#ಈ_ಸಾರಿ_ಜೋಗ್_ಜಲಪಾತದ_ಮೇಲೆ_ಹಾರಿದ_ಡ್ರೋನ್_ಲೆಕ್ಕಕ್ಕೆ_ಇಲ್ಲ
#ಜೋಗ್_ಜಲಪಾತದ_ಪೋಟೋ_ಜೋಗದ_ಇತಿಹಾಸದಲ್ಲೇ_ದಾಖಲೆ
#ಕಾಲ_ಎಷ್ಟು_ಬದಲಾಗಿದೆ
#ಎಲ್ಲರನ್ನೂ_ಛಾಯಾಗ್ರಾಹಕರನ್ನಾಗಿ_ಮಾಡಿದ_ಸೆಲ್_ಫೋನ್_ಪ್ರಪಂಚ.
#jogfalls #waterfalllovers #waterfall #waterfallphotography #dronevideo #droneshots
ಮೊನ್ನೆ ಆಗಸ್ಟ್ 1 2024 ಗುರುವಾರ ಬೆಳಿಗ್ಗೆ ಲಿಂಗನಮಕ್ಕಿ ಅಣೆಕಟ್ಟಿನಿಂದ ಟ್ರಸ್ಟ್ ಗೆ ತೆರೆದು ಹೆಚ್ಚುವರಿ ನೀರನ್ನು ಬಿಡಲಾಗಿತ್ತು ಅವತ್ತು ಸಂಜೆ ಜೋಗ ಜಲಪಾತ ತನ್ನ ಗತವೈಭವವನ್ನು ಮರಳಿ ಪಡೆದಿತ್ತು.
ಆ ಸಂಜೆಯಿಂದ ಜೋಗ್ ಜಲಪಾತದ ಮೇಲೆ ಹಾರಾಡಿದ ಡ್ರೋನ್ಗಳು ಲೆಕ್ಕಕ್ಕಿಲ್ಲ ಪ್ರವಾಸಿಗರು ಅವರ ಸೆಲ್ ಫೋನ್ ನಲ್ಲಿ ಸೆರೆ ಹಿಡಿದ ಜೋಗದ ಚಿತ್ರಗಳು ದಾಖಲೆಯಾಯಿತು ಭವಿಷ್ಯ ಜೋಗ್ ಜಲಪಾತದ ಇತಿಹಾಸದಲ್ಲಿ ಈ ರೀತಿ ಚಿತ್ರೀಕರಣ ಇದೇ ಮೊದಲು.
ಮುಂದಿನ ದಿನಗಳಲ್ಲಿ ಇದು ಇನ್ನು ಹೆಚ್ಚಾಗುತ್ತದೆ ಕಾಲ ಹೇಗೆ ಬದಲಾಗಿದೆ, ಮೊದಲೆಲ್ಲ ಫೋಟೋಗ್ರಫಿ ಜನಸಾಮಾನ್ಯರ ಕೈಗೆ ಎಟುಗುತ್ತಿರಲಿಲ್ಲ ಅದೇನಿದ್ದರೂ ಶ್ರೀಮಂತರಿಗೆ ಮಾತ್ರ ಎಂಬ ಕಲ್ಪನೆ ಯಾಕೆಂದರೆ ದುಬಾರಿ ಬೆಲೆಯ ಕ್ಯಾಮೆರಾ ಮತ್ತು ತೆಗೆದ ಫೋಟೋಗಳನ್ನು ಸಂಸ್ಕರಿಸುವ ದುಬಾರಿ ವೆಚ್ಚ ಚಿತ್ರೀಕರಣದ ಬಗ್ಗೆ ಆಸಕ್ತಿ ಇದ್ದರು ನಿರಾಸಕ್ತಿ ಹೊಂದುವಂತ ಕಾಲವಾಗಿತ್ತು.
ಸೆಲ್ ಫೋನ್ ಗಳ ಕಾಲ ಎಲ್ಲವನ್ನು ಬದಲಿಸಿತ್ತು ಒಂದು ಮೊಬೈಲ್ ಫೋನ್ ಕೈಯಲ್ಲಿ ಹಿಡಿದರೆ ಅದರಲ್ಲಿ ಏನುಂಟು ಏನಿಲ್ಲ ಗಡಿಯಾರ, ಅಲಾಂ,ಫೋನ್, ಕ್ಯಾಮೆರಾ, ವಿಡಿಯೊ, ರೇಡಿಯೋ, ಟೇಪ್ ರೆಕಾರ್ಡರ್ , ಟಿವಿ, ಹವಾಮಾನ,ಡೈರಿ, ವಿಶ್ವಕೋಶ,ಬರೆಯುವಹಾಳೆ, ಸ್ಲೇಟ್ ,ಕಂಪ್ಯೂಟರ್ ಹೀಗೆ ಏನೇನೆಲ್ಲ ಸೇರುತ್ತಲೇ ಇದೆ.
ಸೆಲ್ ಫೋನ್ ಖರೀದಿಸಿದರೆ ಅದರಲ್ಲಿ ಇದೆಲ್ಲವೂ ಇದೆ ಪ್ರತಿಯೊಬ್ಬರನ್ನು ಪೋಟೋ ಗ್ರಾಪಾರ್ ಮಾಡಿದೆ ಆದ್ದರಿಂದ ಮೊನ್ನೆ ಜೋಗ್ ಜಲಪಾತ ಈ ರೀತಿ ಚಿತ್ರಿಕರಣ ಆಯಿತು,ಮೊದಲೆಲ್ಲ ಶಿವಮೊಗ್ಗದಿಂದ ವಾರ್ತಾ ಇಲಾಖೆಯ ಫೋಟೋಗ್ರಾಫರ್ ಬಂದು ದಿನವಿಡೀ ಕಾದು ಒಂದು ಫೋಟೋ ತೆಗೆದು ಪತ್ರಿಕೆಗಳಿಗೆ ನೀಡುತ್ತಿದ್ದರು ಆ ಒಂದು ಫೋಟೋವೇ ಜೋಗ್ ಜಲಪಾತ ತುಂಬಿದಾಗೆಲ್ಲ ಕೆಲವು ದಶಕಗಳ ಕಾಲ ಆ ಒಂದೇ ಫೋಟೋ ಪತ್ರಿಕೆಗಳಲ್ಲಿ ಪ್ರಕಟ ಆಗಿರುತ್ತಿತ್ತು.
Comments
Post a Comment