#ರಿಚರ್ಡ್_ಲೋಬೋ_ಮತ್ತು_ಲಿಲ್ಲಿಬಾಯಿ_ಶಿಕ್ಷಕ_ದಂಪತಿಗಳು.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರಂನ ಈ ಸರ್ಕಾರಿ ಪ್ರಾಥಮಿಕ ಶಾಲೆ.
ವಿದ್ಯಾಮಂತ್ರಿಗಳಾಗಿದ್ದ #ಎ_ಆರ್_ಬದರಿನಾರಾಯಣ್_ಅಯ್ಯಂಗಾರ್ ವ್ಯಾಸಂಗ ಮಾಡಿದ ಸರ್ಕಾರಿ ಪ್ರಾಥಮಿಕ ಶಾಲೆ.
ಈ ಶಾಲೆಯಲ್ಲಿ ದೀರ್ಘಕಾಲ ಶಿಕ್ಷಕ ವೃತ್ತಿಮಾಡಿದ್ದ ರಿಚರ್ಡ್ ಲೋಬೋ ಮಾಸ್ಟರ್ ಮತ್ತು ಅವರ ಪತ್ನಿ ಲಿಲ್ಲಿಬಾಯಿ ಟೀಚರ್ ಇವರ ಶಿಸ್ತಿನ ವೃತ್ತಿ ಜೀವನ ಆನಂದಪುರಂಗೆ ಮಾದರಿ.
ಈ ಶಾಲೆ ಆನಂದಪುರಂ ಜಾಮೀಯ ಮಸೀದಿ ಎದರು ಇದೆ, ಈ ಶಾಲೆಗೆ ಅವಶ್ಯವಿರುವ ಜಾಗ ಭೂದಾನ ನೀಡಿದವರು ರಾಮಣ್ಣ ಅಂತ ಶಾಲೆಗೆ ಭೂದಾನ ಮಾಡಿದ್ದರಿಂದ ಅವರ ಹೆಸರು ಸ್ಕೂಲ್ ರಾಮಣ್ಣ ಅಂತ ಆಯಿತು.
ಈ ಜಾಗ ಕೆಳದಿ ರಾಜ #ವೆಂಕಟಪ್ಪನಾಯಕ ಮತ್ತು ರಂಗೋಲಿ ಪ್ರವೀಣೆ #ಚಂಪಕ_ರಾಣಿಯ ದುರಂತ ಪ್ರೇಮ ಕಥೆಗೆ ತಳಕು ಹಾಕಿಕೊಂಡಿದೆ.
ರಾಣಿ ಚಂಪಕಾಳ ಈ ಮೂಲ ಮನೆ ಜಾಗವೇ ಈ ಶಾಲಾ ಜಾಗವಾಗಿದೆ.
ಆಗಿನ ಊರಿನ ಮಕ್ಕಳಿಗೆ ವಿದ್ಯೆ ದೊರೆಯಲೆಂಬ ಸದುದ್ದೇಶದಿಂದ ಶಾಲೆಯ ಜಾಗ ಮತ್ತು ಪೋಲಿಸ್ ವಸತಿ ಗೃಹ ನಿರ್ಮಿಸಿದ ಜಾಗ (ಈಗ ಇದು ಅತ್ಯಂತ ಬೆಲೆಯ ನಿವೇಶನ) ದಾನ ಮಾಡಿದ್ದರಿಂದ ಆ ಮನೆತನಕ್ಕೆ ಸ್ಕೂಲ್ ಮನೆತನ ಎಂತಲೇ ಹೆಸರು ತಲೆಮಾರಿಂದ ತಲೆಮಾರಿಗೆ ಮುಂದುವರಿದಿದೆ.
ಆನಂದಪುರಂನ ಪತ್ರಕರ್ತ ಹಾಗೂ ಉತ್ಸಾಹಿ ಸಮಾಜ ಸೇವಕರಾದ #ಬಿ_ಡಿ._ರವಿಯ ತಾಯಿಯಾದ #ಲಕ್ಷ್ಮಮ್ಮನವರ ಅಜ್ಜ #ಸ್ಕೂಲ್_ರಾಮಣ್ಣನವರೆ ಈ ಶಾಲೆಗೆ ಭೂದಾನ ನೀಡಿದವರು.
ಅವರು ನೀಡಿದ ದಾನದ ಜಾಗದಲ್ಲಿ ಬ್ರಿಟಿಶ್ ಸರ್ಕಾರ ಶಾಲೆ ನಿಮಿ೯ಸಿತು ಅಲ್ಲಿ ಅನೇಕ ಜಗದ್ಪ್ರಸಿದ್ಧರು ಓದಿದರು.
ಈ ಶಾಲೆಯಲ್ಲಿ ಅಕ್ಷರ ಕಲಿತ ಜಮೀನ್ದಾರ್ ರಾಮಕೃಷ್ಣ ಆಯ್ಯಂಗಾರರ ಎರಡನೆ ಪುತ್ರ ಬದರಿನಾರಾಯಣ ಅಯ್ಯಂಗಾರ್ ರು ಮುಂದೆ ಶಾಸಕರು, ವಿದಾನ ಪರಿಷತ್ ಸದಸ್ಯ, ಸಂಸದ ಮತ್ತು ಮಂತ್ರಿಗಳಾಗುತ್ತಾರೆ.
ಅವರು #ದೇವರಾಜ್_ಅರಸರ ಸಂಪುಟದಲ್ಲಿ ವಿದ್ಯಾ ಮಂತ್ರಿ ಆಗಿದ್ದು ಇತಿಹಾಸ.
ಈ ಶಾಲೆಗೆ ಜಾಗ ನೀಡಿದ ಸ್ಕೂಲ್ ರಾಮಣ್ಣನವರ ಕುಟುಂಬದವರಿಗೆ ಇದು ಒಂದು ಹೆಮ್ಮೆಯ ಸಾರ್ಥಕತೆ ನೀಡಿದ ವಿಚಾರವಾಗಿದೆ.
ಇಲ್ಲಿ ದೀರ್ಘ ಕಾಲ ಶಿಕ್ಷಕ ವೃತ್ತಿ ಮಾಡಿದ ನಾಲ್ಕು ಜನರು ಆನಂದಪುರಂನ ಜನ ಮಾನಸದಲ್ಲಿ ಇನ್ನೂ ಉಳಿದಿದ್ದಾರೆ, ಇದರಲ್ಲಿ ಬೆಂಗಳೂರಿನ ಮೂಲದ ಲೋಬೋ ಮಾಸ್ಟರ್ ದಂಪತಿಗಳು ಕೂಡ ಒಬ್ಬರು.
ತುಂಬಾ ಶಿಸ್ತಿನ ಜೀವನ ಅಳವಡಿಸಿಕೊಂಡಿದ್ದ ಲೋಬೋ ಮಾಸ್ಟರ್ ಸೇವಾದಳದಲ್ಲಿದ್ದವರು.
ನಿತ್ಯ ಶೇವ್ ಮಾಡಿಯೇ ಶಾಲೆಗೆ ಬರುತ್ತಿದ್ದರು ಅವರ ನಿತ್ಯ ಉಡುಪು ಕೂಡ ಬಿಳಿ ಶರ್ಟ್ ಇನ್ ಮಾಡಿದ ಕಪ್ಪು ಪ್ಯಾಂಟ್, ಲೆದರ್ ಬೆಲ್ಟ್ ಮತ್ತು ಶೂ ದರಿಸುತ್ತಿದ್ದರು.
ಇವರ ಪತ್ನಿ ಲಿಲ್ಲಿ ಬಾಯಿ ಟೀಚರ್ ಕೂಡ ಅಷ್ಟೇ ಶಿಸ್ತಿನ ಶಿಕ್ಷಕಿ ಇವರಿಬ್ಬರು ಕನ್ನಡ ಅ ಆ ಇ ಈ ಅಕ್ಷರದಿಂದ ಪ್ರಾರಂಬಿಸಿ ಒತ್ತಕ್ಷರ, ಕಾಗುಣಿತ, ಅಕ್ಷರ ದುಂಡಾಗಲು ಕಾಫಿ ಪುಸ್ತಕ, ಪದ್ಯಗಳು ಹೀಗೆ ನಾಲ್ಕನೇ ತರಗತಿ ಮುಗಿಸುವಾಗಲೇ ಒಬ್ಬ ಆದರ್ಶ ವಿದ್ಯಾರ್ಥಿಯನ್ನಾಗಿ ತಯಾರಿಸಿ ಬಿಡುತ್ತಿದ್ದ ಆದರ್ಶ ಶಿಕ್ಷಕ ದಂಪತಿಗಳು ಇವರು.
ಲೋಬೋ ಮಾಸ್ಟರ್ ಆರ್.ಎಂ.ಪಿ. ಡಾಕ್ಟರ್ ಕೂಡ ಶಾಲೆ ಅವದಿ ನಂತರ ಮನೆಗೆ ಬಂದವರಿಗೆ ಚಿಕಿತ್ಸೆಯೂ ನೀಡುತ್ತಿದ್ದರು.
ಆಗ ಲೋಬೋ ಮೇಷ್ಟರು ಅವರ ಮನೆ ಆನಂದಪುರಂನ ಮಸೀದಿ ಪಕ್ಕದ ಕೆರೆಹಿತ್ತಲಿನ #ಕಲ್ಮಕ್ಕಿಕೆಂಜಿಗಪ್ಪ ಗೌಡರ ಮನೆಯಲ್ಲಿ ಬಾಡಿಗೆಗೆ ಇದ್ದರು
ಈಗ ಇದು ಇವರ ಮಗ ಜ್ಯೋತಿಷಿ #ಕಲ್ಮಕ್ಕಿಬೂದ್ಯಪ್ಪ ಗೌಡರ ಪಾಲಿಗೆ ಬಂದಿದೆ.
ಲೋಬೋ ಮಾಸ್ಟರ್ ಮತ್ತು ಆನಂದಪುರಂನ ಪ್ರೌಡ ಶಾಲೆಯ ದೈಹಿಕ ಶಿಕ್ಷಕರಾಗಿದ್ದ ಜನಪ್ರಿಯ #ಎಸ್_ಆರ್_ಕೃಷ್ಣಪ್ಪ ಇಬ್ಬರೂ ಸೇರಿ ಇಡೀ ಆನಂದಪುರಂನಲ್ಲಿ ರಾಷ್ಟ್ರೀಯ ಹಬ್ಬದಲ್ಲಿ ನಡೆಸುತ್ತಿದ್ದ ಪ್ರಬಾತ್ ಪೇರಿಗಳ ಅಚ್ಚುಕಟ್ಟುತನ ಈವರೆಗೂ ಯಾರಿಂದಲೂ ಸಾಧ್ಯವಾಗಲಿಲ್ಲ ಎಂದೇ ಆನಂದಪುರಂ ನಿವಾಸಿಗಳು ನೆನಪು ಮಾಡುತ್ತಾರೆ.
ಲೋಬೊ ಮಾಸ್ಟರ್ ಮತ್ತು ಲಿಲ್ಲಿ ಬಾಯಿ ಟೀಚರ್ ಗೆ ಮೂವರು ಗಂಡು ಮಕ್ಕಳು ಮತ್ತು ಇಬ್ಬರು ಪುತ್ರಿಯರು.
ದೊಡ್ಡ ಮಗ #ಪ್ಯಾಟ್ರಿಕ್_ಲೋಬೋ ಸಿಂಡಿಕೇಟ್ ಬ್ಯಾಂಕ್ ಉದ್ಯೋಗ ತೊರೆದು ಕೆಲ ವರ್ಷ ಮಸ್ಕತ್ ನಲ್ಲಿ ಉದ್ಯೋಗ ಮಾಡಿ ಈಗ ಬೆಂಗಳೂರಲ್ಲಿ ನೆಲೆಸಿದ್ದಾರೆ.
ಪುತ್ರಿಯರಾದ ಜಾನ್ಸಿ ಮತ್ತು ಸಲೀನ ಕೂಡ ಶಿಕ್ಷಕ ವೃತ್ತಿಯ ಜೊತೆ ಬೆ೦ಗಳೂರಲ್ಲಿ ತಮ್ಮ ಸಂಸಾರದ ಜೊತೆ ಇದ್ದಾರೆ.
ಇನ್ನಿಬ್ಬರು ಗಂಡು ಮಕ್ಕಳು #ಜಾನ್_ಲೋಬೋ ಮತ್ತು #ಸ್ಟಾನ್ಲಿಲೋಬೋ ಕೂಡ ಬೆಂಗಳೂರಲ್ಲಿ ನೆಲೆಸಿದ್ದಾರೆ.
ನನಗೆ ಇವರಿಬ್ಬರೂ ಅಚ್ಚುಮೆಚ್ಚಿನ ಶಿಕ್ಷಕರೂ ಕೂಡ, ನಾನು ಲೋಬೋ ಮಾಸ್ಟರ್ ಮತ್ತು ಲಿಲ್ಲಿ ಬಾಯಿ ಟೀಚರ್ ರ ನೆಚ್ಚಿನ ವಿದ್ಯಾರ್ಥಿಯೂ ಆಗಿದ್ದೆ.
ಅವರು ಕಲಿಸಿದ ಕನ್ನಡ ಭಾಷೆಯ ಶಿಕ್ಷಣ ನನಗೆ ಇಂತಹ ಲೇಖನ ಬರೆಯಲು ಸ್ಪೂರ್ತಿ ಆಯಿತು, ಇವರಿಬ್ಬರೂ ಇಹ ಲೋಕ ತ್ಯಜಿಸಿದ್ದಾರೆ ಆದರೆ ಆನಂದಪುರ೦ನಲ್ಲಿ ಇವರಿಂದ ವಿದ್ಯೆ ಕಲಿತ ಎಲ್ಲರ ಹೃದಯದಲ್ಲೂ ಇವರ ವ್ಯಕ್ತಿತ್ವ ಅಚ್ಚೊತ್ತಿದೆ.
ಆನಂದಪುರಂ ವಾಸಿಗಳಿಗೆ ಮತ್ತು ಇವರ ವಿದ್ಯಾಥಿ೯ಗಳಾಗಿದ್ದವರಿಗೆ ಮರತೇ ಹೋಗಿದ್ದ ಈ ಅತ್ಯುತ್ತಮ ಶಿಕ್ಷಕ ದಂಪತಿಗಳಾದ ಲೋಬೊ ಮಾಸ್ಟರ್ ಮತ್ತು ಲಿಲ್ಲಿ ಬಾಯಿ ಟೀಚರ್ ರ ಪೋಸ್ಟ್ ಮಾಡಿದ ಈ ಅಪರೂಪದ ಫೋಟೋಗಳು ಪುನಃ ಹಳೆಯ ಕಾಲಕ್ಕೆ ಖಂಡಿತಾ ಕರೆದೊಯ್ಯುತ್ತದೆ.
#GovtSchool #RICHARDLOBO #KannadaTeacher
#Anandapuram #sagar #shivamogga #keladi
#champaka #venkatappanayaka #champakasarassu
Comments
Post a Comment