Skip to main content

Posts

Showing posts from August, 2018

# ವಿಪತ್ತುಗಳು ಉಂಟಾದಾಗ ಅವರಿಗೆ ಪರಿಹಾರ ನೀಡುವುದಾಗಿ ನಿಧಿ ಸಂಗ್ರಹಿಸಿ ಪರಿಹಾರ ನೀಡದೇ ಇರುವುದು ಎಷ್ಟು ಸರಿ ?#

#ಹೀಗೂ ಉಂಟೆ# ಶಿವಮೊಗ್ಗ ಜಿಲ್ಲೆಯ ರಾಮ ಚಂದ್ರ ಮಠದ ಸ್ವಾಮಿಗಳು ಈ ಹಿಂದಿನ ಉತ್ತರ ಕನಾ೯ಟಕದ ನೆರೆ ಪರಿಹಾರಕ್ಕೆ 5000 ಮನೆ ಕಟ್ಟಿಸುವ ಭರವಸೆ ನೀಡಿ ಮನೆ ಕಟ್ಟೆಸಿಲ್ಲ ಹಾಗಾಗಿ ಈ ಬಾರಿ ಸದರಿ ಮಠದವರಿಗೆ ನೆರೆ ಪರಿಹಾರದ ದೇಣಿಗೆ ನೀಡಬಾರದಾಗಿ ಹವ್ಯಕ ಸಮಾಜದ ಗಣಪತಿ ಭಟ್ಟ ಜಿಗಳೆಮನೆ ಎಂಬ ಹಿರಿಯ RSS ಪ್ರಮುಖರು ಪೇಸ್ ಬುಕ್ ನಲ್ಲಿ ಹಾಕಿರುವ ಮನವಿ ಲಗತ್ತಿಸಿದೆ.   *ಇದಕ್ಕೆ ಮಾನ್ಯ ಮಠದವರು ಪ್ರತಿಕ್ರಿಯೆ ನೀಡಬೇಕು ಇದರ ಸತ್ಯಾ೦ಶ ಎಷ್ಟು?   * ಪತ್ರಕತ೯ರು ಈ ಅಪಾದನೆಯ ಬಗ್ಗೆ ವಿಚಾರಿಸಿ ಅಸಲಿಯತ್ತು ಪ್ರಕಟಿಸಬೇಕು.   * ಈಗಲೂ ಪ್ರಚಾರಕ್ಕಾಗಿ ಸುಳ್ಳು ಅಶ್ವಾಸನೆ ನೀಡುವವರ ಬಗ್ಗೆ ಎಚ್ಚರ ವಹಿಸುವುದು ಸೂಕ್ತ.

#ಗೋಕಣ೯ ದಶಕದ ಹೋರಾಟ#

‘ಸಮಾಚಾರ ಪತ್ರಿಕೆಯ ಕೃಪೆಯಿಂದ. ಇದು ದಶಕದ ಹೋರಾಟ’: ರಾಘವೇಶ್ವರ ಸ್ವಾಮಿಯಿಂದ ಗೋಕರ್ಣ ಕೈತಪ್ಪಿದ್ದು ಹೇಗೆ? COVER STORY ‘ಇದು ದಶಕದ ಹೋರಾಟ’: ರಾಘವೇಶ್ವರ ಸ್ವಾಮಿಯಿಂದ ಗೋಕರ್ಣ ಕೈತಪ್ಪಿದ್ದು ಹೇಗೆ? ದಶಕದ ಹೋರಾಟ ಫಲ ನೀಡಿದ್ದು ಜಿಲ್ಲಾಧಿಕಾರಿ ಒಳಗೊಂಡ ಸಮಿತಿಯ ಕೈಗೆ ಗೋಕರ್ಣ ದೇವಸ್ಥಾನದ ಚುಕ್ಕಾಣಿಯನ್ನು ನೀಡಬೇಕು ಎಂದು ಕರ್ನಾಟಕ ಹೈಕೋರ್ಟ್‌ ಆದೇಶ ನೀಡಿದೆ. ಇಷ್ಟಕ್ಕೂ ಹೋರಾಟ ಹಾದಿ ಹೇಗಿತ್ತು? .. ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಇತಿಹಾಸ ಪ್ರಸಿದ್ಧ 'ಶ್ರೀ ಕ್ಷೇತ್ರ ಗೋಕರ್ಣ ಮಹಾಬಲೇಶ್ವರ ದೇವಸ್ಥಾನದ ಆಡಳಿತ ರಾಘವೇಶ್ವರ ಸ್ವಾಮಿ ಪೀಠಾಧಿಪತಿಯಾಗಿರುವ ಶಿವಮೊಗ್ಗ ಜಿಲ್ಲೆಯ ಹೊಸನಗರದ ರಾಮಚಂದ್ರಾಪುರ ಮಠದ ಕೈಗೆ ಬಂದಿತ್ತು. ಇದೀಗ 10 ವರ್ಷ ತುಂಬಲು ಎರಡು ದಿನಗಳಿರುವಾಗ ಮತ್ತೆ ದೇವಸ್ಥಾನದ ಆಡಳಿತ ಸಾರ್ವಜನಿಕರ ಕೈಗೆ ವಾಪಸ್‌ ಬಂದಿದೆ. ಹಸ್ತಾಂತರ ವಿವಾದ ಸದರಿ ಗೋಕರ್ಣದ ಮಹಾಬಲೇಶ್ವರ ದೇವಾಲಯದ ಆಡಳಿತವನ್ನು, 'ಶ್ರೀ ಕ್ಷೇತ್ರ ಗೋಕರ್ಣ ಮಹಾಬಲೇಶ್ವರ ಉಪಾಧಿವಂತ ಮಂಡಳಿ' ನಡೆಸಿಕೊಂಡು ಬರುತ್ತಿತ್ತು. ಈ ಮಂಡಳಿ ‘ಬಾಂಬೆ ಪಬ್ಲಿಕ್ ಟ್ರಸ್ಟ್‌ ಆಕ್ಟ್‌’ ಅಡಿಯಲ್ಲಿ ನೋಂದಾವಣೆಯಾಗಿತ್ತು. ಆದರೆ ಈ ಟ್ರಸ್ಟಿನಲ್ಲಿದ್ದ ಐವರಲ್ಲಿ ನಾಲ್ವರು ಕಾಲಾನಂತರ ತೀರಿಕೊಂಡರು. ಕೊನೆಗೆ ಪರಂಪರಾಗತವಾಗಿ ದೇವಾಲಯದ ಆಡಳಿತ ನೋಡಿಕೊಂಡು ಬಂದ ಶ್ರೀ ವಿ.ಡಿ ದೀಕ್ಷಿತರು ಮಾತ್ರ ಉಳಿದುಕೊಂಡಿದ್ದರು. ಮುಂದೆ 2004ರಲ್ಲಿ ದೀಕ್ಷಿತರು ತೀರ

#ತಾಳೆ ಮತ್ತು ತೆಂಗಿನ ಮರದ ನೀರಾದಿಂದ ವಾಲೆ ಬೆಲ್ಲ#

#ವಾಲೆ ಬೆಲ್ಲ ಉಪು೯ ನೀರಾ ಬೆಲ್ಲ#   ಕಬ್ಬಿನಿಂದ ತಯಾರಿಸಿದ ಬೆಲ್ಲ ಹಾಗೂ ಸಕ್ಕರೆ ಎಲ್ಲರಿಗೂ ಪರಿಚಿತ ಆದರೆ ತಾಳೆಮರದ ಹಾಗೂ ತೆಂಗಿನ ಮರದಿಂದ ಇಳಿಸಿದ ನೀರಾ (ಕಳ್ಳು ಅಥವ ಶೇಂದಿ )ದಿಂದ ತಯಾರಿಸುವ ಬೆಲ್ಲ ಹೆಚ್ಚಿನವರಿಗೆ ಗೊತ್ತಿರಲಿಕ್ಕಿಲ್ಲ .   ಮೊದಲೆಲ್ಲ ಕರಾವಳಿಯಲ್ಲಿ ಎಲ್ಲಾ ಕಡೆ ಸಿಗುತ್ತಿತ್ತು, ಈ ಬೆಲ್ಲದ ರುಚಿಯು ವಿಶಿಷ್ಟ ಮತ್ತು ಇದನ್ನ ಗಾಲಿ ಆಕಾರದಲ್ಲಿ ಅಚ್ಚಿನಲ್ಲಿ ಹೋಯ್ದು ಅದಕ್ಕೆ ಅಂಚಿಗೆ ತಾಳೆ ಮರದ ಗರಿಯನ್ನ ಸುತ್ತುತ್ತಾರೆ, ಹತ್ತಾರು ವಾಲೆ ಬೆಲ್ಲದ ಗಾಲಿಗಳನ್ನ ದೊಡ್ಡದಾದ ತಾಳೆ ಎಲೆಯ ಕೊಟ್ಟೆಯಲ್ಲಿ ಕಟ್ಟಿರುತ್ತಾರೆ, ಇದನ್ನ ತಯಾರಿಸಿ ಪ್ಯಾಕ್ ಮಾಡುವುದು ಒಂದು ಕಲೆಯೇ ಸರಿ.   ಇದು ಶುದ್ದ ಸಾವಯವ ಬೆಲ್ಲ ಮತ್ತು ಇದನ್ನ ನೈಸಗಿ೯ಕವಾಗಿ ಪ್ಯಾಕ್ ಮಾಡಿ ಸಂರಕ್ಷಿಸುವ ಕಾಯಕ ಈಗ ಕ್ರಮೇಣ ಮಾಯವಾಗಿದೆ.   ಅನೇಕ ಬಾರಿ ಕರಾವಳಿಗೆ ಹೋದಾಗ ಇದನ್ನ ಹುಡುಕಿದರೂ ಸಿಗಲಿಲ್ಲ ಕಾರಣ ಕೇಳಿದರೆ ಈಗ ಯಾರೂ ಇದನ್ನ ಕೇಳುವುದಿಲ್ಲ ಮತ್ತು ಇದನ್ನ ತಯಾರಿಸುವವರೂ ಕಡಿಮೆ ಅಂದರು.   ಕುಂದಾಪುರದ ಸಮೀಪದ ಕೋಟೇಶ್ವರದಿಂದ ತಲಾಷ್ ಮಾಡಿ ಎರೆಡು ಕೊಟ್ಟೆ ವಾಲೆ ಬೆಲ್ಲ    ಬಂದುಗಳಾದ ಹಿರಿಯರು ಶ್ರೀ ನಾರಾಯಣ ಮೆಂಡನ್ ಉಪ್ಪಿನಕೊಟೆಯವರು ತಂದು ಕೊಟ್ಟಿದ್ದಾರೆ.   ಇದು ನೋಡಲಿಕ್ಕೆ ಇಷ್ಟು ಸುಂದರವಾಗಿದೆ ಇನ್ನು ಇದರ ರುಚಿ ?! ಹುಡುಕಿ ಖರೀದಿಸಿ ತಿಂದು ನೋಡಿ.