Blog number 905. ಕರ್ನಾಟಕ ಸರ್ಕಾರದ ಸರ್ಕಾರಿ ನೌಕರರಿಗೆ ನೀಡುವ ಜಿಲ್ಲಾವಾರು ಸರ್ವೋತ್ತಮ ಪ್ರಶಸ್ತಿಗೆ ಭಾಜನರಾಗಿರುವ ಶಿವಮೊಗ್ಗ ಜಿಲ್ಲಾ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಾಗೇಂದ್ರ ಎಪ್ ಹೊನ್ನಾಳಿ ಅವರಿಗೆ ಅಭಿನಂದನೆಗಳು
#ಅಬಿನಂದನೆಗಳು_ಡಾಕ್ಟರ್_ನಾಗೇಂದ್ರ_ಹೊನ್ನಾಳಿಯವರಿಗೆ. #ಈ_ಸಾಲಿನ_ಸರ್ಕಾರದ_ಸವೋ೯ತ್ತಮ_ಪ್ರಶಸ್ತಿ_ಶಿವಮೊಗ್ಗದಅಡಿಷನಲ್_ಡೆಪ್ಯೂಟಿಕಮಿಷನರ್_ನಾಗೇಂದ್ರ_ಹೊನ್ನಾಳಿಯವರಿಗೆ. #ಮುಖ್ಯಮಂತ್ರಿಗಳಿಂದ_ಪ್ರಶಸ್ತಿಫಲಕ_ಸ್ಪೀಕರಿಸಲಿದ್ದಾರೆ. #ಇವರು_ಸೇವೆ_ಸಲ್ಲಿಸಿದ_ಎಲ್ಲಾಕಡೆಯೂ_ಅತ್ಯುತ್ತಮ_ಕೆಲಸಗಾರರೆಂದೇ_ಜನ_ಗುರುತಿಸುತ್ತಾರೆ. ಕರ್ನಾಟಕ ರಾಜ್ಯ ಸರ್ಕಾರ ಪ್ರತಿ ಜಿಲ್ಲೆಯ ಒಬ್ಬ ಅತ್ಯುತ್ತಮವಾಗಿ ಸೇವೆ ಸಲ್ಲಿಸುವ ಸರ್ಕಾರಿ ನೌಕರರನ್ನು ಸರ್ವೋತ್ತಮ ಪ್ರಶಸ್ತಿಗೆ ಆಯ್ಕೆ ಮಾಡುತ್ತದೆ. ಐವತ್ತು ಸಾವಿರ ನಗದು, ಪ್ರಶಸ್ತಿ - ಪಲಕದ ಈ ಪುರಸ್ಕಾರ ಸರ್ಕಾರಿ ನೌಕರರಲ್ಲಿ ಒಂದು ಪ್ರತಿಷ್ಠಿತ ಪ್ರಶಸ್ತಿ ಇದನ್ನು ಸ್ವತಃ ಮುಖ್ಯಮಂತ್ರಿಗಳೇ ಸರ್ವೋತ್ತಮ ಪ್ರಶಸ್ತಿಗೆ ಆಯ್ಕೆ ಆದವರಿಗೆ ಸನ್ಮಾನಿಸಿ ವಿತರಿಸಲಿದ್ದಾರೆ. ಶಿವಮೊಗ್ಗ ಜಿಲ್ಲೆಯ ಹೆಚ್ಚುವರಿ ಜಿಲ್ಲಾದಿಕಾರಿ (Additional Deputy Commissioner) ಡಾ.ನಾಗೇಂದ್ರ ಎಪ್. ಹೊನ್ನಾಳಿಯವರನ್ನು ಈ ಸಾಲಿನ ಸರ್ವೋತ್ತಮ ಪ್ರಶಸ್ತಿಗೆ ಆಯ್ಕೆ ಮಾಡಿದ್ದಾರೆ. ಹಾವೇರಿ ಜಿಲ್ಲೆಯ ಅತ್ಯಂತ ಬಡ ಕುಟುಂಬದ ಪಕೀರಪ್ಪ ಈರಪ್ಪರ ಪುತ್ರ, ವಿದ್ಯಾರ್ಥಿ ಜೀವನದಲ್ಲಿ ಪ್ರತಿಭಾವಂತ ವಿದ್ಯಾರ್ಥಿ ಆಗಿದ್ದ ನಾಗೇಂದ್ರ ಹೊನ್ನಾಳಿಗೆ ಯಾವುದೇ ಅನುಕೂಲ ಇರಲಿಲ್ಲ ಅಷ್ಟೇಕೆ ಇವರಿಗೆ ಸರಿಯಾದ ಮಾರ್ಗದರ್ಶನ ನೀಡುವವರೂ ಇರಲಿಲ್ಲ. ...