ಸರ್_ಹರ್ಬರ್ಟ್_ಹೋಪ್_ರಿಸ್ಲೆ
Sir_Herbert_Hope_Risley, (1851–1911)
ಭಾರತೀಯ_ಜನಗಣತಿ_1901
ಜಾತಿಗಳನ್ನು ವರ್ಗೀಕರಿಸಲು ಇವರು ದೈಹಿಕ ಮಾನದಂಡಗಳನ್ನು ವಿಶೇಷವಾಗಿ #ಮೂಗಿನ_ಅಳತೆ ಮತ್ತು ತಲೆಬುರುಡೆಯ ಆಕಾರ ಬಳಸಿದರು.
ಆರ್ಯ ಮತ್ತು ದ್ರಾವಿಡ ಜನಾಂಗಗಳ ಮಿಶ್ರಣವೇ ಜಾತಿ ವ್ಯವಸ್ಥೆಯ ಆಧಾರ ಎಂದು ವಾದಿಸಿದರು.
ಇದು ಆಕ್ಷೇಪಣೆಗೆ ಕಾರಣ ಆಗಿತ್ತು ಈಗಿನ ಆಧುನಿಕ ವಿಜ್ಞಾನ ಇದನ್ನು ತಪ್ಪು ಎಂದು ಇವರ ವಾದ ನಿರಾಕರಿಸಿದೆ ಇದೊಂದು ವಿಚಿತ್ರವಾದ ಜನಗಣತಿ ನಮ್ಮ ದೇಶದಲ್ಲಿ ಬ್ರಿಟೀಷ್ ಸರ್ಕಾರ ನಡೆಸಿತ್ತು ಈಗ ಯೋಚಿಸಿದರೆ ಹೀಗೂ ಉಂಟಾ ... ಅನ್ನಿಸದೇ ಇರಲಾರದು.
ಭಾರತೀಯರೆಲ್ಲ ಸರ್ ಹರ್ಬರ್ಟ್ ಹೋಪ್ ರಿಸ್ಲೆ ಅವರ 1901ರ ಜನಗಣತಿ ಬಗ್ಗೆ ತಿಳಿಯಲೇ ಬೇಕು ಅವರು ಈ ಜನಗಣತಿಯಲ್ಲಿ ಜಾತಿಗಳ ಸಾಮಾಜಿಕ ಶ್ರೇಣೀಕರಣವನ್ನು ಅಧಿಕೃತವಾಗಿ ದಾಖಲಿಸುವ ಪ್ರಕ್ರಿಯೆಯನ್ನು ಜಾರಿಗೆ ತಂದರು.
ಇದು ಅನೇಕ ವಿರೋದಕ್ಕೆ ಕಾರಣವಾಯಿತು ಆಧುನಿಕ ತಳಿಶಾಸ್ತ್ರ ವಿಜ್ಞಾನ ಇವರ ವಾದ ತಿರಸ್ಕರಿಸಿದೆ.
ಇವರು ಬ್ರಿಟಿಷ್ ಆಡಳಿತಾವಧಿಯ ಪ್ರಮುಖ ಮಾನವಶಾಸ್ತ್ರಜ್ಞ ಮತ್ತು ಭಾರತೀಯ ನಾಗರಿಕ ಸೇವೆ ಅಧಿಕಾರಿಯಾಗಿದ್ದರು.
ಭಾರತದಲ್ಲಿ ಜಾತಿ ವ್ಯವಸ್ಥೆ ಮತ್ತು ಜನಾಂಗೀಯ ವರ್ಗೀಕರಣವನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಲು ಪ್ರಯತ್ನಿಸಿದವರಲ್ಲಿ ಇವರು ಪ್ರಮುಖರು.
ರಿಸ್ಲೆ 1901 ರ ಭಾರತೀಯ ಜನಗಣತಿಯ ಆಯುಕ್ತರಾಗಿ ಕಾರ್ಯನಿರ್ವಹಿಸಿದರು.
ಈ ಜನಗಣತಿಯಲ್ಲಿ ಜಾತಿಗಳ ಸಾಮಾಜಿಕ ಶ್ರೇಣೀಕರಣವನ್ನು ಅಧಿಕೃತವಾಗಿ ದಾಖಲಿಸುವ ಪ್ರಕ್ರಿಯೆಯನ್ನು ಇವರು ಜಾರಿಗೆ ತಂದವರು.
ಜಾತಿಗಳನ್ನು ವರ್ಗೀಕರಿಸಲು ಇವರು ದೈಹಿಕ ಮಾನದಂಡಗಳನ್ನು ವಿಶೇಷವಾಗಿ ಮೂಗಿನ ಅಳತೆ ಮತ್ತು ತಲೆಬುರುಡೆಯ ಆಕಾರ ಬಳಸಿದರು.
ಆರ್ಯ ಮತ್ತು ದ್ರಾವಿಡ ಜನಾಂಗಗಳ ಮಿಶ್ರಣವೇ ಜಾತಿ ವ್ಯವಸ್ಥೆಯ ಆಧಾರ ಎಂದು ವಾದಿಸಿದರು.
ಇವರ ಪ್ರಮುಖ ಕೃತಿಗಳು...
The Tribes and Castes of Bengal (1891).
The People of India (1908).
ಹರ್ಬರ್ಟ್ ರಿಸ್ಲೆಯವರ ಪ್ರಕಾರ ಭಾರತೀಯ ಸಮಾಜವು ಮುಖ್ಯವಾಗಿ ಆರ್ಯ ಮತ್ತು ದ್ರಾವಿಡ ಎಂಬ ಎರಡು ಮೂಲ ಜನಾಂಗಗಳ ಪರಸ್ಪರ ಸಂಪರ್ಕ ಹಾಗೂ ಮಿಶ್ರಣದಿಂದ ರೂಪುಗೊಂಡಿದೆ.
#ಆರ್ಯರು:
ಉದ್ದ, ಕಿರಿದಾದ ಮತ್ತು ಚೂಪಾದ ಮೂಗು ಇವರನ್ನು ಶ್ರೇಣೀಕರಣದ ಉನ್ನತ ಸ್ಥಾನದಲ್ಲಿಟ್ಟರು.
#ದ್ರಾವಿಡರು:
ಅಗಲವಾದ ಮತ್ತು ಚಪ್ಪಟೆಯಾದ ಮೂಗು ಇವರನ್ನು ಸಮಾಜದ ಕೆಳಸ್ತರದಲ್ಲಿ ವರ್ಗೀಕರಿಸಿದರು.
#ಭಾರತದ_ಮೂಲ_ನಿವಾಸಿಗಳು_ಯಾರು?
ರಿಸ್ಲೆಯವರ ಪ್ರಕಾರ ದ್ರಾವಿಡರೇ ಭಾರತದ ಅಸಲಿ ಮೂಲ ನಿವಾಸಿಗಳು ಇವರು ಕಪ್ಪು ಮೈಬಣ್ಣ, ಗಿಡ್ಡ ನಿಲುವು ಮತ್ತು ದಪ್ಪ ಮೂಗು ಹೊಂದಿದವರು ಎಂದು ಚಿತ್ರಿಸಿದರು.
ಆರ್ಯರು ಹೊರಗಿನಿಂದ ವಾಯುವ್ಯ ಗಡಿಯಿಂದ ವಲಸೆ ಬಂದು ಭಾರತವನ್ನು ಪ್ರವೇಶಿಸಿದ ಬಿಳಿ ಮೈಬಣ್ಣದ, ಎತ್ತರದ ಜನಾಂಗ ಎಂದು ವಾದಿಸಿದರು.
ಆರ್ಯರು ಭಾರತಕ್ಕೆ ಬಂದಾಗ ಸ್ಥಳೀಯ ದ್ರಾವಿಡ ಮಹಿಳೆಯರನ್ನು ವಿವಾಹವಾದರು ಆದರೆ ತಮ್ಮ ಜನಾಂಗೀಯ 'ಶುದ್ಧತೆ'ಯನ್ನು ಕಾಪಾಡಿಕೊಳ್ಳಲು ಅವರು ದ್ರಾವಿಡ ಪುರುಷರಿಗೆ ಆರ್ಯ ಮಹಿಳೆಯರನ್ನು ಮದುವೆಯಾಗುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಿದರು.
ಈ ಅಂತರ್ಜಾತಿ ವಿವಾಹ ನಿಷೇಧ ಮತ್ತು ಜನಾಂಗೀಯ ಶುದ್ಧತೆಯ ಪ್ರಯತ್ನವೇ ಭಾರತದಲ್ಲಿ ಜಾತಿ ವ್ಯವಸ್ಥೆಯ ಜನನಕ್ಕೆ ಕಾರಣ ಎಂದು ರಿಸ್ಲೆ ಪ್ರತಿಪಾದಿಸಿದರು.
#ಇವರು_ಏಳು_ಜನಾಂಗೀಯ_ವರ್ಗೀಕರಣಗಳನ್ನ ಮಾಡಿದರು
ರಿಸ್ಲೆ ಭಾರತೀಯರನ್ನು ಆರ್ಯ-ದ್ರಾವಿಡರ ಮಿಶ್ರಣದ ಆಧಾರದ ಮೇಲೆ 7 ಗುಂಪುಗಳಾಗಿ ವಿಂಗಡಿಸಿದರು.
#ಇಂಡೋ_ಆರ್ಯನ್: ಪಂಜಾಬ್, ರಾಜಸ್ಥಾನ ಮತ್ತು ಕಾಶ್ಮೀರದ ಜನ (ಕನಿಷ್ಠ ಮಿಶ್ರಣ).
#ದ್ರಾವಿಡಿಯನ್:
ದಕ್ಷಿಣ ಭಾರತ ಮತ್ತು ಮಧ್ಯ ಭಾರತದ ಮೂಲ ಬುಡಕಟ್ಟುಗಳು.
#ಆರ್ಯೋ_ದ್ರಾವಿಡಿಯನ್: ಗಂಗಾ ಬಯಲು (ಉತ್ತರ ಪ್ರದೇಶ, ಬಿಹಾರ) ಭಾಗದ ಮಿಶ್ರ ಸಮುದಾಯಗಳು.
#ಸಿಥೋ_ದ್ರಾವಿಡಿಯನ್: ಮಹಾರಾಷ್ಟ್ರ, ಗುಜರಾತ್ ಮತ್ತು ಕರ್ನಾಟಕದ ಪಶ್ಚಿಮ ಭಾಗ.
#ಮಂಗೋಲೋ_ದ್ರಾವಿಡಿಯನ್: ಬಂಗಾಳ ಮತ್ತು ಒಡಿಶಾದ ಸಮುದಾಯಗಳು.
#ಮಂಗೋಲಾಯ್ಡ್:
ಈಶಾನ್ಯ ಭಾರತ ಮತ್ತು ಹಿಮಾಲಯ ಭಾಗ.
#ಟರ್ಕೋ_ಇರಾನಿಯನ್: ಅಫ್ಘಾನಿಸ್ತಾನ ಮತ್ತು ಬಲೂಚಿಸ್ತಾನ ಗಡಿ ಪ್ರದೇಶ.
ಆದರೆ ಆಧುನಿಕ ತಳಿಶಾಸ್ತ್ರ,ಜೈವಿಕ ಮಾನವಶಾಸ್ತ್ರ ಮತ್ತು ಪುರಾತತ್ತ್ವ ಶಾಸ್ತ್ರದ ಸಂಶೋಧನೆಗಳು ಹರ್ಬರ್ಟ್ ರಿಸ್ಲೆಯವರ ವಾದವನ್ನು ಸಂಪೂರ್ಣವಾಗಿ ನಿರಾಕರಿಸಿವೆ.
ಜೈವಿಕ ಜನಾಂಗ' ಎಂಬ ಕಲ್ಪನೆಯೇ ತಿರಸ್ಕೃತ,
ಮಾನವ ಜೀನೋಮ್ ಯೋಜನೆಯ ಪ್ರಕಾರ ಜಗತ್ತಿನ ಎಲ್ಲಾ ಮಾನವರ ಡಿಎನ್‌ಎ (DNA) ಶೇ. 99.9 ರಷ್ಟು ಒಂದೇ ಆಗಿದೆ.
ವಿಜ್ಞಾನದಲ್ಲಿ "ಶುದ್ಧ ಜನಾಂಗ" ಎಂಬ ಪರಿಕಲ್ಪನೆಗೆ ಯಾವುದೇ ಜೈವಿಕ ಅಸ್ತಿತ್ವವಿಲ್ಲ.
ಆದ್ದರಿಂದ ರಿಸ್ಲೆಯವರ "ಶುದ್ಧ ಆರ್ಯ" ಅಥವಾ "ಶುದ್ಧ ದ್ರಾವಿಡ" ಜನಾಂಗೀಯ ಪರಿಕಲ್ಪನೆಗಳು ಮಿಥ್ಯೆ ಎಂದು ಸಾಬೀತಾಗಿದೆ.
ರಿಸ್ಲೆಯು ಮೂಗಿನ ಆಕಾರವು ಜಾತಿ ಮತ್ತು ಜನಾಂಗೀಯ ಶ್ರೇಷ್ಠತೆಯನ್ನು ನಿರ್ಧರಿಸುತ್ತದೆ ಎಂದು ವಾದಿಸಿದ್ದರು ಆದರೆ ಆಧುನಿಕ ಜೀವಶಾಸ್ತ್ರದ ಪ್ರಕಾರ, ಮೂಗಿನ ಆಕಾರವು ವ್ಯಕ್ತಿಯ ವಾಸಸ್ಥಳದ ಹವಾಮಾನ ಮತ್ತು ತೇವಾಂಶಕ್ಕೆ ಹೊಂದಿಕೊಳ್ಳುವ ನೈಸರ್ಗಿಕ ಪ್ರಕ್ರಿಯೆಯೇ ಹೊರತು ಯಾವುದೇ ಸಾಮಾಜಿಕ ಸ್ಥಾನಮಾನ ಅಥವಾ ಜನಾಂಗೀಯ ಶುದ್ಧತೆಯ ಸಂಕೇತವಲ್ಲ.
ಖ್ಯಾತ ತಳಿವಿಜ್ಞಾನಿ ಪ್ರೊ. ಡೇವಿಡ್ ರೀಚ್ (ಹಾರ್ವರ್ಡ್ ವಿಶ್ವವಿದ್ಯಾಲಯ) ಮತ್ತು ಭಾರತದ ಸಿಸಿಎಂಬಿ ಹೈದರಾಬಾದ್ ನಡೆಸಿದ ವ್ಯಾಪಕ DNA ಸಂಶೋಧನೆಗಳು ಭಾರತೀಯರ ಮೂಲದ ಬಗ್ಗೆ ಸ್ಪಷ್ಟ ಚಿತ್ರಣ ನೀಡಿವೆ.
ANI (Ancestral North Indian) & ASI (Ancestral South Indian) ಎಂಬ ಎರೆಡು ವಂಶವಾಹಿಗಳು ಭಾರತದ ಬಹುತೇಕ ಎಲ್ಲಾ ಜನಸಮುದಾಯಗಳಲ್ಲಿ
ಈ ಎರಡು ಪ್ರಾಚೀನ ವಂಶವಾಹಿಗಳ ಮಿಶ್ರಣದಿಂದ ಕೂಡಿವೆ.
ಭಾರತದಲ್ಲಿ ಜಾತಿ, ಧರ್ಮ, ಭಾಷೆ ಅಥವಾ ಭೌಗೋಳಿಕ ಗಡಿಗಳನ್ನು ಮೀರಿ ಪ್ರತಿಯೊಬ್ಬ ವ್ಯಕ್ತಿಯಲ್ಲೂ ಈ ಎರಡೂ ಅಂಶಗಳ ಮಿಶ್ರಣವಿದೆ.
ಯಾವುದೇ ಒಂದು ಜಾತಿಯು ಸಂಪೂರ್ಣ ಪ್ರತ್ಯೇಕ ಅಥವಾ ಜೈವಿಕವಾಗಿ 'ಶ್ರೇಷ್ಠ' ವಂಶವಾಹಿಯನ್ನು ಹೊಂದಿಲ್ಲ.
ರಿಸ್ಲೆಯು 'ಆರ್ಯ' ಮತ್ತು 'ದ್ರಾವಿಡ' ಎಂಬ ಭಾಷಾ ಕುಟುಂಬಗಳನ್ನು ಜೈವಿಕ ಜನಾಂಗಗಳೆಂದು ತಪ್ಪಾಗಿ ಗ್ರಹಿಸಿದ್ದರು.
ಭಾಷೆ ಎಂಬುದು ಕಲಿಯುವ ಸಂಸ್ಕೃತಿಯ ಭಾಗವೇ ಹೊರತು ಅದು ರಕ್ತ ಅಥವಾ ವಂಶವಾಹಿಯ ಮೂಲಕ ನಿರ್ಧಾರವಾಗುವುದಿಲ್ಲ ಎಂಬುದನ್ನು ಆಧುನಿಕ ಭಾಷಾಶಾಸ್ತ್ರ ಮತ್ತು ತಳಿಶಾಸ್ತ್ರ ಸಾಬೀತುಪಡಿಸಿವೆ.
ಜಾತಿ ವ್ಯವಸ್ಥೆಯ ಕಾಲಘಟ್ಟ
DNA ಅಧ್ಯಯನಗಳ ಪ್ರಕಾರ ಭಾರತದಲ್ಲಿ ಸುಮಾರು 4,000 ರಿಂದ 2,000 ವರ್ಷಗಳ ಹಿಂದಿನವರೆಗೆ ವ್ಯಾಪಕ ಅಂತರ್-ಸಮುದಾಯ ಮಿಶ್ರಣ ನಡೆಯುತ್ತಿತ್ತು.
ಸುಮಾರು ಕ್ರಿ.ಪೂ. 100 ರಿಂದ ಕ್ರಿ.ಶ. 100 ರ ಅವಧಿಯಲ್ಲಿ ಮಾತ್ರ ನಿರ್ದಿಷ್ಟ ಗುಂಪುಗಳ ಒಳಗೆಯೇ ಮದುವೆಯಾಗುವ ಪದ್ಧತಿ ಗಟ್ಟಿಯಾಗಿ ಜಾತಿ ವ್ಯವಸ್ಥೆ ರೂಪುಗೊಂಡಿತೇ ಹೊರತು ರಿಸ್ಲೆ ಹೇಳಿದಂತೆ ಅದು ಕೇವಲ ಆರ್ಯ-ದ್ರಾವಿಡ ದೈಹಿಕ ವ್ಯತ್ಯಾಸಗಳಿಂದ ತಕ್ಷಣಕ್ಕೆ ಹುಟ್ಟಿಕೊಂಡಿದ್ದಲ್ಲ.
ಹೀಗಾಗಿ ರಿಸ್ಲೆಯವರ ವರ್ಗೀಕರಣವು ವೈಜ್ಞಾನಿಕ ಸತ್ಯಕ್ಕಿಂತ ಹೆಚ್ಚಾಗಿ ಬ್ರಿಟಿಷ್ ವಸಾಹತುಶಾಹಿ ಆಡಳಿತಕ್ಕೆ ಅನುಕೂಲವಾಗುವಂತೆ ಸೃಷ್ಟಿಸಲಾದ 'ಕೃತಕ ಸಾಮಾಜಿಕ ಮಾದರಿ' ಎಂದು ಇಂದಿನ ವಿಜ್ಞಾನ ಪರಿಗಣಿಸುತ್ತದೆ.
#Census #IndianPolitics #herbertrisle #peopleofindia #CasteCensus #british
.
Comments
Post a Comment