#ಭಾಗ_ಒಂದು. #ಅಂಬಾರಗೋಡ್ಲು_ಕಳಸವಳ್ಳಿ_ಸೇತುವೆ_ಉದ್ಘಾಟನೆಯ_ಕ್ಷಣಗಣನೆಯಲ್ಲಿ #ನಾನು_ಮೊದಲ_ಬಾರಿಗೆ_ಹೊಳೆಬಾಗಿಲು_ಲಾಂಚ್_ನೋಡಿದ್ದು_ದಾಟಿದ್ದು. #sharavathiriver #linganamakkidam #ambargodlu #kalasavalli #cablebridge #prasannakereki #byraghavendra #kagoduthimmappa 1989 ಅಥವ 1990 ರಲ್ಲಿ ನಾನು ಕಾಗೋಡು ತಿಮ್ಮಪ್ಪನವರ ಕಪ್ಪುಅಂಬಾಸಡರ್ ಕಾರಿನಲ್ಲಿ ಮೊದಲ ಬಾರಿಗೆ ಹೊಳೆಬಾಗಿಲು ನೋಡಿದ್ದು ಮತ್ತು ಮೊದಲ ಬಾರಿಗೆ ಲಾಂಚಿನಲ್ಲಿ ದಾಟಿದ್ದು ನೆನಪುಗಳು. ಗುಂಡೂರಾವ್ ಮತ್ತು ಬಂಗಾರಪ್ಪನವರ ರಾಜಕೀಯ ಸಂಘರ್ಷದಲ್ಲಿ ಜನತಾ ಪಕ್ಷದ ಕಾಗೋಡು ತಿಮ್ಮಪ್ಪನವರನ್ನು ಕಾಂಗ್ರೆಸ್ಸಿಗೆ ಸೇರಿಸಿ ವಿಧಾನ ಪರಿಷತ್ ಸದಸ್ಯರನ್ನಾಗಿಸಿ ಮಂತ್ರಿನ್ನಾಗಿಸಿದ್ದು ಇತಿಹಾಸ. ನಂತರ ಸುಮಾರು ವರ್ಷಗಳ ಕಾಲ ಸಾಗರದ ರಾಜಕೀಯ ರಂಗದಲ್ಲಿ ಕಾಗೋಡು ತಿಮ್ಮಪ್ಪನವರು ಇಲ್ಲದ್ದರಿಂದ ಆಗಿನ ಕಾಂಗ್ರೆಸ್ ಪಕ್ಷದ ಕಟ್ಟಾ ಮುಖಂಡರಾದ ಅಹ್ಮದ್ ಅಲಿಖಾನ್ ಸಾಬ್ ಹೇಗಾದರೂ ಮಾಡಿ ಕಾಗೋಡು ತಿಮ್ಮಪ್ಪನವರನ್ನು ಸಾಗರ ತಾಲ್ಲೂಕಿನ ರಾಜಕಾರಣಕ್ಕೆ ಕರೆತರಬೇಕು ಎಂಬ ಪ್ರಯತ್ನ ಪ್ರಾರಂಬಿಸಿದ್ದರು. 1989 ರ ವಿಧಾನಸಭಾ ಚುನಾವಣೆಗೆ ಕಾಗೋಡು ತಿಮ್ಮಪ್ಪನವರನ್ನು ಕರೆ ತರುವ ಪ್ರಸ್ತಾವನೆಯನ್ನು ಮಾಡಿದರು ಇದಕ್ಕೆ ಅವರಿಗೆ ಸಾತ್ ಕೊಟ್ಟವರು ಪುತ್ತೂರಾಯರು ಮತ್ತು ಕುರುಬರ ಲಿಂಗಪ್ಪನವರು. ಆಗ...