Skip to main content

Posts

Showing posts with the label Hornets are dangerous than honeybee bites

Blog number 1757. ಜೇನಿಗಿಂತ ಬಿನ್ನ ಕಣಜಗಳು... ಕಣಜ ಕಡಿದರೆ!?....

#ಕಣಜ_ಕಡಿದರೆ... #ಬದುಕಿಗಾಗಿ_ಸುರಕ್ಷಿತ_ವಲಯ_ಹುಡುಕಾಟ. #ಕಣಜ_ಮತ್ತು_ಜೇನು_ಬಿನ್ನ_ಜೀವನ. https://youtube.com/shorts/SRunjs8O59A?feature=shared   ನಮ್ಮ ಸಂಸ್ಥೆಯ ವಿದ್ಯುತ್ ಟ್ರಾನ್ಸ್ ಪರ್ ಡಬ್ಬಿಯಿಂದ ಬರುವ ವಿದ್ಯುತ್ ಸಂಪರ್ಕ ಪ್ರತ್ಯೇಕ ವಿದ್ಯುತ್ ಕಂಬದಲ್ಲಿ ಅಳವಡಿಸಿರುವ ವಿದ್ಯುತ್ ಪ್ಯೂಸ್ ಗಳ ಬಾಕ್ಸ್ ನಿಂದ ಅಂಡರ್ ಗ್ರೌಂಡ್ ಕೇಬಲ್ ಮೂಲಕ ಭೂಮಿ ಒಳಗಿಂದ ನಮ್ಮ ಎಲೆಕ್ಟ್ರಿಕಲ್ ರೂಮಿಗೆ ಹೋಗಿದೆ.    ನಿನ್ನೆ ಬೆಳಿಗ್ಗೆ ಸಿಂಗಲ್ ಪ್ಯೂಸ್ ಸಂಪರ್ಕ ಆಗಿದ್ದರಿಂದ ಈ ಬಾಕ್ಸ್ ಬಾಗಿಲು ತೆರೆದು ಅಲ್ಲಿರುವ ಪ್ಯೂಸ್ ಗಳನ್ನು ಪರೀಕ್ಷಿಸಲು ನನ್ನ ಮಗ ಕೈ ಹಾಕಿದಾಗಲೇ ಅಲ್ಲಿ ಗೂಡು ಮಾಡಿಕೊಂಡಿದ್ದ ಕಣಜ ಒಂದು ಅವನ ಬಲ ಮುಂಗೈಗೆ ಕಡಿದಿದೆ ಉಳಿದ ಕಣಜಗಳು ಅಕ್ರಮಣ ಮಾಡುವ ಮೊದಲೇ ಅವನು ದೂರ ಬಂದಿದ್ದಾನೆ.    ಜೇನುಗಳು ಕಡಿದರೆ ಜೇನು ತನ್ನ ಕೊಂಡಿ ಕಳೆದುಕೊಂಡು ಸಾಯುತ್ತದೆ ಆದರೆ ಕಣಜದ ಕೊಂಡಿ ಕಳಚುವುದಿಲ್ಲ ಮತ್ತು ಅದು ಸಾಯುವುದಿಲ್ಲ.   ನಂತರ ನೋಡಿದರೆ ಈ ಬಾಕ್ಸಿನಲ್ಲಿ 5-6 ಕಣಜದ ಗೂಡುಗಳಿದೆ !!.. ಅದನ್ನು ಅಲ್ಲಿಂದ ನಿವಾರಿಸಲೇ ಬೇಕು ಯಾಕೆಂದರೆ ಫ್ಯೂಸ್ ಬಾಕ್ಸ್ ವಿದ್ಯುತ್ ಸಮಸ್ಯೆ ಆದಾಗ ದುರಸ್ತಿಗಾಗಿ ಕೈ ಆಡಿಸಲೇ ಬೇಕು.   ಈ ವಿದ್ಯುತ್ ಬಾಕ್ಸ್ ನ ಒಳಗೆ ಒಂದೇ ಕಣಜದ ಗೂಡಿದ್ದರೆ ಪ್ಲಾಸ್ಟಿಕ್ ಕವರ್ ನಿಂದ ಗೂಡು ಮುಚ್ಚಿ ನಂತರ ಗೂಡು ಕಿತ್ತು ದೂರ ಎಸೆಯುವ...