Skip to main content

BN 3431. ಭಾಗ-1. ಹೊಳೆಬಾಗಿಲು ಸೇತುವೆ

#ಭಾಗ_ಒಂದು.

#ಅಂಬಾರಗೋಡ್ಲು_ಕಳಸವಳ್ಳಿ_ಸೇತುವೆ_ಉದ್ಘಾಟನೆಯ_ಕ್ಷಣಗಣನೆಯಲ್ಲಿ

#ನಾನು_ಮೊದಲ_ಬಾರಿಗೆ_ಹೊಳೆಬಾಗಿಲು_ಲಾಂಚ್_ನೋಡಿದ್ದು_ದಾಟಿದ್ದು.


#sharavathiriver #linganamakkidam #ambargodlu #kalasavalli #cablebridge #prasannakereki #byraghavendra #kagoduthimmappa

  1989 ಅಥವ 1990 ರಲ್ಲಿ ನಾನು ಕಾಗೋಡು ತಿಮ್ಮಪ್ಪನವರ ಕಪ್ಪುಅಂಬಾಸಡರ್ ಕಾರಿನಲ್ಲಿ ಮೊದಲ ಬಾರಿಗೆ ಹೊಳೆಬಾಗಿಲು ನೋಡಿದ್ದು ಮತ್ತು ಮೊದಲ ಬಾರಿಗೆ ಲಾಂಚಿನಲ್ಲಿ ದಾಟಿದ್ದು ನೆನಪುಗಳು.

    ಗುಂಡೂರಾವ್ ಮತ್ತು ಬಂಗಾರಪ್ಪನವರ ರಾಜಕೀಯ ಸಂಘರ್ಷದಲ್ಲಿ ಜನತಾ ಪಕ್ಷದ ಕಾಗೋಡು ತಿಮ್ಮಪ್ಪನವರನ್ನು ಕಾಂಗ್ರೆಸ್ಸಿಗೆ ಸೇರಿಸಿ ವಿಧಾನ ಪರಿಷತ್ ಸದಸ್ಯರನ್ನಾಗಿಸಿ ಮಂತ್ರಿನ್ನಾಗಿಸಿದ್ದು ಇತಿಹಾಸ.

    ನಂತರ ಸುಮಾರು  ವರ್ಷಗಳ ಕಾಲ ಸಾಗರದ ರಾಜಕೀಯ ರಂಗದಲ್ಲಿ ಕಾಗೋಡು ತಿಮ್ಮಪ್ಪನವರು ಇಲ್ಲದ್ದರಿಂದ ಆಗಿನ ಕಾಂಗ್ರೆಸ್ ಪಕ್ಷದ ಕಟ್ಟಾ ಮುಖಂಡರಾದ ಅಹ್ಮದ್ ಅಲಿಖಾನ್ ಸಾಬ್ ಹೇಗಾದರೂ ಮಾಡಿ ಕಾಗೋಡು ತಿಮ್ಮಪ್ಪನವರನ್ನು ಸಾಗರ ತಾಲ್ಲೂಕಿನ ರಾಜಕಾರಣಕ್ಕೆ ಕರೆತರಬೇಕು ಎಂಬ ಪ್ರಯತ್ನ ಪ್ರಾರಂಬಿಸಿದ್ದರು.

   1989 ರ ವಿಧಾನಸಭಾ ಚುನಾವಣೆಗೆ ಕಾಗೋಡು ತಿಮ್ಮಪ್ಪನವರನ್ನು ಕರೆ ತರುವ ಪ್ರಸ್ತಾವನೆಯನ್ನು ಮಾಡಿದರು ಇದಕ್ಕೆ ಅವರಿಗೆ ಸಾತ್ ಕೊಟ್ಟವರು ಪುತ್ತೂರಾಯರು ಮತ್ತು ಕುರುಬರ ಲಿಂಗಪ್ಪನವರು.

  ಆಗ ಅವರು ಆಯ್ಕೆ ಮಾಡಿದ ಯಂಗ್ ಬ್ರಿಗೇಡ್ ಅಂದರೆ ನಾನು - ತೀನಾ ಶ್ರೀನಿವಾಸ್ ಮತ್ತು ಭೀಮನೇರಿ ಶಿವಪ್ಪನವರು.

   ನಂತರ ಚುನಾವಣೆಯಲ್ಲಿ ಕಾಗೋಡು ಗೆದ್ದರು ಆಗ ಶಾಸಕರ ಪ್ರವಾಸದಲ್ಲಿ ನಾವು ಮೂವರು ಅವರ ಕಾರಿನಲ್ಲಿ ಹೊಳೆಬಾಗಿಲು ದಾಟಿ ಕರೂರು ಮತ್ತು ಬಾರಂಗಿ ಹೋಬಳಿಗೆ ಹೋಗಿದ್ದಾಗಲೆ  ನಾನು ಶರಾವತಿ ನದಿಯ ಅಗಾಧ ಪ್ರಮಾಣದ ಹಿನ್ನೀರು ಮತ್ತು ಅಲ್ಲಿ ಇರುವ ಲಾಂಚ್ ಮೊದಲ ಬಾರಿ ನೋಡಿದ್ದು.

 ಆ ಲಾಂಚಿಗೆ (ಪೆರಿಗೆ) ಕಾಗೋಡು ತಿಮ್ಮಪ್ಪನವರ ಕಪ್ಪು ಬಣ್ಣದ ಅಂಬಾಸಡರ್ ಕಾರನ್ನ ಹತ್ತಿಸಲಾಯಿತು ಅಲ್ಲಿಂದ ವಾಪಾಸು ಕಾರ್ಗಲ್ ಮೇಲೆ ಸಾಗರಕ್ಕೆ ಬಂದದ್ದು ಒಂದು ನೆನಪು.

   ನಂತರ ಇನ್ನೊಂದು ಅವಧಿಯಲ್ಲಿ ಕಾಗೋಡು ತಿಮ್ಮಪ್ಪನವರು ಮಂತ್ರಿಗಳಾಗಿದ್ದಾಗ ಅವರ ಜೊತೆ ಹೋದಾಗಿದ್ದು ಮರೆಯಲಾರದ ನೆನಪು.

    ಕಾಗೋಡು ಹಿಂದಿನ ದಿನವೇ ಎಲ್ಲಾ ಇಂಜಿನಿಯರ್ ಗಳು ತಪ್ಪದೇ ಜೊತೆಯಲ್ಲಿ ಬರಬೇಕು ಆ ಭಾಗದ ಕಾಮಗಾರಿ ವೀಕ್ಷಣೆ ಮಾಡಬೇಕು ಎಂದು ಕಟ್ಟಪ್ಪಣೆ ಮಾಡಿದ್ದರು.

  ಆಗ PWD ಮತ್ತು ಜಿಲ್ಲಾ ಪಂಚಾಯತಿ ಇಂಜಿನಿಯರಿಂಗ್ ಘಟಕದ ಜೀಪುಗಳಲ್ಲಿ ಇಂಜಿನಿಯರ್ ಗಳೆಲ್ಲ ಹೊಳೆಬಾಗಿಲಿಗೆ ಭಾವಿಸಿದ್ದರು.

   ಕಾಗೋಡು ತಿಮ್ಮಪ್ಪನವರು ಲಾಂಚ್ ನಲ್ಲಿ ಶರಾವತಿ ನದಿ ದಾಟುವಾಗ ಎಲ್ಲಾ ಇಂಜಿನಿಯರ್ ಗಳು ಬಂದಿದ್ದಾರ ಅಂತ ಅಲ್ಲಿದ್ದವರನ್ನ  ನೋಡಿ ಖಾತ್ರಿ ಮಾಡಿಕೊಂಡು ಹೊಳೆಬಾಗಿಲು ಲಾಂಚ್ ನಲ್ಲಿ ಶರಾವತಿ ನದಿ ದಾಟಿ ತುಮರಿ ಸಮೀಪದ ಬ್ರಾಹ್ಮಣ ಕೆಪ್ಪಿಗೆ ಸಮೀಪದ ರಸ್ತೆ ಕಾಮಗಾರಿ ಪರಿಶೀಲಿಸಲು ಆ ಭಾಗದ ಇಂಜಿನಿಯರ್ ಕರೆದರೆ ಇಂಜಿನಿಯರೇ ನಾಪತ್ತೆ... ಹೊಳೆಬಾಗಿಲು ಲಾಂಚ್ ಒಟ್ಟಾಗಿಯೇ ದಾಟಿದ ಇಂಜಿನಿಯರ್ ಮಾಯ!?.

  ಆಗ ಮತ್ತೆ ಅವರನ್ನು ಹುಡುಕಿ ತರುವ ಅವಕಾಶಗಳಾದ ಫೋನ್ ಅಥವ ವಾಹನ ಸೌಕರ್ಯ ಇರಲಿಲ್ಲ ಹೀಗೆ ಹೊಳೆ ಆಚಿನ ಭಾಗದಲ್ಲಿ ಅಧಿಕಾರಿಗಳು ಜನಪ್ರತಿನಿಧಿಗಳಿಗೇ ಚಳ್ಳೆಹಣ್ಣು ತಿನಿಸುತ್ತಿದ್ದರು.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...