#ಭಾಗ_ಒಂದು.
#ಅಂಬಾರಗೋಡ್ಲು_ಕಳಸವಳ್ಳಿ_ಸೇತುವೆ_ಉದ್ಘಾಟನೆಯ_ಕ್ಷಣಗಣನೆಯಲ್ಲಿ
#ನಾನು_ಮೊದಲ_ಬಾರಿಗೆ_ಹೊಳೆಬಾಗಿಲು_ಲಾಂಚ್_ನೋಡಿದ್ದು_ದಾಟಿದ್ದು.
#sharavathiriver #linganamakkidam #ambargodlu #kalasavalli #cablebridge #prasannakereki #byraghavendra #kagoduthimmappa
1989 ಅಥವ 1990 ರಲ್ಲಿ ನಾನು ಕಾಗೋಡು ತಿಮ್ಮಪ್ಪನವರ ಕಪ್ಪುಅಂಬಾಸಡರ್ ಕಾರಿನಲ್ಲಿ ಮೊದಲ ಬಾರಿಗೆ ಹೊಳೆಬಾಗಿಲು ನೋಡಿದ್ದು ಮತ್ತು ಮೊದಲ ಬಾರಿಗೆ ಲಾಂಚಿನಲ್ಲಿ ದಾಟಿದ್ದು ನೆನಪುಗಳು.
ಗುಂಡೂರಾವ್ ಮತ್ತು ಬಂಗಾರಪ್ಪನವರ ರಾಜಕೀಯ ಸಂಘರ್ಷದಲ್ಲಿ ಜನತಾ ಪಕ್ಷದ ಕಾಗೋಡು ತಿಮ್ಮಪ್ಪನವರನ್ನು ಕಾಂಗ್ರೆಸ್ಸಿಗೆ ಸೇರಿಸಿ ವಿಧಾನ ಪರಿಷತ್ ಸದಸ್ಯರನ್ನಾಗಿಸಿ ಮಂತ್ರಿನ್ನಾಗಿಸಿದ್ದು ಇತಿಹಾಸ.
ನಂತರ ಸುಮಾರು ವರ್ಷಗಳ ಕಾಲ ಸಾಗರದ ರಾಜಕೀಯ ರಂಗದಲ್ಲಿ ಕಾಗೋಡು ತಿಮ್ಮಪ್ಪನವರು ಇಲ್ಲದ್ದರಿಂದ ಆಗಿನ ಕಾಂಗ್ರೆಸ್ ಪಕ್ಷದ ಕಟ್ಟಾ ಮುಖಂಡರಾದ ಅಹ್ಮದ್ ಅಲಿಖಾನ್ ಸಾಬ್ ಹೇಗಾದರೂ ಮಾಡಿ ಕಾಗೋಡು ತಿಮ್ಮಪ್ಪನವರನ್ನು ಸಾಗರ ತಾಲ್ಲೂಕಿನ ರಾಜಕಾರಣಕ್ಕೆ ಕರೆತರಬೇಕು ಎಂಬ ಪ್ರಯತ್ನ ಪ್ರಾರಂಬಿಸಿದ್ದರು.
1989 ರ ವಿಧಾನಸಭಾ ಚುನಾವಣೆಗೆ ಕಾಗೋಡು ತಿಮ್ಮಪ್ಪನವರನ್ನು ಕರೆ ತರುವ ಪ್ರಸ್ತಾವನೆಯನ್ನು ಮಾಡಿದರು ಇದಕ್ಕೆ ಅವರಿಗೆ ಸಾತ್ ಕೊಟ್ಟವರು ಪುತ್ತೂರಾಯರು ಮತ್ತು ಕುರುಬರ ಲಿಂಗಪ್ಪನವರು.
ಆಗ ಅವರು ಆಯ್ಕೆ ಮಾಡಿದ ಯಂಗ್ ಬ್ರಿಗೇಡ್ ಅಂದರೆ ನಾನು - ತೀನಾ ಶ್ರೀನಿವಾಸ್ ಮತ್ತು ಭೀಮನೇರಿ ಶಿವಪ್ಪನವರು.
ನಂತರ ಚುನಾವಣೆಯಲ್ಲಿ ಕಾಗೋಡು ಗೆದ್ದರು ಆಗ ಶಾಸಕರ ಪ್ರವಾಸದಲ್ಲಿ ನಾವು ಮೂವರು ಅವರ ಕಾರಿನಲ್ಲಿ ಹೊಳೆಬಾಗಿಲು ದಾಟಿ ಕರೂರು ಮತ್ತು ಬಾರಂಗಿ ಹೋಬಳಿಗೆ ಹೋಗಿದ್ದಾಗಲೆ ನಾನು ಶರಾವತಿ ನದಿಯ ಅಗಾಧ ಪ್ರಮಾಣದ ಹಿನ್ನೀರು ಮತ್ತು ಅಲ್ಲಿ ಇರುವ ಲಾಂಚ್ ಮೊದಲ ಬಾರಿ ನೋಡಿದ್ದು.
ಆ ಲಾಂಚಿಗೆ (ಪೆರಿಗೆ) ಕಾಗೋಡು ತಿಮ್ಮಪ್ಪನವರ ಕಪ್ಪು ಬಣ್ಣದ ಅಂಬಾಸಡರ್ ಕಾರನ್ನ ಹತ್ತಿಸಲಾಯಿತು ಅಲ್ಲಿಂದ ವಾಪಾಸು ಕಾರ್ಗಲ್ ಮೇಲೆ ಸಾಗರಕ್ಕೆ ಬಂದದ್ದು ಒಂದು ನೆನಪು.
ನಂತರ ಇನ್ನೊಂದು ಅವಧಿಯಲ್ಲಿ ಕಾಗೋಡು ತಿಮ್ಮಪ್ಪನವರು ಮಂತ್ರಿಗಳಾಗಿದ್ದಾಗ ಅವರ ಜೊತೆ ಹೋದಾಗಿದ್ದು ಮರೆಯಲಾರದ ನೆನಪು.
ಕಾಗೋಡು ಹಿಂದಿನ ದಿನವೇ ಎಲ್ಲಾ ಇಂಜಿನಿಯರ್ ಗಳು ತಪ್ಪದೇ ಜೊತೆಯಲ್ಲಿ ಬರಬೇಕು ಆ ಭಾಗದ ಕಾಮಗಾರಿ ವೀಕ್ಷಣೆ ಮಾಡಬೇಕು ಎಂದು ಕಟ್ಟಪ್ಪಣೆ ಮಾಡಿದ್ದರು.
ಆಗ PWD ಮತ್ತು ಜಿಲ್ಲಾ ಪಂಚಾಯತಿ ಇಂಜಿನಿಯರಿಂಗ್ ಘಟಕದ ಜೀಪುಗಳಲ್ಲಿ ಇಂಜಿನಿಯರ್ ಗಳೆಲ್ಲ ಹೊಳೆಬಾಗಿಲಿಗೆ ಭಾವಿಸಿದ್ದರು.
ಕಾಗೋಡು ತಿಮ್ಮಪ್ಪನವರು ಲಾಂಚ್ ನಲ್ಲಿ ಶರಾವತಿ ನದಿ ದಾಟುವಾಗ ಎಲ್ಲಾ ಇಂಜಿನಿಯರ್ ಗಳು ಬಂದಿದ್ದಾರ ಅಂತ ಅಲ್ಲಿದ್ದವರನ್ನ ನೋಡಿ ಖಾತ್ರಿ ಮಾಡಿಕೊಂಡು ಹೊಳೆಬಾಗಿಲು ಲಾಂಚ್ ನಲ್ಲಿ ಶರಾವತಿ ನದಿ ದಾಟಿ ತುಮರಿ ಸಮೀಪದ ಬ್ರಾಹ್ಮಣ ಕೆಪ್ಪಿಗೆ ಸಮೀಪದ ರಸ್ತೆ ಕಾಮಗಾರಿ ಪರಿಶೀಲಿಸಲು ಆ ಭಾಗದ ಇಂಜಿನಿಯರ್ ಕರೆದರೆ ಇಂಜಿನಿಯರೇ ನಾಪತ್ತೆ... ಹೊಳೆಬಾಗಿಲು ಲಾಂಚ್ ಒಟ್ಟಾಗಿಯೇ ದಾಟಿದ ಇಂಜಿನಿಯರ್ ಮಾಯ!?.
ಆಗ ಮತ್ತೆ ಅವರನ್ನು ಹುಡುಕಿ ತರುವ ಅವಕಾಶಗಳಾದ ಫೋನ್ ಅಥವ ವಾಹನ ಸೌಕರ್ಯ ಇರಲಿಲ್ಲ ಹೀಗೆ ಹೊಳೆ ಆಚಿನ ಭಾಗದಲ್ಲಿ ಅಧಿಕಾರಿಗಳು ಜನಪ್ರತಿನಿಧಿಗಳಿಗೇ ಚಳ್ಳೆಹಣ್ಣು ತಿನಿಸುತ್ತಿದ್ದರು.
Comments
Post a Comment