Blog number 925. ಗಟಾರಿ ಅಮಾವಾಸ್ಯೆಎಂಬ ಹಾಸ್ಯದ ಹೆಸರಲ್ಲಿ ಕರೆಯುವ ಬೀಮನ ಅಮಾವಾಸ್ಯೆ ಅಥವ ಆಷಾಡ ಆಮಾವಾಸ್ಯೆ ಮಹಾರಾಷ್ಟ್ರದ ಬಾರ್ ರೆಸ್ಟೋರೆಂಟ್ ಗಳ ಲಾಭದ ವಾಣಿಜ್ಯ ಉದ್ದೇಶಕ್ಕೆ ಹೆಚ್ಚು ಪ್ರಚಾರ ಪಡೆದಿದೆ
#ಶ್ರಾವಣಮಾಸದ_ಮೊದಲ_ಹಬ್ಬ
#ಇದರ_ಮರುದಿನದಿಂದ_ಮಾಂಸಹಾರ_ಕುಡಿತ_ಮಾಡುವುದಿಲ್ಲ
#ಕೊನೆಯದಿನ_ಯಥೇಚ್ಚವಾಗಿ_ಕುಡಿದು_ತಿಂದು_ಗಟಾರಕ್ಕೆ_ಬೀಳುವ_ಜನರಿಂದ_ಇದಕ್ಕೆ_ಗಟಾರಿಅಮಾವಸ್ಯೆ_ಎಂಬ_ಹೆಸರು
#ಇದನ್ನು_ಪ್ರಚಾರ_ಮಾಡಿ_ಭರಪೂರ_ವ್ಯಾಪಾರ_ಗಿಟ್ಟಿಸುವ_ಬಾರ್_ರೆಸ್ಟೋರಾಂಟಗಳು.
ಬೀಮನ ಅಮಾವಾಸ್ಯೆ, ಆಷಾಡ ಅಮಾವಾಸ್ಯೆ ಶ್ರಾವಣ ಮಾಸದ ಮೊದಲ ಹಬ್ಬ, ಮನೆಯ ಹೆಣ್ಣು ತನ್ನ ಗಂಡ ಮತ್ತು ಸಹೋದರನ ಒಳಿತಿಗಾಗಿ ಈ ದಿನ ಪೂಜೆ ಮಾಡುತ್ತಾಳೆ.
ಕರ್ನಾಟಕದಲ್ಲಿ ಬೀಮನ ಅಮಾವಾಸ್ಯೆ, ಗುಜರಾತಿನಲ್ಲಿ ಹರಿಯಾಲ ಅಮಾವಾಸ್ಯೆ, ಆಂದ್ರದಲ್ಲಿ ಚುಕ್ಕೇಲ ಅಮಾವಾಸ್ಯೆ, ಗಾಯಿತ್ರಿ ಅಮಾವಾಸ್ಯೆ, ಆಷಾಡ ಅಮಾವಾಸ್ಯೆ ಅಂತ ಚಂದ್ರಮಾನ ಪದ್ಧತಿ ಪ್ರಕಾರ ಶ್ರಾವಣ ಮಾಸ ಪ್ರಾರಂಭದ ಹಿಂದಿನ ದಿನ ಕರೆಯುತ್ತಾರೆ.
ಉತ್ತರ ಭಾರತದಲ್ಲಿ 15 ದಿನದ ಹಿಂದಿನಿಂದಲೇ ಶ್ರಾವಣ ಮಾಸ ಪ್ರಾರಂಭ ಆಗಿ ಜನ ಗಂಗಾ ನದಿ ತಟಕ್ಕೆ ಕಾವಡಿ ಸೇವೆ ಅಭಿಶೇಕ ಮಾಡುತ್ತಿದ್ದಾರೆ.
ಶ್ರಾವಣ ಮಾಸ ಶಿಸ್ತುಬದ್ದವಾಗಿ ಆಚರಿಸುವ ಮರಾಠಿ ಜನರಲ್ಲಿ ಗಟಾರಿ ಅಮಾವಾಸ್ಯೆ ಹಾಸ್ಯದ ಜೊತೆ ಹಾಸು ಹೊಕ್ಕಾಗಿದೆ.
ಮಹಾರಾಷ್ಟ್ರದಲ್ಲಿ ಮಾಂಸಹಾರಿಗಳು ಶ್ರಾವಣದಲ್ಲಿ ಸಂಪೂರ್ಣ ಸಸ್ಯಹಾರ ಸೇವಿಸುವಂತಾಗುವ ನಿಯಮ ಪಾಲಿಸುತ್ತಾರೆ ಮತ್ತು ಈ ತಿಂಗಳು ಪೂರ್ತಿ ಮಧ್ಯಪಾನ ಕೂಡ ತ್ಯಜಿಸುತ್ತಾರೆ ಆದ್ದರಿಂದ ಮದ್ಯಪಾನ ಮಾಂಸಹಾರ ಸೇವಿಸುವ ಕಡೆಯ ದಿನವಾದ ಶ್ರಾವಣದ ಪೂರ್ವದ ಈ ಅಮಾವಾಸ್ಯೆಯಲ್ಲಿ ಕಂಠ ಪೂರ್ತಿ ಕುಡಿದು ತಿಂದು ಕೆಲವರು ಚರಂಡಿಗೆ (ಗಟಾರಕ್ಕೆ) ಬೀಳುತ್ತಾರೆಂದು ಈ ಅಮಾವಾಸ್ಯೆಗೆ ಜನ ಹಾಸ್ಯದಿಂದ ಕರೆದದ್ದು ಗಟಾರಿ ಅಮಾವಾಸ್ಯೆ.
ವಾಣಿಜ್ಯ ಉದ್ದೇಶಕ್ಕಾಗಿ ಇದನ್ನು ಲಾಭಕ್ಕೆ ಬಳಸಿಕೊಂಡ ಮಹಾರಾಷ್ಟ್ರ, ಗೋವಾ, ಗುಜರಾತ್, ಕರ್ನಾಟಕದ ಮಹಾರಾಷ್ಟ್ರದ ಗಡಿ ಜಿಲ್ಲೆಗಳಲ್ಲಿನ ಬಾರ್ ರೆಸ್ಟೋರೆಂಟ್ ಗಳು ಈ ದಿನಕ್ಕೆ ಹೆಚ್ಚಿನ ಪ್ರಚಾರ ನೀಡಿ ಹೆಚ್ಚು ವ್ಯಾಪಾರ ಮಾಡುವುದರಿಂದ ಗಟಾರಿ ಅಮಾವಾಸ್ಯೆ ಒಂದು ವಿಶೇಷ ಆಚರಣೆಯೇ ಆಗಿದೆ.
ಮಹಾರಾಷ್ಟ್ರದ ಹೆಚ್ಚಿನ ಕುಟುಂಬಗಳು ಗಣೇಶನ ಹಬ್ಬದ ತನಕ, ಇನ್ನು ಕೆಲವು ಕುಟುಂಬ ನವರಾತ್ರಿ ಮುಗಿಯುವ ತನಕ ಮಾಂಸಹಾರ ಮಧ್ಯಪಾನ ಸಂಪೂರ್ಣ ತ್ಯಜಿಸುತ್ತಾರೆ.
Comments
Post a Comment