Skip to main content

Posts

Showing posts with the label Ruling Politician Common trick to avoid apposite leader is joining them to rowdy list

Blog number 1932. ಆಡಳಿತದಲ್ಲಿರುವ ರಾಜಕಾರಣಿಗಳು ತಮ್ಮ ಎದುರಾಳಿ ತಮಗೆ ಸ್ವರ್ದೆ ನೀಡುತ್ತಾನೆಂದರೆ ಅವನನ್ನು ರಾಜಕೀಯವಾಗಿ ಮುಗಿಸಲು ಮಾಡುವ ತಂತ್ರಗಾರಿಕೆ ರವಡಿ ಲೀಸ್ಟ್ ಗೆ ಸೇರಿಸುವುದು.

#ಬಹು_ದಶಕದ_ಬೇಡಿಕೆ. #ಜಿಲ್ಲೆಯ_ROWDY_ಲಿಸ್ಟ್_ಪರಿಷ್ಕರಣೆ #ಈಡೇರಿ_ಎರೆಡು_ವರ್ಷಗಳಾಯಿತು #ಸಾಗರ_ವಿಧಾನಸಭಾ_ಕ್ಷೇತ್ರದ_ಅಭಿವೃದ್ಧಿಗಾಗಿ_ಪ್ರಾಮಾಣಿಕ_ಸೇವೆ_ಮಾಡಿದ್ದಕ್ಕೆ #ನನಗೂ_ಈ_ಪಟ್ಟಿಯಲ್ಲಿ_ಸ್ಥಾನ_ಕಲ್ಪಿಸಿದ್ದರು. #ಪರಿಷ್ಕರಣೆಯಲ್ಲಿ_ಪಟ್ಟಿಯಿಂದ_ಒಂದು_ಸಾವಿರದ_ನಾಲ್ಕುನೂರ_ಇಪ್ಪತ್ತು_ಜನ_ಹೊರಗೆ. #ಇನ್ನೊಮ್ಮೆ_ಅಭಿನಂದನೆಗಳು_ಆಗಿನ_ಜಿಲ್ಲಾ_ಕ್ಷಣಾಧಿಕಾರಿ_ಲಕ್ಷ್ಮೀಪ್ರಸಾದ್_ಗೃಹ_ಸಚಿವಗಿದ್ದ_ಆರಗಜ್ಞಾನೇಂದ್ರರಿಗೆ    ROWDY LIST ಅನ್ನೋದು ಸಮಾಜವನ್ನು ಕ್ರಿಮಿನಲ್ ಗಳ ಕಿರುಕುಳದಿಂದ ತಪ್ಪಿಸಲು ಮತ್ತು ಕ್ರಿಮಿನಲ್ ಗಳ ಮೇಲೆ ಕಣ್ಣಿಡಲು ಪೋಲಿಸ್ ಇಲಾಖೆಯ ಕಾನೂನು ಸುವ್ಯವಸ್ಥೆಯ ಆಚರಣೆಯ ಅಂಗವಾಗಿದೆ.   ಸಂವಿದಾನದಲ್ಲಿ ನ್ಯಾಯಾಂಗ ವ್ಯವಸ್ಥೆ ಇರುವಾಗ ಕಾರ್ಯಾಂಗದಲ್ಲಿ ಈ ವ್ಯವಸ್ಥೆ ಬೇಕಾ ಅಥವ ಬೇಡವೇ ಅನ್ನುವ ಚರ್ಚೆ ಇದೆ ಆದರೆ ಪೋಲಿಸರಿಗಿಂತ ಇದನ್ನು ದುರ್ಬಳಕೆ ಮಾಡುತ್ತಿರುವುದು ಮಾತ್ರ ಆಡಳಿತರೂಢ ರಾಜಕಾರಣಿಗಳು.   ಎರೆಡು ವರ್ಷದ ಹಿಂದೆ ನಮ್ಮ ಜಿಲ್ಲೆಯವರೇ ಆದ ಗೃಹ ಮಂತ್ರಿ ಆರಗ ಜ್ಞಾನೇಂದ್ರ ಅವರ ಆದೇಶದಂತೆ ಅಂದಿನ ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿಗಳು ಶಿವಮೊಗ್ಗ ಜಿಲ್ಲೆ ಯ Rowdy list ಪರಿಷ್ಕರಣೆ ಮಾಡಿ 1420 ಜನರನ್ನು ಈ ಪಟ್ಟಿಯಿಂದ ಹೊರ ಹಾಕಲಾಗಿದೆ ಎಂಬ ಪ್ರಕಟನೆ ಘೋಷಿಸಿದ್ದರು.    ಬಹುಶಃ ರಾಜ್ಯದ ಪೋಲಿಸ್ ಇಲಾಖೆಯಲ್ಲಿಯೇ ಇಷ್ಟು ದೊಡ್ಡ ಪ್ರಮಾಣದ ರವಡಿ ಪಟ್ಟಿ ಪರಿಷ್...