#ಹೀಗೂ ಉಂಟೆ#
ಶಿವಮೊಗ್ಗ ಜಿಲ್ಲೆಯ ರಾಮ ಚಂದ್ರ ಮಠದ ಸ್ವಾಮಿಗಳು ಈ ಹಿಂದಿನ ಉತ್ತರ ಕನಾ೯ಟಕದ ನೆರೆ ಪರಿಹಾರಕ್ಕೆ 5000 ಮನೆ ಕಟ್ಟಿಸುವ ಭರವಸೆ ನೀಡಿ ಮನೆ ಕಟ್ಟೆಸಿಲ್ಲ ಹಾಗಾಗಿ ಈ ಬಾರಿ ಸದರಿ ಮಠದವರಿಗೆ ನೆರೆ ಪರಿಹಾರದ ದೇಣಿಗೆ ನೀಡಬಾರದಾಗಿ ಹವ್ಯಕ ಸಮಾಜದ ಗಣಪತಿ ಭಟ್ಟ ಜಿಗಳೆಮನೆ ಎಂಬ ಹಿರಿಯ RSS ಪ್ರಮುಖರು ಪೇಸ್ ಬುಕ್ ನಲ್ಲಿ ಹಾಕಿರುವ ಮನವಿ ಲಗತ್ತಿಸಿದೆ.
*ಇದಕ್ಕೆ ಮಾನ್ಯ ಮಠದವರು ಪ್ರತಿಕ್ರಿಯೆ ನೀಡಬೇಕು ಇದರ ಸತ್ಯಾ೦ಶ ಎಷ್ಟು?
* ಪತ್ರಕತ೯ರು ಈ ಅಪಾದನೆಯ ಬಗ್ಗೆ ವಿಚಾರಿಸಿ ಅಸಲಿಯತ್ತು ಪ್ರಕಟಿಸಬೇಕು.
* ಈಗಲೂ ಪ್ರಚಾರಕ್ಕಾಗಿ ಸುಳ್ಳು ಅಶ್ವಾಸನೆ ನೀಡುವವರ ಬಗ್ಗೆ ಎಚ್ಚರ ವಹಿಸುವುದು ಸೂಕ್ತ.
# ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ# ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?. ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ. ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು. ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು. ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...
Comments
Post a Comment