Skip to main content

Blog number 2282. ಕವಿ ಪರಮದೇವ ತುರಂಗ ಭಾರತ ರಚಿಸಿದ್ದು ಸಾಗರ ತಾಲೂಕಿನ ಬೀಮನಕೋಣೆ ಸಮೀಪದ ಕೇದಿಗೆಸರದಲ್ಲಿ

#ಸಾಗರ_ತಾಲೂಕಿನ_ಭೀಮನಕೋಣೆ_ಸಮೀಪದ_ಕೇದಿಗೆ_ಸರದಲ್ಲಿ

#ಕವಿ_ಪರಮ_ದೇವರು_ತುರಂಗ_ಭಾರತ_ರಚಿಸಿದರು.

#ಕೆಳದಿ_ಅರಸರ_ಕಾಲದ_ಮೊದಲ_ಕವಿ

#ವ್ಯಾಸಭಾರತದ_18_ಪರ್ವಗಳನ್ನ_ಕನ್ನಡದಲ್ಲಿ_ಬರೆದ_ಮೊದಲ_ಕವಿ

#ಶಿವಮೊಗ್ಗ_ಜಿಲ್ಲೆಯ_ಸಾಗರ_ತಾಲ್ಲೂಕಿನ_ಹೆಗ್ಗೋಡು_ಸಮೀಪದ

#ಭೀಮನಕೋಣೆಯ_ಕೇದಿಗೆಸರದ_ಅರ್ಚಕರಾಗಿದ್ದ

#ಕವಿ_ಪರಮದೇವ_ವಿರಚಿತ_ಶ್ರೀತುರಂಗಭಾರತ.




#sriturangabharath #shivamogga #sagar #Heggodu #bhimanakone #kedalasara #vyasabharath #kannada #karnataka 

ಕವಿಯ ಕಾಲ ಕಾವ್ಯ 

ಕವಿಯ ಜನನ ಕ್ರಿ,  ಶ, ೧೭೨೦. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಸುಳಿಗೋಡು ಕವಿಯ ಜನ್ಮ ಸ್ಥಳ. ಇವನು ಹವ್ಯಕ ಬ್ರಾಹ್ಮಣ. ತಂದೆಯ ಹೆಸರು ಶಂಕರನಾರಾಯಣಯ್ಯ, ತಾಯಿಯ ಹೆಸರು ಮಹಾಲಕ್ಷ್ಮಮ್ಮನವರು. ತಂದೆ ವಿದ್ವಾಂಸರು, ಜೋತಿಷಿಗಳು, ಸೂರ್ಯನ ಔಪಾಸಕರು, ಪರಮೇಶ್ವರನ ಭಕ್ತರು. ತಾಳಮದ್ದಳೆಯ ಶ್ರೇಷ್ಠ ಅರ್ಥಧಾರಿಗಳು. ಇವರು ವಂಶಪಾರಂಪರ್ಯವಾಗಿ ಬಂದಿದ್ದ ಗದ್ದೆ, ತೋಟ, ಮನೆ ಹೊಂದಿದ್ದರು. ಇವರ ವಂಶಸ್ಥರು ಸಳಿಗೋಡಿನಲ್ಲಿ ಒಂದು ದೇವಸ್ಥಾನವನ್ನು ಕಟ್ಟಿಸಿ ಅಲ್ಲಿ ಲಕ್ಷ್ಮೀನಾರಾಯಣ ಹಾಗೂ ಒಂದು ಶಿವಲಿಂಗವನ್ನೂ ಸ್ಥಾಪಿಸಿ, ಪೂಜಿಸಿಕೊಂಡು ಬಂದಿದ್ದರು. ಶಂಕರನಾರಾಯಣಯ್ಯನೂ ಈ ಪೂಜೆಯನ್ನು ಮುಂದುವರಿಸಿಕೊಂಡು ಬಂದಿದ್ದನು. ಕವಿಗೆ ತಂದೆಯಿಂದಲೇ ಪ್ರಾರಂಭಿಕ ವಿದ್ಯಾಭ್ಯಾಸವಾಯಿತು. ಶಂಕರನಾರಾಯಣಯ್ಯ ಯಕ್ಷಗಾನ ಬಯಲಾಟಗಳಲ್ಲಿ,  ತಾಳಮದ್ದಳೆಯಲ್ಲಿ ಪಾತ್ರಧಾರಿಯಾಗಿ ಭಾಗವಹಿಸಿ ಖ್ಯಾತರಾಗಿದ್ದರು. ಕವಿಗೆ ತಂದೆಯ ಗುಣಗಳೆಲ್ಲ ಮೈಗೂಡಿದುವು. ಯಕ್ಷಗಾನ ಬಯಲಾಟಗಳಲ್ಲಿ  ಪಾತ್ರವಹಿಸಿ ತಂದೆಯಿಂದ ಸೈ ಎನಿಸಿಕೊಂಡಿದ್ದರು. 

ಕವಿಗೆ ಇಪ್ಪತ್ತನಾಲ್ಕನೆಯ ವಯಸ್ಸಿಗೆ ಮದುವೆಯಾಯಿತು. ಹೆಂಡತಿಯ ಹೆಸರೈ ಭಾಗೀರಥಮ್ಮ. ಇವರು ಪರಮೇಶ್ವರಯ್ಯ
ಅವರ ತಾಯಿಯ ಅಣ್ಣನ ಮಗಳು, ಪರಮೇಶ್ವರಯ್ಯ ಮೊದಲಿನಿಂದಲೂ ಕೃಷಿ ಬಗ್ಗೆ ನಿರಾಸಕ್ತಿ ಹೊಂದಿದ್ದರು. ಭಾಗೀರಥಿಯೇ ಕಷ್ಟಪಟ್ಟು ಕೃಷಿಯನ್ನು ಮುಂದುವರಿಸುತ್ತಾ ಸಂಸಾರ ಸಾಗಿಸತೊಡಗಿದಳು. ಒಂದೆರಡು ವರ್ಷ ಮಳೆಬಾರದೆ ಬೆಳೆ ಕೈಸೇರಲಿಲ್ಲ. ಸಾಲವೂ ಬೆಳೆಯಿತು. ಸಾಲಗಾರರಿಗೆ ಗದ್ದೆ, ತೋಟ, ಮನೆಯನ್ನು ವಹಿಸಿ, ಸುಳಿಗೋಡನ್ನು ಬಿಟ್ಟು ಇಕಕೇರಿಗೆ ಬರುತ್ತಾರೆ. ಇಲ್ಲಿ ಅಘೋರೇಶ್ವರ ಹಾಗೂ ಗಣಪತಿ ದೇವಾಲಯಗಳ ಪರಿಚಾರಕನಾಗಿ ಕೆಲಸಕ್ಕೆ ಸೇರುತ್ತಾನೆ. ಬಿಡುವಿನ ವೇಳೆಯಲ್ಲಿ ಪ್ರಾಚೀನ ಕಾವ್ಯಗಳ, ಪುರಾಣಗಳ ಅಭ್ಯಾಸದಲ್ಲಿ ನಿರತನಾಗಿರುತ್ತಿದ್ದನು. 
ಕಾರಣಾಂತರದಿಂದ ಚಿಪ್ಪಳಿಗೆ ಬಂದು ಗೋಪಾಲಕೃಷ್ಣ ದೇವಸ್ಥನದಲ್ಲಿ ಅರ್ಚಕರಾಗಿ ಸೇವೆಸಲ್ಲಿಸುತ್ತಾರೆ, ಅಲ್ಲಿ ಉತ್ತಮ
ಗಮಕಿ ಹಾಗೂ ಶ್ರೇಷ್ಠ ವ್ಯಾಖ್ಯಾನಕಾರರಾಗಿ ಆ ಸುತ್ತಲಲ್ಲಿ ಪರಿಚಿತನಾದ. ಅಲ್ಲಿಂದ ಕೇದಿಗೆಸರಹು ಎಂಬ ಹಳ್ಳಿಗೆ ಬರುತ್ತಾರೆ. ಇಲ್ಲಿ ಅರ್ಚಕವೃತ್ತಿ ಜೊತೆಗೆ ಐಯ್ಯಗಳ ಕೆಲಸವನ್ನೂ ನಿರ್ವಹಿಸುತ್ತಾರೆ. 

ಶಾ. ಶ. ೧೭೦೦ ರಲ್ಲಿ ಕೇದಿಗೆಸರುಹಿನಲ್ಲಿ ಶ್ರೀ ವ್ಯಾಸ ಪೌರ್ಣಮಿಯನ್ನು ಆಚರಿಸುತ್ತಾರೆ. ಅಲ್ಲಿ ಗೋಕರ್ಣದ ವಿದ್ವಾಂಸರಿಂದ ವ್ಯಾಸಭಾರತದ ಪ್ರವಚನ ಏರ್ಪಾಡಾಗಿರುತ್ತದೆ. ವ್ಯಾಸಭಾರತದ ಹದಿನೆಂಟು ಪರ್ವಗಳ ಕಥೆಯನ್ನು ಕೇಳಿದ ಮೇಲೆ, ಕನ್ನಡದಲ್ಲಿ ಸಮಗ್ರವಾದ ಭಾರತದ ಕೃತಿ ಇಲ್ಲವೆನಿಸಿತು. ಅದೇ ವರ್ಷ ಸಂಕ್ಷಿಪ್ತ ಭಾರತವನ್ನು ತುರಂಗಲಯದಲ್ಲಿ ರಚಿಸಿದರು. 

ತುರಂಗ ಭಾರತದಲ್ಲಿ ಕಥಾವಸ್ತುವಿನ ದೃಷ್ಟಿಯಿಂದ ನೋಡಿದರೆ ಹದಿನೇಳು ಪರ್ವಗಳು. ನಾಂದ ಪದ್ಯಗಳ ಸಂಧಿಯನ್ನು ಣಒಂದು ಸಂಧಿ ಎಂದು ಪರಿಗಣಿಸಿದರೆ ಹದಿನೆಂಟು ಪರ್ವಗಳಾಗುತ್ತವೆ. ಕವಿ ವ್ಯಾಸಭಾರತದ ಎಲ್ಲ ಘಟನೆಗಳನ್ನೂ ಹೇಳುತ್ತಾರೆ. 

ಆಸ್ತಿಕ ಪರ್ವ
ಪ್ರಥಮ ಖಂಡ 
ಪೀಠಿಕೆ-ನಾಂದಿ

ಶ್ರೀ ಮಹಾಗಣಪ ನಿರ್ವಿಘ್ನತೆಯ ಮಾಡಿಸು | 
ಕ್ಷೇಮದಿಂದೆನಗೆ ಕಾಮಿತ ಫಲವನಿತ್ತು ನಿ |
ಸ್ಸೀಮ ಸುಜನಸ್ತೋಮ ನಮಿತ ಇಕ್ಷುಪ್ರೇಮ ನಾಮಭಕ್ತಾರಾಮನೇ ॥ 
ಸೋಮಭೂಷಣ ಸಾಮಗಾನ ಭಕ್ತಪ್ರೇಮ | 
ಹೇಮರತ್ನ ಕಿರೀಟದಾಮ ಶೃಂಗಾರ ಗುಣ |
ಕಾಮ ಹೋಮನ ಪುತ್ರ ಗಣಪ ಮಾಡೀ ಕೃತಿಗೆ ಸ್ವಾಮಿ ನಿರ್ವಿಘ್ನತೆಯನು॥೧॥ 

ರೂಢಿಸಿದ ಶಾರದಾಂಬಿಕೆ ಎನ್ನ ಜಿಹ್ವೆಯೊಳ| 
ಗಾಡೆ ನಲಿನಲಿದು ಕುಣಿದಾಡೆ ಭಕ್ತನಿಗಭಯ | 
ನೀಡೆ ನಿನಗಿನ್ನಾರು ಜೋಡೆ ಕಮಲಜನರಸಿ ನೋಡೆ ಕೃಪೆಯೂಡೆಕೂಡೆ॥ 
ಬೇಡುವೆನು ನಿನ್ನ ಸಿರಿಚರಣ ಪ್ರಸಾದದೊಳ | 
ಗೀಡಿರಿದ ದವನ ಸಂಪಿಗೆ ಜಾಜಿಗಳನು ಕೈ | 
ನೀಡಿ ಕೊಡೆ ಶಾರದಾಂಬಿಕೆ ತಾಯೆ ನೀ ಯೆನ್ನ ಗೂಡಿನೊಳು ನೆಲಸಿ ನುಡಿಸೆ॥೨॥

ಹೊಸನಗರ ತಾಲೂಕಿನ ಕೊಡಚಾದ್ರಿ ಸೀಮೆಯ ಸುಳಿಗೋಡಿನ ಪರಮದೇವ ಕವಿ ವೈದಿಕ ಪರಂಪರೆ ಅನುಸರಿಸಿದವನು. ಪೂರ್ವ ಕವಿಗಳು ರಚಿಸಿದ ವ್ಯಾಸಭಾರತ ಆಧಾರಿತ ಕೃತಿಗಳನ್ನು ಅಧ್ಯಯನ ಮಾಡಿದ ಈತ ಹದಿನೆಂಟು ಪರ್ವಗಳ ವ್ಯಾಸ ಭಾರತವನ್ನು ನಾಲ್ಕು ಸಾವಿರಕ್ಕೂ ಮಿಕ್ಕಿದ ವಾರ್ಧಕ ಷಟ³ದಿಯ ಪದ್ಯಗಳಲ್ಲಿ ಕಟ್ಟಿಕೊಟ್ಟಿದ್ದಾನೆ. ಕತೆಯ ಕಡೆ ಹೆಚ್ಚಿನ ಗಮನ ಹರಿಸಿ ಸುಲಲಿತ ಶೈಲಿಯಲ್ಲಿ ಎಲ್ಲಿಯೂ ಬೇಸರ ಹುಟ್ಟದಂತೆ ತುರಂಗ ಗತಿಯ ಲಯದಲ್ಲಿ ಕವಿ ಕಾವ್ಯವನ್ನು ರಚಿಸಿ¨ªಾನೆ. ಸಮಗ್ರ ಮಹಾಭಾರತವನ್ನು ಕನ್ನಡಕ್ಕೆ ತಂದುಕೊಟ್ಟ ಏಕೈಕ ಕವಿ ಪರಮದೇವ ಕವಿ ಎಂದು ಖ್ಯಾತ ಸಾಹಿತಿ, ವಿದ್ವಾಂಸರಾದ ನಾಡೋಜ ಡಾ| ಕಮಲಾ ಹಂಪನಾ ತಿಳಿಸಿದ್ದಾರೆ.
    ಪರಮದೇವ ತನ್ನ ಕಾವ್ಯದಲ್ಲಿ ನವರಸಗಳನ್ನು ತಂದರೂ ಯಾವುದನ್ನೂ ಅತಿಯಾಗಿ ಬಳಸಿಲ್ಲ. ಅಲ್ಲದೇ ಕವಿ ತನ್ನ ಜೀವನ ವೃತ್ತಾಂತವನ್ನು ಕೃತಿಯಲ್ಲಿ ಹೇಳಿಕೊಂಡಿರುವುದು ಮೆಚ್ಚುಗೆಯ ವಿಷಯ. ವ್ಯಾಸಭಾರತದಂತಹ ಬೃಹತ್‌ ಕೃತಿಯನ್ನು ಕನ್ನಡಕ್ಕೆ ತಂದಿರುವುದೇ ಸಾಹಸದ ಕತೆ. ಈ ಮೂಲಕ ಕವಿ ಕನ್ನಡಿಗರಿಗೆ ಹಾಗೂ ಕನ್ನಡ ಸಾಹಿತ್ಯಕ್ಕೆ ದೊಡ್ಡ ಉಪಕಾರ ಮಾಡಿದ್ದಾರೆ. ಅವರನ್ನು ಎಷ್ಟು ಸ್ಮರಿಸಿದರೂ ಸಾಲದು ಎಂದು ತಿಳಿಸಿದರು.
ತುರಂಗ ಭಾರತ ಒಂದು ಅಧ್ಯಯನ ಎಂಬ ಮಹಾಪ್ರಬಂಧವನ್ನು ಮಂಡಿಸಿ ಪಿಎಚ್‌ಡಿ ಪದವಿ ಪಡೆದವರು ಕಮಲಾ ಹಂಪನಾ
  ಡಾ.ಕಮಲಾ ಹಂಪನಾರವರ ಉಳಿದೆಲ್ಲ ಬರವಣಿಗೆಗಳದು ಒಂದು ತೂಕ ವಾದರೆ ಅವರ ಈ ಕೃತಿಯೇ ಇನ್ನೊಂದು ತೂಕ ದ್ದು. 
  ತುರಂಗ ಭಾರತ ವಾರ್ಧಕ ಷಟ್ಪದಿಯಲ್ಲಿ ರಚಿತವಾಗಿರುವ ಬೃಹತ್ ಗಾತ್ರದ ಜನಪ್ರಿಯ ಕಾವ್ಯ.96 ಸಂಧಿಗಳು ಹಾಗೂ 4824 ಪದ್ಯಗಳು ಇರುವ ಇಷ್ಟು ದೊಡ್ಡ ಕಾವ್ಯ ವನ್ನು ರಚಿಸಿರುವ ಕವಿ ಪರಮ ದೇವ.ಈತ ಕುಮಾರ ವ್ಯಾಸ ನ ಪಟ್ಟ ಶಿಷ್ಯ.ಕುಮಾರ ವ್ಯಾಸ ಭಾಮಿನಿ ಷಟ್ಪದಿಯಲ್ಲಿ ಬರೆದುದನ್ನು ಈತ ವಾರ್ಧಕಕ್ಕೆ ತಿರುಗಿಸಿದ್ದಾನೆ.ಬಟ್ಟಲಿನಿಂದ ಕೊಳಗಕ್ಕೆ ಸುರಿದಿದ್ದಾನೆ. ತುರಂಗ ಭಾರತದ ಪ್ರಾಮುಖ್ಯವೆಲ್ಲ ಹರಳು ಗೊಂಡಿರುವುದು ಅದು ಕನ್ನಡದಲ್ಲಿ ರಚಿತವಾಗಿರುವ ಸಮಗ್ರ ಹದಿನೆಂಟು ಪರ್ವಗಳ ಪೂರ್ತಿ ಕಥೆ ಯಿರುವ ಏಕೈಕ ಕಾವ್ಯ ಎಂಬುದೇ ಆಗಿದೆ.ಪಂಪ, ರನ್ನ, ಕುಮಾರವ್ಯಾಸ ,ಲಕ್ಷ್ಮೀಶ , ಷಡ ಕ್ಷರಿ ,ರುದ್ರ ಭಟ್ಟ ,ಸದಾನಂದ ,ತಿಮ್ಮಣ, ಚಾಯಣ -ಇವರೆಲ್ಲ ವ್ಯಾಸ ಮಹಾಭಾರತದ ಪರ್ವಭಾಗ ಗಳನ್ನು ಬರೆದಿರುವರೇ ಹೊರತು ಸಮಗ್ರ ಭಾರತ ಕಥೆ ಹೇಳಿದವರಲ್ಲ.ಕನ್ನಡದಲ್ಲಿ ಸಮಗ್ರ ಭಾರತದ ಕಥೆಯನ್ನು ಆಮೂಲಾಗ್ರವಾಗಿ ಬರೆದ ಶ್ರೇಯಸ್ಸು ಪರಮದೇವನಿಗೆ ಸಲ್ಲುತ್ತದೆ. ವಾಸ್ತವವಾಗಿ ಹಂಪನಾ ರವರ ಇಡೀ ಮಹಾಪ್ರಬಂಧವೇ ಒಂದು ತೌಲನಿಕ ಅಧ್ಯಯನವಾಗಿದೆ.

ಇಲ್ಲಿ ಕ್ಲಿಕ್ ಮಾಡಿ ನೋಡಿ

https://youtu.be/3xAeaHeFjek?si=h3M_2og6LY3VWbgK.



Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂ...

ಶ್ರೀಧರ ಸ್ವಾಮಿ ವರದಳ್ಳಿ ಪವಾಡ ಪುರುಷರು.

   ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ವರದಳ್ಳಿಯ ತಪಸ್ವಿ ಶ್ರೀಧರ ಸ್ವಾಮಿಗಳು.   ವರದಳ್ಳಿ ಶ್ರೀಧರ ಸ್ವಾಮಿಗಳ ಬಗ್ಗೆ ಕೇಳಿದ್ದು, ಓದಿದ್ದು ಮತ್ತು ಅವರ ಒಡನಾಡಿಗಳನ್ನ ಭೇಟಿ ಮಾಡಿದ್ದು ಬಿಟ್ಟರೆ ಅವರನ್ನ ಪ್ರತ್ಯಕ್ಷವಾಗಿ ನೋಡಿಲ್ಲ.     ನಾವು ಚಿಕ್ಕವರಿದ್ದಾಗ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುವಾಗ ಆಗಿನ ಕಾಲದ ಖ್ಯಾತ ಚಲನಚಿತ್ರ ನಟ ಉದಯ ಕುಮಾರ್ ಅರಳಿ ಮರದ ಗ್ಯಾರೇಜ್ ಹತ್ತಿರ ಬಂದಿದ್ದಾರೆ ಅಂತ ಊರಿನ ಜನರೆಲ್ಲ ಗುಂಪು ಗುಂಪಾಗಿ ಓಡುತ್ತಿದ್ದರು, ನಾವು ಚಿಕ್ಕ ಮಕ್ಕಳೆಲ್ಲ ಅವರನ್ನ ಹಿಂಬಾಲಿಸಿದೆವು.       ಅಲ್ಲಿ ಒಂದು ಬಿಳಿ ಅಂಬಾಸಡರ್ ಕಾರು ನಿಂತಿದ್ದು ಅದರ ಅಡಿಯಲ್ಲಿ ಮಲಗಿ ಮೆಕ್ಯಾನಿಕ್ ದುರಸ್ತಿ ಮಾಡುತ್ತಿದ್ದರೆ ಎತ್ತರದ ಮಣ್ಣು ದಿಬ್ಬದ ಮೇಲೆ ನಮ್ಮ ನಟ ಉದಯ ಕುಮಾರ್ ಸಿಗರೇಟು ಸೇದಿ ಹೊಗೆ ಬಿಡುತ್ತಿದ್ದರು. ಯಾರೂ ಅವರ ಹತ್ತಿರ ಮಾತಾಡುವ ದೈಯ೯ ವಹಿಸಲಿಲ್ಲ ಆದರೆ ನೆರೆದ ಜನ ಮಾತಾಡಿಕೊಳ್ಳುತ್ತಿದ್ದ ಮಾತಿನ ಸಾರಾಂಶವೆಂದರೆ ವರದಳ್ಳಿಯಲ್ಲಿ ತಪಸ್ಸು ಮಾಡುತ್ತಿದ್ದ ಶ್ರೀಧರ ಸ್ವಾಮಿಗಳು ದೇಹತ್ಯಾಗ ಮಾಡಿದ್ದಾರೆ ಅದನ್ನ ಕೇಳಿ ಅವರ ಭಕ್ತ ಮತ್ತು ಶಿಷ್ಯರಾದ ಖ್ಯಾತ ಚಿತ್ರ ನಟ ಉದಯ ಕುಮಾರ್ ಬರುವಾಗ ಕಾರು ಹಾಳಾಗಿ ದುರಸ್ತಿಗಾಗಿ ನಿಂತಿದ್ದಾರೆ, ದುಃಖದಲ್ಲಿ ಇರೋದರಿಂದ ಆ ರೀತಿ ಸಿಗರೇಟು ಸೇದಿ ಬೂದಿ ಮಾಡುತ್ತಿದ್ದಾರೆ ಅವರ ಹತ್ತಿರ ಯಾರೂ ಮಾತಾಡ ಬೇಡಿ ಅಂತ ...