆ.

​4.#ಸರಳತೆ_ಮತ್ತು_ಸೃಜನಶೀಲತೆ
​ಇಷ್ಟೊಂದು ಸಾಧನೆ ಮಾಡಿದ್ದರೂ ಅವರ ಸರಳತೆ ಎಲ್ಲರಿಗೂ ಮಾದರಿ. ಜ್ಞಾನದ ಹಸಿವಿರುವವರಿಗೆ ಅವರು ಸದಾ ಬೆನ್ನುತಟ್ಟಿ ಪ್ರೋತ್ಸಾಹಿಸುತ್ತಾರೆ. ಅವರ ಜನ್ಮದಿನದ ಅಂಗವಾಗಿ ಕಾಲೇಜಿನಲ್ಲಿ ಅಥವಾ ಸಾಹಿತ್ಯ ವಲಯದಲ್ಲಿ ಅರ್ಥಪೂರ್ಣ ಚರ್ಚೆಗಳು, ಪುಸ್ತಕ ಬಿಡುಗಡೆ ಅಥವಾ ಶೈಕ್ಷಣಿಕ ಕಾರ್ಯಕ್ರಮಗಳು ನಡೆಯುವುದು ವಾಡಿಕೆ.
​ಡಾ. ಸಿರಾಜ್ ಅಹಮದ್ ಸರ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಅವರಿಗೊಂದು ಹೃತ್ಪೂರ್ವಕ ಶುಭಾಶಯಗಳು! ಅವರ ಮಾರ್ಗದರ್ಶನ ನಮ್ಮ ನಾಡಿನ ಯುವಜನತೆಗೆ ಸದಾ ಸಿಗಲಿ ಎಂಬುದು ಆಶಯ.

  ಅವರು ಕರ್ನಾಟಕ ಸರ್ಕಾರದ ಕುವೆಂಪು ಭಾಷಾ ಭಾರತಿ ಪ್ರಾಧಿಕಾರಕ್ಕಾಗಿ ಮರಾಠಿ, ಗುಜರಾತಿ, ತೆಲುಗು ಮತ್ತು ಕೊಂಕಣಿ ಭಾಷೆಗಳಿಂದ ಅನುವಾದಗಳ ಸರಣಿಯನ್ನು ಸಂಪಾದಿಸಿದ್ದಾರೆ, ಜೊತೆಗೆ ಸಂತ ಕನಕದಾಸರ ಕೃತಿಗಳನ್ನು ಎಲ್ಲಾ ಭಾರತೀಯ ಭಾಷೆಗಳಿಗೆ ಭಾಷಾಂತರಿಸುವ ಯೋಜನೆಯ ಸಂಪಾದಕರಲ್ಲಿ ಒಬ್ಬರಾಗಿ ಕೆಲಸ ಮಾಡಿದ್ದಾರೆ. 

   ಅವರು ಕನ್ನಡದಲ್ಲಿ ದಾಮೋದರ್ ಮಾವ್ಜೋ ಅವರ ಆಯ್ದ ಬರಹಗಳ ಬಗ್ಗೆ ಮತ್ತು ಇಂಗ್ಲಿಷ್ ಮತ್ತು ಕನ್ನಡ ಎರಡರಲ್ಲೂ ಬಹುಭಾಷಾ ಮತ್ತು ಅನುವಾದದ ಬಗ್ಗೆ ಒಂದು ಪುಸ್ತಕವನ್ನು ಪ್ರಕಟಿಸಿದ್ದಾರೆ. ಅವರು ಪ್ರಸ್ತುತ ಕನ್ನಡದಲ್ಲಿ ದ್ವೈಮಾಸಿಕ ಜರ್ನಲ್ ಬಹುವಚನದ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ, ಇದು ವಿಮರ್ಶೆಗೆ ಮಾತ್ರ ಮೀಸಲಾಗಿರುತ್ತದೆ. 

   ಇದು ಕನ್ನಡದಲ್ಲಿ ಇತ್ತೀಚಿನ ಪ್ರಕಟಣೆಗಳ ಕುರಿತು ವಿಮರ್ಶಾತ್ಮಕ ಪ್ರಬಂಧಗಳನ್ನು ಪ್ರಕಟಿಸುತ್ತದೆ.

  ಅವರು ಕಳೆದ 15 ವರ್ಷಗಳಿಗೂ ಹೆಚ್ಚು ಕಾಲದಿಂದ ಸಹ್ಯಾದ್ರಿ ಕಲಾ ಕಾಲೇಜಿನ ಇಂಗ್ಲಿಷ್ ವಿಭಾಗದಲ್ಲಿ ಪ್ರಮುಖ ವ್ಯಕ್ತಿಯಾಗಿ ಕಾರ್ಯನಿರ್ವಹಿಸಿದ್ದಾರೆ, 2010ರ ವೇಳೆಗಾಗಲೇ ಅವರು ಹಿರಿಯ ಅಧ್ಯಾಪಕರಾಗಿ ಗುರುತಿಸಿಕೊಂಡಿದ್ದರು.

​   ಅವರು ಕನ್ನಡದ ಖ್ಯಾತ ಸಾಹಿತಿ ಪೂರ್ಣಚಂದ್ರ ತೇಜಸ್ವಿ ಅವರ ಸಾಹಿತ್ಯದ ಬಗ್ಗೆ ಆಳವಾದ ಅಧ್ಯಯನ ನಡೆಸಿದವರು.

 ತೇಜಸ್ವಿಯವರ ನೆಲೆ ಹಾಗೂ ಮಲೆನಾಡಿನ ಸಂಸ್ಕೃತಿಯೊಂದಿಗೆ ಅವರು ನಿಕಟ ಸಂಬಂಧ ಹೊಂದಿದ್ದಾರೆ.

  ​ಡಾ. ಎಸ್. ಸಿರಾಜ್ ಅಹಮದ್ ಅವರು ಶಿವಮೊಗ್ಗದ ಸಹ್ಯಾದ್ರಿ ಕಲಾ ಕಾಲೇಜಿನ (ಕುವೆಂಪು ವಿಶ್ವವಿದ್ಯಾಲಯದ ಘಟಕ ಕಾಲೇಜು) ಪ್ರಸ್ತುತ ಪ್ರಾಂಶುಪಾಲರಾಗಿದ್ದಾರೆ. 

  ಅವರು ಈ ಭಾಗದ ಪ್ರಸಿದ್ಧ ಶಿಕ್ಷಣ ತಜ್ಞರಾಗಿದ್ದು, ಇಂಗ್ಲಿಷ್ ಸಾಹಿತ್ಯ ಮತ್ತು ಭಾಷಾಶಾಸ್ತ್ರದಲ್ಲಿ ಪರಿಣತಿ ಹೊಂದಿದ್ದಾರೆ.

  ​ಶೈಕ್ಷಣಿಕ ಮತ್ತು ವೃತ್ತಿಪರ ಹಿನ್ನೆಲೆಯಲ್ಲಿ ಪ್ರಾಂಶುಪಾಲರರಾದ ಇವರು ಸಹ್ಯಾದ್ರಿ ಕಲಾ ಕಾಲೇಜು, ಶಿವಮೊಗ್ಗದ ಇಂಗ್ಲಿಷ್ ವಿಭಾಗದ ಪ್ರಾಧ್ಯಾಪಕರು ಮತ್ತು ಸಂಯೋಜಕರು ಕೂಡ ಆಗಿ ಕಾರ್ಯನಿರ್ವಹಿಸಿದ್ದರು.

​  ಇವರು ಎಂ.ಎ. (M.A.) ಮತ್ತು ಪಿಎಚ್.ಡಿ. (Ph.D.) ಪದವಿಗಳನ್ನು ಪಡೆದಿದ್ದಾರೆ,ಇಂಗ್ಲಿಷ್ ಸಾಹಿತ್ಯ, ಚೋಮ್ಸ್ಕಿ ಮತ್ತು ಉತ್ತರ-ಆಧುನಿಕತಾವಾದ ಇವರ ಆಸಕ್ತಿಯ ಕ್ಷೇತ್ರಗಳಾಗಿವೆ.

   ಕುವೆಂಪು ವಿಶ್ವವಿದ್ಯಾಲಯದ ಇಂಗ್ಲಿಷ್ ಪಠ್ಯಕ್ರಮವನ್ನು ಮರುವಿನ್ಯಾಸಗೊಳಿಸುವಲ್ಲಿ ಇವರು ತೊಡಗಿಸಿಕೊಂಡಿದ್ದಾರೆ.

 ಡಾ. ಎಸ್. ಸಿರಾಜ್ ಅಹಮದ್ ಅವರು ಕನ್ನಡದ ಪ್ರಮುಖ ವಿಮರ್ಶಕ, ಅನುವಾದಕ ಮತ್ತು ಸಂಶೋಧಕರಾದ ಅವರು ಶಿವಮೊಗ್ಗದ ಸಹ್ಯಾದ್ರಿ ಕಲಾ ಕಾಲೇಜಿನ ಇಂಗ್ಲಿಷ್ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದಾಗ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಸಾಹಿತ್ಯ, ಸಂಸ್ಕೃತಿ ಮತ್ತು ರಾಜಕೀಯ ಕುರಿತು ವ್ಯಾಪಕವಾಗಿ ಬರೆದಿದ್ದಾರೆ.

 ಡಾ. ಎಸ್. ಸಿರಾಜ್ ಅಹಮದ್ ಅವರ ಕುರಿತ ಪ್ರಮುಖ ಅಂಶಗಳು ಸಾಹಿತ್ಯ ಮತ್ತು ವಿಮರ್ಶೆ, ಕನ್ನಡ ಸಾಹಿತ್ಯದಲ್ಲಿ ವಿಮರ್ಶಕರಾಗಿ, ವಿಶೇಷವಾಗಿ ಸಲ್ಮಾನ್ ರಶ್ದಿ ಮತ್ತು ರೋಹಿಂಟನ್ ಮಿಸ್ತ್ರಿ ಅವರ ಕೃತಿಗಳ ಮೇಲೆ ಸಂಶೋಧನೆ ನಡೆಸಿದ್ದಾರೆ.

  ಅನುವಾದ ಮತ್ತು ಸಂಪಾದನೆ ಕುವೆಂಪು ಭಾಷಾ ಭಾರತಿ ಪ್ರಾಧಿಕಾರಕ್ಕಾಗಿ ಮರಾಠಿ, ಗುಜರಾತಿ, ತೆಲುಗು ಮತ್ತು ಕೊಂಕಣಿ ಭಾಷೆಗಳಿಂದ ಅನುವಾದಗಳನ್ನು ಸಂಪಾದಿಸಿದ್ದಾರೆ,ಸಂತ ಕನಕದಾಸರ ಕೃತಿಗಳ ಅನುವಾದ ಯೋಜನೆಯಲ್ಲಿಯೂ ಕೆಲಸ ಮಾಡಿದ್ದಾರೆ.

   ​ಪ್ರಾಂಶುಪಾಲರಾಗಿ ಡಾ. ಸಿರಾಜ್ ಅಹಮದ್ ಅವರು ಇತ್ತೀಚೆಗೆ ಕಾಲೇಜಿನ ಆಡಳಿತಾತ್ಮಕ ವಿಷಯವೊಂದರಲ್ಲಿ ಮಹತ್ವದ ಕ್ರಮ ಕೈಗೊಂಡಿದ್ದಾರೆ ಮಾರ್ಚ್ 2026 ರಲ್ಲಿ ಕಾಲೇಜಿನ ಅಸೋಸಿಯೇಟ್ ಪ್ರೊಫೆಸರ್ ಒಬ್ಬರಿಂದ ಕಿರುಕುಳಕ್ಕೊಳಗಾದ ವಿದ್ಯಾರ್ಥಿನಿಯ ದೂರಿನ ಮೇರೆಗೆ ಅವರು ತಕ್ಷಣ ಸ್ಪಂದಿಸಿದರು ದೂರು ಬಂದ 15 ನಿಮಿಷಗಳಲ್ಲೇ ಆರೋಪಿ ಅಧ್ಯಾಪಕರಿಗೆ ನೋಟಿಸ್ ನೀಡಿದರು ಆಂತರಿಕ ಸಮಿತಿಯ ತನಿಖೆಯ ನಂತರ, ಸದರಿ ಅಧ್ಯಾಪಕರು ತಪ್ಪಿತಸ್ಥರೆಂದು ಕಂಡುಬಂದ ಹಿನ್ನೆಲೆಯಲ್ಲಿ ಅವರನ್ನು ಜವಾಬ್ದಾರಿಯಿಂದ ಮುಕ್ತಗೊಳಿಸಲಾಯಿತು. 

  ನಂತರ ಡಾ. ಸಿರಾಜ್ ಅಹಮದ್ ಅವರು ವಿಶ್ವವಿದ್ಯಾಲಯದ ಕುಲಸಚಿವರಿಗೆ ಹೆಚ್ಚಿನ ಶಿಸ್ತು ಕ್ರಮಕ್ಕಾಗಿ ಶಿಫಾರಸು ಮಾಡಿದರು.

   ​ಸಾಂಸ್ಥಿಕ ಹಿನ್ನೆಲೆಯ ​ಸಹ್ಯಾದ್ರಿ ಕಲಾ ಕಾಲೇಜು ಮಲೆನಾಡು ಭಾಗದ (ಶಿವಮೊಗ್ಗ) ಅತ್ಯಂತ ಹಳೆಯ ಮತ್ತು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿದೆ.

  ಪ್ರಾಂಶುಪಾಲರಾಗಿ ಡಾ. ಅಹಮದ್ ಅವರು ಪದವಿ ಮತ್ತು ಸ್ನಾತಕೋತ್ತರ (ಇಂಗ್ಲಿಷ್, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ ಇತ್ಯಾದಿ) ವಿಭಾಗಗಳ ಮೇಲ್ವಿಚಾರಣೆಯನ್ನು ನೋಡಿಕೊಳ್ಳುತ್ತಿದ್ದಾರೆ.

   ​ಖ್ಯಾತ ಸಾಹಿತಿ H.S. ಶಿವಪ್ರಸಾದರ ಶಿಷ್ಯರಾದ ಇವರ ಎರೆಡು ಪುಸ್ತಕಗಳು ಸದ್ಯದಲ್ಲೇ ಪ್ರಕಟವಾಗಲಿದೆ.

   ಡಾ. ಸಿರಾಜ್ ಅಹಮದ್ ರಿಗೆ ಹುಟ್ಟು ಹಬ್ಬದ ಶುಭಾಶಯಗಳು ತಿಳಿಸುತ್ತಾ ಸಹ್ಯಾದ್ರಿ ಕಾಲೇಜಿನ ಇತಿಹಾಸದಂತೆ ಇವರು ಕನ್ನಡ ನಾಡಿನ ದೊಡ್ಡ ಸಾಧಕರಾಗಿ ಪ್ರಖ್ಯಾತರಾಗಲಿ ಎಂದು ಹಾರೈಸುತ್ತೇನೆ.


#SahyadriCollege #shivamogga #university 
#drsirajahmed #JNU #kuvempuuniversity 
#lankesh #NisarAhmed #rahamathtarikere 
#hsshivaprasad #Principal

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...