Blog number 924. ಆನಂದಪುರಂನ ರಾಮ ಭಟ್ಟರಿಗೆ ಶ್ರದ್ಧಾಂಜಲಿಗಳು, ಹೆಬ್ರಿಯ ಸಮೀಪದ ಶಿವಪುರದಲ್ಲಿ ಇವರು ಸ್ಥಾಪಿಸಿದ ವಿಜಯ ಗ್ರೂಪ್ ಅಕ್ಕಿ ಉತ್ಪಾದನೆ - ಪಶು ಆಹಾರ ಉತ್ಪಾದನೆ - ಗೇರು ಬೀಜ ಸಂಸ್ಕರಣ ಘಟಕಗಳು ಯಶಸ್ವಿ ಉದ್ಯಮಗಳಾಗಿದೆ.
#ಆನಂದಪುರಂನ_ರಾಮಭಟ್_ಪಿ_ಎನ್.
#ರೈತಬಂದು_ಸುಬ್ಬಣ್ಣನಾಯಕರ_ಶಿವಪುರದ_ಅಕ್ಕಿಗಿರಣಿ_ಖರೀದಿಸಿದವರು.
#ಹೆಬ್ರಿಯ_ವಿಜಯ_ಗ್ರೂಪಿನ_ಅಕ್ಕಿ_ಪಶುಆಹಾರ_ಮತ್ತು_ಗೇರುಬೀಜ_ಸಂಸ್ಕರಣಾ_ಘಟಕದ_ಯಶಸ್ವಿ_ಉದ್ದಿಮೆದಾರರು.
ಆನಂದಪುರಂನ ರೈತ ಬಂದು ಗ್ರಾಮೋದ್ಯೋಗದ ಸುಬ್ಬಣ್ಣ ನಾಯಕರ ಜೊತೆ ಅನೇಕ ವಷ೯ ಕೆಲಸ ನಿರ್ವಹಿಸಿದ ವ್ಯವಸ್ಥಾಪಕ ವಗ೯ದ ಹೆಚ್ಚಿನ ಜನ ಸುಬ್ಬಣ್ಣ ನಾಯ್ಕರಂತೆ ಅಕ್ಕಿ ಮತ್ತು ಅವಲಕ್ಕಿ ಉದ್ಯಮದಲ್ಲಿ ಯಶಸ್ವಿ ಉದ್ದಿಮೆದಾರರಾಗಿದ್ದಾರೆ.
ಆನಂದಪುರಂನ ಅವರ ಅಕ್ಕಿ ಅವಲಕ್ಕಿ ಗಿರಣಿ ಸುಬ್ಬರಾವ್ ಖರೀದಿಸಿದರು ಹಾಗೆಯೇ ಹೆಬ್ರಿ ಸಮೀಪದ ಶಿವಪುರದ ಅಕ್ಕಿ ಗಿರಣಿ ರಾಮ ಭಟ್ P.N. ಖರೀದಿಸಿದರು ಇವರೆಲ್ಲರೂ ಸುಬ್ಬಣ್ಣ ನಾಯಕರ ಜೊತೆ ಅನೇಕ ವರ್ಷ ಅವರ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸಿದ ಆಪ್ತರು.
ಶಿವಪುರದ ಸುಬ್ಬಣ್ಣನಾಯಕರ ಶಾಲಾ ಸಹಪಾಠಿ ಆಗಿದ್ದ ನಾಗರಾಜ ಭಟ್ಟರ ಅವಳಿ ಗಂಡು ಮಕ್ಕಳು ಈ ರಾಮ ಭಟ್ ಮತ್ತು ಲಕ್ಷ್ಮಣ ಭಟ್ .
ಆನಂದಪುರಂನ ಯಡೇಹಳ್ಳಿಯ ವಾಸಿಗಳಾಗಿದ್ದ ಈ ಅವಳಿ ಸಹೋದರರು ಸುಬ್ಬಣ್ಣ ನಾಯಕರ ಸಂಸ್ಥೆ ಸೇರಿದ್ದರು.
ಶಿವಪುರದ ಸುಬ್ಬಣ್ಣ ನಾಯಕರ ಅಕ್ಕಿ ಗಿರಣಿ ಖರೀದಿಸಿದ ರಾಮ ಭಟ್ಟರು ತಮ್ಮ ಶ್ರಮ ಮತ್ತು ಬುದ್ಧಿವಂತಿಕೆಯಿಂದ ಯಶಸ್ವಿ ಉದ್ದಿಮೆದಾರಾದರು.
ಅಕ್ಕಿ ಉದ್ದಿಮೆ ಜೊತೆಗೆ ಗೇರು ಬೀಜ ಸಂಸ್ಕರಣ ಮತ್ತು ಪಶು ಆಹಾರ ಉತ್ಪಾದನಾ ಘಟಕವೂ ಸ್ಥಾಪಿಸಿ ಹೆಬ್ರಿಯ ಪ್ರಖ್ಯಾತ ವಿಜಯ ಗ್ರೂಪ್ ಯಶಸ್ವಿಗೆ ಕಾರಣರಾಗಿದ್ದಾರೆ.
ಕಳೆದ ವಷ೯ ಆನಂದಪುರಂ ಇತಿಹಾಸ - ಭಾಗ -36ರಲ್ಲಿ ನಾನು ಬರೆದ ಆನಂದಪುರಂ ರೈತ ಬಂದು ಲಾರಿಯಲ್ಲಿ 2 ಜೋಡಿ ಕೊಲೆ ಲೇಖನ ಮತ್ತು ಅದರಲ್ಲಿ ಕೊನೆ ಕ್ಷಣದಲ್ಲಿ ಮಾಲಿಕರಾದ ಸುಬ್ಬಣ್ಣ ನಾಯಕರು ರಾಮ ಭಟ್ಟರಿಗೆ ಬೇರೆ ಕೆಲಸ ವಹಿಸಿದ್ದರಿಂದ ಕೊಲೆಯಾದ ಲಾರಿಯಲ್ಲಿ ರಾಮ ಭಟ್ಟರು ಪ್ರಯಾಣ ರದ್ದಾದ್ದರಿಂದ ಅವರ ಜೀವ ಉಳಿದ ಬಗ್ಗೆ ಮತ್ತು ಅವರೆ ಪ್ರಮುಖ ಸಾಕ್ಷಿ ಆದ್ದರಿಂದ ಕೊಲೆಗಾರರಿಗೆ ಜೀವಾವದಿ ಶಿಕ್ಷೆ ಆದ ಬಗ್ಗೆ ಬರೆದಿದ್ದೆ.
ಈ ಬ್ಲಾಗ್ ಇಲ್ಲಿ ಕ್ಲಿಕ್ ಮಾಡಿ ಲೇಖನ ಓದಬಹುದು https://arunprasadhombuja.blogspot.com/2021/06/39-1983.html
ಈ ಲೇಖನ ಓದಿ ಆ ದಿನಗಳಲ್ಲಿ ಸುಬ್ಬಣ್ಣ ನಾಯಕರ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಿದ್ದ ಬಾಲಕೃಷ್ಣ ರೈಟರು ಮತ್ತು ಅನೇಕರು ಪೋನ್ ಮಾಡಿ ಈ ಘಟನೆ ನೆನಪಿಸಿಕೊಂಡಿದ್ದರು.
ಕೆಲ ದಿನಗಳ ಹಿಂದೆ ತಮ್ಮ 60 ನೇ ವಯಸ್ಸಲ್ಲಿ ರಾಮ ಭಟ್ಟರು ಅನಾರೋಗ್ಯದಿಂದ ಇಹಲೋಕ ತ್ಯಜಿಸಿದ ಸುದ್ದಿ ಆನಂದಪುರಂ ವಾಸಿಗಳಿಗೆ ಬೇಸರ ಉಂಟು ಮಾಡಿದೆ.
ಆನಂದಪುರಂನಿಂದ ಹೆಬ್ರಿ ಸಮೀಪದ ಶಿವಪುರ ಸೇರಿ ಯಶಸ್ವಿ ಉದ್ದಿಮೆದಾರರಾಗಿದ್ದ ಇವರಿಗೆ ಶ್ರದ್ದಾಂಜಲಿ ಅರ್ಪಿಸೋಣ.
Comments
Post a Comment