4164.ಗೌರಿ_ಗಣೇಶ_ಹಬ್ಬದ_ಶುಭಾಷಯಗಳು.ಲೋಕಮಾನ್ಯರ_ಗಣೇಶೋತ್ಸವ_ಮತ್ತುಇಂದಿನ_ವಾಸ್ತವ_ಒಂದು_ಆತ್ಮಾವಲೋಕನ.ಭಕ್ತಿಮಾರ್ಗಕ್ಕೆ_ಗಣೇಶೋತ್ಸವ_ವಾಪಾಸು_ತರಬೇಕು.
ಗೌರಿ_ಗಣೇಶ_ಹಬ್ಬದ_ಶುಭಾಷಯಗಳು.
ಲೋಕಮಾನ್ಯರ_ಗಣೇಶೋತ್ಸವ_ಮತ್ತು
ಇಂದಿನ_ವಾಸ್ತವ_ಒಂದು_ಆತ್ಮಾವಲೋಕನ.
ಭಕ್ತಿಮಾರ್ಗಕ್ಕೆ_ಗಣೇಶೋತ್ಸವ_ವಾಪಾಸು_ತರಬೇಕು.
ದೇವರ ಉತ್ಸವ ಶ್ರದ್ಧಾ ಭಕ್ತಿಯಿಂದ ಸಾರ್ವಜನಿಕರ ಪಾಲ್ಗೊಳ್ಳುವಿಕೆ ಆಗದಿದ್ದರೆ ಅದು ಧರ್ಮಕ್ಕೆ ಮಾಡುವ ಅಪಚಾರ ಎಂದು ಶಾಸ್ತ್ರ ಹೇಳುತ್ತದೆ.
ನಾವು ಪ್ರತಿ ವರ್ಷ ಸಾರ್ವಜನಿಕ ಗಣೇಶೋತ್ಸವ ಹೇಗೆ ಆಚರಿಸುತ್ತೇವೆ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕು.
ಈ ರೀತಿಯ ಆಚರಣೆ ಬದಲಾಗಬೇಕು ಎಂದು ಮಾಜಿ ಗೃಹ ಸಚಿವರಾದ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕರಾದ #ಆರಗಜ್ಞಾನೇಂದ್ರ ಅವರು ಅವರ ಕ್ಷೇತ್ರದ ಪೋಲಿಸರ ಶಾಂತಿ ಸಭೆಯಲ್ಲಿ ಮಾತನಾಡಿದ ವಿಡಿಯೋ ವೈರಲ್ ಆಗಿದೆ ಅವರಿಗೆ ಅಭಿನಂದಿಸುತ್ತೇನೆ.
ಅವರು ಹೇಳಿದ್ದು ...1893ರಲ್ಲಿ ಬಾಲಗಂಗಾಧರ ತಿಲಕರು ಸಾರ್ವಜನಿಕ ಗಣೇಶೋತ್ಸವಕ್ಕೆ ನಾಂದಿ ಹಾಡಿದ್ದು ಕೇವಲ ಧಾರ್ಮಿಕ ಆಚರಣೆಗಾಗಿ ಅಲ್ಲ,ಬ್ರಿಟಿಷರ ಒಡೆದು ಆಳುವ ನೀತಿಯ ವಿರುದ್ಧ ಜನರನ್ನು ಒಂದೇ ಸೂರಿನಡಿ ತರಲು, ಸ್ವಾತಂತ್ರ್ಯದ ಕಿಚ್ಚು ಹೊತ್ತಿಸಲು ಮತ್ತು ಸಮಾಜದಲ್ಲಿ ಶಿಸ್ತು-ಐಕ್ಯತೆ ಮೂಡಿಸಲು.
ಅಂದು ಗಣೇಶನ ಪೆಂಡಾಲ್‌ಗಳು ದೇಶಭಕ್ತಿಯ ಚರ್ಚೆ, ಸಾಂಸ್ಕೃತಿಕ ಜಾಗೃತಿ ಹಾಗೂ ವಿಚಾರ ಮಂಥನದ ಕೇಂದ್ರಗಳಾಗಿದ್ದವು.
ಆದರೆ ಇಂದು ಅದೇ ಉತ್ಸವ ಯಾವ ದಿಕ್ಕಿನತ್ತ ಸಾಗುತ್ತಿದೆ ಎಂದು ನೋಡಿದಾಗ ಪ್ರತಿಯೊಬ್ಬ ಪ್ರಜ್ಞಾವಂತ ಹಿಂದೂವೂ ತಲೆತಗ್ಗಿಸುವಂತಾಗಿದೆ ಎಂದಿದ್ದಾರೆ.
#ಹಾದಿ_ತಪ್ಪಿದ_ಇಂದಿನ_ಆಚರಣೆಗಳು
ಕಾಣಿಕೆ ಇಂದು ಬೀದಿ ವ್ಯಾಪಾರಿಗಳು, ಸಾರ್ವಜನಿಕರ ಮೇಲೆ ದಬ್ಬಾಳಿಕೆ ನಡೆಸಿ ವಸೂಲಿ ಮಾಡುವ ಸುಲಿಗೆಯಾಗಿದೆ.
#ಅಶ್ಲೀಲತೆ_ಮತ್ತು_ಕರ್ಕಶತೆ
ಭಕ್ತಿಗೀತೆಗಳ ಬದಲು ಕಿವಿಗಡಚಿಕ್ಕುವ ಡಿಜೆ ಸೌಂಡ್‌ಗಳು, ಅಸಭ್ಯ ಸಿನಿಮಾ ಹಾಡುಗಳು ಮತ್ತು ವಿಕೃತ ನೃತ್ಯಗಳು ಹಬ್ಬದ ಪಾವಿತ್ರ್ಯವನ್ನು ನಾಶಮಾಡಿವೆ.
#ಮದ್ಯ_ಮತ್ತು_ಮಾದಕತೆ
ಮೆರವಣಿಗೆಗಳಲ್ಲಿ ಪಾನಮತ್ತರಾಗಿ ಕುಣಿಯುವುದು, ಗಲಭೆ ಎಬ್ಬಿಸುವುದು ಸಾಮಾನ್ಯ ಎಂಬಂತಾಗಿರುವುದು ದುರಂತ.
#ದ್ವೇಷದ_ಅಖಾಡ
ಸರ್ವರನ್ನೂ ಒಗ್ಗೂಡಿಸಬೇಕಿದ್ದ ವೇದಿಕೆಗಳು ಅನ್ಯ ಧರ್ಮೀಯರ ವಿರುದ್ಧ ಪ್ರಚೋದನಕಾರಿ ಘೋಷಣೆ ಕೂಗಲು, ರಾಜಕೀಯ ಬಲಪ್ರದರ್ಶನಕ್ಕೆ ಬಳಕೆಯಾಗುತ್ತಿರುವುದು ತಿಲಕರ ಆಶಯಕ್ಕೆ ಮಾಡುತ್ತಿರುವ ಅಪಚಾರ.
#ಮತ್ತೆ_ಭಕ್ತಿ_ಮತ್ತು_ಸಾರ್ಥಕತೆಯ_ಮಾರ್ಗಕ್ಕೆ
#ತರುವುದುಹೇಗೆ?
ಸ್ವಯಂಪ್ರೇರಿತ ಚಂದಾ ಸಂಸ್ಕೃತಿ, ಬಲವಂತದ ಚಂದಾ ವಸೂಲಿಗೆ ಕಟ್ಟುನಿಟ್ಟಿನ ಕಡಿವಾಣ ಬೀಳಬೇಕು, ಯಾರೂ ಒತ್ತಾಯಪೂರ್ವಕವಾಗಿ ಹಣ ಕೇಳದಂತೆ ಸಮಿತಿಗಳಿಗೆ ಕಟ್ಟುನಿಟ್ಟಿನ ನಿಯಮಗಳಿರಬೇಕು.
#ಡಿಜೆ_ನಿಷೇಧ
ದೇಶಿ ಕಲೆಗೆ ಆದ್ಯತೆ, ಕಿವಿಗಡಚಿಕ್ಕುವ ಸ್ಪೀಕರ್ ಬದಲು ಡೊಳ್ಳು ಕುಣಿತ, ಯಕ್ಷಗಾನ, ತಮಟೆ, ವೀರಗಾಸೆ ಕುಣಿತದಂತಹ ಜಾನಪದ ಮತ್ತು ಸಾಂಪ್ರದಾಯಿಕ ಕಲಾತಂಡಗಳಿಗೆ ಅವಕಾಶ ನೀಡಿ.
#ವ್ಯಸನಮುಕ್ತ_ಉತ್ಸವ
ಮಂಟಪದ ಆವರಣದಲ್ಲಿ ಹಾಗೂ ಮೆರವಣಿಗೆಯಲ್ಲಿ ಮದ್ಯಪಾನ ಮತ್ತು ತಂಬಾಕು ಸಂಪೂರ್ಣ ನಿಷೇಧಿಸಬೇಕು.
ಶಿಸ್ತು ಕಾಪಾಡಲು ಯುವಕರೇ ಒಳಗೊಂಡ ಸ್ವಯಂಸೇವಕರ ತಂಡ ರಚನೆಯಾಗಬೇಕು.
#ಸಾಮಾಜಿಕ_ಕಳಕಳಿಯ_ವೇದಿಕೆ
ತಿಲಕರ ಮೂಲ ಆಶಯದಂತೆ ರಕ್ತದಾನ ಶಿಬಿರ, ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ, ಪರಿಸರ ಜಾಗೃತಿ ಮತ್ತು ಆರೋಗ್ಯ ತಪಾಸಣೆಯಂತಹ ಸಮಾಜಮುಖಿ ಕಾರ್ಯಗಳು ನಡೆಯಲಿ.
#ದ್ವೇಷವಲ್ಲ_ಸೌಹಾರ್ದ
ಗಣಪತಿ ವಿಘ್ನನಿವಾರಕ ಎಲ್ಲರನ್ನೂ ಬೆಸೆಯುವ ದೇವರು.
ಆತನ ಹಬ್ಬ ಯಾರಲ್ಲೂ ಭಯ ಹುಟ್ಟಿಸಬಾರದು ಬದಲಿಗೆ ನೆರೆಹೊರೆಯ ಎಲ್ಲ ಸಮುದಾಯದವರೂ ಗೌರವಿಸುವ ವಾತಾವರಣ ನಿರ್ಮಾಣವಾಗಬೇಕು.
#ಗಣೇಶೋತ್ಸವ_ಎಂದರೆ_ಕರ್ಕಶ_ಸದ್ದು_ಗೂಂಡಾಗಿರಿ_ಮತ್ತು_ಪ್ರದರ್ಶನವಲ್ಲ.
ಅದು ಸಂಸ್ಕೃತಿ, ಸಂಯಮ ಮತ್ತು ಸದ್ಭಾವನೆ.
ವಿಕೃತಿಯನ್ನು ಸಂಭ್ರಮಿಸುವುದನ್ನು ನಿಲ್ಲಿಸಿ, ತಿಲಕರು ಕಂಡ ನಿಜವಾದ ಸಾಮರಸ್ಯದ ಗಣೇಶೋತ್ಸವವನ್ನು ಮರುಸ್ಥಾಪಿಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.
ನಿಮ್ಮ ಅಭಿಪ್ರಾಯ ತಿಳಿಸಲು ಮರೆಯಬೇಡಿ.
#aragajnanendra #thirthahalli #mla
#ganeshachaturthi #lokamanya #gangadhartilak #pune #kesarivada #djban
#ಗಣೇಶೋತ್ಸವ #ಲೋಕಮಾನ್ಯತಿಲಕ #ಸಂಸ್ಕೃತಿ #ಸಾಮಾಜಿಕಜಾಗೃತಿ #ಸೌಹಾರ್ದತೆ
Comments
Post a Comment