Skip to main content

Posts

Showing posts with the label S.R.KRISHNAPPA PT TEACHER WAS MENTOR OF ANANDAPURAM DEVELOPMENT

ಭಾಗ - 27, ಮಾದರಿ ಆನಂದಪುರಂ ಕಟ್ಟುವಲ್ಲಿ ದೈಹಿಕ ಶಿಕ್ಷಕರಾದ S.R. ಕೃಷ್ಣಪ್ಪರ ಶ್ರಮವಿದೆ, ಇವರ ದೂರದೃಷ್ಟಿಯ ಯೋಜನೆಗಳನ್ನು ಅಯ್ಯಂಗಾರ್ ಕುಟುಂಬ ಬಳಸಿಕೊಂಡಿತು, ಇಡೀ ಆನಂದಪುರಂ ಇವರ ಹಿಂದೆ ಸಾಗಿದ್ದು ಒಂದು ಇತಿಹಾಸ.

#ಭಾಗ_27. #ಆನಂದಪುರಂ_ಮಾದರಿ_ಊರಾಗಲು_ದೈಹಿಕ_ಶಿಕ್ಷಕರಾದ_ಎಸ್_ಆರ್_ಕೃಷ್ಣಪ್ಪರ_ಸೇವೆ_ಮತ್ತು_ಸಲಹೆ_ಮರೆಯಲಾಗದ್ದು, #ಆನಂದಪುರಂಗೆ_ಬ್ಯಾಂಕ್_ಹಾಸ್ಟೆಲ್_ಅರುಣೋದಯ_ಕಲಾವೃಂದ_ರೋಟರಿಕ್ಷಬ್_ತಂದವರು #ಶಿಸ್ತಿನ_ಸೇವಾದಳದ_ಪ್ರಮುಖರು. #ಜಾತ್ಯಾತೀತರು_ದೈವ_ಭಕ್ತರು_ಮತ್ತು_ದೂರ_ದೃಷ್ಠಿಯವರು. #ಬದರಿನಾರಾಯಣ_ಅಯ್ಯಂಗಾರರು_ವೆಂಕಟಾಚಲಾಯ್ಯಂಗಾರರು_ಇಡೀ_ವಿಲೇಜ್_ಪಂಚಾಯತ್_ಇವರ_ಮಾತು_ಮೀರುತ್ತಿರಲಿಲ್ಲ.       ಶಿವಮೊಗ್ಗ ಜಿಲ್ಲೆ ಶಿಕಾರಿಪುರದ ರಾಮಪ್ಪರ ಪುತ್ರ S.R. ಕೃಷ್ಣಪ್ಪರವರು 1961ರಲ್ಲಿ ಹಾಸನ ಜಿಲ್ಲೆಯ ಚೆನ್ನರಾಯಪಟ್ಟಣದ ನುಗ್ಗೇಹಳ್ಳಿ ಪ್ರೌಡ ಶಾಲೆಯಿಂದ ವರ್ಗವಾಗಿ ಆನಂದಪುರಂನ ಜಿಲ್ಲಾ ಬೋರ್ಡ್ ಪ್ರೌಡ ಶಾಲೆಗೆ ದೈಹಿಕ ಶಿಕ್ಷಕರಾಗಿ ವರ್ಗವಾಗಿ ಬಂದವರು ಸುಮಾರು 15 ವರ್ಷ ಆನಂದಪುರಂನಲ್ಲಿ ಸಾರ್ಥಕ ಸೇವೆ ಸಲ್ಲಿಸಿ ಸ್ವಂತ ಊರಾದ ಶಿಕಾರಿಪುರಕ್ಕೆ ಹೋಗಿ ನೆಲೆಸುತ್ತಾರೆ.   ಇವರನ್ನು ಆನಂದಪುರಂನಿಂದ ಕಳಿಸಲು ಇಡೀ ಊರೇ ವಿರೋದಿಸಿತ್ತು, ಹಳಿಯ ವಿದ್ಯಾರ್ಥಿಗಳು, ಹಾಲಿ ವಿದ್ಯಾರ್ಥಿಗಳು ಅವರ ಪೋಷಕರು, ಸುತ್ತಮುತ್ತಲಿನ ಶಾಲಾ ಶಿಕ್ಷಕರು, ವಿಲೇಜ್ ಪಂಚಾಯತ್ ಅಧ್ಯಕ್ಷರು ಸದಸ್ಯರು, ಬದರಿನಾರಾಯಣ ಆಯ್ಯಂಗಾರರು ಅವರ ಅಣ್ಣ ವೆಂಕಟಚಲ ಆಯ್ಯಂಗಾರರು ಹೀಗೆ ಇಡೀ ಊರೇ ಇವರು ವರ್ಗಾಯಿಸಿಕೊಂಡು ಹೋಗಲು ಬಿಡಲಿಲ್ಲ.   ಒಂದು ಹಂತದಲ್ಲಿ ಅಯ್ಯಂಗಾರ್ ಕುಟುಂಬದವರು ಇವರು ಬಾಡಿಗೆಗೆ ಇದ್...