#ದೊಂಡಿಯಾ_ವಾಘ್_ಭಾಗ_3 #ಶಿವಮೊಗ್ಗ_ಜಿಲ್ಲೆಯ_ವೀರಸೇನಾನಿ_ಬೆಂಕಿಚೆಂಡು #ಮರಾಠರ_ಬ್ರಿಟೀಷರ_ವಿರುದ್ದ_ಹೋರಾಡಲು_ಟಿಪ್ಪು_ಸಹಾಯ_ಕೇಳಿ_ಹೋದ_ದೊಂಡಿಯ #ಇವರಿಬ್ಬರ_ವೈಮನಸ್ಸಿನಿಂದ_ಮತ್ತು_ಮೀರ್_ಸಾದಿಕ್_ಕುತಂತ್ರದಿಂದ_ದೊಂಡಿಯಾ_ಸೆರೆಮನೆಗೆ #ಟಿಪ್ಪೂಸುಲ್ತಾನ್_ನಾಲ್ಕನೇ_ಆಂಗ್ಲೋ_ಮ್ಮೆಸೂರು_ಕದನದಲ್ಲಿ_ಹತರಾದಾಗ #ಶ್ರೀರಂಗಪಟ್ಟಣದ_ಸೆರೆವಾಸದಿಂದ_ತಪ್ಪಿಸಿಕೊಂಡು_ಬಂದು_ಪುನಃ_ಸೈನ್ಯ_ಕಟ್ಟುತ್ತಾರೆ. https://youtu.be/244mWNyxjr4?si=J_CmKdy1uEPM4DZg ಮೂರನೇ ಮೈಸೂರು ಯುದ್ಧದಲ್ಲಿ (1792) ಟಿಪ್ಪು ತಲ್ಲೀನನಾಗಿದ್ಡ ಈ ಸಮಯವನ್ನು ಉಪಯೋಗಿಸಿ ಧೊಂಡಿಯ ಟಿಪ್ಪುವಿನ ಸೈನ್ಯ ತೊರೆದು ಹೋಗಲು ನಿಶ್ಚಯಿಸಿ, ಯೋಜನೆ ಮಾಡಿ ಸಫಲನಾದ. ತನ್ನೊಂದಿಗೆ ಇನ್ನು ಕೆಲವು ಸಹಚರರನ್ನು ಸೇರಿಸಿಕೊಂಡು ಈಗಿನ ಗದಗದಲ್ಲಿರುವ ಲಕ್ಷ್ಮೇಶ್ವರದ ದೇಸಾಯಿಯನ್ನು (ಕಂದಾಯ ವಸೂಲಿ ಮಾಡುವ ಹಕ್ಕಿರುವ ಸ್ಥಾನ) ಸೇರಿದ. ದೇಸಾಯಿಯು ಟಿಪ್ಪುವಿಗೆ ಕಪ್ಪ ಕಾಣಿಕೆ ಕೊಡುವ ಬದಲು ತನಗೆ ಕೊಡಬೇಕು ತಾನು ಅವನ ಸಹಾಯಕ್ಕೆ ಇರುವುದಾಗಿ ಒಪ್ಪಿಸಿದ. ಬ್ರಿಟೀಶರೊಂದಿಗೆ ಯುದ್ಧದಲ್ಲಿ ಟಿಪ್ಪುವಿನ ಸೋಲಾಯಿತು ಆಂಗ‍್ಲರ ಬಳಿ ತನ್ನ ಇಬ್ಬರು ಮಕ್ಕಳನ್ನು ಒತ್ತೆಯಾಗಿ ಇಡುವ ಪರಿಸ್ಥಿತಿ ಬಂದಿತು, ಧೊಂಡಿಯ ಟಿಪ್ಪುವಿನ ಸಧ್ಯದ ದೌರ್ಬಲ್ಯದ ಲಾಭ ಪಡೆದು ಮೈಸೂರು ಮತ್ತು ಮರಾಠರ ಗಡಿ ಭಾಗದಲ್ಲಿ ಒಂದೊಂ...