Blog number 1303. ಶಾಂತವೇರಿ ಗೋಪಾಲಗೌಡರ ಜನ್ಮಶತಮಾನೋತ್ಸವದ ಸಂಭ್ರಮಾಚರಣೆಯಲ್ಲಿ ಕಾಗೋಡು ಹೋರಾಟದ ರೂವಾರಿ ಹೆಚ್.ಗಣಪತಿಯಪ್ಪರು ಕಂಡ ಕನಸು ಸಾಗರದ ಸಾಗರ್ ಹೋಟೆಲ್ ಸರ್ಕಲ್ ನಲ್ಲಿ ಸಾಗರದ ಪ್ರಥಮ ಶಾಸಕ, ಐತಿಹಾಸಿಕ ಕಾಗೋಡು ಭೂ ಹೋರಾಟದ ನೇತಾರ ಶಾಂತವೇರಿ ಗೋಪಾಲಗೌಡರ ಕಂಚಿನ ಪ್ರತಿಮೆ ನಿರ್ಮಿಸುವುದು, ಈ ಬಗ್ಗೆ ಭರವಸೆ ನೀಡಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ಮತ್ತು ಶಾಸಕ ಹರತಾಳು ಹಾಲಪ್ಪ ಹಾಗೂ ಈ ಬಗ್ಗೆ ಪ್ರಸ್ತಾವನೆ ಮಾಡಿದ ಪಿ. ಪುಟ್ಟಯ್ಯನವರಿಗೆ ಅಭಿನಂದನೆಗಳು
#ನಾಳೆ_ಶಾಂತವೇರಿ_ಗೋಪಾಲಗೌಡರ_ನೂರನೆ_ಜನ್ಮದಿನ_14_ಮಾರ್ಚ್_2023 #ಸಾಗರದಲ್ಲಿ_ಶನಿವಾರ_ನಡೆದ_ಜನ್ಮಶತಮಾನೋತ್ಸವದಲ್ಲಿ #ಹಿರಿಯ_ಸಮಾಜವಾದಿ_ಪ್ರಕೃತಿಮುದ್ರಣ_ಪುಟ್ಟಯ್ಯ_ಶಾಂತವೇರಿ_ಗೋಪಾಲಗೌಡರ_ಪ್ರತಿಮೆ_ಸ್ಥಾಪಿಸಲು_ಪ್ರಸ್ತಾವಿಸಿದರು. #ಈ_ಪ್ರತಿಮೆ_ಆಗಿನ_ಸಮಾಜವಾದಿಗಳ_ಸಾಗರ್_ಹೋಟೆಲ್_ಸರ್ಕಲನಲ್ಲಿ_ಸ್ಥಾಪಿಸಲು. #ಇದಕ್ಕಾಗಿ_ಪ್ರಥಮ_ದೇಣಿಗೆ_ಒಂದು_ಸಾವಿರ_ರೂಪಾಯಿ_ಜಯಂತರಿಗೆ_ನೀಡಿದ್ದಾರೆ #ಗೃಹ_ಸಚಿವ_ಆರಗಜ್ಞಾನೇಂದ್ರ_ಸ್ಥಳಿಯ_ಶಾಸಕ_ಹರತಾಳು_ಹಾಲಪ್ಪರೊಡನೆ_ನೆರವೇರಿಸುವ_ಅಶ್ವಾಸನೆ . ಶಾಂತವೇರಿ ಗೋಪಾಲಗೌಡರು ತೀರ್ಥಹಳ್ಳಿ ತಾಲ್ಲೂಕಿನ ಆರಗದ ಸಮೀಪದವರು ಇವರ ಬಾಲ್ಯ ಮತ್ತು ರಾಜಕಾರಣಕ್ಕೆ ಇದೇ ಊರಿನ ಸಮೀಪದ ಆರಗ ಜ್ಞಾನೇಂದ್ರರ ಬಾಲ್ಯ ಮತ್ತು ರಾಜಕಾರಣಕ್ಕೆ ಸಾಮ್ಯತೆ ಇದೆ. ಶಾಂತವೇರಿ ಗೋಪಾಲಗೌಡರೂ ಕಾಂಗ್ರೇಸ್ ವಿರುದ್ಧದ ಸಮಾಜವಾದಿ ಪಕ್ಷ, ಬಾಲ್ಯದಲ್ಲಿ ವಿದ್ಯಾಬ್ಯಾಸ ಬಡತನದಿಂದ ಬಿಟ್ಟವರು ನಂತರ ಅವರ ಜೀವನ ಪ್ರವೇಶ ಮಾಡಿದ ಮಹಾನುಭವರ ಪ್ರೋತ್ಸಾಹದಿಂದ ವಿದ್ಯಾಬ್ಯಾಸ ಮುಂದುವರಿಸಿ ರಾಜಕಾರಣಕ್ಕೆ ಬಂದವರು. ಇದೇ ರೀತಿ ಆರಗ ಜ್ಞಾನೇಂದ್ರರ ಬಾಲ್ಯ - ವಿದ್ಯಾಬ್ಯಾಸ ರಾಜಕಾರಣ ಮತ್ತು ಇವರದ್ದೂ ಕಾಂಗ್ರೇಸ್ ವಿರುದ್ಧದ ಬಿಜಿಪಿ ಪಕ್ಷ ಆದರೆ ಕಾಲ ಮಾತ್ರ ವ್ಯತ್ಯಾಸ. ಶನಿವಾರ 11 - ಮಾರ್ಚ್ -2023ರಂದು ಸಾಗರದಲ್ಲಿ ಶಾಂತವೇರಿ ಗೋಪಾಲಗೌಡರ ಜನ...