Skip to main content

Posts

Showing posts with the label Doctor Konanduru Lingappa

3596. ಡಾಕ್ಟರ್ ಕೋಣಂದೂರು ಲಿಂಗಪ್ಪ

#ಡಾಕ್ಟರ್_ಕೋಣಂದೂರುಲಿಂಗಪ್ಪ.  ನಾಡಿನ ಪ್ರಖ್ಯಾತ ಸಮಾಜವಾದಿ ನಾಯಕ ಶಾಂತವೇರಿ ಗೋಪಾಲಗೌಡರ ಕ್ಷೇತ್ರ ತೀರ್ಥಹಳ್ಳಿಯ ಉತ್ತರಾಧಿಕಾರಿ ಆದವರು.   ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದ 35ನೇ ಘಟಿಕೋತ್ಸವ ಇವತ್ತು ಮೇ -6ರಂದು - ಬುದವಾರ ಬೆಳಿಗ್ಗೆ 10-30ಕ್ಕೆ ಶಂಕರಘಟ್ಟದ ವಿವಿಯ #ಜ್ಞಾನಸಹ್ಯಾದ್ರಿ ಆವರಣದಲ್ಲಿ ನಡೆಯಲಿದೆ.    ಈ ಸಮಾರಂಭದಲ್ಲಿಮೂವರು ಗಣ್ಯರಿಗೆ ಗೌರವ ಡಾಕ್ಟರೇಟ್ ನೀಡಲಾಗುತ್ತದೆ ಎಂದು ಕುವೆಂಪು ವಿವಿ ಕುಲಪತಿ ಪ್ರೊ.#ಶರತ್_ಅನಂತಮೂರ್ತಿ ತಿಳಿಸಿದ್ದಾರೆ.    ಖ್ಯಾತ ಸಮಾಜವಾದಿ ನಾಯಕ ಮತ್ತು ಸ್ವಾತಂತ್ರ್ಯ ಹೋರಾಟಗಾರ #ಕೋಣಂದೂರುಲಿಂಗಪ್ಪ, ಹಿರಿಯ ರಂಗಕರ್ಮಿ ಮತ್ತು ನೀನಾಸಂ ನಿರ್ದೇಶಕ #ಕೆ_ವಿ_ಅಕ್ಷರ ಮತ್ತು ರಾಷ್ಟ್ರೀಯ ಮೌಲ್ಯ ಮಾಪನ ಮತ್ತು ಮಾನ್ಯತಾ ಮಂಡಳಿ (ನ್ಯಾಕ್) ನ ಮಾಜಿ ನಿರ್ದೇಶಕ ಪ್ರೊ. #ಹೆಚ್_ಎ_ರಂಗನಾಥ್ ಅವರಿಗೆ ಕುವೆಂಪು ವಿವಿ ಘಟಿಕೋತ್ಸವದಲ್ಲಿ ಗೌರವ ಡಾಕ್ಟ ರೇಟ್ (ಡಿ. ಲಿಟ್) ಪದವಿ ನೀಡಿ ಗೌರವಿಸಲಿದೆ ಎಂದು ಘೋಷಿಸಿದ್ದಾರೆ. #ಕೋಣಂದೂರು_ಲಿಂಗಪ್ಪ   ಶ್ರೀ ಕೋಣಂದೂರು ಲಿಂಗಪ್ಪನವರು ಹುಟ್ಟಿದ ಸ್ಥಳ ಶಿವಮೊಗ್ಗ ಜಿಲ್ಲೆಯ #ಕೋಣಂದೂರು.    ಇವರ ಶೈಕ್ಷಣಿಕ ಅರ್ಹತೆ ಬಿಎ, ಬಿಎಲ್,ವೃತ್ತಿಯಲ್ಲಿ  ವಕೀಲರು  ಸಾಮಾಜಿಕ ಮತ್ತು ಇತರ ಚಟುವಟಿಕೆಗಳಲ್ಲಿ ನಿರತರು.  ವಿವಾಹಿತರು ಒಬ್ಬಳೇ ಮಗಳು ಇಸ್ರೋದಲ್ಲಿ ವಿಜ್ಞಾನಿ ಆಗಿದ್ದಾ...