Blog number 911. ದೇವನೂರು ಮಹಾದೇವರ RSS - ಆಳ ಮತ್ತು ಅಗಲ ಎಂಬ ಪುಸ್ತಕಕ್ಕೆ ಅರವಿಂದ ಚೊಕ್ಕಾಡಿಯವರ ಮೂರನೆ ಆಯಾಮದ ಮಿಮರ್ಶೆಗೆ ಕಾಯುತ್ತಾ .....
#ಆರ್_ಎಸ್_ಎಸ್_ಆಳ_ಮತ್ತು_ಆಗಲ
#ಪರ_ವಿರೋದಗಳಿಗಿಂತ_ಮೂರನೆ_ಆಯಾಮದ_ವಿಮರ್ಶೆಗಾಗಿ_ಅರವಿಂದಚೊಕ್ಕಾಡಿಗೆ_ವಿನಂತಿ
#ದೇವನೂರು_ಮಹಾದೇವರ_ಪುಸ್ತಕದ_ಲಿಂಕ್_ಇಲ್ಲಿದೆ_ನೀವೂ_ಓದಿ.
ದೇವನೂರು ಮಹಾದೇವರು ಕನ್ನಡದ ವಿಚಾರವಂತ ಲೇಖಕರು ಅವರ #ಕುಸುಮಾಬಾಲೆ ಪ್ರಸಿದ್ದ ಪುಸ್ತಕ ಆದರೆ ನನಗೆ ಅರ್ಥಮಾಡಿಕೊಳ್ಳಲಾಗಲಿಲ್ಲ, ಒಮ್ಮೆ ಮೈಸೂರಿನ ಗೆಳೆಯ ಕರುಣಾಕರ್ ದೇವನೂರರನ್ನು ಪೋನಿನಲ್ಲಿ ಪರಿಚಯಿಸಿದಾಗ ಅವರ ಜೊತೆ ಮಾತಾಡುವಾಗ ಇದನ್ನು ಹೇಳಿದ್ದೆ.
ಮೊನ್ನೆ ಅವರು ಬರೆದ RSS ಆಳ-ಅಗಲ ಪುಸ್ತಕದ ಬಗ್ಗೆ ವಿಶ್ವವಾಣಿ ವಿಶ್ವೇಶ್ವರ ಭಟ್ಟರು ಈ ಪುಸ್ತಕದ ಬಗ್ಗೆ ನಕಾರಾತ್ಮಕವಾಗಿ ಬರೆದ ಪೋಸ್ಟ್ ನಂತರ ಇದನ್ನು ಓದಲೇ ಬೇಕೆಂಬ ತುಡಿತಕ್ಕೆ ಈ ಪುಸ್ತಕದ PDF ಲಿಂಕ್ ಸಿಕ್ಕಿದ್ದರಿಂದ ಓದಿದೆ ಮತ್ತು ನನ್ನ ಸೀಮಿತ ಜ್ಞಾನದ ದಾರಣ ಶಕ್ತಿಯಲ್ಲಿ ಅರ್ಥ ಮಾಡಿಕೊಂಡರೂ ಇದನ್ನು ಪರ-ವಿರೋದ ವಿಮರ್ಷೆಗಿಂತ ಮೂರನೆ ಆಯಾಮದಲ್ಲಿನ ವಿಮರ್ಷೆ ಎಲ್ಲರೂ ತಿಳಿದುಕೊಳ್ಳುವ ಕುತೂಹಲ.
ಇದಕ್ಕಾಗಿ ಖ್ಯಾತ ಅಂಕಣಕಾರ, ಶಿಕ್ಷಣ ತಜ್ಞ ವಿಶೇಷವಾಗಿ ಯಾರದೇ ಹೊಗಳುವಿಕೆ ತೆಗಳುವಿಕೆಗೆ ಬಗ್ಗದ ಜಗ್ಗದ ನಾನು ಇಷ್ಟ ಪಡುವ ತರ್ಕ ಜ್ಞಾನಿ ಅರವಿಂದ ಚೊಕ್ಕಾಡಿಯವರಿಗೆ ವಿನಂತಿಸಿದ್ದೆ ಅವರು ಈ ಪುಸ್ತಕ ಓದಿದ್ದಾರೆ ಮತ್ತು ದೇವನೂರುರವರು ಉಲ್ಲೇಖಿಸಿದ ಪುಸ್ತಕ ಓದಿ ವಿಮರ್ಷೆ ಮಾಡುವುದಾಗಿ ತಿಳಿಸಿದ ಪೋಸ್ಟ್ ಇಲ್ಲಿ ಅಂಟಿಸಿದ್ದೇನೆ.
ನಾನೂ ಕೆಲ ಕಾಲ ನಮ್ಮ ಊರಿನ RSS ಶಾಖೆಗೆ ದಿನಂಪ್ರತಿ ಬೆಳಿಗ್ಗೆ ಆಡಲು ಹೋದವನು, ಶಾಖೆ ನಡೆಸುವ ಸಾಗರದ ಹಿರಿಯ ಆರ್.ಎಸ್.ಎಸ್. ಪ್ರಚಾರಕ ಪ್ರಾಣೇಶರು ರಾತ್ರಿ ನನ್ನ ಮನೆಯಲ್ಲಿ ತಂಗುತ್ತಿದ್ದರು, ಕೆಲ ಸಾಹಿತ್ಯವೂ ಓದಿದ್ದೆ ನಂತರ ಸಾಗರದ ಬಿ.ಹೆಚ್.ರಸ್ತೆಯ ಪುತ್ತೂರಾಯರ ಕಟ್ಟಡವನ್ನು ಸೇವಾ ಸಾಗರ ಬಾಡಿಗೆಗೆ ಪಡೆದು ವಿದ್ಯಾರ್ಥಿಗಳಿಗೆ ನೀಡುತ್ತಿತ್ತು ಆಗ ಕೆಲ ತಿಂಗಳು ವ್ಯಾಸಂಗಕ್ಕಾಗಿ ಅಲ್ಲಿದ್ದಾಗ ಅವರ ನಿಯಮದಂತೆ ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆಗೆ ಸೇರಲೇ ಬೇಕಿತ್ತು ಆದ್ದರಿಂದ #ನಮಸ್ತೆ_ಸದಾವತ್ಸಲೆ #ಕರಾಗ್ರೆ_ವಸತೆ_ಲಕ್ಷ್ಮೀ ಚಿರಪರಿಚಿತ ಆಗ ಬೆಳಗಿನ ಪ್ರಾರ್ಥನೆ ಹಾಲಿ ರಾಜ್ಯ ಸರ್ಕಾರದ ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿರುವ ಗುರುಮೂರ್ತಿ, ಸಾಗರದ ಸಹಕಾರಿ ಮುಖಂಡ ಯು. ಹೆಚ್.ರಾಮಪ್ಪ ನೇತೃತ್ವದಲ್ಲಿ ನಡೆಯುತ್ತಿತ್ತು, ಸಾಗರಕ್ಕೆ ಬರುವ ಎಲ್ಲಾ ಆರ್.ಎಸ್.ಎಸ್. ಮುಖಂಡರು ಈ ಕಟ್ಟಡದಲ್ಲೇ ಉಳಿಯುತ್ತಿದ್ದರು.
ಒಮ್ಮೆ ಈ ಸಂಸ್ಥೆಯ ಪ್ರಮುಖರಾಗಿದ್ದ ಹಿಂದೂ ಸೇವಾ ಪ್ರತಿಷ್ಠಾನದ ಸ್ಥಾಪಕ ಅಜಿತ್ ಕುಮಾರ್ ಜೀ ಒಂದು ಪ್ರಶ್ನೆ ಕೇಳಿದರು ಅದಕ್ಕೆ ಪರವಾಗಿರುವವರು ಕೈ ಎತ್ತಿ ಎಂದಾಗ ನಾವು ಒಂದೆರೆಡು ಜನ ಬಿಟ್ಟು ಎಲ್ಲರೂ ಕೈ ಎತ್ತಿದರು, ವಿರೋದ ಇರುವವರು ಕೈ ಎತ್ತಿ ಅಂದಾಗ ನಾನು ಇನ್ನೊಬ್ಬರು ಕೈ ಎತ್ತಿದಾಗ ಇಡೀ ಸಭೆಯ ವಕ್ರದೃಷ್ಟಿಗೆ ಪಾತ್ರರಾದೆವು, ಅತ್ಯಂತ ತೀಕ್ಷ್ಣ ಮತಿಯ ಅಜಿತರು ಕಾರಣ ವಿವರಿಸಲು ಹೇಳಿದರು ನನ್ನ ವಿವರಣೆ ಕೇಳಿದ ಮೇಲೆ ನೀವಿಬ್ಬರು ಹೊರ ಹೋಗಿ ಅ೦ತ ಗೌರವದಿಂದ ಬಿಳ್ಕೊಟ್ಟ ಮೇಲೆ RSS ಸಂಬಂದ ತಪ್ಪಿ ಹೋಯಿತಾದರೂ ಅನೇಕರ ಸಂಪರ್ಕ ಇವತ್ತೂ ಉಳಿದಿದೆ.
ದೇಶದಾದ್ಯಂತ ಅರವತ್ತು ಲಕ್ಷಕ್ಕೂ ಮಿಕ್ಕಿದ ಸದಸ್ಯತ್ವದ ಮತ್ತು ನಿತ್ಯ ಅರವತ್ತು ಸಾವಿರ ಮೀರಿದ ಶಾಖೆ ನಡೆಸುವ, ಪರ-ವಿರೋದ ಯಾವುದನ್ನೂ ಬಹಿರ೦ಗವಾಗಿ ಸಮರ್ಥನೆ ಅಥವ ನಿರಾಕರಣೆ ಮಾಡದ RSS ಆಳ ಅಗಲ ತಿಳಿದುಕೊಳ್ಳುವ ಆಸಕ್ತಿ ಎಲ್ಲರಿಗೂ ಇದೆ ಈ ಸಂಘಟನೆಯ ಬಿಗಿ ಹಿಡಿತದಲ್ಲಿ ಭಾರತ ದೇಶವನ್ನು ಆಳುತ್ತಿರುವ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರದಲ್ಲಿರುವುದರಿಂದ RSS ಬಗ್ಗೆ ಕುತೂಹಲ ಜಾಸ್ತಿಯೆ.
ಇದನ್ನು ವಿರೋದಿಸುವವರ ಸಂಖ್ಯೆ ಧರ್ಮದ್ವೇಷ, ದಲಿತ ಶೂದ್ರರ ಅಸಮಾನತೆ ಕಾರಣದಿಂದ ಹೆಚ್ಚು ಇದೆ ಅದನ್ನು ನಿರಾಕರಿಸುವ ಸಂದೇಶವಾಗಿ ಹಿಂದುಳಿದ ವರ್ಗದ ಮೋದಿ ಪ್ರದಾನಿ ಆಗಿರುವುದು, ಪರಿಶಿಷ್ಟ ಜಾತಿ- ಪಂಗಡಗಳವರು ರಾಷ್ಟ್ರಪತಿ ಮಾಡುವುದು, ಭಾರತೀಯ ಯೋಗ - ಆಯುವೇ೯ದ ಪ್ರಚಾರ ಮಾಡುವುದು, ಮೂಡನಂಬಿಕೆ - ಮಧ್ಯಪಾನ ವಿರೋದ , ರಾಷ್ಟ್ರೀಯ ವಿಪತ್ತು ಆದಾಗ ಸ್ವಯಂ ಸೇವಕರ ಸೇವೆಗಳ ಜೊತೆ ಭಾರತೀಯ ಪ್ರಜೆಗಳೇ ಆದ ಅನ್ಯಧರ್ಮಿಯರ ವಿರೋದ ಮಾಡುವ ಬಗ್ಗೆ RSS ಬಗ್ಗೆ ಮೂರನೇ ಆಯಾಮದ ವಿಮರ್ಷೆಯ ಪುಸ್ತಕ ಯಾವುದೂ ಇಲ್ಲ ಹಾಗಾಗಿ RSS ಕರ್ನಾಟಕದಲ್ಲಿ ಚರ್ಚಿಯ ಮುನ್ನಲೆಯಲ್ಲಿದೆ.
#ಅರವಿಂದ_ಚೊಕ್ಕಾಡಿಯವರ_ಪ್ರತಿಕ್ರಿಯೆ.
ಅರುಣ್ ಪ್ರಸಾದ್,
ನಿಮ್ಮ ಅಪೇಕ್ಷೆಯಂತೆ ದೇವನೂರು ಮಹಾದೇವ ಅವರ ಪುಸ್ತಕವನ್ನು ಓದಿದೆ ನಾನು. ಅದರ ಬಗ್ಗೆ ಈಗಲೂ ನನ್ನ ಕಮೆಂಟ್ ಕೊಡುವುದಿಲ್ಲ. ಇದರ ಬಗ್ಗೆ ಕಮೆಂಟ್ ಮಾಡಬೇಕಾದರೆ ಮೊದಲು ಗೋಳ್ವಾಲ್ಕರ್ ಅವರ ' ಚಿಂತನ ಗಂಗಾ' ವನ್ನು ಓದಬೇಕು. ಏಕೆಂದರೆ ದೇವನೂರು ಒಂದು ಸ್ಟಾಂಡ್ ತೆಗೆದುಕೊಂಡಿರುವ ಲೇಖಕ. ಆದ್ದರಿಂದ
'ಚಿಂತನ ಗಂಗಾ' ದಿಂದ ತಮ್ಮ ವ್ಯೂ ಅನ್ನು ವಿಸ್ತರಿಸಲು ಬೇಕಾದ ಅಂಶಗಳನ್ನು ಮಾತ್ರ ತೆಗೆದುಕೊಳ್ಳುವುದು ಸಹಜ. ಆದರೆ ಅಲ್ಲಿ ಗೋಳ್ವಲ್ಕರ್ ಯಾವ ಕಾಂಟೆಕ್ಸ್ಟ್‌ನಲ್ಲಿ ಹೇಳಿದ್ದಾರೆ ಎಂದು ಗೊತ್ತಾಗಬೇಕಾದರೆ ಅದರ ಒರಿಜಿನಲ್ ಅನ್ನು ಓದಬೇಕು. ಉದಾಹರಣೆಗೆ ಭಾರತ ಸಂವಿಧಾನ ಹಲವು ಪಾಶ್ಚಿಮಾತ್ಯ ಸಂವಿಧಾನಗಳ ಎರಕ ಎಂದಿದ್ದಾರೆ ಎನ್ನುವುದು. ಈ ಮಾತನ್ನು ಗೋಳ್ವಲ್ಕರ್ ಮಾತ್ರ ಹೇಳಿದ್ದಲ್ಲ. ಜಸ್ಟೀಸ್ ಮಹಮದ್ ಹಿದಾಯತುಲ್ಲಾ ಕೂಡ ಹೇಳಿದ್ದರು. ಮತ್ತು ಅವರು ಇನ್ನೂ ತೀಕ್ಷ್ಣವಾಗಿ ಪ್ರಸ್ತಾವನಾ ಬರೆಹವು ಅಮೆರಿಕ ಸ್ವಾತಂತ್ರ್ಯ ಘೋಷಣೆಯಂತಿದೆ ಎಂದು ಹೇಳಿದ್ದಾರೆ. Bag of borrowings ಎನ್ನುವುದು ಸಂವಿಧಾನದ ಬಗ್ಗೆ ಹಲವರು ಮಾಡಿದ ಟೀಕೆ ಎಂದು ರಾಜ್ಯಶಾಸ್ತ್ರದ ಎಲ್ಲ ವಿದ್ಯಾರ್ಥಿಗಳೂ ತಿಳಿದಿರುವ ಸತ್ಯ. ಗೋಳ್ವಲ್ಕರ್ ಯಾವ ಉದ್ದೇಶದಿಂದ ಅದನ್ನು ಹೇಳಿದ್ದಾರೆ ಎಂದು ಗೊತ್ತಿಲ್ಲದೆ ಅದರ ಬಗ್ಗೆ ಕಮೆಂಟ್ ಮಾಡಲು ಆಗುವುದಿಲ್ಲ.
ಆದರೆ ದೇವನೂರು ಈ ಏಕಾತ್ಮಕತೆಯ ಸರಕಾರದ ಕುರಿತಾಗಿನ ಒಲವಿನ ಬಗ್ಗೆ ಹೇಳಿದ್ದು ಸತ್ಯ ಎನಿಸುತ್ತದೆ. ನಾನು ಅಧ್ಯಯನ ಮಾಡಿದ ಮಟ್ಟಿಗೆ ಏಕತೆ ಮತ್ತು ಅನೇಕತೆಯ ವ್ಯೂನಲ್ಲಿ ಹಿಂದುತ್ವದ ವ್ಯೂ, ಗಾಂಧಿಯನ್ ವ್ಯೂ, ಸಂವಿಧಾನದ ವ್ಯೂನಲ್ಲಿ ವ್ಯತ್ಯಾಸಗಳಿವೆ. ಎಲ್ಲವೂ ಏಕ ಮತ್ತು ಅನೇಕವನ್ನು ಒಪ್ಪುತ್ತವೆ. ಆದರೆ ಹಿಂದುತ್ವದ ವ್ಯೂನಲ್ಲಿ ಏಕವೇ ಪ್ರಧಾನವಾಗಿದ್ದು ಏಕದ ಅನುಮತಿಯ ಅಡಿಯಲ್ಲಿ ಅನೇಕವು ವಿಸ್ತರಿಸಲ್ಪಡುತ್ತದೆ. ಗಾಂಧಿಯನ್ ವ್ಯೂನಲ್ಲಿ ಅನೇಕಗಳೆಲ್ಲ ಒಟ್ಟಾಗಿ ಆಗಿ ರೂಪುಗೊಳ್ಳುವ ಸಮಗ್ರತೆಯಲ್ಲಿ ಉಂಟಾಗುವ ಸಾಮಾನ್ಯತೆಯು ಏಕವನ್ನು ರೂಪಿಸುತ್ತದೆ. ಸಂವಿಧಾನದ ವ್ಯೂನಲ್ಲಿ ಇಷ್ಟು ಏಕ, ಇಷ್ಟು ಅನೇಕ; ಏಕವು ಕೇಂದ್ರಕ್ಕೆ, ಅನೇಕವು ರಾಜ್ಯಕ್ಕೆ ಎಂಬ ಹಂಚಿಕೆ ಇದೆ.
ಆರ್ಯ ಶ್ರೇಷ್ಠತೆಯ ವಿಚಾರದಲ್ಲಿ ನನ್ನ ಅಧ್ಯಯನವು ದೇವನೂರು ಅವರ ವ್ಯೂಗಿಂತ ಭಿನ್ನವಿದೆ. ಯಾವುದೇ ರಚನೆಯ ಪ್ರಾರಂಭದಲ್ಲಿ ಬ್ರಾಹ್ಮಣರಿಗೆ ಹೆಚ್ಚು ಪ್ರತಿನಿಧಿತ್ವ ಬರುವುದು ಈ ದೇಶದ ಸಿಸ್ಟಮ್. ಕ್ರಮೇಣ ಅದು ಇತರರ ಕೈಗೆ ಹೋಗುತ್ತದೆ. ಕಾಂಗ್ರೆಸ್‌ನಲ್ಲೂ ಹೀಗೇ ಆದದ್ದು. ಕಮ್ಯುನಿಸ್ಟ್‌ನಲ್ಲೂ ಹೀಗೇ ಆದದ್ದು. ಆದರೆ ದೇವನೂರು ಬ್ರಾಹ್ಮಣ ಎನ್ನುವುದಿಲ್ಲ. ಆರ್ಯ ಶ್ರೇಷ್ಠತೆಯ ವ್ಯಸನ ಎನ್ನುತ್ತಾರೆ. ಆರ್ಯ ಎನ್ನುವ ಜನಾಂಗವಿಲ್ಲ. ಆರ್ಯ ಎನ್ನುವುದು ನಾರ್ಡಿಕ್ ಜನಾಂಗವನ್ನು. ಅದು ಜನಾಂಗೀಯ ಮಿಶ್ರಣವನ್ನು ಕಂಡಾಗಿದೆ. Suppose ಗೋಳ್ವಲ್ಕರ್ ಕಾಲಮಾನದಲ್ಲಿದ್ದ ಥಿಯರಿಯ ಆಧಾರದಲ್ಲಿ ಹೇಳುವುದಾದರೆ, ಮತ್ತು ಆರ್.ಎಸ್. ಎಸ್. ಚಿತ್ಪಾವನರಿಂದ ಸ್ಥಾಪಿಸಲ್ಪಟ್ಟಿತು ಎನ್ನುವುದಾದರೆ ಚಿತ್ಪಾವನರು ನಾರ್ಡಿಕ್ ಜನಾಂಗೀಯ ಲಕ್ಷಣಗಳನ್ನು ಪ್ರತಿನಿಧಿಸುವುದಿಲ್ಲ. ಅವರದು ಬೇರೆಯೇ ವಿಂಗ್. ಮತ್ತೆ ಅಲ್ಲಿ ನಂಬೂದರಿಗಳ ವಿಚಾರವಿದೆ. ನಂಬೂದರಿಗಳು ದಕ್ಷಿಣ ಭಾರತದ ಬಹುತೇಕ ಎಲ್ಲ ಜಾತಿ- ಧರ್ಮದವರ ಹಾಗೆ ಪೇಲಿಯೋ ಮೆಡಿಟರೇನಿಯನ್ ಜನಾಂಗದ ಲಕ್ಷಣಗಳನ್ನು ಪ್ರತಿನಿಧಿಸುವವರು. ನಾರ್ಡಿಕ್ ಜನಾಂಗೀಯ ಲಕ್ಷಣಗಳು ಹಿಂದೂ ಮತ್ತು ಮುಸ್ಲಿಂ ಸಿಂಧಿಗಳು, ಕಾಶ್ಮೀರಿ ಪಂಡಿತರು ಇವರಲ್ಲಿ ಒಂದಷ್ಟು ಇದೆ. ಜಾತಿ ಮತ್ತು ಜನಾಂಗ ಎರಡರಲ್ಲಿ ಯಾವುದನ್ನು ಪ್ರಧಾನವಾಗಿ ಆಧರಿಸಿದ್ದರೂ ಜವಾಹರ ಲಾಲ್ ನೆಹರೂ ಅವರನ್ನು ಹಿಂದುತ್ವದ ಶಕ್ತಿಗಳು ವಿರೋಧಿಸಲು ಸಾಧ್ಯವಿರಲಿಲ್ಲ. ನನ್ನ ಬಳಿ ಆರ್.ಎಸ್.ಎಸ್. ನವರೇ ಕೊಟ್ಟಿರುವ ಆರ್.ಎಸ್.ಎಸ್ 360 ಪುಸ್ತಕ ಇದೆ. ಅದರಲ್ಲಿ ನೆಹರೂ ಮಾತ್ರ ಅಲ್ಲ ಸರ್ದಾರ್ ಪಟೇಲರ ಮೇಲಿನ ಅವರ ಭಿನ್ನಾಭಿಪ್ರಾಯಗಳೂ ಗೊತ್ತಾಗುತ್ತವೆ. ತನ್ನ ಥಿಯರಿಯನ್ನು ಒಪ್ಪದವರು ಯಾವ ಜಾತಿ, ಜನಾಂಗದವನಿದ್ದರೂ ಅವರನ್ನು ತಮ್ಮವರನ್ನಾಗಿಸಿಕೊಳ್ಳಲು ಹಿಂದುತ್ವದವರು ಇದು ವರೆಗೆ ಹೋಗಿಲ್ಲ.
ಇದೇನೇ ಇದ್ದರೂ ನನ್ನ ರಿಯಾಕ್ಷನ್ ಅನ್ನು ಹೇಳುತ್ತೇನೆ. ಆದಷ್ಟು ಶೀಘ್ರವಾಗಿ. ಗೋಳ್ವಲ್ಕರ್ ಅವರ ಪುಸ್ತಕವನ್ನು ಮೊದಲು ಓದಿಕೊಳ್ಳಬೇಕು.
ಸಧ್ಯಕ್ಕೆ ನನ್ನ ಬಳಿ ಆರ್.ಎಸ್.ಎಸ್ ಪರ ಮತ್ತು ವಿರುದ್ಧ ಸ್ಟಾಂಡ್ ಇರುವವರ ವ್ಯೂ ಇರುವ ಪುಸ್ತಕ ಇದೆಯೇ ಹೊರತು ಥರ್ಡ್ ಪರ್ಸನ್ ಆಗಿ ಅಬ್ಸರ್ವೇಷನ್ ಮಾಡಿದ ಯಾರೊಬ್ಬರ ಪುಸ್ತಕಗಳೂ ಇಲ್ಲ. ನಾನು ಲೇಖಕ ಅಷ್ಟೆ. ಆದ್ದರಿಂದ ಆ್ಯಕ್ಟಿವಿಸ್ಟ್ ಶೈಲಿಯಲ್ಲಿ ರಿಯಾಕ್ಟ್ ಮಾಡುವುದಿಲ್ಲ.
Comments
Post a Comment