Skip to main content

Posts

Showing posts with the label Patna Anil Hegde Interview Part -4

4138.ಭಾಗ_4_ಕುಂದಾಪುರದ_ಕನ್ನಡಿಗ_ಅನಿಲ್_ಪ್ರಸಾದ್_ಹೆಗ್ಡೆ

ಭಾಗ_4_ಕುಂದಾಪುರದ_ಕನ್ನಡಿಗ_ಅನಿಲ್_ಪ್ರಸಾದ್_ಹೆಗ್ಡೆ.   ಜೇನು ಮತ್ತು ಆನೆಗಳ ಮೇಲೆ ಕುಲಾಂತರಿ ಬೀಜಗಳ ಪರಿಣಾಮ ರಾಜ್ಯಸಭೆಯಲ್ಲಿ ಅವರು ಮಂಡಿಸಿದ ಕುಲಾಂತರಿ ಬೀಜಗಳ ದುಷ್ಟರಿಣಾಮದ ವಿಷಯ.   ಕುಂದಾಪುರದ ಕನ್ನಡಿಗ ಅನಿಲ್ ಪ್ರಸಾದ್ ಹೆಗ್ಡೆ ಜಾರ್ಜ್ ಪರ್ನಾಂಡಿಸರ ಜೊತೆಯಾಗಿ ದೇಸಿ ಬೀಜ ಸಂರಕ್ಷಣೆಗಾಗಿ ಹೋರಾಡುತ್ತಲೇ ಬಂದವರು.    ಕುಲಾಂತರಿ ಬೀಜಗಳಿಂದ ಜೇನಿನಿಂದ ಆನೆ ತನಕ ಆಗುವ ಅನಾಹುತದ ಬಗ್ಗೆ ಅವರು ಸಂಸತ್ ನಲ್ಲಿ ಮಂಡಿಸಿದ ವಿಚಾರದ ಬಗ್ಗೆ ಈ ವಿಡಿಯೋ ಸಂದರ್ಶನದಲ್ಲಿ ಮಾತಾಡಿದ್ದಾರೆ.   ಜೇನು ಸಾಕಾಣಿಕೆದಾರರು ಮತ್ತು ದೇಸಿ ಬೀಜ ಸಂರಕ್ಷರು ತಪ್ಪದೇ ಈ ಸಂದರ್ಶನ ನೋಡಿ ಮತ್ತು ಆಸಕ್ತರಿಗೆ ಹೆಚ್ಚು ಶೇರ್ ಮಾಡಲು ವಿನಂತಿ.  ಕುಲಾಂತರಿ (Genetically Modified / GM) ಬೆಳೆಗಳ ವಿಸ್ತರಣೆ ಮತ್ತು ಅವುಗಳೊಂದಿಗೆ ತಳುಕು ಹಾಕಿಕೊಂಡಿರುವ ಅಧಿಕ ರಾಸಾಯನಿಕ ಹಾಗೂ ಕೀಟನಾಶಕ ಬಳಕೆ ಪರಿಸರ ವ್ಯವಸ್ಥೆಯ ಎರಡು ಪ್ರಮುಖ ಜೀವಿಗಳಾದ ಜೇನುನೊಣಗಳು ಮತ್ತು ಆನೆಗಳ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ.   ಬಹುತೇಕ ಕುಲಾಂತರಿ ಬೆಳೆಗಳು (ಉದಾಹರಣೆಗೆ ಗ್ಲೈಫೋಸೇಟ್-ನಿರೋಧಕ ಬೆಳೆಗಳು) ಕಳೆನಾಶಕಗಳನ್ನು ತಡೆದುಕೊಳ್ಳುವಂತೆ ರೂಪಿತವಾಗಿರುತ್ತವೆ.   ಇದರಿಂದಾಗಿ ಹೊಲಗಳಲ್ಲಿ ಸಿಂಪರಣೆಯಾಗುವ ರಾಸಾಯನಿಕಗಳ ಪ್ರಮಾಣ ಅಧಿಕವಾಗುತ್ತದೆ. ​ ಹೊಲದಂಚಿನ ನೈಸರ್ಗಿಕ ಹೂಬಿಡುವ ಕಳೆ ಗಿಡಗಳು ಸಂಪೂರ್ಣವಾಗಿ ನಾಶ...