Blog number 908, ಜಾರ್ಜ್ ಪರ್ನಾ೦ಡೀಸರನ್ನು ಮಂಗಳೂರಿನಲ್ಲಿ ಅವರ ತಂದೆ ಮನೆಯಿಂದ ಹೊರ ಹಾಕಿದ ರಾತ್ರಿಯ ಅವರ ಅನುಭವ ಅವರೇ ಹೇಳಿದ್ದು ....
ಅವರು ಬೆಂಗಳೂರಲ್ಲಿನ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ರಾತ್ರಿ ಅನಿವಾಯ೯ವಾಗಿ ಮಲಗಬೇಕಾದ ಪರಿಸ್ಥಿತಿಯನ್ನು ಪೋಸ್ಟ್ ಮಾಡಿದ್ದಾರೆ https://m.facebook.com/story.php?story_fbid=5420769207985908&id=100001586475082
ಅದಕ್ಕೆ ಈ ಘಟನೆ ನೆನಪಾಗಿ ಪ್ರತಿಕ್ರಿಯಿಸಿದ್ದೆ.@karthikadityabelagodu
#ಜಾರ್ಜ್_ಪರ್ನಾಂಡೀಸರ_ಮಂಗಳೂರಿನ_ಕಡೆಯ_ರಾತ್ರಿ
ಇನ್ನೊಂದು ಅಸಮಾನ್ಯ ವ್ಯಕ್ತಿ ಹೇಳಿದ ಘಟನೆ ಮರೆತಿದ್ದೆ ಪುನಃ ಪ್ರತಿಕ್ರಿಯಿಸಿದ್ದಕ್ಕೆ ಬೇಸರಿಸಬೇಡಿ.
ಸ್ವತಃ ಜಾರ್ಜ್ ಪನಾ೯೦ಡೀಸರೆ ಹೇಳಿದ್ದು, ಇವರ ಸಮಾಜ ಸೇವೆ ಹೋರಾಟದಿಂದ ಇವರ ತಂದೆ ಇವರನ್ನು ಒಂದು ರಾತ್ರಿ ಮನೆಯಿಂದ ಹೊರ ಹಾಕುತ್ತಾರೆ, ಮಂಗಳೂರಿನ ಪಾರ್ಕ್ ನಲ್ಲಿ ಕಲ್ಲು ಬೆಂಚಿನ ಮೇಲೆ ಮಲಗಿರುತ್ತಾರೆ... ಆಗ ಒಳ್ಳೆಯ ನಿದ್ದೆಯ ಮಧ್ಯರಾತ್ರಿ ಪೋಲಿಸರು ಬೆನ್ನಿನ ಮೇಲೆ ಲಾಠಿ ರುಚಿ ತೋರಿಸಿ ಎಬ್ಬಿಸುತ್ತಾರೆ, ಆಗ ಜಾರ್ಜ್ ರು ತಮ್ಮ ಸಮಸ್ಯೆ ಹೇಳಿ ಕೊಳ್ಳುತ್ತಾರೆ ಆದರೆ ಪೋಲಿಸರು ಕೇಳುವುದಿಲ್ಲ ತಮ್ಮ ಬೀಟಿನ ಪ್ರದೇಶದಲ್ಲಿ ಇದಕ್ಕೆಲ್ಲ ಅವಕಾಶವೇ ಇಲ್ಲ ಅನ್ನುತ್ತಾರೆ ಅನಿವಾರ್ಯವಾಗಿ ಜಾರ್ಜ್ ರು ಮಂಗಳೂರಿನ ಹಂಪನಕಟ್ಟೆ ಸಮೀಪದ ಬಸ್ ಶೆಲ್ಟರ್ ಗೆ ಹೋಗಿ ಮಲಗುತ್ತಾರೆ ಅಲ್ಲೂ ಇನ್ನಿಬ್ಬರು ಪೋಲಿಸರು ಬಂದು ಪಾರ್ಕ್ ನಲ್ಲಿ ಎಬ್ಬಿಸಿ ಕಳಿಸಿದಂತೆ ಎಬ್ಬಿಸುತ್ತಾರೆ, ಇನ್ನು ಎಲ್ಲಿಗೆ ಹೋಗಲಿ? ಅಂತ ಸ್ವಲ್ಪ ಮಾತು ನಿಲ್ಲಿಸಿದ ಜಾರ್ಜ್ "ಆಗಷ್ಟೆ ಬೆಳಗು ಬೆಳಗು ಆಗುತ್ತಿತ್ತು, ಆ ಸಮಯದಲ್ಲಿ ಆ ಮಾರ್ಗದಲ್ಲಿ ಬಂದ ಲಾರಿಗೆ ಕೈ ತೋರಿಸಿದೆ, ಲಾರಿಯಲ್ಲಿದ್ದ ಕ್ಲೀನರ್ ಎಲ್ಲಿಗೆ? ಎಂದಾಗ ನನಗೇ ಎಲ್ಲಿಗೆ ಅಂತ ಗೊತ್ತಿಲ್ಲವಾದ್ದರಿಂದ ಅವನಿಗೆ ಕೇಳಿದೆ ನಿಮ್ಮ ಲಾರಿ ಎಲ್ಲಿಗೆ ಹೋಗುತ್ತೆ? ಅಂತ, ಆತ ಬೊಂಬಾಯಿ ಅಂದಾಗ ನಾನು ಅಲ್ಲಿಗೇ" ಅಂತ ಲಾರಿ ಹತ್ತಿ ಮುಂಬಾಯಿ ಸೇರಿ ಮಾಡಿದ ಹೋರಾಟಗಳು ನನ್ನನ್ನು ರಾಜಕಾರಣಿ ಮಾಡಿತು ಅಂದಾಗ ಅಲ್ಲಿದ್ದ ನಾವೇ ಕೆಲವೇ ಕೆಲವು ಜನರಿಗೆ ಏನನ್ನಿಸಿರಬೇಡ? ಇದು ದೇಶದ ಅವತ್ತಿನ ರಕ್ಷಣಾ ಸಚಿವ ಜಾರ್ಜ್ ಪರ್ನಾಂಡೀಸ್ ಬೆಂಗಳೂರಿನ ಬಸವೇಶ್ವರ ನಗರದಲ್ಲಿನ ಉಡುಪಿ ಲೋಕಸಭಾ ಮಾಜಿ ಸದಸ್ಯರಾದ ಐ.ಎಂ ಜಯರಾಂ ಶೆಟ್ಟರ ಮನೆಯಲ್ಲಿ (ಆಗ ಐ.ಎಂ.ಜಯರಾಂ ಶೆಟ್ಟರು ಜಾರ್ಜರ ಸಮತಾ ಪಾರ್ಟಿ ರಾಜ್ಯದ್ಯಕ್ಷರು) ಹೇಳಿದ್ದು ಇನ್ನೂ ಕಿವಿಯಲ್ಲಿ ಗುಣುಗುಣುಗುತ್ತಿದೆ.
Comments
Post a Comment