Blog number 2279. ಚಿಕ್ಕಮಗಳೂರುಜಿಲ್ಲೆಯ ಮುಡಿಗೆರೆ ತಾಲ್ಲೂಕಿನ ಅಂಗಡಿ ಗ್ರಾಮ 10 ನೇ ಶತಮಾನದಲ್ಲಿ ಹೊಯ್ಸಳರ ಮೊದಲ ರಾಜದಾನಿ
#ಸಳ_ತನ್ನ_ಜೈನ_ಗುರು_ಸುದತ್ತಾಚಾಯ೯ರ_ಮೇಲೆ_ಎರಗಿ_ಬಂದ_ಹುಲಿ_ಕೊಲ್ಲುತ್ತಾನೆ
#ಇವರೇ_ಹೊಯ್ಸಳ_ರಾಜ_ವಂಶದ_ಸ್ಥಾಪಕರು
#ಈ_ಸ್ಥಳವೇ_ಈಗಿನ_ಚಿಕ್ಕಮಗಳೂರು_ಜಿಲ್ಲೆಯ_ಮುಡಿಗೆರೆ_ತಾಲ್ಲೂಕಿನ
#ಅಂಗಡಿ_ಗ್ರಾಮದ_ವಾಸಂತಿಕ_ದೇವಾಲಯ
#ಇಲ್ಲಿ_900_ವರ್ಷಗಳ_ಹಿಂದಿನ_ಎರಡು_ಬೃಹತ್_ಸಂಪಿಗೆ_ಮರವಿದೆ.
#vasantikatemple #mudigere #chikkamagalore #Angadi #jaintemple #jainhistory #belur #halebidu #hoysala #hoysalaarchitecture
#karnatakatourism
ಹತ್ತರಿಂದ 14ನೇ ಶತಮಾನದ ನಡುವೆ ಕರ್ನಾಟಕದ ಹೆಚ್ಚಿನ ಭಾಗ ಆಳಿದ ಹೊಯ್ಸಳ ಸಾಮ್ರಾಜ್ಯವು ಭಾರತೀಯ ಉಪಖಂಡದಲ್ಲಿ ಹುಟ್ಟಿಕೊಂಡ ಕನ್ನಡಿಗರ ಶಕ್ತಿ.
ಹೊಯ್ಸಳರು ಪಶ್ಚಿಮ ಘಟ್ಟಗಳ ಎತ್ತರದ ಪ್ರದೇಶವಾದ ಮಲೆನಾಡಿನವರು, 13ನೇ ಶತಮಾನದ ವೇಳೆಗೆ ಹೊಯ್ಸಳರು ಕರ್ನಾಟಕದ ಬಹುಪಾಲು ಪ್ರದೇಶದಲ್ಲಿ, ವಾಯುವ್ಯ ತಮಿಳುನಾಡು ಮತ್ತು ಪಶ್ಚಿಮದ ಆಂಧ್ರಪ್ರದೇಶದ ಭಾಗಗಳನ್ನು ಹಾಗೂ ಡೆಕ್ಕನ್ ಪ್ರಸ್ಥಭೂಮಿಯನ್ನು ಆಳಿದರು.
ದೇವಾಲಯಗಳಾದ ಬೇಲೂರಿನ ಚನ್ನಕೇಶವ ದೇವಾಲಯ, ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯ ಮತ್ತು ಸೋಮನಾಥಪುರದ ಚನ್ನಕೇಶವ ದೇವಾಲಯಗಳು ವಿನೆಸ್ಕೋ ವಿಶ್ವ ಪಾರಂಪರೆಯ ತಾಣಗಳನ್ನಾಗಿಸಿದೆ.
ಈಗಿನ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಅಂಗಡಿ ಗ್ರಾಮದ ವಾಸಂತಿಕ ದೇವಿಯ ದೇವಸ್ಥಾನ ಆ ಕಾಲದಲ್ಲಿ ದಟ್ಟಡವಿಯ ಮಧ್ಯದ ದೇವಾಲಯವಾಗಿತ್ತು.
ಶಾಸನಗಳ ಪ್ರಕಾರ ಸಳ ಹೊಯ್ಸಳ ಸಂತತಿಯ ಮೂಲಪುರುಷ, ಸಳ ಶಕಪುರದ ಅಂದರೆ ಈಗಿನ ಅಂಗಡಿ ಗ್ರಾಮದಲ್ಲಿ ಜೈನಮುನಿ ಸುಧತ್ತಾಚಾರ್ಯರ ಶಿಷ್ಯನಾಗಿದ್ದ ಅಲ್ಲಿನ ವಾಸಂತಿಕ ದೇವಾಲಯದಲ್ಲಿ ಒಂದು ದಿನ ಸುದತ್ತಾಚಾರ್ಯರು ಪೂಜೆಯಲ್ಲಿ ತೊಡಗಿರುವಾಗ ಹುಲಿ ಒಂದು ಹಾರಿ ಬಂತು ಮುನಿಗಳು ತಮ್ಮ ಕೈಯಲ್ಲಿದ್ದ ಕುಂಚವನ್ನು ಶಿಷ್ಯನ ಕೈಗಿತ್ತು #ಅದಂಪೋಯ್_ಸಳ ಎಂದು ಅಪ್ಪಣೆ ಮಾಡುತ್ತಾರೆ.
ಸಳ ಧೈರ್ಯದಿಂದ ಹುಲಿಯ ಮೇಲೆರಿಗೆ ಅದನ್ನು ಕೊಲ್ಲುತ್ತಾನೆ,ಆ ಮುನಿವರ್ಯರು ಸಳನ ಧೈರ್ಯ ಸಾಹಸಗಳನ್ನು ಮೆಚ್ಚಿ ಅವನು ರಾಜನಾಗುವಂತೆ ವಾಸಂತಿಕ ದೇವಿಯಿಂದ ಹೊರ ಪಡೆದು ಅನುಗ್ರಹಿಸುತ್ತಾರೆ.
ಮೊದಲ ಹೊಯ್ಸಳ ರಾಜಧಾನಿ ಸೊಸ ಊರು / ಸಶಕಪುರ /ಸೊಸೆ ಊರು /ಸೊಸ ಊರು ಪಟ್ಟಣ ಅದೇ ಇಂದಿನ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಅಂಗಡಿ ಗ್ರಾಮ.
ರಾಜಧಾನಿ ಸ್ಥಳಾಂತರಿಸಿದ ನಂತರವೂ ಸೊಸ ಊರು ಪ್ರಮುಖ ವಾಣಿಜ್ಯ ಮತ್ತು ಆಡಳಿತ ಕೇಂದ್ರವಾಗಿ ಮತ್ತು ಜೈನ ಧಾರ್ಮಿಕ ಕೇಂದ್ರವಾಗಿ ಉಳಿಯಿತು.
1026 ರಿಂದ 1048ರ ವರೆಗೆ ಹೊಯ್ಸಳರ ರಾಜಧಾನಿ ಆಗಿತ್ತು, 1048 ರಲ್ಲಿ ಎರಡನೇ ರಾಜಧಾನಿಯಾಗಿ ಬೇಲೂರಿಗೆ ಸ್ಥಳಾಂತರಿಸಲಾಯಿತು.
1062ರಲ್ಲಿ ಬೇಲೂರಿನಿಂದ ಹಳೇಬೀಡಿಗೆ ರಾಜಧಾನಿಯನ್ನು ಸ್ಥಳಾಂತರಿಸಲಾಯಿತು,ಹಳೇಬೀಡು ಹೊಯ್ಸಳ ರಾಜ ವಂಶದ ಕೊನೆಯವರೆಗೂ ರಾಜಧಾನಿಯಾಗಿ ಉಳಿಯಿತು.
ಈಗಿನ ಅಂಗಡಿಯಂದು ಕರೆಯುವ ಸೊಸ ಊರು ಹೊಯ್ಸಳರ ಮೊದಲ ರಾಜಧಾನಿ ಇಲ್ಲಿನ ಪುರಾತನ ದೇವಾಲಯ ವಾಸಂತಿಕ ದೇವಾಲಯ ಈ ದೇವಾಲಯದ ಎದುರು ಎರಡು ಬೃಹತ್ ಸಂಪಿಗೆ ಮರಗಳಿದೆ ಅಷ್ಟು ದೊಡ್ಡದಾದ ಸಂಪಿಗೆ ಮರಗಳು ವಿರಳ ಈ ಸಂಪಿಗೆ ಮರಗಳು ದೇವಾಲಯ ನಿರ್ಮಾಣದ ಸಮಯದಲ್ಲಿ ನಟ್ಟಿದಂತ ಸಂಪಿಗೆ ಮರ ಎಂಬ ಪ್ರತಿತಿಯಿದೆ.
ಈ ನಂಬಿಕೆ ಪುರಸ್ಕರಿಸುವಂತೆ ಸಂಬಂಧಪಟ್ಟ ಇಲಾಖೆ ಈ ಎರಡು ಮರದ ಕಾರ್ಬನ್ ಡೇಟಿಂಗ್ ಟೆಸ್ಟಿಂಗ್ ಮಾಡಿಸಿದಾಗ ಈ ಮರಗಳು ಸುಮಾರು 900 ವರ್ಷಗಳಿಗಿಂತ ಹಿಂದಿನದೆಂದು ತಿಳಿದು ಬಂದಿದೆಯಂತೆ.
ಈ ದೇವಾಲಯದ ಪ್ರಧಾನ ಅರ್ಚಕರಾದ ದತ್ತಾತ್ರೇಯ ಕುಮಕೂಡು ಎಲ್ಲವನ್ನು ವಿವರಿಸುತ್ತಾರೆ ಅವರು ಮೂಲತಃಃ ಶಿಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ತುಮರಿ ಭಾಗದವರು ಈಗ ಇಲ್ಲೇ ನೆಲೆಸಿದ್ದಾರೆ ಈ ಸ್ಥಳಕ್ಕೆ ಬೇಟಿ ಮಾಡುವವರು ಇವರನ್ನು ಸಂಪರ್ಕಿಸ ಬಹುದು ಇವರ ಫೋನ್ ನಂಬರ್ 7760264332.
Comments
Post a Comment