Blog number 917. ಹುಬ್ಬಳ್ಳಿಯಲ್ಲಿ ಹಲಸು ಹಬ್ಬ ಎಂಬ ಹಲಸಿನ ಮೇಳ, ಪ್ರಮುಖ ಆಕಷ೯ಣೆ ತುಮಕೂರಿನ ಚೇಳೂರಿನ ಸಿದ್ದು ಹಲಸಿನ ಗಿಡ ಇಲ್ಲಿ ಮಾರಾಟಕ್ಕೆ ಲಭ್ಯ.
#ಪ್ರಖ್ಯಾತ_ತುಮಕೂರಿನ_ಚೇಳೂರಿನ_ಸಿದ್ದು_ಹಲಸಿನ_ಗಿಡ_ಮಾರಾಟಕ್ಕಿದೆ.
#ಹುಬ್ಬಳ್ಳಿಯ_ವುಮೆನ್ಸ್_ಕಾಲೇಜ್_ರಸ್ತೆಯ_ಲಕ್ಷ್ಮಿ_ಸದನದಲ್ಲಿ
#ದಿನಾಂಕ_16_ಮತ್ತು_17_ನಾಳೆ_ನಾಡಿದ್ದು.
ನಾಳೆ ದಿನಾಂಕ 16- ಜುಲೈ -2022 ರ ಶನಿವಾರ ಮತ್ತು ಭಾನುವಾರ ಬೆಳಿಗ್ಗೆ 10 ರಿಂದ ರಾತ್ರಿ 8 ರ ತನಕ ಹುಬ್ಬಳ್ಳಿಯ ವುಮೆನ್ಸ್ ಕಾಲೇಜು ರಸ್ತೆಯ ಲಕ್ಷ್ಮೀ ಸದನದಲ್ಲಿ ಮೈಸೂರಿನ ಸಹಜ ಸಮೃದ್ದಿ ಸಾವಯವ ಕೃಷಿಕರ ಬಳಗ ಸಹಜ ಸೀಡ್ಸ್ ನ ಕೃಷ್ಣ ಪ್ರಸಾದ್ ಗೋವಿಂದಯ್ಯ ಮತ್ತು ಅವರ ಸಹಯೋಗಿ ಸಂಸ್ಥೆಗಳು ಹುಬ್ಬಳ್ಳಿಯಲ್ಲಿ ಹಲಸು ಮೇಳ ಹಮ್ಮಿಕೊಂಡಿದೆ .
ಇಲ್ಲಿ ರಾಜ್ಯದ ಖ್ಯಾತ ಹಲಸಿನ ತಳಿಗಳು, ವಿವಿಧ ದಂಟು ಹರಿವೆ, ಸಿರಿಧಾನ್ಯಗಳು,ಸಾವಯವ ಬೆಳೆಯ ಬೀಜಗಳ ಜೊತೆ ಅನೇಕ ಉಪಯುಕ್ತ ಮಾಹಿತಿ ದೊರೆಯಲಿದೆ.
ಇಲ್ಲಿನ ಹಲಸು ಮೇಳದಲ್ಲಿ ವಿಶೇಷ ಆಕರ್ಷಣೆ ತುಮಕೂರಿನ ಚೇಳೂರಿನ ಸಿದ್ದು ಹಲಸಿನ ಗಿಡಗಳನ್ನು ಅದರ ಮಾಲಿಕ ಪರಮೇಶ್ ಮಾರಾಟಕ್ಕೆ ಇಟ್ಟಿದ್ದಾರೆ, ರೂ 250ಕ್ಕೆ ಒರಿಜನಲ್ ಸಿದ್ದು ಹಲಸಿನ ಗಿಡ ಖರೀದಿಸುವ ಅವಕಾಶ ಇದೆ.
ಸಿದ್ದು ಹಲಸಿನ ಗಿಡವೇ ಸಿಗುವುದಿಲ್ಲ ಎಂಬ ಮಾತುಗಳಿಂದ ಈ ಹಲಸು ಬೆಳೆಸುವ ಆಸೆ ನನ್ನಂತೆ ಅನೇಕರು ಬಿಟ್ಟಿದ್ದೆವು ಈಗ ಸಿನೋರಿಯ ಬದಲಾಯಿಸಿದ್ದಾರೆ ಕೃಷ್ಣ ಪ್ರಸಾದ್ ಗೋವಿಂದಯ್ಯ.
Comments
Post a Comment