#ಎಲ್ಲಿಯ_ಕೇದಾರನಾಥ #ಎಲ್ಲಿಯ_ವಾಗೀಶ್_ಲಿಂಗ್ #ದಾವಣಗೆರೆಜಿಲ್ಲೆ_ಹರಿಹರ_ತಾಲೂಕಿನ_ಭಾನುವಳ್ಳಿಯಲ್ಲಿ_ಜನಿಸಿದ #ವಾಗೀಶ್_ಲಿಂಗ್_ಕೇದಾರನಾಥದ_ದೇವಾಲಯದ_ಮುಖ್ಯ_ಪ್ರಧಾನ_ಪೂಜಾರಿ #ಇವರು_ಶಿವಮೊಗ್ಗ_ಜಿಲ್ಲೆ_ಶಿಕಾರಿಪುರ_ತಾಲೂಕಿನ #ಸಾಲೂರು_ಹಿರೇಮಠದ_ಗುರುಲಿಂಗ_ಶಿವಾಚಾರ್ಯಸ್ವಾಮೀಜಿಗಳ_ಶಿಷ್ಯ #ಕೇದಾರನಾಥದ_ಪ್ರಧಾನ_ಪೂಜಾರಿ_ಮತ್ತು_ಜಗದ್ಗುರುಗಳು_ಆಗಬೇಕೆಂದರೆ #ಅವರು_ಕರ್ನಾಟಕದ_ವೀರಶೈವ_ಶುದ್ಧ_ಜಂಗಮ_ಹಿರೇಮಠದ_ಪರಂಪರೆಯವರು #ಆಗಿರಬೇಕೆಂಬ_ನಿಯಮ_ಇದೆ_ಇದು_3332_ವರ್ಷಗಳ_ಪರಂಪರೆ. 1995 ರಿಂದ 2000 ಇಸವಿ ತನಕ ನಾನು ಆನಂದಪುರಂ ಜಿಲ್ಲಾ ಪಂಚಾಯತ್ ಕ್ಷೇತ್ರದ ಸದಸ್ಯನಾಗಿದ್ದೆ ಆಗ ಶಿಕಾರಿಪುರ ತಾಲೂಕಿನ ಸಾಲೂರು ಹಿರೇಮಠದ ಗುರುಲಿಂಗ ಶಿವಾಚಾರ್ಯ ಸ್ವಾಮೀಜಿಗಳನ್ನು ನಮ್ಮೂರ ಸಮೀಪದ ಗೇರುಬೀಸಿನ ಹೊಳೆ ಮಲ್ಲೇಶ್ವರ ಸ್ವಾಮಿಯ ವಾರ್ಷಿಕ ಜಾತ್ರಾ ಕಾರ್ಯಕ್ರಮಕ್ಕೆ ಅಹ್ವಾನ ನೀಡಲು ಹೋಗಿದ್ದಾಗಿಂದ ಸ್ವಾಮೀಜಿಗಳ ಸಂಪರ್ಕವಾಯಿತು. ನಂತರ ಅನೇಕ ಕಾರ್ಯಕ್ರಮಗಳಲ್ಲಿ ನಾವಿಬ್ಬರು ಜೊತೆಯಾಗಿ ಭಾಗವಹಿಸಿದ್ದು ಆಗ ಅವರ ಜೊತೆ ಹರಿಹರ ತಾಲೂಕಿನ ಭಾನುವಳ್ಳಿಯ ವಾಗೇಶ್ ಲಿಂಗ್ ಬರುತ್ತಿದ್ದರು ಅವರು ಸಾಲೂರು ಹಿರೇಮಠದ ಗುರುಲಿಂಗ ಶಿವಾಚಾರ್ಯ ಸ್ವಾಮೀಜಿಗಳ ಶಿಷ್ಯರಾಗಿದ್ದರು ಮತ್ತು ಸಾಲೂರಿನ ವೇದ ಪಾಠಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ನಂತರ ಅವರು ಹಿಮಾಲಯದ ಕೇದಾರನಾಥ ದ...