Blog number 920. ಕಾಗೋಡು ಸತ್ಯಾಗ್ರಹದ ಮೊದಲ ಪುಸ್ತಕ ಬರೆದು ಅನೇಕರಿಗೆ ಪ್ರೇರಣೆ ನೀಡಿದ ಚಿಂತಕ ಬರಹಗಾರ ಜಿ.ರಾಜಶೇಖರ್ ಇನ್ನು ನೆನಪು ಮಾತ್ರ.
#ಚಿಂತಕ_ಬರಹಗಾರ_ಜಿ_ರಾಜಶೇಖರ್
#ಶಿವಮೊಗ್ಗಜಿಲ್ಲೆಯ_ಕಾಗೋಡು_ರೈತಸತ್ಯಾಗ್ರಹದ_ಮೊದಲ_ಪುಸ್ತಕ_ಬರೆದವರು.
ಉಡುಪಿ ಮೂಲದ ಚಿಂತಕರು, ಬರಹಗಾರರಾದ ಜಿ.ರಾಜಶೇಖರ್ ಇಹ ಲೋಕ ತ್ಯಜಿಸಿದ್ದಾರೆ ಅವರಿಗೆ ಶ್ರದ್ದಾಂಜಲಿ ಅಪಿ೯ಸುತ್ತಾ ಅವರಿಗಾಗಿ ಈ ನುಡಿ ನಮನ.
ಐತಿಹಾಸಿಕ ಭೂ ಹೋರಾಟ ರಾಜ್ಯದ ಶಿವಮೊಗ್ಗ ಜಿಲ್ಲೆಯಲ್ಲಿನ ಸಾಗರ ತಾಲ್ಲೂಕಿನ ಕಾಗೋಡಿನಲ್ಲಿ ಹೋರಾಟದ ಕಿಡಿ ಎದ್ದು ಜ್ವಾಲೆಯಾಗಿ ಅದಕ್ಕೆ ರಾಷ್ಟಮಟ್ಟದಲ್ಲಿ ಬೆಂಬಲ ಸಿಕ್ಕಿದ್ದು ಇತಿಹಾಸವೇ.
ಈ ಹೋರಾಟದ ಬಗ್ಗೆ ಕನ್ನಡದಲ್ಲಿ 144 ಪುಟಗಳ #ಕಾಗೋಡು_ರೈತ_ಸತ್ಯಾಗ್ರಹ ಎಂಬ ಮೊದಲ ಪುಸ್ತಕ ಬರೆದವರು ಈ ಜಿ.ರಾಜಶೇಖರ್.
ಈ ಪುಸ್ತಕ ಪ್ರಕಟಿಸಿದವರು ಹೆಗ್ಗೋಡಿನ ಕೆ.ವಿ.ಸುಬ್ಬಣ್ಣರ ಅಕ್ಷರ ಪ್ರಕಾಶನ.
ವಿಶೇಷ ಅಂದರೆ ಜಿ.ರಾಜಶೇಖರ್ ಕಾಗೋಡು ಹೋರಾಟದ ಭೂಮಿಯಲ್ಲಿ ಓಡಾಡಿ ಹೋರಾಟದಲ್ಲಿ ಭಾಗವಹಿಸಿದ ಎಲ್ಲಾ ಸ್ಥಳಿಯ ಹೋರಾಟಗಾರರನ್ನು ಬೇಟಿ ಮಾಡಿದ್ದರು.
Comments
Post a Comment