Blog number 916. ಕನ್ನಡಿಗ ಇನ್ಪೋಸಿಸ್ ನಾರಾಯಣ ಮೂರ್ತಿ ಮತ್ತು ಸುಧಾ ನಾರಾಯಣ ಮೂರ್ತಿ ದಂಪತಿಗಳ ಅಳಿಯ ರಿಷಿ ಸುನಾಕ್ ಇಂಗ್ಲೇಂಡ್ ನ ಪ್ರದಾನಿ ಆಯ್ಕೆಯ ಅಂತಿಮ ಸುತ್ತಿನಲ್ಲಿದ್ದಾರೆ, ಭಾರತೀಯ ಮೂಲದ ಹಾಲಿ ಇಂಗ್ಲೇಂಡ್ ದೇಶದ ಪ್ರಜೆಯಾದ ರಿಷಿ ಸುನಾಕ್ ಇಂಗ್ಲೆಂಡ್ ಪ್ರದಾನಿ ಆಗಲಿ ಎಂದು ಹಾರೈಸೋಣ, ಅಲ್ಲಿನ ಪ್ರದಾನಿ ಆಯ್ಕೆಯ ಅಂತಿಮ ಹಂತಗಳ ಬಗ್ಗೆ ಅಲ್ಲಿನ ಹ್ಯಾಂಪ್ಶೈರ್ ನಿವಾಸಿ ಪ್ಲೀಟ್ ಟವನ್ ಕೌನ್ಸಿಲ್ ನ ಮಾಜಿ ಕಾರ್ಪೋರೇಟ್ ರ್ ಗೆಳೆಯ ಕುಮಾರ್ ಕುಂಠಿಕಾನಮಠ ಬರೆದಿದ್ದಾರೆ ಓದಿ
#ಈ_ಬಗ್ಗೆ_ಅಲ್ಲಿನ_ಕನ್ನಡಿಗ
#ಕುಮಾರ್_ಕುಂಟಿಕಾನಮಠ
#ಲಂಡನ್_ಹ್ಯಾಂಪ್_ಶೈರ್_ಪ್ಲೀಟ್_ಟವನ್_ಕೌನ್ಸಿಲ್_ಮಾಜಿ_ಕಾರ್ಪೊರೇಟರ್
#ಬರೆದ_ಪೋಸ್ಟ್_ಅತ್ಯುತ್ತಮ_ಮಾಹಿತಿ.
#ರಿಷಿ_ಸೋನಾಕ್_ಇಂಗ್ಲೇಂಡಿನ_ಪ್ರದಾನಿ_ಆಗಲಿ_ಎಂದು_ಹಾರೈಸೋಣ.
ಇನ್ನು ಮುಂದಿನ ಸುತ್ತುಗಳು ಕುತೂಹಲ ದಾಯಕ ..ಮುಂದಿನ ಸುತ್ತುಗಳಲ್ಲಿ ಹೇಗೆ ರಿಷಿ ಸುನಾಕ್ ರವರು ಸಂಸದರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಾರೆಂಬುದು ಅವರನ್ನು ಗೆಲುವಿನ ಗೆರೆಯನ್ನು ದಾಟಿಸುತ್ತದೆ..ಉದಾಹರಣೆಗೆ ಕೆಲವೊಬ್ಬ ನಾಯಕರಿಗೆ ರಿಷಿ ಸುನಾಕ್ ರವರು ಗೆದ್ದು ಬಂದರೆ ಅವರ ಕ್ಯಾಬಿನೆಟ್ ನಲ್ಲಿ ಯಾವ ಜವಾಬ್ದಾರಿ ಸಿಗಬಹುದು ಎಂದು ಒಂದು ಸೂಚನೆ ಸಿಕ್ಕಿದರೆ ಆ ನಾಯಕ ಮತ್ತಷ್ಟು ತನ್ನ ಬೆಂಬಲಿಗ ಸಂಸದರನ್ನು ರಿಷಿ ಯವರಿಗೆ ಬೆಂಬಲಿಸ ಬಹುದು ...ಬೋರಿಸ್ ಜಾನ್ಸನ್ ರವರು ತೆಗೆದುಕೊಂಡ ಕೆಲವು ನಿರ್ಧಾರಗಳನ್ನು ರಿಷಿ ಪ್ರಧಾನಿ ಯಾದರೆ ತಡೆಯಬಹುದೆಂಬ ಸಂಶಯ ಬಂದರೆ ಬೋರಿಸ್ ರವರ ಬೆಂಬಲಿಗ ಸಂಸದರು ಬೇರೆಯವರನ್ನು ಕೂಡ ರಿಷಿಗೆ ಮತ ಕೊಡದಂತೆ ತಡೆಯ ಬಹುದು ..ಹೀಗೆ ಅವರವರ ಲಾಭಕ್ಕೆ ಕೊನೆಯಲ್ಲಿ ಛೆ ಭಾರತದಿಂದ ಬಂದು ನಮ್ಮ ದೇಶವನ್ನು ಆಳುತ್ತಿದ್ದಾರಲ್ಲ ಎಂಬ ಒಂದು ವಿಚಾರ ಒಳ ಹೊಕ್ಕರೆ ಸಂಸದರು ಬೆಂಬಲಿಸದೆ ಇರಬಹುದು ..ಇಷ್ಟೆಲ್ಲ ಆಗಿ ಕೇವಲ ಎರಡೇ ಜನ ಕಣಕ್ಕೆ ಉಳಿದರೆ ಆಮೇಲೆ 2 ಲಕ್ಷ ಪಾರ್ಟಿ ಸದಸ್ಯರು ಅವರನ್ನು ಚುನಾವಣೆ ಯಲ್ಲಿ ಗೆಲ್ಲಿಸಬೇಕು ...ಅದರಲ್ಲಿ ಹೆಚ್ಚಿನವರು ಬ್ರಿಟಿಷರೇ ಇರುವುದು ..ಅವರಲ್ಲಿ ಕೂಡ ಇಂತಹ ಒಂದು ವಿಚಾರ ಲಹರಿ ಬಂದರೆ ರಿಷಿ ಯವರಿಗೆ ಗೆಲ್ಲುವುದು ಕಷ್ಟ ..ಬ್ರಿಟನ್ ರಾಜಕಾರಣ ಏನೂ ಆಗಬಹುದು ..ಹಿಂದೆ ಲೇಬರ್ ಪಕ್ಷದ ಎಡ್ ಮಿಲಿಬ್ಯಾಂಡ್ ಮತ್ತು ಡೇವಿಡ್ ಮಿಲಿಬ್ಯಾಂಡ್ ಲೀಡರ್ಶಿಪ್ ಚುನಾವಣೆಯಲ್ಲಿ ಡೇವಿಡ್ ಮಿಲಿಬ್ಯಾಂಡ್ ಪಾಪ್ಯುಲರ್ ,ಚಾರ್ಮಿಂಗ್ ಮತ್ತು ಸಾಮರ್ಥ್ಯ ವಿದ್ದರೂ ಅವರ ತಮ್ಮನನ್ನು ಕೆಲವು ಸಂಸದರು ಬೇಕೆಂದೇ ಬೆಂಬಲಿಸಿ ಕೊನೆಗೆ ಲೇಬರ್ ಪಕ್ಷಕ್ಕೆ ಮೊಳೆಯನ್ನು ಹೊಡೆದರು ..ಬೆನ್ನಿಗೆ ಚೂರಿ ಹಾಕುವ ಕೆಲವು ಕುತಂತ್ರಿಗಳು (ಶಕುನಿಗಳು ) ಏನು ಬೇಕಾದ್ರು ಮಾಡಿಯಾರು ..ಮಹಾಭಾರತದಲ್ಲಿ ಅಭಿಮನ್ಯುವನ್ನು ಸೋಲಿಸಿದ ಹಾಗೆ ..
ಭಾರತೀಯರಾಗಿ ನಮಗೆ ಹೆಮ್ಮೆಯ ವಿಚಾರವೇ ಆದರೆ ಇನ್ನು ಗೆದ್ದಿಲ್ಲ ..ಗೆಲ್ಲುವ ವರೆಗೆ ಸಂಭ್ರಮ ಬೇಡ ಎನ್ನುವುದು ನಮ್ಮ ಚಿಂತನೆ ..
ಕುಮಾರ್ ಕುಂಠಿಕಾನಮಠ
ಮಾಜಿ ಕಾಪೋ೯ರೇಟರ್
ಪ್ಲೀಟ್ ಟವನ್ ಕೌನ್ಸಿಲ್
Comments
Post a Comment