Blog number 1125. ಸಾಗರದ ಶಾಸಕರು ಹಾಲಿ MSIL ಅಧ್ಯಕ್ಷರೂ ಆದ ಹರತಾಳು ಹಾಲಪ್ಪನವರು ನನ್ನ ಕಾದಂಬರಿ ಕೆಳದಿ ಸಾಮ್ರಾಜ್ಯ ಇತಿಹಾಸ ಮರೆತಿರುವ ಬೆಸ್ತರ ರಾಣಿ ಚಂಪಕಾ ಪುಸ್ತಕ ಪುಸ್ತಕದ ಅಂಗಡಿಯಲ್ಲಿ ಖರೀದಿಸಿ ಓದಿ ಪ್ರಶಂಸಿಸಿ ಪತ್ರ ಬರೆದಿದ್ದಾರೆ.
#ಪತ್ರಿಕೆ_ಪುಸ್ತಕ_ಓದುವ_ಶಾಸಕರು_ಸಂಸದರು_ಎಷ್ಟು_ಜನ? #ಸ್ವತಃ_ಪೇಸ್_ಬುಕ್_ವಾಟ್ಸಪ್_ಬಳಸುವವರೆಷ್ಟು ? #ಪುಸ್ತಕ_ಖರೀದಿಸಿ_ಓದಿ_ಪ್ರಶಂಸಿಸಿ_ಪತ್ರ_ಬರೆದ_ಶಾಸಕರು_ಹರತಾಳು_ಹಾಲಪ್ಪನವರು. #ಅವರದೇ_ವಿದಾನಸಭಾ_ಕ್ಷೇತ್ರದ_ಸ್ಮಾರಕ_ಚಂಪಕ_ಸರಸ್ಸುವಿಗೆ_400ನೇ_ವಷಾ೯ಚಾರಣೆ. #ಕೆಳದಿ_ಅರಸರ_ಮೂಲ_ದೀವರಾಗಿದ್ದಾರೆ_ಈ_ಬಗ್ಗೆ_ಸಂಶೋದನೆಗಳಾಗಲಿ. ಇವತ್ತು ಅಂಚೆಯಲ್ಲಿ ನಮ್ಮ ಸಾಗರ ವಿಧಾನಸಭಾ ಕ್ಷೇತ್ರದ ಶಾಸಕರು, ಮಾಜಿ ಮಂತ್ರಿಗಳೂ ಹಾಲಿ ಅಧ್ಯಕ್ಷರು MSIL ಆದ ಹರತಾಳು ಹಾಲಪ್ಪರ ಪತ್ರ ಓದಿ ಸಂತೋಷ ಆಯಿತು. ಇತಿಹಾಸದ ಆಸಕ್ತಿ, ಪತ್ರಿಕೆಗಳ ನಿರಂತರ ಓದು, ಸ್ವತಃ ಪೇಸ್ ಬುಕ್, ವಾಟ್ಸ್ ಪ್ ನಿರ್ವಹಿಸುವ ಹಾಲಪ್ಪನವರು ಮಾತಾಡಲು ನಿಂತರೆ ಬಂಗಾರಪ್ಪರಂತೆ ವಾಗ್ಜರಿ ಹರಿಸುತ್ತಾರೆ. ಇವತ್ತಿನ ರಾಜಕಾರಣಿಗಳಲ್ಲಿ ಇವೆಲ್ಲ ಅಪರೂಪ,ಅವರ ಪೇಸ್ ಬುಕ್ ನಿರ್ವಹಣೆ ಮಾಸಿಕ 15 ಸಾವಿರ ನೀಡಿ ಹೊರಗುತ್ತಿಗೆ ನೀಡಿರುತ್ತಾರೆ, ನಿತ್ಯ ಪತ್ರಿಕೆ ಓದುವುದೂ ಇಲ್ಲ, ಪುಸ್ತಕಗಳಂತೂ ಮುಟ್ಟುವುದೂ ಇಲ್ಲ, ಪತ್ರ/ಅರ್ಜಿ ಬರೆದರೆ ಉತ್ತರಿಸುವುದೂ ಇಲ್ಲ ಆದರೆ ಹರತಾಳು ಹಾಲಪ್ಪನವರು ಬಿನ್ನರಾಗಿ ಕಾಣುತ್ತಾರೆ. ಇವರು ನನ್ನ ಕಾದಂಬರಿ "ಕೆಳದಿ ಸಾಮ್ರಾಜ್ಯ ಇತಿಹಾಸ ಮರೆತ" #ಬೆಸ್ತರ_ರಾಣಿ_ಚಂಪಕಾ ಪುಸ್ತಕ ಸಾಗರದಲ್ಲಿ ಪುಸ್ತಕದ ಅಂಗಡಿಯಲ್ಲಿ ಖರೀದಿಸಿ ಓದಿ ಬರೆದ ಪತ್ರ ಇಲ್ಲಿ ಲಗತ್ತಿಸಿದ್ದೇನೆ ಓದಿ. ...