#ಪ್ರತಿಷ್ಟಿತಇರುವಕ್ಕಿ ಕೃಷಿ ವಿಶ್ವವಿದ್ಯಾಲಯದ ಪಾರಂ ಇನ್ ಚಾಜ್೯ ಡಾ.ಗಣಪತಿ ನಮ್ಮ ಅತಿಥಿ# ಇವರು ಮೂಲತ ಶಿವಮೊಗ್ಗ ಜಿಲ್ಲೆಯ ತೀಥ೯ಹಳ್ಳಿ ತಾಲ್ಲೂಕಿನ ಹುOಚದ ಸಮೀಪದ ಹಳ್ಳಿಯವರು ಮೆರಿಟ್ ವಿದ್ಯಾಥಿ೯ ಆಗಿ ಉನ್ನತ ವ್ಯಾಸಂಗ ಮಾಡಿ ಈಗ ನಮ್ಮ ಊರಿನ ಸಮೀಪದ ಇರುವಕ್ಕಿ ಕೃಷಿ ವಿಶ್ವವಿದ್ಯಾಲಯದ ಪಾರಂ ಇನ್ ಚಾಜ್೯ ಆಗಿದ್ದಾರೆ. ಅನೇಕರು ಹೇಳುತ್ತಿದ್ದರು 777 ಎಕರೆ ವಿಶ್ವ ವಿದ್ಯಾಲಯ ಇನ್ನೂ ಪ್ರಾರ೦ಭ ಆಗಿಲ್ಲ ಆದರೆ ಅಲ್ಲಿ ಅನೇಕ ಸಂಶೋದನೆಗಾಗಿ ತಳಿ ಸಂರಕ್ಷಣೆಗಾಗಿ ಕೆಲಸ ನಡೆಯುತ್ತಿದೆ ಡಾ.ಗಣಪತಿ ಎಂಬುವವರು ಮಲೆನಾಡಿನವರೆ ಹೆಚ್ಚಿನ ಆಸಕ್ತಿಯಿಂದ ಕೆಲಸ ಮಾಡುತ್ತಿದ್ದಾರೆ ಅಂತ ಹೇಳುವುದು ಕೇಳುತ್ತಿದ್ದೆ. ನಿನ್ನೆ ನನ್ನ ಆಪೀಸಿಗೆ ಗೆಳೆಯ ವಕೀಲರಾದ ಕುಬಟೂರು ರಾಮಚಂದ್ರರ ಜೊತೆ ಬಂದಿದ್ದರು ಅವರ ಮತ್ತು ನನ್ನ ಮಾತುಕಥೆಯಲ್ಲಿ ತಿಳಿದು ಬಂದಿದ್ದು ಇಡೀ ದೇಶದಲ್ಲೇ ಕಾಡಿನ ಮಧ್ಯೆ ಮತ್ತು ಹಳ್ಳಿಯ ಮದ್ಯ ಇರುವ ಕೃಷಿ ವಿಶ್ವವಿದ್ಯಾಲಯ ಇದೊ೦ದೆ ಅಂತೆ, ಪ್ರಾರಂಭವೇ ಆಗದ೦ತ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುವುದು ಕಠಿಣ ಆದರೂ ಇವರಿಗೆ ಕೆಲ ಗುರಿ ಮತ್ತು ಹಠ ಇರುವುದರಿಂದ ಜವಾಬ್ದಾರಿ ವಹಿಸಿಕೊಂಡಿದ್ದಾರೆ, ಈಗಾಗಲೆ ಸ್ಥಳಿಯ ರೈತರಿಗಾಗಿ ಅನೇಕ ರೀತಿಯ ನಸ೯ರಿ ಮಾಡಿ ಗಿಡ ನೀಡುತ್ತಿದ್ದಾರೆ, ಮಲೆ ನಾಡಿನ ಅಪ್ಪೆ ಮಾವಿನ ಮಿಡಿಗಾಗಿ ವಿಶೇಷ ಸಂಶೋದನೆ ಮತ್ತು ಸಂರಕ್ಷಣೆಯ ಯೋಜನೆ ಹಾಕಿದ್ದಾರೆ, ಅಳವಿನಂಚಿನ ಪಶ್ಚ...