Skip to main content

Posts

Showing posts with the label Kuppanna Anandapuram people sincier sweeper worker and Iyyangar family fully supported family

ಭಾಗ-41, ಆನಂದಪುರಂ ಇತಿಹಾಸ, ಕುಪ್ಪಣ್ಣ ಆನಂದಪುರಂನ ಸಜ್ಜನ ಸಂಪನ್ನ ಸ್ವಚ್ಚತಾಗಾರ ಮತ್ತು ಬದರಿನಾರಾಯಣ ಅಯ್ಯಂಗಾರ್ ಕುಟುಂಬದ ಕೃಪ ಕಟಾಕ್ಷ ಹೊಂದಿದ್ದ ಕುಟುಂಬ

#ಭಾಗ_41. #ಆನಂದಪುರಂ_ಇತಿಹಾಸ. #ಆನಂದಪುರಂ_1960ರಿಂದ_ನಿರಂತರ_ಸ್ವಚ್ಚತಾ_ಕೆಲಸಗಾರ_ಕುಪ್ಪಣ್ಣ . #ಮ೦ತ್ರಿ_ಬದರಿನಾರಾಯಣಅಯ್ಯಂಗಾರ್_ಮತ್ತು_ವೆಂಕಟಾಚಲಯ್ಯಂಗಾರ್_ಕೃಪಕಟಾಕ್ಷ_ಇದ್ದ_ಕುಟುಂಬ. #ಗ್ರಾಮಪಂಚಾಯತ್_ಗರಿಷ್ಟ_ಸಂಬಳ_ಮಾಸಿಕ_ಒಂದು_ಸಾವಿರ_ಮಾತ್ರ #ಇವತ್ತೂ_ಆನಂದಪುರಂನಲ್ಲಿ_ಘನತೆ_ಗೌರವ_ಗಳಿಸಿಕೊಂಡ_ಕುಪ್ಪಣ್ಣ_ಕುಟುಂಬ.   1960 ರಲ್ಲಿ ಬದರಿನಾರಾಯಣ ಅಯ್ಯಂಗಾರ್ ಸಹೋದರ ವೆಂಕಟಾಚಲ ಅಯ್ಯಂಗಾರರು ವಿಲೇಜ್ ಪಂಚಾಯತ್ ನಿರಂತರ ಅಧ್ಯಕ್ಷರು. ಜಮೀನ್ದಾರರು, ಕೊಡುಗೈ ದಾನಿಗಳು ಅಯ್ಯಂಗಾರ್ ಕುಟುಂಬದ ಯಜಮಾನರು ಕೂಡ ಮತ್ತು ಸಹೋದರ ಬದರಿನಾರಾಯಣ ಅಯ್ಯಂಗಾರ್ ಈ ಕ್ಷೇತ್ರದ ಶಾಸಕರು.   ಹೀಗಿರುವಾಗ ಆನಂದಪುರಂ ಸ್ವಚ್ಚತೆಗೆ ಅವರದ್ದು ಮೊದಲ ಆಧ್ಯತೆ ಆಗ ಈ ವೃತ್ತಿ ಮಾಡುತ್ತಿದ್ದ ಚಿನ್ನಸ್ವಾಮಿ ಒಳ್ಳೆಯ ಮನುಷ್ಯನೇ ಆದರೆ ದಿನೇ ದಿನೇ ಕುಡಿತದ ಹವ್ಯಾಸ ಹೆಚ್ಚು ಮಾಡಿ ವೃತ್ತಿ ಅಸಡ್ಡೆ ಮಾಡುತ್ತಾ ಇದ್ದಿದ್ದರಿಂದ ವೆಂಕಟಾಚಲ ಅಯ್ಯಂಗಾರರಿಗೆ ಚಿಂತೆ ಆಗುತ್ತದೆ.   ಪಕ್ಕದ ರಿಪ್ಪನ್ ಪೇಟೆ ಹೊಸನಗರ ತಾಲ್ಲೂಕಿಗೆ ಸೇರಿದ್ದರು ಸಾಗರ - ಹೊಸನಗರ- ತೀರ್ಥಹಳ್ಳಿ ತಾಲ್ಲೂಕ್ ಸೇರಿ ಒಂದು ವಿದಾನ ಸಭಾ ಕ್ಷೇತ್ರ ಆಗಿತ್ತು ಮತ್ತು ಈ ಕ್ಷೇತ್ರದ ಶಾಸಕ ಬದರಿನಾರಾಯಣ ಅಯ್ಯಂಗಾರರನ್ನು ಗೆಲ್ಲಿಸಲು ವೆಂಕಟಾಚಲ ಆಯ್ಯಂಗಾರರ ಶ್ರಮವೇ ಹೆಚ್ಚಿನದ್ದು ಹಾಗಾಗಿ ಆಗ ರಿಪ್ಪನ್ ಪೇಟೆಯ ವಿಲೇಜ್ ಪಂಚಾಯತ್ ಅಧ್ಯಕ್ಷರು ಸುಲೇಮಾನ್ ಸಾಹೇ...