Blog number 905. ಕರ್ನಾಟಕ ಸರ್ಕಾರದ ಸರ್ಕಾರಿ ನೌಕರರಿಗೆ ನೀಡುವ ಜಿಲ್ಲಾವಾರು ಸರ್ವೋತ್ತಮ ಪ್ರಶಸ್ತಿಗೆ ಭಾಜನರಾಗಿರುವ ಶಿವಮೊಗ್ಗ ಜಿಲ್ಲಾ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಾಗೇಂದ್ರ ಎಪ್ ಹೊನ್ನಾಳಿ ಅವರಿಗೆ ಅಭಿನಂದನೆಗಳು
#ಈ_ಸಾಲಿನ_ಸರ್ಕಾರದ_ಸವೋ೯ತ್ತಮ_ಪ್ರಶಸ್ತಿ_ಶಿವಮೊಗ್ಗದಅಡಿಷನಲ್_ಡೆಪ್ಯೂಟಿಕಮಿಷನರ್_ನಾಗೇಂದ್ರ_ಹೊನ್ನಾಳಿಯವರಿಗೆ.
#ಮುಖ್ಯಮಂತ್ರಿಗಳಿಂದ_ಪ್ರಶಸ್ತಿಫಲಕ_ಸ್ಪೀಕರಿಸಲಿದ್ದಾರೆ.
#ಇವರು_ಸೇವೆ_ಸಲ್ಲಿಸಿದ_ಎಲ್ಲಾಕಡೆಯೂ_ಅತ್ಯುತ್ತಮ_ಕೆಲಸಗಾರರೆಂದೇ_ಜನ_ಗುರುತಿಸುತ್ತಾರೆ.
ಕರ್ನಾಟಕ ರಾಜ್ಯ ಸರ್ಕಾರ ಪ್ರತಿ ಜಿಲ್ಲೆಯ ಒಬ್ಬ ಅತ್ಯುತ್ತಮವಾಗಿ ಸೇವೆ ಸಲ್ಲಿಸುವ ಸರ್ಕಾರಿ ನೌಕರರನ್ನು ಸರ್ವೋತ್ತಮ ಪ್ರಶಸ್ತಿಗೆ ಆಯ್ಕೆ ಮಾಡುತ್ತದೆ.
ಐವತ್ತು ಸಾವಿರ ನಗದು, ಪ್ರಶಸ್ತಿ - ಪಲಕದ ಈ ಪುರಸ್ಕಾರ ಸರ್ಕಾರಿ ನೌಕರರಲ್ಲಿ ಒಂದು ಪ್ರತಿಷ್ಠಿತ ಪ್ರಶಸ್ತಿ ಇದನ್ನು ಸ್ವತಃ ಮುಖ್ಯಮಂತ್ರಿಗಳೇ ಸರ್ವೋತ್ತಮ ಪ್ರಶಸ್ತಿಗೆ ಆಯ್ಕೆ ಆದವರಿಗೆ ಸನ್ಮಾನಿಸಿ ವಿತರಿಸಲಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಹೆಚ್ಚುವರಿ ಜಿಲ್ಲಾದಿಕಾರಿ (Additional Deputy Commissioner) ಡಾ.ನಾಗೇಂದ್ರ ಎಪ್. ಹೊನ್ನಾಳಿಯವರನ್ನು ಈ ಸಾಲಿನ ಸರ್ವೋತ್ತಮ ಪ್ರಶಸ್ತಿಗೆ ಆಯ್ಕೆ ಮಾಡಿದ್ದಾರೆ.
ಹಾವೇರಿ ಜಿಲ್ಲೆಯ ಅತ್ಯಂತ ಬಡ ಕುಟುಂಬದ ಪಕೀರಪ್ಪ ಈರಪ್ಪರ ಪುತ್ರ, ವಿದ್ಯಾರ್ಥಿ ಜೀವನದಲ್ಲಿ ಪ್ರತಿಭಾವಂತ ವಿದ್ಯಾರ್ಥಿ ಆಗಿದ್ದ ನಾಗೇಂದ್ರ ಹೊನ್ನಾಳಿಗೆ ಯಾವುದೇ ಅನುಕೂಲ ಇರಲಿಲ್ಲ ಅಷ್ಟೇಕೆ ಇವರಿಗೆ ಸರಿಯಾದ ಮಾರ್ಗದರ್ಶನ ನೀಡುವವರೂ ಇರಲಿಲ್ಲ.
ಸ್ವಂತ ಪರಿಶ್ರಮದಿಂದ ವ್ಯಾಸಂಗ ಮಾಡಿ ದೆಹಲಿಯ ಜೆ.ಎನ್.ಯೂ ನಲ್ಲಿ ಪಿ.ಹೆಚ್.ಡಿ ಮಾಡಿದವರು.
ಇವರಿಗೆ ಐ.ಎ.ಎಸ್ ಮಾಡಬೇಕೆಂಬ ಅದಮ್ಯ ಆಸೆಯ ಗುರಿ ಇತ್ತು ಆದರೆ ಕೆ.ಎ.ಎಸ್.ಮಾಡಿ ತಹಸೀಲ್ದಾರ್ ಹುದ್ದೆ ಅಲಂಕರಿಸಿದ ಮೇಲೆ ಸಮಯಾವಕಾಶದ ಕೊರತೆ ಮತ್ತು ಕೆಲಸದ ಒತ್ತಡದಲ್ಲಿ ಸಾಧ್ಯವಾಗಲಿಲ್ಲ.
ತಹಸೀಲ್ದಾರ್ ನಂತರ ಅನೇಕ ವಿವಿದ ಹುದ್ದೆಗಳನ್ನು ಕಳಂಕ ರಹಿತವಾಗಿ ನಿರ್ವಹಿಸಿದರು, ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನಲ್ಲಿ ತಹಸೀಲ್ದಾರ್, ಶಿವಮೊಗ್ಗದ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಚೀಪ್ ಅಡ್ಮಿನಿಸ್ಟ್ರೇಷನ್ ಆಫೀಸರ್, ಮಲೆನಾಡು ಅಭಿವೃದ್ದಿ ಮಂಡಳಿ ಕಾಯ೯ದರ್ಶಿಗಳಾಗಿ, ಶಿವಮೊಗ್ಗ ಜಿಲ್ಲಾ ನಗರ ಯೋಜನಾ ಕೇಂದ್ರದ ಜಿಲ್ಲಾ ಯೋಜನಾಧಿಕಾರಿಗಳಾಗಿ, ಉತ್ತರಕನ್ನಡ ಜಿಲ್ಲೆಯ ಸಿರ್ಸಿಯಲ್ಲಿ ಉಪ ವಿಭಾಗಧಿಕಾರಿಗಳಾಗಿ, ಹುಕ್ಕೇರಿ, ಹಾನಗಲ್ ನಲ್ಲಿಯೂ ಕೆಲಸ ನಿರ್ವಹಿಸಿದ್ದಾರೆ.
ಇವರ ವಿಶೇಷ ಅಂದರೆ ಜನಪ್ರತಿನಿಧಿಗಳನ್ನು, ತಮ್ಮ ಮೇಲಾಧಿಕಾರಿಗಳನ್ನು, ತಮ್ಮ ಸಿಬ್ಬಂದಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಾವ೯ಜನಿಕರ ಮತ್ತು ಪತ್ರಕರ್ತರ ಅಭಿಪ್ರಾಯಕ್ಕೆ ಒತ್ತುಕೊಟ್ಟು ಸರ್ಕಾರದ ಕೆಲಸ ಸುರಳಿತವಾಗಿ ನಡೆಸುವ ಇವರು ಕಾನೂನು ಕಾಯ್ದೆಗೆ ಯಾವ ರೀತಿಯಲ್ಲೂ ಚ್ಯುತಿ ಬಾರದಂತೆ ಜವಾಬ್ದಾರಿ ವಹಿಸುತ್ತಾರಾದ್ದರಿಂದ ಇವರ ಮೇಲೆ ಕಪ್ಪು ಚುಕ್ಕೆ ಇಲ್ಲ.
ಈ ಸಾಲಿನ ರಾಜ್ಯ ಸರ್ಕಾರದ ಪುರುಶೋತ್ತಮ ಪ್ರಶಸ್ತಿಗೆ ಇವರ ಆಯ್ಕೆ ಸರ್ವೋತ್ತಮ ಆಯ್ಕೆ.
Comments
Post a Comment