ಇವರು ಮೂಲತ ಶಿವಮೊಗ್ಗ ಜಿಲ್ಲೆಯ ತೀಥ೯ಹಳ್ಳಿ ತಾಲ್ಲೂಕಿನ ಹುOಚದ ಸಮೀಪದ ಹಳ್ಳಿಯವರು ಮೆರಿಟ್ ವಿದ್ಯಾಥಿ೯ ಆಗಿ ಉನ್ನತ ವ್ಯಾಸಂಗ ಮಾಡಿ ಈಗ ನಮ್ಮ ಊರಿನ ಸಮೀಪದ ಇರುವಕ್ಕಿ ಕೃಷಿ ವಿಶ್ವವಿದ್ಯಾಲಯದ ಪಾರಂ ಇನ್ ಚಾಜ್೯ ಆಗಿದ್ದಾರೆ.
ಅನೇಕರು ಹೇಳುತ್ತಿದ್ದರು 777 ಎಕರೆ ವಿಶ್ವ ವಿದ್ಯಾಲಯ ಇನ್ನೂ ಪ್ರಾರ೦ಭ ಆಗಿಲ್ಲ ಆದರೆ ಅಲ್ಲಿ ಅನೇಕ ಸಂಶೋದನೆಗಾಗಿ ತಳಿ ಸಂರಕ್ಷಣೆಗಾಗಿ ಕೆಲಸ ನಡೆಯುತ್ತಿದೆ ಡಾ.ಗಣಪತಿ ಎಂಬುವವರು ಮಲೆನಾಡಿನವರೆ ಹೆಚ್ಚಿನ ಆಸಕ್ತಿಯಿಂದ ಕೆಲಸ ಮಾಡುತ್ತಿದ್ದಾರೆ ಅಂತ ಹೇಳುವುದು ಕೇಳುತ್ತಿದ್ದೆ.
ನಿನ್ನೆ ನನ್ನ ಆಪೀಸಿಗೆ ಗೆಳೆಯ ವಕೀಲರಾದ ಕುಬಟೂರು ರಾಮಚಂದ್ರರ ಜೊತೆ ಬಂದಿದ್ದರು ಅವರ ಮತ್ತು ನನ್ನ ಮಾತುಕಥೆಯಲ್ಲಿ ತಿಳಿದು ಬಂದಿದ್ದು ಇಡೀ ದೇಶದಲ್ಲೇ ಕಾಡಿನ ಮಧ್ಯೆ ಮತ್ತು ಹಳ್ಳಿಯ ಮದ್ಯ ಇರುವ ಕೃಷಿ ವಿಶ್ವವಿದ್ಯಾಲಯ ಇದೊ೦ದೆ ಅಂತೆ, ಪ್ರಾರಂಭವೇ ಆಗದ೦ತ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುವುದು ಕಠಿಣ ಆದರೂ ಇವರಿಗೆ ಕೆಲ ಗುರಿ ಮತ್ತು ಹಠ ಇರುವುದರಿಂದ ಜವಾಬ್ದಾರಿ ವಹಿಸಿಕೊಂಡಿದ್ದಾರೆ, ಈಗಾಗಲೆ ಸ್ಥಳಿಯ ರೈತರಿಗಾಗಿ ಅನೇಕ ರೀತಿಯ ನಸ೯ರಿ ಮಾಡಿ ಗಿಡ ನೀಡುತ್ತಿದ್ದಾರೆ, ಮಲೆ ನಾಡಿನ ಅಪ್ಪೆ ಮಾವಿನ ಮಿಡಿಗಾಗಿ ವಿಶೇಷ ಸಂಶೋದನೆ ಮತ್ತು ಸಂರಕ್ಷಣೆಯ ಯೋಜನೆ ಹಾಕಿದ್ದಾರೆ, ಅಳವಿನಂಚಿನ ಪಶ್ಚಿಮ ಘಟ್ಟದ ಅನೇಕ ಜಾತಿಯ ಸಸ್ಯಗಳನ್ನ ಸಂಗ್ರಹಿಸಿ ನೆಡೆಸಿದ್ದಾರೆ, ಯಾವುದೇ ಮರ ಕಡಿಯದೆ ಕಾಡಿನ ಮಧ್ಯ ಇದೆಲ್ಲ ಚಟುವಟಿಕೆ ಮಾಡುತ್ತಿದ್ದಾರೆ.
ಅವರಿಗೆ ಸಾಗರದ ಕೃಷಿ ಮಿತ್ರ ನಾಗೇಂದ್ರ ಸಾಗರ್ ಸಂಪಕಿ೯ಸಿ ಕೊಟ್ಟೆ ಅವರ ಮುಖಾಂತರ ಮಲೆನಾಡಿನ ಅಪ್ಪೆಮಾವಿನ ಮಿಡಿ ತಜ್ಞ ಬೇಳೂರು ಸುಬ್ಬಣ್ಣರ ಬೇಟಿ ಮಾಡಿ ಅವರ ಸಹಾಯ ಸಹಕಾರ ಪಡೆಯ ಬಹುದೆಂದೆ.
ಕೆಳದಿ ಅರಸರ ಕಾಲದಲ್ಲಿ ಎಲ್ಲಾ ಮಾಗ೯ದಲ್ಲಿ ದೂಪದ ಮರ ಬೆಳೆಸಿದ್ದರು ಇದನ್ನ ಡಾ.ರೈಸ್ ತಮ್ಮ ಲೇಖನದಲ್ಲಿ ನಮೂದಿಸಿದ್ದಾರೆ ನಂತರ ರಾಷ್ಟ್ರಿಯ ಹೆದ್ದಾರಿಗಾಗಿ ಜಿಲ್ಲಾ ರಸ್ತೆಗಾಗಿ ರಸ್ತೆ ಅಗಲಿಕರಣದಲ್ಲಿ ದೂಪದ ಮರ ಕಡಿಯಲಾಯಿತು ಕೃಷಿ ವಿಶ್ವವಿದ್ಯಾಲಯದಲ್ಲಿನ 777 ಎಕರೆ ಸುತ್ತಲೂ ದೂಪದ ಮರ ಬೆಳೆಸಬಹುದೆಂದು ಸೂಚಿಸಿದೆ ಈ ವಷ೯ವೇ ಸಸಿ ಬೆಳೆಸಿ ಮುಂದಿನ ವಷ೯ ಕಾಯ೯ರೂಪಕ್ಕೆ ತರುವುದಾಗಿ ಗುರುತು ಮಾಡಿಕೊ೦ಡರು.
ಜೇನು ಕೃಷಿಯನ್ನು ಇಲ್ಲಿ ಹಮ್ಮಿಕೊಳ್ಳಲಿದ್ದಾರೆ.
ಇವರಿಗೆ ಅರವಿ೦ದ ಚೊಕ್ಕಾಡಿಯವರು ಬರೆದ ಗಾಂದಿ ಪುಸ್ತಕ ನೆನಪಿನ ಕಾಣಿಕೆ ಆಗಿ ನೀಡಿದೆ, ಮಿತ ಬಾಷಿ ಸ್ವಲ್ಪ ನಾಚಿಕೆ ಸ್ವಭಾವದ ಆದರೆ ಮಾಡಬೇಕಾದ್ದನ್ನ ಮಾಡೇ ತೀರುವ ಹಠ ಇರುವ ಇವರ ಪರಿಚಯ ಆದದ್ದು ಸಂತೋಷ ಆಯಿತು.
Comments
Post a Comment