#ಪ್ರತಿಯೊಬ್ಬರಿಗೂ_ಇಂತಹ_ಆಪ್ತಮಿತ್ರ_ಇದ್ದೇ_ಇರುತ್ತಾರೆ. ಇದು ನನ್ನ ಆಪ್ತ ಮಿತ್ರನ ಕಥೆ ಇವರ ಹೆಸರು ಚೆನ್ನಪ್ಪ ಊರು ನಮ್ಮ ಮನೆಯಿ೦ದ 3 ಕಿ.ಮಿ.ಗೇರ್ ಬೀಸ್ ಅಂತ, ಇವರ ಅಪ್ಪ ಜೇನುಕಲ್ಲಪ್ಪ ಅಂತ ಈಗಿಲ್ಲ ಜೇನು ಕಲ್ಲಪ್ಪ ನಮ್ಮ ಊರಿಗಿಂತ ಹೊಳೆಆಚೆಯ ಕರೂರು ಬಾರಂಗಿ ಹೋಬಳಿಯಲ್ಲಿನ ಪರಿಶಿಷ್ಟ ಜಾತಿ ಜನರ ಕಾಲೋನಿಯಲ್ಲಿ ಹೆಸರುವಾಸಿ. ವ್ಯವಹಾರ ವಿಸ್ತರಣೆಗಾಗಿ ನಮ್ಮ ದನದ ಕೊಟ್ಟಿಗೆ ತೆಗೆಯಬೇಕಾಯಿತು ಆಗ ನಮ್ಮಲ್ಲಿದ್ದ ಮಲೆನಾಡು ಗಿಡ್ಡ ದನ ಕರುಗಳನ್ನ ಜೇನುಕಲ್ಲಪ್ಪನಿಗೆ ಮತ್ತು ಸಮೀಪದ ಕೆರೆ ಹಿತ್ತಿಲು ಎoಬ ಹಳ್ಳಿಯಲ್ಲಿರುವ ನಮ್ಮ ಆಸ್ಥಾನ ಜೋತಿಷಿ ಕಲ್ಮಕ್ಕಿ ಬೂದ್ಯಪ್ಪ ಗೌಡರಿಗೆ ಹಂಚಿಕೊಟ್ಟಿದ್ದೆ. ಚೆನ್ನಪ್ಪನನ್ನ ಇವರ ಅಪ್ಪ ತನ್ನ ಜಮೀನು ವ್ಯಾಜ್ಯ ಬಗೆಹರಿಸಲು ಹಣ ಹೊಂದಿಸಲು ಸಣ್ಣವಯಸ್ಸಲ್ಲಿಯೇ ಎಲ್ಲೆಲ್ಲೊ ಮುಂಗಡ ಪಡೆದು ಬಿಟ್ಟಿದ್ದ. ಅಂತೂ ಕೊನೆಗೆ ಅಂದರೆ ಸುಮಾರು 25 ವಷ೯ದ ಕಾನೂನು ಹೋರಾಟದಲ್ಲಿ 10 ಎಕರೆ ನೀರಾವರಿ ಜಮೀನು ಪಡೆಯುವುದರಲ್ಲಿ ಯಶಸ್ವಿಯಾದ ಆದರೆ ಜೇನುಕಲ್ಲಪ್ಪನಿಗೆ ಇದ್ದ ಇಬ್ಬರು ಅಣ್ಣOದಿರಿಗೂ ಸೇರಿ ಜಂಟಿ ಖಾತೆ ಆಯಿತು ಆಗ ಮೂವರಿಗೂ ಸಮ ಹಿಸ್ಯೆ ಆಗಬೇಕಾದಾಗ ನಮ್ಮ ಮನೇಲಿ ಪಂಚಾಯಿತಿ ನಡೆಯಿತು ಸಾಗರದಿಂದ ಕುಗ್ವೆ ಶಿವಾನಂದ ಬOದಿದ್ದರು ಅಂತೂ ಅಂತಿಮವಾಗಿ ಜೇನುಕಲ್ಲಪ್ಪನಿಗ 4ಎಕರೆ ಉಳಿದ ಇಬ್ಬರು ಸಹೋದರರಿಗೆ ತಲಾ 3 ಎಕರೆ ಅಂತೆ ಒಪ್ಪಿಸಲಾಯಿತು, ಈ ಜಮೀನ...