#ಎಲ್ಲಿಯ_ಕೇದಾರನಾಥ
#ಎಲ್ಲಿಯ_ವಾಗೀಶ್_ಲಿಂಗ್
#ದಾವಣಗೆರೆಜಿಲ್ಲೆ_ಹರಿಹರ_ತಾಲೂಕಿನ_ಭಾನುವಳ್ಳಿಯಲ್ಲಿ_ಜನಿಸಿದ
#ವಾಗೀಶ್_ಲಿಂಗ್_ಕೇದಾರನಾಥದ_ದೇವಾಲಯದ_ಮುಖ್ಯ_ಪ್ರಧಾನ_ಪೂಜಾರಿ
#ಇವರು_ಶಿವಮೊಗ್ಗ_ಜಿಲ್ಲೆ_ಶಿಕಾರಿಪುರ_ತಾಲೂಕಿನ
#ಸಾಲೂರು_ಹಿರೇಮಠದ_ಗುರುಲಿಂಗ_ಶಿವಾಚಾರ್ಯಸ್ವಾಮೀಜಿಗಳ_ಶಿಷ್ಯ
#ಕೇದಾರನಾಥದ_ಪ್ರಧಾನ_ಪೂಜಾರಿ_ಮತ್ತು_ಜಗದ್ಗುರುಗಳು_ಆಗಬೇಕೆಂದರೆ
#ಅವರು_ಕರ್ನಾಟಕದ_ವೀರಶೈವ_ಶುದ್ಧ_ಜಂಗಮ_ಹಿರೇಮಠದ_ಪರಂಪರೆಯವರು
#ಆಗಿರಬೇಕೆಂಬ_ನಿಯಮ_ಇದೆ_ಇದು_3332_ವರ್ಷಗಳ_ಪರಂಪರೆ.
1995 ರಿಂದ 2000 ಇಸವಿ ತನಕ ನಾನು ಆನಂದಪುರಂ ಜಿಲ್ಲಾ ಪಂಚಾಯತ್ ಕ್ಷೇತ್ರದ ಸದಸ್ಯನಾಗಿದ್ದೆ ಆಗ ಶಿಕಾರಿಪುರ ತಾಲೂಕಿನ ಸಾಲೂರು ಹಿರೇಮಠದ ಗುರುಲಿಂಗ ಶಿವಾಚಾರ್ಯ ಸ್ವಾಮೀಜಿಗಳನ್ನು ನಮ್ಮೂರ ಸಮೀಪದ ಗೇರುಬೀಸಿನ ಹೊಳೆ ಮಲ್ಲೇಶ್ವರ ಸ್ವಾಮಿಯ ವಾರ್ಷಿಕ ಜಾತ್ರಾ ಕಾರ್ಯಕ್ರಮಕ್ಕೆ ಅಹ್ವಾನ ನೀಡಲು ಹೋಗಿದ್ದಾಗಿಂದ ಸ್ವಾಮೀಜಿಗಳ ಸಂಪರ್ಕವಾಯಿತು.
ನಂತರ ಅನೇಕ ಕಾರ್ಯಕ್ರಮಗಳಲ್ಲಿ ನಾವಿಬ್ಬರು ಜೊತೆಯಾಗಿ ಭಾಗವಹಿಸಿದ್ದು ಆಗ ಅವರ ಜೊತೆ ಹರಿಹರ ತಾಲೂಕಿನ ಭಾನುವಳ್ಳಿಯ ವಾಗೇಶ್ ಲಿಂಗ್ ಬರುತ್ತಿದ್ದರು ಅವರು ಸಾಲೂರು ಹಿರೇಮಠದ ಗುರುಲಿಂಗ ಶಿವಾಚಾರ್ಯ ಸ್ವಾಮೀಜಿಗಳ ಶಿಷ್ಯರಾಗಿದ್ದರು ಮತ್ತು ಸಾಲೂರಿನ ವೇದ ಪಾಠಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದರು.
ನಂತರ ಅವರು ಹಿಮಾಲಯದ ಕೇದಾರನಾಥ ದೇವಾಲಯದಲ್ಲಿ ಪ್ರಧಾನ ಪೂಜಾರಿಗಳಾಗಿ ಇದ್ದಾರೆಂದು ಸುದ್ದಿ ಕೇಳಿದ್ದೆ.
ಕೆಲವು ವರ್ಷದ ಹಿಂದೆ ನಮ್ಮ ಸಮೀಪದ ಹೊಸನಗರ ತಾಲೂಕಿನ ಬಟ್ಟೆ ಮಲ್ಲಪ್ಪದ #ಪಾಪು_ಗೌಡರೆಂದು ನಾವು ಕರೆಯುವ ವಿರೂಪಾಕ್ಷಗೌಡರು ಲಾರಿ ಮಾಲೀಕರು ಮತ್ತು ಹೊಸನಗರ ತಾಲೂಕು ಲಾರಿ ಮಾಲೀಕರ ಸಂಘದ ಉಪಾಧ್ಯಕ್ಷರು ಅವರು ಕೇದಾರನಾಥಕ್ಕೆ ಹೋದಾಗ ಅವರ ಅನುಭವಗಳನ್ನು ಹೇಳಿಕೊಂಡಿದ್ದರು.
ಅವರು ಅವತ್ತು ಕೇದಾರನಾಥ ತಲುಪಿದಾಗ ಅಂತಹ ಜನಜಂಗುಳಿ ಇರಲಿಲ್ಲವಂತೆ,ಸುಪ್ರೀಂ ಕೋರ್ಟ್ ನ್ಯಾಯಾಧೀಶರು ದರ್ಶನಕ್ಕೆ ಬಂದಿದ್ದರಿಂದ ಹೆಚ್ಚು ಸುರಕ್ಷೆ ನೀಡಲಾಗಿತ್ತಂತೆ.
ನಂತರ ದೇವಾಲಯದ ಒಳ ಹೋಗಿ ದರ್ಶನ ಮಾಡುವಾಗ ಕನ್ನಡದಲ್ಲಿ ನೀವು ಹೊಸನಗರ ತಾಲೂಕಿನವರಾ? ಎಂಬ ಪ್ರಶ್ನೆ ಪ್ರಧಾನ ಪೂಜಾರಿಯವರು ಕೇಳಿದಾಗ ಪಾಪು ಗೌಡರಿಗೆ ದಿಗ್ಭ್ರಮೆ ಆಯಿತಂತೆ...ಹೌದು ಎಂದಾಗ ನೀವು ಬಟ್ಟೆ ಮಲ್ಲಪ್ಪದ ಪಾಪುಗೌಡರಲ್ಲವೇ ಎಂದರಂತೆ!! ಆಗ ಅವರಿಗೆ ಇನ್ನೂ ಆಶ್ಚಯ೯ ಆಯಿತಂತೆ.
ನಂತರ ಅವರೇ ಸಾಲೂರು ಹಿರೇಮಠದ ಗುರುಲಿಂಗ ಶಿವಾಚಾರ್ಯ ಸ್ವಾಮೀಜಿಗಳ ಜೊತೆ ಅವರ ಮನೆಗೆ ಬಂದದ್ದನ್ನು ನೆನಪಿಸಿದರಂತೆ ನಂತರ ರುದ್ರಾಕ್ಷಿ ಮಾಲೆಗಳನ್ನು ಇವರ ಕೊರಳಿಗೆ ಹಾಕಿ ಹಾರೈಸಿದರಂತೆ.
ಹೀಗೆ ಕೇದಾರನಾಥದ ಪ್ರಧಾನ ಪೂಜಾರಿ ಕರ್ನಾಟಕದವರು ಅವರು ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಭಾನುವಳ್ಳಿಯ ವಾಗೀಶ್ ಲಿಂಗ್ ಕಳೆದ 20 ವರ್ಷದಿಂದ ಅಲ್ಲಿದ್ದಾರೆ.
ಕೇದಾರನಾಥದ ಪ್ರಧಾನ ಪೂಜಾರಿ ಮತ್ತು ಜಗದ್ಗುರುಗಳು ಆಗಬೇಕಾದವರು ಕರ್ನಾಟಕ ರಾಜ್ಯದ ವೀರಶೈವ ಶುದ್ಧ ಜಂಗಮ ಹಿರೇಮಠದವರೇ ಆಗಬೇಕೆಂಬ ನಿಯಮ ಕಳೆದ 3332 ವರ್ಷಗಳಿಂದ ನಡೆದು ಬಂದ ಪರಂಪರೆ.
ಕೇದಾರನಾಥದ ಎಲ್ಲ ಮಠಗಳಲ್ಲಿ ದೇವಾಲಯಗಳು ಕನ್ನಡದ ಬೋರ್ಡ್ ಗಳು ಕೂಡ ಇದೆ ಇದು ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಿದೆ.
Comments
Post a Comment