Skip to main content

Posts

Showing posts with the label Iruvakki Agriculture University inauguration

ಅರಣ್ಯದಲ್ಲಿ ನಿಮಿ೯ಸಿರುವ ಇರುವಕ್ಕಿ ಕೃಷಿ ವಿದ್ಯಾಲಯ ಅನೇಕ ಪ್ರಥಮಗಳ ದಾಖಲೆಯೊಂದಿಗೆ ದಿನಾಂಕ 24- ಜುಲೈ-2021 ಶನಿವಾರ ಮುಖ್ಯಮಂತ್ರಿ ಯಡೂರಪ್ಪರಿಂದ ಉದ್ಘಾಟನೆ

#ನಮ್ಮ_ಊರಿನ_ಇರುವಕ್ಕಿ_ಕೃಷಿ_ವಿದ್ಯಾಲಯ_ಉದ್ಘಾಟನೆ_ಆಗುತ್ತಿರುವ_ಸಿಹಿ_ಸುದ್ದಿ. #ಶಂಕುಸ್ಥಾಪನೆ_ಆಗುವಾಗ_ಯಡೂರಪ್ಪ_ಸಂಸದರು. #ಉದ್ಘಾಟಿಸುವಾಗ_ಮುಖ್ಯಮಂತ್ರಿಯಾಗಿ_ಕೊನೆದಿನಗಳು.   #ಇರುವಕ್ಕಿ  ಇರುವಕ್ಕಿ ನಮ್ಮದೇ ಯಡೇಹಳ್ಳಿ ಗ್ರಾಮ ಪಂಚಾಯಿತಿಗೆ ಸೇರಿದ ಗ್ರಾಮ ಇದು ಒಂದು ಕಾಲದಲ್ಲಿ ಮಡಿಕೆ ತಯಾರಿಸುತ್ತಿದ್ದ ಕುಂಬಾರ ಜನಾಂಗದವರು ವಲಸೆ ಬಂದು ನೆಲೆ ನಿಂತ ದಟ್ಟ ಅರಣ್ಯ ಪ್ರದೇಶ.     #ವಿನೋಬಾ_ಬಾವೆ_ಭೂದಾನ_ಚಳವಳಿಯಲ್ಲಿ_ಭಾಗವಹಿಸಿ_ಭೂದಾನ_ಮಾಡಿದ_ಇರುವಕ್ಕಿ_ಪುಟ್ಟಶೆಟ್ಟರು  ಇಲ್ಲಿನ ಪುಟ್ಟ ಶೆಟ್ಟರೊಬ್ಬರೆ ಆ ಕಾಲದ ಕುಂಬಾರ ಸಮೂದಾಯದ ಖಾತೆ ಜಮೀನುದಾರರು ಇವರು ಆಗಿನ ವಿದ್ಯಾ ಮಂತ್ರಿ ಆಗಿದ್ದ  ಬದರಿನಾರಾಯಣ ಆಯ್ಯಂಗಾರ ತಂದೆ ಜಮೀನ್ದಾರ್, ಇನಾಂದಾರ್ ಮತ್ತು ಕೊಡುಗೈ ದಾನಿ ಆಗಿದ್ದ ರಾಮಕೃಷ್ಣ ಅಯ್ಯಂಗಾರ್ ಮತ್ತು ಬದರಿನಾರಾಯಣ ಅಯ್ಯಂಗಾರರ ಅಣ್ಣ ವೆಂಕಟಾಚಲ ಆಯ್ಯಂಗಾರರ ಆಪ್ತರು ಅವರೆಲ್ಲರ ಸಲಹೆ ಮತ್ತು ಸಹಕಾರದಿಂದ ಅಡಿಕೆ ಕೃಷಿ ಮಾಡುತ್ತಾರೆ.   ವಿನೋಬಾ ಭಾವೆಯವರು ಭೂದಾನ ಚಳವಳಿಗೆ ಆನಂದಪುರಂಗೆ ಬಂದಾಗ ತಮ್ಮ ಭತ್ತ ಬೆಳೆಯುವ 5 ಎಕರೆ ತರಿ ಜಮೀನು ದಾನ ಮಾಡಿದ ಮಹಾನುಭವರು ಅವರು ಆ ಕಾಲದಲ್ಲಿ ಅತ್ಯಂತ ಹಿಂದುಳಿದ ಕುಂಬಾರ ಜನಾಂಗದ ಪುಟ್ಟ ಶೆಟ್ಟರ ಭೂದಾನವನ್ನು ಅವತ್ತಿನ ಸಭೆಯಲ್ಲಿ ಸರ್ದಾರ್ ಎಣ್ಣೆಕೊಪ್ಪದ ಮಲ್ಲಿಕಾರ್ಜುನ ಗೌಡರು ವಿನೋಬಾ ಭಾವೆ ಎದ...