Skip to main content

Posts

Showing posts with the label It's content Dutturin having medicine values

Blog number 1093. ಆನಂದಪುರಂ ಇತಿಹಾಸ ಸಂಖ್ಯೆ - 86.ಆನಂದಪುರಂನ ಸಮೀಪದ ಬ್ಯಾಡರ ಕೊಪ್ಪದ 1960 ರ ವಿಚಿತ್ರ ಘಟನೆಗೆ ಕಾರಣವಾಗಿದ್ದ ದತ್ತೂರದ ಬೀಜ,1583 ರಲ್ಲಿ ಗೋವಾ ಸಂದರ್ಶಿಸಿದ್ದ ವಿದೇಶಿ ಪ್ರವಾಸಿ ಡೈರಿಯಲ್ಲಿ, ಶಿಶುನಾಳ ಷರೀಪರ ಚರಿತ್ರೆಯಲ್ಲಿ೦ದ ಇತ್ತೀಚಿನ ಸಾಗರ ತಾಲ್ಲುಕಿನ ಪತ್ರಕರ್ತ ತಲವಾಟ ರಾಘವೇಂದ್ರ ಶರ್ಮಾರವರೆಗೆ.

  1960ರ ಆನಂದಪುರO ಸಮೀಪದ ಬ್ಯಾಡರ ಕೊಪ್ಪದ ಘಟನೆಗೆ 58 ವಷ೯ದ ನಂತರ ಉತ್ತರ ಸಿಕ್ಕಿತು  ಉಮ್ಮತ್ತದ ಬೀಜ ಪುಡಿ ಮಾಡಿ ಬಂಗಿ ಸೋಪ್ಪಿನಲ್ಲಿ ಮಿಶ್ರ ಮಾಡಿ ಬೆಲ್ಲ ಸೇರಿಸಿ ಪಾನಕ ಮಾಡಿ ಕುಡಿದ ಬುಟ್ಟಿ ಮಾಡುವ ಇಡೀ ಕೇರಿಯ ಜನ ವಿಚಿತ್ರ ವತ೯ನೆ ಮಾಡಲು ಪ್ರಾರಂಬಿಸಿದ್ದರಂತೆ 1960ರಲ್ಲಿ ಆನoದಪುರಂ ಸಮೀಪದ ಬ್ಯಾಡರ ಕೊಪ್ಪದಲ್ಲಿ, ಅವರನ್ನೆಲ್ಲ ಎತ್ತಿನಗಾಡಿಯಲ್ಲಿ ಆನOದಪುರಂನ ಆಸ್ಪತ್ರೆಗೆ ಕರೆ ತಂದಿದ್ದರಂತೆ ಎಲ್ಲರೂ ಸ್ತ್ರಿ ಪುರುಷರು ಮೈಮೇಲೆ ಬಟ್ಟೆ ಇಟ್ಟು ಕೊಳ್ಳುತ್ತಿರಲಿಲ್ಲ೦ತೆ, ಹುಚ್ಚು ಹಿಡಿದವರಂತೆ ಅವರೆಲ್ಲರ ವತ೯ನೆ.       ಆಗ ಊರಿನ ಹಿರಿಯರಾದ ಶ್ರೀ ವೆಂಕಟಾಚಲಯ್ಯOಗಾರ್ (ಮಂತ್ರಿಗಳಾಗಿದ್ದ ಬದರಿನಾರಾಯಣರ ಸಹೋದರರು) ಈ ಬಗ್ಗೆ ಮುಂದೆ ನಿಂತು ಚಿಕಿತ್ಸೆ ನೀಡಿಸಿ, ಇದಕ್ಕೆ ಕಾರಣನಾದನನ್ನ ಶಿಕ್ಷಿಸಿದರಂತೆ, ಬುಟ್ಟಿ ಮಾಡುವವರ ನೆಂಟನೋವ೯ ಯಾವುದೊ ಬಿನ್ನಾಭಿಪ್ರಾಯದಿಂದ ಇಡೀ ಕೇರಿಯವರ ಬಟ್ಟೆ ಬಿಚ್ಚಿಸುತ್ತೇನೆ ಅಂತ ಶಪತ ಮಾಡಿದ್ದನಂತೆ.   ಪತ್ರಕತ೯ ತಲವಾಟದ ರಾಘವೇ೦ದ್ರ ಶಮಾ೯ರ ಅನುಭವ ನೋಡಿದರೆ ಅವರೆಲ್ಲರಿಗೆ ಮೈ ತುಂಬ ಕಂಬಳಿ ಹುಳ ಹತ್ತಿದ ಅನುಭವ ಆಗಿಯೇ ಬಟ್ಟೆ ಕಿತ್ತಿ ಎಸೆಯುತ್ತಿದ್ದರಿರಬೇಕು.  ಈ ವಿಚಾರ ಸುಮಾರು 40 ವಷ೯ ಚಾಲ್ತಿಯಲ್ಲಿತ್ತು, ಮೊಬೈಲ್ ಬಂದ ಮೇಲೆ ಮರೆತೆ ಹೋಗಿತ್ತು ಶಮಾ೯ರ FB ಲೇಖನದಿಂದ ಇದೆಲ್ಲ ನೆನಪಾಯಿತು.     ಇದರ ಬೀಜದ ಎಣ್ಣಿ...