Skip to main content

BN 3428. ಭಾಗ 3 ನನ್ನ ಪಾದಯಾತ್ರೆ

#ಭಾಗ_ 3

#ನನ್ನ_ಪಾದಯಾತ್ರೆಗೆ_21_ವರ್ಷ

#ಹೊಳೆಬಾಗಿಲು_ಸೇತುವೆ

#ಶಿವಮೊಗ್ಗ_ತಾಳಗುಪ್ಪ_ಬ್ರಾಡ್_ಗೇಜ್_ಹಣ_ಬಿಡುಗಡೆ

#ಸಾಗರ_ಜಂಬಗಾರು_ರೈಲುನಿಲ್ದಾಣ_ಡಾಕ್ಟರ್_ರಾಮಮನೋಹರ್_ಲೋಹಿಯಾ_ರೈಲು_ನಿಲ್ದಾಣವಾಗಿ_ಪುನರ್_ನಾಮಕರಣ

#ಜೋಗ್_ಜಲಪಾತ_ಪ್ರವಾಸಿತಾಣದ_ಅಭಿವೃದ್ಧಿ

#ಹಂದಿಗೋಡು_ಕಾಯಿಲೆ_ಪೀಡಿತರಿಗೆ_ಪುನರ್ವಸತಿಗಾಗಿ


  21 ಜನವರಿ 2004 ರಿಂದ 31 ಜನವರಿ 2004ರವರೆಗೆ ಹನ್ನೊಂದು ದಿನಗಳ ಕಾಲ ಸಾಗರ ತಾಲೂಕಿನಾದ್ಯಂತ ಮೇಲಿನ ಬೇಡಿಕೆಗಳ ಈಡೇರಿಕೆಗಾಗಿ ಪಾದಯಾತ್ರೆ ಮೂಲಕ ಜನ ಜಾಗೃತಿ ಮೂಡಿಸಿದ್ದು ಈವರೆಗೆ ಯಾರೂ ಮುರಿಯದ ದಾಖಲೆ ಆಗಿ ಉಳಿದಿದೆ.

    ತಾಲ್ಲೂಕಿನ ಜನತೆ ರಾಜಕೀಯ ಮುಖಂಡರಿಗೆ, ಜನಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ಒತ್ತಾಯಿಸ ಬೇಕು, ಮಗು ಅಳದಿದ್ದರೆ ತಾಯಿ ಹಾಲು ನೀಡುವುದಿಲ್ಲ ಅಂತ ಜನರಿಗೆ ತಿಳಿಸುತ್ತಿದ್ದೆ.

    ಜನ ಸೇರಿದ ಜಾಗದಲ್ಲಿ ಸಭೆ ನಡೆಯುತ್ತಿತ್ತು ಮೊದಲಿಗೆ ಮೆಣಸಿನಸರದ ಕಲಾವಿದ ಚಂದ್ರಪ್ಪರಿOದ ಪ್ರಾಥ೯ನೆ ನಂತರ ಬಿ.ಡಿ.ರವಿಯಿ೦ದ ಸ್ವಾಗತ ಮತ್ತು ಪ್ರಸ್ತಾವನೆ ನಂತರ ನನ್ನ ಭಾಷಣ ಮೊದಲಿಗೆ ಸಭಿಕರಿಗೆ ಪ್ರಶ್ನೆ ಸಿಗಂದೂರು ಯಾರು ನೋಡಿಲ್ಲ? ಅಂದಾಗ ಸಭಿಕರೆಲ್ಲರೂ ಮೌನ, ಯಾರು ಯಾರು ನೋಡಿದ್ದೀರಿ? ಅಂದಾಗ ಎಲ್ಲರೂ ನಾವು ನೋಡಿದ್ದೇವೆ ಅನ್ನುತ್ತಿದ್ದರು ಸಿಗಂದೂರು ಹೇಗಿದೆ ಅಂದಾಗ? ಸುಂದರವಾಗಿದೆ, ಲಾಂಚ್ ಪ್ರಯಾಣ ಚೆನ್ನಾಗಿರುತ್ತೆ ಅಂತಿದ್ದರು ಆಗ ನನ್ನ ಜನಜಾಗೃತಿ ಮಾತು ಪ್ರಾರ೦ಭ ಆಗುತ್ತಿತ್ತು...

"ರಾಜ್ಯದ ವಿದ್ಯುತಗಾಗಿ ಶರಾವತಿ ನದಿಗೆ ಹಿರೇಬಾಸ್ಕರ ಎ೦ಬಲ್ಲಿ ಮೊದಲ ಆಣೆಕಟ್ಟು ನಂತರ ಲಿಂಗನಮಕ್ಕಿಯಲ್ಲಿ ದೊಡ್ಡ ಆಣೆಕಟ್ಟು ಇದರಿಂದ ಜೋಗದಲ್ಲಿ  ಅತಿ ಕಡಿಮೆ ವೆಚ್ಚದಲ್ಲಿ ವಿದ್ಯುತ್ ಉತ್ಪಾದನೆ ಆಗುತ್ತಿದೆ ಇದಕ್ಕಾಗಿ ಹೊಸನಗರ ಮತ್ತು ಸಾಗರ ತಾಲ್ಲೂಕಿನ ಲಕ್ಷಾ೦ತರ ಎಕರೆ ಕಾಡು, ಜಮೀನು ಮುಳುಗಡೆ ಆಗಿದೆ ನಿರಾಶ್ರಿತರಿಗೆ ಸರಿಯಾದ ಪರಿಹಾರ ಸಿಗಲಿಲ್ಲ, ಸರ್ಕಾರ ಎಷ್ಟೋ ಕುಟುಂಬಗಳನ್ನ ಇಲ್ಲಿಂದ ಲಾರಿಯಲ್ಲಿ ರಾತ್ರೋ ರಾತ್ರಿ ಕರೆದೊಯ್ದು ಶಿವಮೊಗ್ಗ ಸಮೀಪದ ದಟ್ಟ ಅರಣ್ಯದಲ್ಲಿ ಅಕ್ಷರಶಃ ಎಸೆದು ಬಂದಿತು.

ಇಲ್ಲಿ ಮುಳುಗಡೆಯಿಂದ ಆ ಭಾಗದ ಎರೆಡು ಹೋಬಳಿ ಕರೂರು, ಭಾರಂಗಿಗೆ ರಸ್ತೆ ಸಂಪಕ೯ ಕಳೆದು ಕೊಂಡಿದ್ದು ನಂತರ ಸಕಾ೯ರ ತಾತ್ಕಾಲಿಕವಾಗಿ ಲಾಂಚ್ ಒದಗಿಸಿದೆ ಆದರೆ ಸಂಜೆ ಸೂಯ೯ ಮುಳುಗಿದ ನಂತರ ಲಾಂಚ್ ಸಾಗರದ ಕಡೆಯ ತೀರದಲ್ಲಿ ಬಂದು ನಿಂತರೆ ಮತ್ತೆ ಪ್ರಾರಂಭ ಆಗುವುದು ನಾಳೆ ಬೆಳಿಗ್ಗೆ ಅಷ್ಟರಲ್ಲಿ ಯಾರಿಗಾದರು ಕಾಯಿಲೆ ಆದರೆ ಅಥವ ಹೆಣ್ಣು ಮಗಳಿಗೆ ಹೆರಿಗೆ ನೋವು ಶುರುವಾದರೆ ಸಮೀಪದ ಸಾಗರಕ್ಕೆ ಹೋಗಲು ಕೊಗಾರು ಮಾಗ೯ವಾಗಿ ಕಾಗ೯ಲ್ ಮುಖಾಂತರ ಸಾಗರ ಆಸ್ಪತ್ರೆಗೆ 100 ಕಿ.ಮಿ. ಗಳನ್ನ 3 ಗಂಟೆ ಪ್ರಯಾಣ ಮಾಡಿ ತಲುಪ ಬೇಕು ಅಂದಾಗ ಜನ ತಮ್ಮ ಮೊಜು ಮಸ್ತಿನ ತುಮರಿ ಲಾಂಚ್ ಪ್ರಯಾಣದಿಂದ ಜನರ ಸಂಕಷ್ಟದ ಕಡೆ ಹೊರಳುತ್ತಿದ್ದರು.

   ಇದೇ ರೀತಿ ಹಂದಿಗೋಡು ಕಾಯಿಲೆ ಬಗ್ಗೆ, ಔಷದಿ ಕಂಡು ಹಿಡಿಯದ ಕಾಯಿಲೆ ಯಾವುದು? ಎಂದು ಪ್ರಶ್ನಿಸಿದಾಗ ನೆರೆದ ಜನ ಏಡ್ಸ್ ಅಂತಿದ್ದರು ಆಗ ಅವರಿಗೆ ವಿಶ್ವದಲ್ಲಿ ಮೊದಲ ಸಾರಿ ಸಾಗರ ತಾಲ್ಲೂಕಿನ ಹಂದಿಗೋಡಲ್ಲಿ ಕಂಡು ಬಂದ ನಿಗೂಡ ಕಾಯಿಲೆಯಿ೦ದ ಮನುಷ್ಯ ಅಂಗವಿಕಲನಾಗುತ್ತಾನೆ, ಸಂದಿಗಳ ಮೂಳೆ ಬೆಳೆದು ವಿಪರೀತ ನೋವು ಅನುಭವಿಸಿ ಕುಬ್ಜನಾಗುತ್ತಾನೆ ಇದಕ್ಕೆ ಈವರೆಗೆ ಕಾರಣ ಕಂಡು ಹಿಡಿಯಲಾಗಲಿಲ್ಲ, ಔಷದಿಯೂ ಇಲ್ಲ ಅದರಿಂದ ಇದಕ್ಕೆ ಹಂದಿಗೋಡು ನಿಗೂಡ ಕಾಯಿಲೆ ಅಂತ ಹೆಸರು ಅಂದಾಗ ಸಭೆಯಲ್ಲಿ ನಿಶ್ಯಬ್ದ.

   1952ರಲ್ಲಿ ಕಾಗೋಡು ಸತ್ಯಾಗ್ರಹ ಗಣಪತಿಯಪ್ಪ, ಶಾಂತವೇರಿ ಗೋಪಾಲಗೌಡರ ನೇತೃತ್ವದಲ್ಲಿ ನಡೆಯಿತು "ಉಳುವವನೆ ಹೊಲದೊಡೆಯಾ" ಎ೦ಬ ಕಾನೂನು ಜಾರಿಗಾಗಿ ಆ ಚಳವಳಿಯಿ೦ದಲೆ ಇವತ್ತು ಗೇಣಿಜಮೀನು ಪಡೆಯಲು ಸಾಧ್ಯವಾಯಿತು ಈ ಚಳವಳಿ ಬೆಂಬಲಿಸಿ ಸಮಾಜವಾದಿ ಪಾಟಿ೯ಯ ನೇತಾರ ಸಂಸದ ಸದಸ್ಯ ಡಾ|| ರಾಮಮನೋಹರ ಲೋಹಿಯ ಸಾಗರಕ್ಕೆ ರೈಲಿನಲ್ಲಿ ಬಂದು ಕಾಗೋಡಿಗೆ ಹೋಗಿ ಚಳವಳಿಗಾರರನ್ನ ಬೆಂಬಲಿಸಿ ಸಭೆಯಲ್ಲಿ ಮಾತಾಡಿ ಬಂದು  ಸಾಗರದ ರೈಲು ನಿಲ್ದಾಣದ ವಿಶ್ರಾOತಿ ಕೊಠಡಿಯಲ್ಲಿ ರಾತ್ರಿ ತಂಗಿದ್ದಾಗ ಅವರನ್ನ ಬಂದಿಸಲಾಗಿತ್ತು.

   ಹಾಗಾಗಿ ಹಾಲಿ ಸಾಗರ ಜOಬಗಾರು ಹೆಸರಿನ ಸಾಗರ ರೈಲು ನಿಲ್ದಾಣಕ್ಕೆ ಡಾII ರಾಮ ಮನೋಹರ ಲೋಹಿಯ ರೈಲು ನಿಲ್ದಾಣ ಅಂತ ಹೆಸರಿಡಬೇಕು ಇದಕ್ಕೆ NDA ಸಕಾ೯ರದಲ್ಲಿ ಉಪಪ್ರದಾನಿ ಆಗಿದ್ದ ಲಾಲ್ ಕೃಷ್ಣ ಅಡ್ವಾನಿಯವರಿಗೆ ಮನವಿ ನೀಡಿದ್ದು ಅವರು ಕನಾ೯ಟಕ ಸಕಾ೯ರ, ಶಿವಮೊಗ್ಗ ಜಿಲ್ಲಾಡಳಿತದ ಮತ್ತು ಸಾಗರ ನಗರಸಭೆಯ ಒಪ್ಪಿಗೆ ಪತ್ರದ ಪ್ರಕಾರ ಹೆಸರು ಬದಲಾವಣೆಗೆ ಕೇಂದ್ರ ಸಕಾ೯ರದ ಒಪ್ಪಿಗೆ ನೀಡಿದ್ದಾರೆ ರೈಲ್ವೆ ಇಲಾಖೆ ಈ ನಾಮಕರಣ ಮಾಡುವ ಕೆಲಸ ಬಾಕಿ ಇದೆ.

   ಜೋಗ ಜಲಪಾತ ನೋಡುವವರು 1975ರ ನಂತರ ಕಡಿಮೆ ಆದರು ಈ ರೀತಿ ಪ್ರವಾಸಿಗಳು ಕಡಿಮೆ ಆಗಲು ಕಾರಣ ಇಲ್ಲಿನ ಮೂಲ ಸೌಕಯ೯ದ ಕೊರತೆ ವಿಶ್ವದ ಸುಂದರ ಜಲಪಾತ ನೋಡಲು ಪ್ರವಾಸಿಗರಿಗೆ ಹೆಚ್ಚಿನ ಅನುಕೂಲ ಒದಗಿಸಿದರೆ ಪ್ರವಾಸಿಗಳು ಹೆಚ್ಚಾದರೆ ರಾಜ್ಯಕ್ಕೆ, ಜಿಲ್ಲೆಗೆ ಮತ್ತು ನಮ್ಮ ತಾಲ್ಲೂಕಿನ ಆದಾಯಕ್ಕೆ ಅನುಕೂಲ ಹಾಗಾಗಿ ತಾಲ್ಲೂಕಿನ ಜನತೆ ರಾಜಕೀಯ ಮುಖಂಡರಿಗೆ, ಜನಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ಒತ್ತಾಯಿಸ ಬೇಕು, ಮಗು ಅಳದಿದ್ದರೆ ತಾಯಿ ಹಾಲು ನೀಡುವುದಿಲ್ಲ ಅಂತ ಜನರಿಗೆ ತಿಳಿಸುತ್ತಿದ್ದೆ.

 .

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...