ನೀಟ್_ಪರೀಕ್ಷೆ 2026
ಪ್ರಶ್ನೆ ಪತ್ರಿಕೆಗಳ ಸೋರುವಿಕೆ ಮೂಲಕ ರಾಷ್ಟ್ರೀಯ ಅರ್ಹತಾ ಪರೀಕ್ಷೆಯ ಅನರ್ಹತೆ.
ಬದಲಾಗ ಬೇಕಾಗಿದೆ ಶಿಕ್ಷಣ ವ್ಯವಸ್ಥೆ ಎಲ್ಲರಿಗೂ ಉನ್ನತ ಶಿಕ್ಷಣ ಸುಲಭವಾಗಿ ಸಿಗುವಂತಾಗಬೇಕು.
#National_Eligibility_cum_Entrance Test NEET ನ ಪೂರ್ಣ ರೂಪವೆಂದರೆ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ ಇದನ್ನು ಸಾಮಾನ್ಯವಾಗಿ NEET (UG) ಎಂದು ಕರೆಯಲಾಗುತ್ತದೆ.
ಇದರ ಅರ್ಥ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ಪದವಿಪೂರ್ವ).
ಇದು MBBS, BDS, BAMS, BSMS, BUMS, ಮತ್ತು BHMS ಸೇರಿದಂತೆ ಪದವಿಪೂರ್ವ ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶಕ್ಕಾಗಿ ಭಾರತದಲ್ಲಿ ಪ್ರಾಥಮಿಕ, ಏಕ-ಗವಾಕ್ಷಿ (single window) ರಾಷ್ಟ್ರೀಯ ಮಟ್ಟದ ಪ್ರವೇಶ ಪರೀಕ್ಷೆಯಾಗಿದೆ ಇದನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ವಾರ್ಷಿಕವಾಗಿ ನಡೆಸುತ್ತದೆ.
ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪದ ಹಿನ್ನೆಲೆಯಲ್ಲಿ ಈ ವರ್ಷದ NEET 2026 ಮರು ಪರೀಕ್ಷೆ ನಡೆಸಲಿದ್ದಾರೆ.
ಮೇ 12, 2026 ರಂದು NTA ಘೋಷಿಸಿದಂತೆ ಹೊಸ ದಿನಾಂಕಗಳು ಮತ್ತು ಪರಿಷ್ಕೃತ ಪ್ರವೇಶ ಪತ್ರದ ವಿವರಗಳನ್ನು ಶೀಘ್ರದಲ್ಲೇ ಪ್ರಕಟಿಸುತ್ತಾರೆ.
ಸರ್ಕಾರ NEET ಪ್ರಶ್ನೆ ಪತ್ರಿಕೆ ಸೋರಿಕೆ ವಿಷಯವನ್ನು ತನಿಖೆಗಾಗಿ ಸಿಬಿಐಗೆ ಹಸ್ತಾಂತರಿಸಿದೆ.
NTA ಪ್ರಕಟಣೆಯ ಪ್ರಕಾರ 7-10 ದಿನಗಳಲ್ಲಿ ಮರು ಪರೀಕ್ಷೆಯ ವೇಳಾಪಟ್ಟಿಯನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ.
ಬಹುಶಃ ಹೊಸ ಪ್ರವೇಶ ಪತ್ರಗಳೊಂದಿಗೆ ಹೊಸ ಪರೀಕ್ಷಾ ದಿನಾಂಕದ ಕುರಿತು ನವೀಕರಣಗಳಿಗಾಗಿ ಅಭ್ಯರ್ಥಿಗಳು ನಿಯಮಿತವಾಗಿ NTA NEET #ವೆಬ್‌ಸೈಟ್ ಅನ್ನು ಪರಿಶೀಲಿಸಲು ವಿನಂತಿಸಿದೆ.
ಒಟ್ಟು22,79,743 ಅಭ್ಯರ್ಥಿಗಳು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA)ಯ ಅಧಿಕೃತ ದತ್ತಾಂಶದ ಪ್ರಕಾರ 2026 ರ ನೀಟ್ ಯುಜಿ ಪರೀಕ್ಷೆಗೆ ನೋಂದಾಯಿಸಿದ್ದರು.
ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ನಂತರದ ಪ್ರತಿಭಟನೆಗಳ ವ್ಯಾಪಕ ವರದಿಗಳ ನಡುವೆಯೂ ಮೇ - 3 - 2026 ರಂದು 22.05 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು NEET UG ಪರೀಕ್ಷೆಗೆ ಹಾಜರಾಗಿದ್ದರು.
ನೊಂದಾಯಿಸಿಕೊಂಡವರು 22,79,743 ವಿದ್ಯಾರ್ಥಿಗಳು.
ಪರೀಕ್ಷೆಗೆ ಹಾಜರಾದವರು
22,05,035 (ಅಂದಾಜು).
ಇದರಲ್ಲಿ ಮಹಿಳಾ ಅಭ್ಯರ್ಥಿಗಳು 13,32,928 ಮತ್ತು
ಪುರುಷ ಅಭ್ಯರ್ಥಿಗಳು 9,46,815.
NTA ಪರೀಕ್ಷಾ ಶುಲ್ಕಗಳ ಮೂಲಕ ಸುಮಾರು ₹1,000 ಕೋಟಿಗೂ ಹೆಚ್ಚು ಆದಾಯವನ್ನು ಪಡೆಯುತ್ತದೆ, ಅದರಲ್ಲಿ ಹೆಚ್ಚಿನ ಭಾಗವನ್ನು ಪರೀಕ್ಷಾ ಕೇಂದ್ರಗಳ ನಿರ್ವಹಣೆ ಮತ್ತು ಇತರ ಕಾರ್ಯಾಚರಣೆಯ ವೆಚ್ಚಗಳಿಗೆ ಬಳಸಲಾಗುತ್ತದೆ.
2026 ರ NEET UG ಪರೀಕ್ಷೆಗಾಗಿ ಅಧಿಕೃತ ನೋಂದಣಿ ಶುಲ್ಕ ರೂ 1,000 ರಿಂದ ರೂ 9,500 ವರೆಗೆ ಇತ್ತು.
ಭಾರತದಲ್ಲಿ ಸಾಮಾನ್ಯವರ್ಗದ ಅಭ್ಯರ್ಥಿಗಳು ರೂ 1,700, ಇಡಬ್ಲ್ಯೂಎಸ್/ಒಬಿಸಿ-ಎನ್‌ಸಿಎಲ್ ರೂ 1,600, ಮತ್ತು ಎಸ್‌ಸಿ/ಎಸ್‌ಟಿ/ಪಿಡಬ್ಲ್ಯೂಡಿ/ಟ್ರಾನ್ಸ್‌ಜೆಂಡರ್ ರೂ 1,000 ಪಾವತಿಸ ಬೇಕು.
ವಿದೇಶಿ ಪ್ರಜೆ ಅಭ್ಯರ್ಥಿಗಳು ರೂ 9,500 ಪಾವತಿಸಬೇಕು, ಹೆಚ್ಚುವರಿ ಬ್ಯಾಂಕ್ ಶುಲ್ಕಗಳು, ಅಧ್ಯಯನ ಸಾಮಗ್ರಿಗಳು ಮತ್ತು ಕೇಂದ್ರಗಳಿಗೆ ಪ್ರಯಾಣದ ಕಾರಣದಿಂದಾಗಿ ಒಟ್ಟು ಪರೀಕ್ಷೆಗೆ ಸಂಬಂಧಿಸಿದ ವೆಚ್ಚಗಳು ಹೆಚ್ಚಾಗಬಹುದು.
NEET ಪರೀಕ್ಷೆ ತರಬೇತಿ ನೀಡಲು ಖಾಸಾಗಿ ಸಂಸ್ಥೆಗಳು ವಿದ್ಯಾರ್ಥಿಗಳಿಂದ 50 ಸಾವಿರದಿಂದ ಕೆಲ ಲಕ್ಷಗಳಗವರೆಗೆ ಶುಲ್ಕ ವಸೂಲಿ ಮಾಡುತ್ತದೆ.
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಿಂದ 22 ಲಕ್ಷದ 79 ಸಾವಿರದ 743 ಜನ ಹೊಸದಾಗಿ ನೀಟ್ ಪರೀಕ್ಷೆ ಬರೆಯಬೇಕಾಗಿದೆ ಮತ್ತು ಈ ಪ್ರಶ್ನೆ ಪತ್ರಿಕೆ ಸೋರಿಕೆ ಪರೀಕ್ಷೆಯ ವಿಶ್ವಾಸಾರ್ಹತೆ ಕೂಡ ಪ್ರಶ್ನಿಸುವಂತಾಗಿದೆ.
#NEET #exam #NTA #question #paper #enterance #test #National
Comments
Post a Comment